Shreya of Namami Pura in Kannada Moral Stories by Vaman Acharya books and stories PDF | ನಮಾಮಿ ಪುರದ ಶ್ರೇಯಾ

Featured Books
Categories
Share

ನಮಾಮಿ ಪುರದ ಶ್ರೇಯಾ

ನಮಾಮಿ ಪುರದ ಶ್ರೇಯಾ 

(ಯಶಸ್ವಿ ಮಹಿಳೆಯ ನೂರೆಂಟು ನೆನಪುಗಳು)

ಲೇಖಕ- ವಾಮನಾ ಚಾರ್ಯ 

ಶ್ರೇಯಾ ಪಾಟೀಲ್, ನಮಾಮಿಪುರದ ಸದಾನಂದ್ ಕಾಲೇಜ್ ಪ್ರಾಂಶುಪಾಲರೆಂದು

ನಿವೃತ್ತಿ ಆದ ದಿನ ತಡರಾತ್ರಿ ವರೆಗೆ  ಅವರಿಗೆ ನಿದ್ರೆ ಬರದೇ ಹಿಂದಿನ ನೆನಪುಗಳು ಸ್ಮೃತಿ ಪಟಲದ ಮೇಲೆ ಬಂದವು.

ಇಪ್ಪತ್ತೃದನೆ ವರ್ಷದ ಹುಟ್ಟು ಹಬ್ಬ ಆಚರಿಸಿದ ದಿವಸ ಅಂದೇ‌ ಅಭಿಷೇಕ್ ನೊಡನೆ ಮದುವೆ ನಿಶ್ಚಿತಾರ್ಥ. ವಿಶೇಷ ಬೆಳದಿಂಗಳು ಭೋಜನದ ವ್ಯವಸ್ಥೆ ಹಾಗೂ ಎಲ್ಲಾ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿದಳು ತಾಯಿ ಮಂಗಳಾ.

ಮುಂದೆ ಮೂರು ತಿಂಗಳಾದರೂ ಶ್ರೇಯಾ ಹಾಗೂ ಅಭಿಷೇಕ್ ನಡುವೆ ಫೋನ್ ಸಂಭಾಷಣೆ ಆಗಲಿ, ಭೇಟಿ ಆಗುವದಾಗಲಿ ಆಗಲಿಲ್ಲ. ಈ ಮಧ್ಯ ಎರಡೂ ಕುಟುಂಬಗಳ ಮಧ್ಯ ಆಗಿರುವ ಅಹಿತಕರ ಬೆಳವಣಿಗೆ ಗಳು ಇಬ್ಬರನ್ನೂ ದೂರ ಮಾಡಿತು. 

ನಮಾಮಿ ಪುರ ಚಿಕ್ಕ ಊರು ಇದ್ದರೂ ಚೊಕ್ಕ ದಾಗಿ ಇರುವ ಊರು. ಊರಿನ ಪ್ರವೇಶ ಮಾಡುವ ದ್ವಾರಕ್ಕೆ ಬಲ ಭಾಗದಲ್ಲಿ ಪುರಾತನ ಆಂಜನೇಯ ಸ್ವಾಮಿ ದೇವಸ್ಥಾನ. ಗ್ರಾಮ ಪ್ರವೇಶ ಮಾಡುವವರು ಮೊದಲು ಆಂಜನೇಯ ಸ್ವಾಮಿಗೆ ನಮಸ್ಕಾರ ಮಾಡಿ ಒಳಗೆ ಹೋಗಬೇಕು. ಅದಕ್ಕಾಗಿ ಊರಿನ ಹೆಸರು ನಮಾಮಿ ಪುರ ಇರಬಹುದು.  ಗೋಪಿನಾಥ್ ಹಾಗೂ ತ್ರಿವೇಣಿ ಇಲ್ಲಿ ಹಿರಿಯ ನ್ಯಾಯವಾದಿಗಳು ಅವರ ಏಕೈಕ‌ ಪುತ್ರ ಅಭಿಷೇಕ್. ಅವನು ಸಿವಿಲ್ ಇಂಜಿನಿಯರ್. ಶ್ರೇಯಾ ಮದುವೆ ನಿಶ್ಚಿತಾರ್ಥ ಆದ ಒಂದು ವಾರ ನಂತರ ಅಭಿಷೇಕ್ ಅವರ ಮನೆಯಲ್ಲಿ ಬಿರುಸಿನ ಸಂಭಾಷಣೆ. 

"ಮಮ್ಮಿ, ಡ್ಯಾಡಿ, ನನ್ನ ಮಾತು ಸರಿಯಾಗಿ ಕೇಳಿ. ಮದುವೆ ನಿಶ್ಚಯ ದಿವಸ ಆದ ಘಟನೆಗಳಿಗೂ, ಅವರ ಆರ್ಥಿಕ ಪರಿಸ್ಥಿತಿ‌ಗೂ ನನ್ನ ಮದುವೆಗೂ ಏನೂ ಸಂಭಂದ ಇಲ್ಲ. ಈಗ ಅದಕ್ಕಾಗಿ ನನ್ನ ಮದುವೆ ಕ್ಯಾನ್ಸಲ್ ಮಾಡು ವದು ಬೇಡ,” ಎಂದ.

"ಅಭಿ, ನೀನು ಶ್ರೇಯಾ ಜೊತೆಗೆ  ಮದುವೆ ಆದರೆ ನಮ್ಮ ಪ್ರತಿಷ್ಠೆಗೆ ಧಕ್ಕೆ ಬರುವುದು,” ಎಂದರು ಗೋಪಿನಾಥ್.

"ಅಭಿ, ನಿನ್ನ ಅಪ್ಪ ಈ ಸಲ ಚುನಾವಣೆ ಯಲ್ಲಿ ಗೆದ್ದರೆ ಮಂತ್ರಿ ಆಗುವದು ಖಂಡಿತ. ನಾನು ಸಮಾಜ ಕಾರ್ಯಕರ್ತೆ ಇರುವದರಿಂದ ನನಗೂ ಒಳ್ಳೆಯ ಸ್ಥಾನ ಮಾನ ಸಿಗುವದು. ಆಗ ನಮಗೆ ಸರಿ ಸಮಾನ ಇರುವ ಹುಡುಗಿಯನ್ನು ಹುಡುಕಿ ನಿನ್ನ ಮದುವೆ ಆದ್ಧೂರಿ ಯಾಗಿ ಮಾಡಬೇಕು. ಶ್ರೇಯಾಳನ್ನು ಮರೆತು ಬಿಡು," ಎಂದಳು ತಾಯಿ ತ್ರಿವೇಣಿ.

“ಹಾಗಿದ್ದರೆ ಅಂದು ಮದುವೆ ನಿಶ್ಚಿತಾರ್ಥಕ್ಕೆ ಏಕೆ ಒಪ್ಪಿಗೆ ಕೊಟ್ಟಿರಿ?  ಆ ಸಮಾರಂಭದಲ್ಲಿ ಏಕೆ ಭಾಗವಹಿಸಿದಿರಿ? ಇದರಿಂದ ನಿಮ್ಮ ಪ್ರತಿಷ್ಟೆ ವೃದ್ಧಿ ಆಯಿತೇ?” ಎಂದ ಸಿಟ್ಟಿನಿಂದ. 

“ಹೌದಪ್ಪ ನಮ್ಮಿಂದ ತಪ್ಪಾಗಿದೆ. ಅವರಿಗೆ ಕ್ಷಮಾಪಣೆ ಕೇಳುವುದಿಲ್ಲ.  ಈಗ ನಮ್ಮ ಪ್ರತಿಷ್ಠೆಯನ್ನು ನೋಡಲೇಬೇಕು. ಸರಿಯಾದ ಸಮಯ ಬರುವವರೆಗೆ ಸುಮ್ಮನೆ ಇರು,”ಎಂದರು ಗೋಪಿನಾಥ್.

ಅದಕ್ಕೆ ಧ್ವನಿಗೂಡಿಸಿದರು ತ್ರಿವೇಣಿ.

"ಅಪ್ಪ, ಶ್ರೇಯಾ ಜೊತೆಗೆ ಮದುವೆ ಆದರೆ ಇಬ್ಬರೂ ಕೂಡಿ ನಿಮ್ಮ ಪರವಾಗಿ ಪ್ರಚಾರ ಮಾಡಿ ಖಂಡಿತ ನಿಮಗೆ ಯಶಸ್ಸು ತರುತ್ತೇವೆ,” ಎಂದ.

ಅಂದು ಬೆಳದಿಂಗಳು ಮದುವೆ ನಿಶ್ಚಿತಾರ್ಥ ಆಗುವಾಗ ಮೆಟ್ಟಲು ಹತ್ತುವ ಸುಮಯದಲ್ಲಿ ಗೋಪಿನಾಥ್ ದಂಪತಿಗೆ ಕರಿ ಬೆಕ್ಕು ಅಡ್ಡ ಬಂದಿತು. ಮೇಲೆ ಹೋದಮೇಲೆ ನಾಯಿಗಳು ಅಸಹ್ಯವಾಗಿ ಅಳುವ ಧ್ವನಿ ಕೇಳಿಸಿತು. ಮುಂದೆ ಎರಡು ನಿಮಿಷದಲ್ಲಿ ಕರೆಂಟ್ ಆಫ್ ಆಗಿ ಎಲ್ಲ ಕಡೆ ಕತ್ತಲು. ಎಲ್ಲ ಸಂಭ್ರಮದ ಕಳೆ ಹೋಯಿತು. ಕೆಲವು ಮಕ್ಕಳು ಓಡುವಾಗ ಸಣ್ಣ ಪುಟ್ಟ ಗಾಯಗಳಾದವು. ಅತಿಥಿಗಳಲ್ಲಿಇದ್ದ ಡಾ. ಸುದರ್ಶನ್ ಉಪಚಾರ ಮಾಡಿದರು. ಕರೆಂಟ್ ಬರಲು ಮುಂದೆ ಐದು ನಿಮಿಷ. ಶ್ರೇಯಾ ಚಿಕ್ಕ ಮನೆ ನೋಡಿ ಗೋಪೀನಾಥ ದಂಪತಿಗೆ ಕಸಿವಿಸಿ ಅನಿಸಿತು. 

ಬಡ ಕುಟುಂಬದಿಂದ ಬಂದ ಶ್ರೇಯಾ ತಂದೆ ಇಲ್ಲದ ಸ್ವಂತ ಪರಿಶ್ರಮದಿಂದ ಚಿಕ್ಕ ಪುಟ್ಟ ಕೆಲಸ ಮಾಡಿ ಎಮ್ ಎ ಇಂಗ್ಲಿಷ್ ನಲ್ಲಿ ಫಸ್ಟ್ ಕ್ಲಾಸ್ ಬಂದು ಸ್ಥಳೀಯ ಸರಸ್ವತಿ ಕಾಲೇಜ್ ನಲ್ಲಿ ಅಧ್ಯಾಪಕಿ ಎಂದು ಸೇರಿದಳು. ಪ್ರತಿಭಾವಂತ ಹುಡುಗಿ ಇರುವುದರಿಂದ ಎಲ್ಲರೂ ಆಕೆಗೆ ಮೆಚ್ಚುಗೆ ವ್ಯಕ್ತ ಪಡಸಿದರು. ಆಕೆ ತಾಯಿ ಮಂಗಳಾ ಸ್ಥಳೀಯ ಪ್ರಾಥಮಿಕ ಶಾಲೆ ಶಿಕ್ಷಕಿ.

ಅಂದು ಗೋಪಿನಾಥ್ ಹಾಗೂ ಆತನ ಪತ್ನಿ ಸಿಟ್ಟಿನಿಂದ ಅವಸರದಲ್ಲಿ ಊಟ ಮುಗಿಸಿ ಎದ್ದು ಹೋದರು. ಇದರಿಂದ ಅಭಿಷೇಕ್ ನಿಗೆ ತುಂಬಾ ಅಸಮಾಧಾನವಾಗಿ ಮುಂದೆ ಏನು ಮಾಡಬೇಕು ಎನ್ನುವ ಚಿಂತೆ  ಕಾಡಿತು.

ಆರು ತಿಂಗಳು ಕಳೆಯಿತು.

ಮುಂದೆ ಗೋಪಿನಾಥ್ ಶಾಸಕರಾಗಿ ಚುನಾಯಿತ ರಾಗಿ ಪಶು ಸಂಗೋಪನೆ ಸಚಿವರಾದರು. ತ್ರಿವೇಣಿಯವರು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಆದರು. ಇಬ್ಬರೂ ತಮ್ಮ ಕೆಲಸದ ಒತ್ತಡದಲ್ಲಿ ಒಬ್ಬನೇ ಮಗ ಅಭಿಷೇಕ್ ನ ಕಡೆ ಗಮನ ಹರಿಸುವದು ಆಗಲೇ ಇಲ್ಲ. ಶ್ರೇಯಾ ಜೊತೆಗೆ ಮದುವೆ ಗ್ರೀನ್ ಸಿಗ್ನಲ್ ಕೊಡದೆ ಇರುವದು ಅವನನ್ನು ಚಿಂತೆಯಲ್ಲಿ ಮುಳುಗಿಸಿತು.  

ಅಭಿಷೇಕ್ ನಿಂದ ಮದುವೆ ಬಗ್ಗೆ ಪ್ರತಿಕ್ರಿಯೆ ಬರದೇ ಇರುವದರಿಂದ ಶ್ರೇಯಾ ಗೆ ನಿರಾಸೆ ಆಯಿತು.‌ ಆಕೆ ಖಿನ್ನತೆಯಿಂದ ಅನಾರೋಗ್ಯ ಪೀಡಿತ ಳಾಗಿ ಡಾ.‌ಸುದರ್ಶನ ಅವರ ಆಸ್ಪತ್ರೆಗೆ ಹೋದಳು. ತಪಾಸಣೆ ಆದಮೇಲೆ ಮಾತ್ರೆ ಬರೆದು ಕೊಟ್ಟರು. 

“ಶ್ರೇಯಾ ಮದುವೆ ದಿನಾಂಕ ನಿರ್ಧಾರ ಆಯಿತೇ?”

ಶ್ರೇಯಾ ಆಗಿರುವದೆಲ್ಲ ಹೇಳಿದಳು. ಅದಕ್ಕೆ ಡಾ.ಸುದರ್ಶನ,”ಶ್ರೇಯಾ, ನಾನು ಒಂದು ವಿಷಯ ಕೇಳ ಬಹುದೇ” ಎಂದರು.

“ಅದೇನು ಡಾಕ್ಟರ್?”

“ನಾನು ನಿನ್ನನ್ನು ಪ್ರೀತಿ ಮಾಡುತ್ತೇನೆ.”

ಶ್ರೇಯಾ ಗೆ ಆಶ್ಚರ್ಯ.

“ನಾನು ಕಾಲೇಜ್ ಮೇಷ್ಟ್ರು ನೀವು ಡಾಕ್ಟರ್.ಮಿಸ್ ಮ್ಯಾಚ್ ಆಗಲ್ಲವೇ?”

“ಪ್ರೀತಿ ಮುಂದೆ ಅದಾವುದೂ ಗಣನೆಗೆ ಬರುವುದಿಲ್ಲ.”

ಶ್ರೇಯಾ ಹಾಗೂ ಸುದರ್ಶನ್ ಅವರ ಕಂಕಣಬಲ ಕೂಡಿ ಬಂದು ಶುಭ ದಿವಸ ಸರಳ ಸಮಾರಂಭ ದಲ್ಲಿ ಮದುವೆ ಆಗಿ ಪತಿ ಪತ್ನಿ ಆದರು.

ಅಭಿಷೇಕ್ ಗೆ ಶ್ರೇಯಾ ಹಾಗೂ ಸುದರ್ಶನ್ ಮದುವೆ ಆಗಿರುವುದು ತಿಳಿಯಲು  ತಡ ವಾಗಲಿಲ್ಲ. ಈ ಸಮಾಚಾರ ತಿಳಿದ ಅವನಿಗೆ ಶಾಕ್ ಆಗಿ ನೆಲದಮೇಲೆ ಕುಸಿದು ಬಿದ್ದ. ಅಲ್ಲಿಯೇ ಇದ್ದ ಗೋಪಿನಾಥ್ ಅವರ ನಂಬಿಕಸ್ತ ಪರ್ಸ್ ನಲ್ ಸೆಕ್ರೆಟರಿ ಮಂಜುನಾಥ್ ನೋಡಿ ಗಾಬರಿ ಆಗಿ ಪಕ್ಕದಲ್ಲಿ ಇರುವ ಡಾಕ್ಟರ್ ಕಡೆ ಅಭೀಷೇಕ್ ನನ್ನು ಕರೆದುಕೊಂಡು ಹೋದರು.‌ ಅಭಿಷೇಕ್ ನ ಹಾರ್ಟ್ ಬಿಟಿಂಗ್, ಟೆಂಪರೇ ಚರ್, ಬಿ ಪಿ ಚೆಕ್, ಹಾಗೂ ಇ ಸಿ ಜಿ  ಮಾಡಿ ಗಾಬರಿ ಆಗಿ ಬೇಗನೆ ಬೆಂಗಳೂರು ಗೆ ಹೋಗಿ ಎಂದರು. ಆ ಸಮಯ ದಲ್ಲಿ ಗೋಪಿನಾಥ್ ಅವರು ವಿಧಾನಸಭೆ ಕಲಾಪ ದಲ್ಲಿ ಇದ್ದರೇ ತ್ರಿವೇಣಿ ಅವರು ಮಹತ್ವದ ಮೀಟಿಂಗ್ ನಮಾಮಿ ಪುರದಲ್ಲಿ ಇದ್ದು ಯಾವ ದೂರವಾಣಿ ಕರೆ ಇಬ್ಬರೂ ಸ್ವೀಕರಿಸಲಿಲ್ಲ.  ಮಂಜುನಾಥ್, ತನ್ನ ಸಾಹೇಬರಿಗೆ ಅನೇಕ ಸಲ ಕಾಲ್ ಮಾಡಿದ. ಅವರು ಉತ್ತರ ಕೊಡಲಿಲ್ಲ. ಬೇಸತ್ತು ಕೊನೆಗೆ ಅಮ್ಮಾವರಿಗೆ ಮೇಲಿಂದ ಮೇಲೆ ಕಾಲ್ ಮಾಡಿದ.  ಅಮ್ಮಾವರು ಕೋಪದಿಂದ ಮಂಜುನಾಥ್ ಗೆ ಹಿಗ್ಗಾ ಮುಗ್ಗಾ ಬಯ್ದು ವಿಷಯ ಕೇಳದೆ ಡಿಸ್ಕನೆಕ್ಟ್ ಮಾಡಿ ದರು. ಆದರೂ ಅವನು ಕರೆಗೆ ಉತ್ತರ ಕೊಡುವ ವರೆಗೆ ಬಿಡಲಿಲ್ಲ.

"ಏನಯ್ಯ ಬೇಗ ಹೇಳು. ಅಮ್ಮಾವರೇ, ಅಭಿಷೇಕ್ ಆರೋಗ್ಯ ಗಂಭೀರ ವಾಗಿದೆ. ಬೆಂಗಳೂರು ಶಿಫ್ಟ್ ಮಾಡಲು ಡಾಕ್ಟರ್ ಹೇಳಿದ್ದಾರೆ."

 ಆ ಸಮಯ ತ್ರಿವೇಣಿ ಗಾಬರಿ ಆಗಿ ಮೀಟಿಂಗ್ ಸ್ಥಗಿತ ಗೊಳಿಸಿ ವಿಷಯ ತಿಳಿದು ತ್ರಿವೇಣಿ ಅವರು ಆಂಬುಲೆನ್ಸ್ ಮಾಡಿ ಬೆಂಗಳೂರು ಮುಟ್ಟಲು ಎರಡು ಗಂಟಿ ಹಿಡಿಯಿತು.  ಗೋಪಿನಾಥ್ ಅವರಿಗೆ ಫೋರ್ಟಿಸ್ ಆಸ್ಪತ್ರೆ ಬನ್ನೇರುಘಟ್ಟ ಬರಲು ಹೇಳಿದರು. ಬೆಂಗಳೂರು ಮುಟ್ಟಿದಾಗ ರಾತ್ರಿ ಹತ್ತು ಗಂಟೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆದಕೂಡಲೇ ICU ದಲ್ಲಿ ಶಿಫ್ಟ್ ಆಯಿತು. ಆಗಲೇ ಗೋಪಿನಾಥ್ ಅಲ್ಲಿಗೆ ಬಂದು ದಾರಿ ಕಾಯುತ್ತಿದ್ದರು. ರಾತ್ರಿ ಸುಮಾರು ಹನ್ನೆರಡು ಗಂಟೆ ಗೆ ಅಭಿಷೇಕ್ ಬಾರದ ಲೋಕಕ್ಕೆ ಹೋಗಿದ್ದ. ಗೋಪಿನಾಥ್, ತ್ರಿವೇಣಿ  ಅವರಿಗೆ ಅತೀವ ದು:ಖವಾಯಿತು. ಮೂಢ ನಂಬಿಕೆ ಹಾಗೂ ಪ್ರತಿಷ್ಠೆಯ  ನೆಪ ಮಾಡಿ  ಮಗನ ನ್ನು ಕಳೆದು ಕೊಂಡಿರುವದಕ್ಕೆ ತುಂಬಾ ದು:ಖ ಪಟ್ಟರು. ಮಗನ ಇಚ್ಛೆಯಂತೆ ಮದುವೆ ಮಾಡಲಿಲ್ಲ ಎನ್ನುವ ಕೊರಗು ಅವರನ್ನು ಜೀವನ ಪರ್ಯಂತ ಕಾಡಿತು. 

ಆಗ ಫೋನ್ ರಿಂಗ್ ಆಗಿ ಶ್ರೇಯಾ ಹಳೆಯ ನೆನಪುಗಳಿಂದ ಹೊರಬಂದಳು. ಅದು ಪತಿ ಡಾ. ಸುದರ್ಶನ್ ಅವರ ಕರೆ. ಅವರ ನೈಟ್ ಡ್ಯೂಟಿ ಮುಗಿಸಿ ಬೆಳಗ್ಗೆ ಆರು ಗಂಟೆಗೆ ಬರುವದಾಗಿ ಹೇಳಿದರು. 

ಆಗೋದೆಲ್ಲ ಒಳ್ಳೆಯದಕ್ಕೆ ಎಂದು ಮನಸ್ಸಿನಲ್ಲಿ ಅಂದು ಕೊಂಡು ಶ್ರೇಯಾ ನಿದ್ರೆಗೆ ಹೋದಳು.