She came unwillingly... - 6 in Kannada Drama by Kavya Pattar books and stories PDF | ಬಯಸದೆ ಬಂದವಳು... - 6

Featured Books
Categories
Share

ಬಯಸದೆ ಬಂದವಳು... - 6



ಅಧ್ಯಾಯ 6 : "ಅವಳ ನೆನಪುಗಳ ಕೋಣೆಯ ರಹಸ್ಯ"

ಸೂರ್ಯ : ಆಲ್ವೋ annuval day ಗೆ ಇನ್ನು ಒಂದೇ ದಿನ ಭಾಕಿ ಇದೆ ನೀನು ಇನ್ನೂ ಲವ್ ಲೆಟರ್ ಬರಿಯೋದ್ರಲ್ಲೇ ಇದಿಯಾ 🤦 ನಾನು ನಿನಗೆ ಹೇಳಿ ಎಷ್ಟು ದಿನ ಆಯ್ತು... ಅಲ್ಲ ಈಗಿನ ಹುಡುಗುರು ಯಾರ್ ಲವ್ ಲೆಟರ್ ಕೋಡ್ತಾರೆ ಎಲ್ಲರೂ ಡೈರೆಕ್ಟ್ ಹೋಗಿ ಡೇಟಿಂಗ್ ಅದು ಇದು ಅಂತ ಎಷ್ಟು ಫಾರ್ವರ್ಡ್ ಆಗಿರ್ತಾರೆ ನೀನು ಯಾಕೆ ಡೈರೆಕ್ಟ್ ಡೆಟಿಂಗ್ ಮಾಡೋಕೆ ಕೇಳಬಾರ್ದು ಅಲ್ವಾ ಏನಂತಿಯಾ? 

ಜೆಕೆ:  ಎಲ್ಲಾ ಹೂಡಗುರು ಒಂದೇ ರೀತಿ ಯೋಚನೆ ಮಾಡಲ್ಲ ಕೆಲವರು ಲೈಫ್ ನಾ ಎಂಜಾಯ್ ಮಾಡ್ಬೇಕು ಅಂತಾ ಸುಮ್ನೇ ಟೈಮ್ ಪಾಸ್ ಗೆ ಲವ್ ಮಾಡ್ತಾರೆ ಇನ್ನು ಕೆಲವರು ಅವರು ಪ್ರೀತಿ ಮಾಡೋರ ಜೊತೆ ಇಡೀ ಜೀವನ ಕಳಿಬೇಕು ಅಂತಾ ಲವ್  ಮಾಡ್ತಾರೆ, ನಾನು 2nd ಕೆಟಗರಿ ನನ್ನ ಪ್ರೀತಿ ಮಾಡೊ ಹುಡಗಿ ಜೋತೆ ನನ್ನ ಇಡೀ ಲೈಫ್ ನಾ ಅವಳೊಂದಿಗೆ ಕಳಿಯಬೇಕು ಅಂತ ಲವ್ ಮಾಡ್ತಿದ್ದೀನಿ ಮತ್ತೆ ಈ ಲವ್ ಲೆಟರ್ ಬರಿಯೋದ್ರಲ್ಲೇ ಇರೋ ಕುಷಿ ಬೇರೆ ಯಾವುದರಲ್ಲೂ ಸಿಗೋಲ್ಲ 😊 ನಂಗೆ ಹೇಗೆ ಬರೀಬೇಕು ಅಂತಾ ತುಂಬಾ ಕನ್ಫ್ಯೂಷನ್ ಆಗ್ತಾಇದೆ, ಒಂದು ಕಡೆ ತುಂಬಾ ಎಕ್ಸೈಟ್ಮೆಂಟ್ ಇನ್ನೊಂದು ಕಡೆ ಭಯ,

ಸೂರ್ಯ: ಇದರಲ್ಲಿ ಭಯ ಪಡೋಕೆ ಏನಿದೆ, ಸ್ವಾತಿ ನಿಂಗೆ ಚಿಕ್ಕ ವಯಸ್ಸಿನಿಂದಲೂ ಗೊತ್ತು ಹಾಗೆ ಅವಳಿಗೂ ನೀನು ಅಂದ್ರೆ ಪ್ರಾಣ ಕಂಡಿತಾ ಅವಳು ನಿನ್ನ ಪ್ರೀತಿ ಮಾಡ್ತಿದಾಳೆ ನೀನು ಎಲ್ಲಿ ರಿಜೆಕ್ಟ್ ಮಾಡ್ತಿಯೋ ಅಂತ ಹೇಳೋಕೆ ಭಯ ಪಡ್ತಿದ್ದಾಳೆ ಅನ್ಸುತ್ತೆ ಏನು ಟೆನ್ಷನ್ ಮಾಡ್ಕೋಬೇಡ ಅವಳು ಪಕ್ಕಾ ಎಸ್ ಅಂತಾಳೆ , ನಿನಗೊಂದು ಬೆಸ್ಟ್ suggesion ಅಂದ್ರೆ ಅಮ್ಮ ನಾ ಕೇಳಿ ಬರೀ may be ಅಮ್ಮನೇ ನಿಂಗೆ ಬರಿಯೋಕೆ ಸಹಾಯ ಮಾಡಬಹುದು 

ಜೆಕೆ ( ಉತ್ಸಾಹದಿಂದ): ಹೆ!.. ಕರೆಕ್ಟ್ ಐಡಿಯಾ ಕಣೋ ಇದಕ್ಕೆಲ್ಲ ಸುಮತಿ ಆತ್ತೇನೆ ಪರ್ಫೆಕ್ಟ್  

(ಸ್ನೇಹಿತರೆ ಜೆಕೆ ಪ್ರೀತಿ ಮಾಡ್ತಿರೋ ಹುಡಗಿ ಬೇರೆ ಯಾರು ಅಲ್ಲ ಅದು ಸ್ವಾತಿನೇ ಅದು ನಿನ್ನೆ ಮೊನ್ನೆಯಿಂದಲ್ಲ ಜೆಕೆ ಚಿಕ್ಕ ವಯಸ್ಸಿನಿಂದಲೂ ಸ್ವಾತಿ ನಾ ಇಷ್ಟ ಪಡುತ್ತಿರುತ್ತಾನೆ ಆದರೆ ಇನ್ನೂ ಅವಳ ಬಳಿ ಹೇಳಿಕೊಂಡಿರುವುದಿಲ್ಲ ಜೆಕೆ ಪ್ರೀತಿ ಮಾಡೊ ವಿಷಯ ಸೂರ್ಯ,ಕಾರ್ತಿಕ್, ಪ್ರವೀಣ್, ಹಾಗು ಜೆಕೆ ಯ ಅತ್ತೆ ಸುಮತಿ ಮತ್ತು ಲಕ್ಷ್ಮೀ ಅಜ್ಜಿ ಗೆ ಮಾತ್ರ ಗೊತ್ತಿರುತ್ತದೆ ಅದೆ ಕಾರಣಕ್ಕೆ ಲಕ್ಕಿ ಅಜ್ಜಿ ಅವನನ್ನು ಸಮಯ ಸಿಕ್ಕಾಗೆಲ್ಲ ರೇಗಿಸುತ್ತಿರುತ್ತಾರೆ )

ಸೂರ್ಯ: "ಜೆಕೆ ರೂಮ್ನೇ ಕಣ್ಣೆಲ್ಲಾ ಅರಳಿಸಿ ನೋಡುತ್ತೀರ್ತಾನೆ"... 
ಆಗ ಜೆಕೆ ಅವನನ್ನೇ ನೋಡ್ತಾ ಯಾಕೋ ಸೈಲೆಂಟ್ ಆದೆ.. ಏನು ನೋಡ್ತಿದ್ದಿಯಾ ?

ಸೂರ್ಯ:" ಅಲ್ವೋ ನೀನ್ ತರ ಪ್ರೀತಿ ಮಾಡೋವರನ್ನ ನಾನು ಇದೇ ಮೊದಲು ನೋಡ್ತಿದ್ದೀನಿ ಇಡೀ ರೂಮ್ ತುಂಬಾ ಅವಳೇ ಇದಾಳೆ ಅಲ್ವೋ ಬರೀ ಅವಳ ಡ್ರಾಯಿಂಗ್ ಗಳೇ ನಾನು ನಿನ್ನ ಜೊತೇನೆ ತಾನೇ ಕಲಿತಿದ್ದು ಆದರೆ ಈ ಎಕ್ಸ್ಟ್ರ ಡ್ರಾಯಿಂಗ್ ತಗಿಯೋ ಟ್ಯಾಲೆಂಟ್ ನಿಂಗೆ ಮಾತ್ರ ಬಂತಲ್ಲ ಅದು ಹೇಗೆ.. ಅದೇನೆ ಹೇಳೊ ಡ್ರಾಯಿಂಗ್ ಮಾತ್ರ ಸಖತ್ತಾಗಿ ತಗೀತಿಯಾ" 😃 

ಅಷ್ಟರಲ್ಲಿ ಜೆಕೆ.. ಜೆಕೆ.. ಅಂತಾ ಆ ಕಡೆಯಿಂದ ವಾಯ್ಸ್ ಬರುತ್ತೆ ಆಗ ಸೂರ್ಯ ಹೇ.. ಯಾರೋ ನಿನ್ನ ಕರಿತಿದಾರೆ ಆದರೆ ಮನೇಲಿ ಭುವನ್ ಮತ್ತೆ ಮಾಧವ್ ಭಾವಾ ಇಬ್ಬರೇ ಇರೋದು ನೀನು ಇಲ್ಲೇ ಇರು ನಾನು ನೋಡ್ಕೊಂಡ್ ಬರ್ತೀನಿ ಯಾರಾದ್ರೂ ಇಲ್ಲಿ ಬಂದ್ರೆ ಕಷ್ಟ ಅಂತ ಹೇಳಿ ಹೊರಡುವಾಗ 
ಜೆಕೆ ಮುಗುಳ್ನಗ್ತಾ ಅದು ಕಾರ್ತಿಕ್ ದ್ವನಿ ಕಣೋ ಆಗ ಸೂರ್ಯ ಸ್ವಲ್ಪ ಗಮನ ಕೊಟ್ಟು ಕೇಳುತ್ತಾನೆ... ಹಾ! ಹೌದು ಕಣೋ ಅದು ಅವನದೇ ದ್ವನಿ ಅದು ನಿಂಗೆ ಹೇಗೆ ಗೊತ್ತಾಯ್ತು?

ಜೆಕೆ : "ಇಷ್ಟು ವರ್ಷ ಜೊತೆಗಿದಿವಿ ವಾಯ್ಸ್ ಗೊತ್ತಾಗಲ್ವೇನೋ".. 

ಸೂರ್ಯ:😁" ಹೌದು ನಂಗೆ ಗೊತ್ತಾಗಲಿಲ್ಲ ಆದರೆ... ಇಸ್ಟೊತ್ತಲ್ಲಿ ಕಾರ್ತಿಕ್ ಯಾಕೆ ಬಂದಿದ್ದಾನೆ ಅಂತಾ ಗೊತ್ತಾಗ್ತಿಲ್ಲ" , 

ಜೆಕೆ: "ನಂಗೂ ಗೊತ್ತಾಗ್ತಿಲ್ಲ. ಅವನನ್ನು ಇಲ್ಲೇ ಕರೆದುಕೊಂಡು ಬಾ"!... 

ಸೂರ್ಯ( ಗೊಂದಲದಿಂದ) : "ಅವನ್ನ ಕರಕೊಂಡು ಬರಬೇಕಾ are you sure"? 

ಜೆಕೆ: "ಯಾಕೋ ಹಾಗೆ ಹೇಳ್ತಿದ್ದಿಯ ನಮ್ ನಡುವೆ ಯಾವ ಸೀಕ್ರೆಟ್ ಹಾ"!!

ಸೂರ್ಯ:" ಅಯ್ಯೋ.. ಸೀಕ್ರೆಟ್ ಅಂತಾ ಅಲ್ಲ ಕಣೋ ಅವನು ಈ ನಿನ್ನ ರೂಮ್ ನೋಡಿ ಎಲ್ಲಿ ಶಾಕ್ ಅಗತಾನೋ ಅಂತಾ" 😅

ಜೆಕೆ:" ಸುಮ್ನೆ ಹೋಗೋ😁.. ಓಕೆ ಅವನ್ನ ಕರಕೊಂಡು ಬರ್ತೀನಿ ಅಂತಾ ಸೂರ್ಯ ಹೋಗ್ತಾನೆ" 

ಜೆಕೆ ರೂಮ್ ಗೆ ಬಂದ್ರೆ ಕಾರ್ತಿಕ್ ಇರೋದೇ ಇಲ್ಲ ಅರೆ ಇದೇನಿದು ಇಲ್ಲೇ ಇದ್ನಲ್ಲ ಇಷ್ಟೊತ್ತು ಮೋಸ್ಟ್ಲಿ ಕೆಳಗಡೆ ಹೋಗಿರಬೇಕು ಅಂತಾ ಸೂರ್ಯ ಕೆಳಗಡೆ ಹೊರಡುತ್ತಾನೆ..
ಅಷ್ಟರಲ್ಲಿ ಕಾರ್ತೀಕ ಸ್ಟೆಪ್ಸ್ ಹತ್ರಾ ಇಳಿದು ಹೋಗ್ತೀರ್ತಾನೆ ಹೇ.. ಕಾರ್ತಿಕ್ ಅಂತ ಕರಿತಾನೆ ಆಗ ಕಾರ್ತಿಕ್ ಸೂರ್ಯ ನೀನೇನೋ ಇಲ್ಲಿ ನಾನು ಜೆಕೆ ನಾ ನೋಡೋಕೆ ಬಂದೆ ಆದರೆ ಅವನು ರೂಮ್ ನಲ್ಲಿ ಇಲ್ಲ

ಸೂರ್ಯ: "ನೀನು ಮೇಲೆ ಬಾರೋ ಜೆಕೆ ರೂಮ್ ನಲ್ಲೆ ಇದಾನೆ. ಆಗ ಕಾರ್ತಿಕ್ ರೂಮ್ ಒಳಗೆ ಬಂದು ಏನು ರೂಮ್ ನಲ್ಲೆ ಇದಾನೆ ಅಂದೆ ಎಲ್ಲಿ ? ನಾನು ಅವನ್ನ ರೂಮ್ ಎಲ್ಲಾ ನೋಡಿನೆ ಹೋಗಿದ್ದು ಹೌದು.. ನೀನು ಎಲ್ಲಿಂದ ಬಂದೆ "?                  

ಸೂರ್ಯ: "ಸ್ವಲ್ಪ ತಡಿಯೋ ಜೆಕೆ ರೂಮ್ ನಲ್ಲಿ ಇದಾನೆ ಆದರೆ ಈ ರೂಮ್ ಅಲ್ಲ"

ಕಾರ್ತಿಕ್ ( ಗೊಂದಲದಿಂದ): ಮತ್ತೆ ಇನ್ಯಾವ ರೂಮ್? 🤔 ಸರಿ ಬಾ ಕರಕೊಂಡು ಹೋಗ್ತೀನಿ ಅಂತ ಬಾಲ್ಕನಿ ಹತ್ರ ಇರೋ ರೂಮ್ ಗೆ ಹೋಗ್ತಾನೆ 

ಕಾರ್ತಿಕ್:" ಹೇ.. ಈ ಸ್ಟೊರೂಮ್ ಹತ್ರ ಯಾಕೋ ಕರ್ಕೊಂಡ್ ಬಂದೆ ಜೆಕೆ ಹತ್ರಾ ಕರಕೊಂಡು ಹೋಗ್ತಿಯ ಅಂದ್ರೆ ಈ ಸ್ಟೊರೂಮ್ ಕ್ಲೀನ್ ಮಾಡೋಕೆ ಕರಕೊಂಡು ಬಂದಿದೀಯ ಹೇಗೆ* ?🤔

ಸೂರ್ಯ: "ಸ್ವಲ್ಪ ಡೋರ್ ನಾ ಓಪನ್ ಮಾಡಪ್ಪ ಆಗ ಕಾರ್ತಿಕ್ ಡೋರ್ ನಾ ಓಪನ್ ಮಾಡ್ತಾನೆ ಜೆಕೆ.. ನೀನು ಇಲ್ಲೆನೋ... ಅಂತ ಮಾತನ್ನ ಅರ್ಧಕ್ಕೆ ನಿಲ್ಲಿಸಿ ನಿಬ್ಬೆರಗಾಗಿ ರೂಮ್ ನ ನೋಡುತ್ತಾ ನಿಂತು ಬಿಡ್ತಾನೆ 😳 ಇಡೀ ರೂಮ್ ತುಂಬಾ ಸ್ವಾತಿ ಡ್ರಾಯಿಂಗ್ ಗಳಿಂದಲೇ ತುಂಬಿ ಹೋಗಿರುತ್ತದೆ ಅವಳ ಚಿಕ್ಕ ವಯಸ್ಸಿನಿಂದ ಹಿಡಿದು ಇಲ್ಲಿಯ ವರೆಗಿನ  ಎಲ್ಲ ನೆನಪು ಗಳು ಈ ರೂಮ್ ನಲ್ಲಿಯೇ ಇರುತ್ತದೆ ಸ್ವಾತಿ ಜೆಕೆ ಗೆ ನೀಡಿರುವ ಪ್ರತಿಯೊಂದು ಗಿಫ್ಟ್ ಗಳನ್ನೂ ಸಹ ಜೆಕೆ ಜೋಪಾನವಾಗಿ ಇಟ್ಟಿರುತ್ತಾನೇ"  

ಆಗ ಜೆಕೆ ಕಾರ್ತಿ ಬಂದೆಯಾ..ಅವನ ಮುಖವನ್ನು ನೋಡುತ್ತಲೇ ಜೆಕೆ ಗೆ ಎಲ್ಲಾ ಅರ್ಥ ವಾಗುತ್ತದೆ..ಕೂಲ್ ಕಾರ್ತಿ ಹೇಳ್ತೀನಿ ಆಗ  ಅಲ್ಲೇ ಇದ್ದ ಕಬೋರ್ಡ್ ನ ಓಪನ್ ಮಾಡ್ತಾನೆ ಹೇ.. ಕಾರ್ತಿಕ್ ನಿಂಗೆ ನೆನಪಿದೆಯಾ ನಾವು ಸ್ಕೂಲ್ ನಲ್ಲಿ ಇದ್ದಾಗ ಯಾವುದೋ ಒಂದು ಮ್ಯಾಟರ್ ಗೆ ವಿಶ್ವನ ಟೀಮ್ ಮತ್ತೆ ನಮ್ ಟೀಮ್ ಮದ್ದೆ ಜಗಳ ಆಗಿತ್ತು  

ಕಾರ್ತಿಕ್: "ಹಾ!.. ನೆನಪಿದೆ ಕಣೋ",  

ಜೆಕೆ ಮುಖದಲ್ಲಿ ಮಂದಹಾಸವನ್ನು ಬೀರುತ್ತಾ ಹಾ! ಅದೆ ದಿನ ಸಾಯಂಕಾಲ ನಾನು ಒಬ್ಬನೇ ಸೈಕಲ್ ಮೇಲೆ ಹೊರಗಡೆ ಹೋಗಿದ್ದೆ ಅದೇ ಟೈಮ್ ಗೆ ವಿಶ್ವ ಅವನ ಫ್ರೆಂಡ್ಸ್ ನೆಲ್ಲ ಕರಕೊಂಡು ಬಂದ ಇಬ್ಬರ ಮಧ್ಯೇನು ಜಗಳ ನಡೀತಿದ್ದಾಗ ಹಿಂದೆ ಇಂದ ಬಂದು ನನ್ ತಲೆಗೆ ಜೋರಾಗಿ ಹೊಡೆದು ಓಡಿ ಹೋದ್ರು ತಲೆ ಎಲ್ಲಾ ರಕ್ತ, ಕಣ್ಣೆಲ್ಲಾ ಮಂಜು ಆಗ ನನಗನಿಸಿದ್ದು ನನ್ನ ಜೀವನ ಇಲ್ಲೇ ಮುಗಿಯಿತು ಅಮ್ಮ.. ಅಮ್ಮ.. ಅಂತ  ಕರಿತಾನೇ ಇದ್ದೆ ಅಲ್ಲಿ ಯಾರ ಸುಳಿವೆ ಇಲ್ಲ  ಅದೆ ಟೈಮ್ ಗೆ ದೇವತೆಯ ರೂಪದಲ್ಲಿ ನನ್ನ ಸ್ವಾತಿ ನಾ ನೋಡಿದೆ  ನನಗನಿಸಿದ್ದು  ನನ್ನ ಅಮ್ಮನೇ ಬಂದಳೆನೋ ಅಂತ ಅವಳು ತನ್ನ ಮಡಿಲ ಮೇಲೆ ನನ್ನನು ಮಲಗಿಸಿಕೊಂಡು ಯಾರಾದ್ರೂ ಇದೀರಾ ಹೆಲ್ಪ್  ಮಾಡಿ ಅಂತ ಕರಿತಾನೆ ಇದ್ದಲು ನನ್ನ ತಲೆಯಲ್ಲಿ ಹೋಗ್ತಿದ್ದ ರಕ್ತ ನಿಲ್ದೆ ಇದ್ದಾಗ ತಾನು ತೊಟ್ಟಿದ್ದ ಬಟ್ಟೆ ಲೀ ಸ್ವಲ್ಪ ಹರಿದು ನನ್ನ ತಲೆಗೆ ಕಟ್ಟಿದ್ಲು ಅದೆ ಬಟ್ಟೆ ಇದು ಅಂತ ಆ ತುಂಡು ಬಟ್ಟೆಯನ್ನು ತೋರಿಸುತ್ತಾ  ಇನ್ನು ನನ್ನ ಹತ್ರಾನೆ ಇದೆ,

ನಿಂಗೆ ಇದೆಲ್ಲ ವಿಚಿತ್ರ ಅನಸ್ತಿದೆ ಅಲ್ವಾ ಇವನೇಂತ  ಹುಚ್ಚಾ ಅಂತಾ, ಹ್! ಯಾವುದೆ ಹುಡುಗ ತಾನು ಪ್ರೀತಿ ಮಾಡೊ ಹುಡುಗಿ ತನ್ನ ತಾಯಿನಾ ಅವಳಲ್ಲಿ ಕಂಡಾಗ ಅವಳೆ ಅವನ ಹುಡುಗಿ ಅಂತಾ ಫಿಕ್ಸ್ ಆಗ್ತಾನೆ ಹಾಗೆ ನಾನು ಕೂಡ ಅವಳನ್ನು ಅವಾಗಿಂದಾನೆ ಪ್ರೀತಿ ಮಾಡೋಕೆ ಶುರು ಮಾಡಿದ್ದು...  , ಇದು ನೋಡು ಕಾರ್ತಿಕ್ ಅವಳ ಫೇವರೆಟ್ ಇಯರಿಂಗ್ಸ್ ಇದನ್ನ ಅವಳೂ ಕಳಕೊಂಡಾಗ ಹುಡುಕುತ್ತಾನೆ ಇದ್ದಳು ಆದರೆ ಅದು ನನ್ನ ಹತ್ರಾಣೆ ಇದ್ರು ಅದನ್ನ ಅವಳಿಗೆ ಕೊಡೋ ಮನಸೇ ಆಗಲಿಲ್ಲ ಇದನ್ನ ನನ್ ಹತ್ರಾನೇ ಇಟ್ಟುಕೊಂಡಿದೀನಿ  ನೋಡು.. ಈ ರೂಮ್ ತುಂಬಾ ಬರೀ ಅವಳೇ ನೆನಪುಗಳೇ ,ಅವಳ ಜೀವನದ ಪ್ರತಿ ವಸ್ತು, ವಿಷಯ ಕೂಡಾ ನನಗೆ ತುಂಬಾ ಇಂಪಾರ್ಟೆಂಟ್ ಆದರೆ ನಂಗೆ ಇದು ವರೆಗೂ ಅವಳಿಗೇ ನಾನು ಪ್ರೀತಿ ಮಾಡೊ ವಿಷಯವನ್ನೇ ಹೇಳೋದಕ್ಕೆ ಆಗ್ತಾಇಲ್ಲ 
ಕಾರ್ತಿಕ್ ಮತ್ತು ಸೂರ್ಯ ಇಬ್ಬರ ಕಣ್ಗಳು ತುಂಬಿ ಬಂದವು🥺

ಕಾರ್ತಿಕ್:" ಹೇ..ಜೆಕೆ ನಂಗೆ ತುಂಬಾ ಭಯ ಆಗ್ತಿದೆ ಕಣೋ ಅಂತ ಮುಖದಲ್ಲಿ ಅಂತಕವನ್ನು ವ್ಯಕ್ತಪಡಿಸುತ್ತಾನೆ"..

ಜೆಕೆ: "ಭಯನಾ ಯಾಕೋ? ಆಗ ಕಾರ್ತಿಕ್ ಮನಸಲ್ಲಿ ,ಆತಂಕ ಇದ್ದರು ಕೂಡಾ ಅದನ್ನು ತೋರ್ಪಡಿಸದೆ ಗೊತ್ತಿಲ್ಲ ಕಣೋ".. 

"ಹೇಗೆ ಹೇಳಲೋ ನೀನು ಅವಳನ್ನು ಇತರ ಪ್ರೀತಿ ಮಾಡೋದು ನೋಡಿ ಭಯ ಆಗ್ತಿದೆ ಅಕಸ್ಮಾತ್ ಅವಳೇನಾದ್ರು ಇವನ ಪ್ರೀತಿನಾ ಒಪ್ಗೊಳ್ಳದೆ ಹೋದ್ರೆ ? ಅಥವಾ ಇವರಿಬ್ಬರ ಲೈಫ್ ಅಲ್ಲಿ ಯಾರಾದ್ರೂ ಬಂದ್ರೆ... ದೇವರೇ ದಯವಿಟ್ಟು ನನ್ನ ಗೆಳೆಯನ ಲೈಫ್ ನಲ್ಲಿ ಯಾರ ದೃಷ್ಟಿನೂ ಬೀಳದೆ ಇರಲಿ ಸ್ವಾತಿ ಅವನ ಪ್ರೀತಿನಾ ಒಪ್ಗೊಂಡ್ರೆ ಅಷ್ಟೆ ಸಾಕು" ಅಂತ ತನ್ನ ಮನಸ್ಸಿನಲ್ಲಿ ಅಂದು ಕೊಳ್ಳುತ್ತಾನೆ 
ಆಗ ಜೆಕೆ ಅಲ್ವೋ ಪ್ರೀತಿ ಮಾಡೊ ನಂಗೆ ಭಯ ಆಗಬೇಕು ನಿಂಗೆ ಆಗ್ತಿದೆ ಅಲ್ವೋ🙄 

ಸೂರ್ಯ: "ಭಯ ಪಡೋ ಅವಶ್ಯಕತೆನೇ ಇಲ್ಲ ಎಲ್ಲಾ ಒಳ್ಳೇದೆ ಆಗುತ್ತೆ"

ಆಗ ಕಾರ್ತಿಕ್ ತನ್ನ ಭಾವನೆಗಳನ್ನು ತಡೆಯಲಾಗದೆ ಜೆಕೆ ನಾ ಗಟ್ಟಿಯಾಗಿ ತಬ್ಬಿಕೊಳ್ತಾನೇ ಹೇ.. ಕಾರ್ತಿಕ್ ಯಾಕೋ ಏನಾಯ್ತೋ 

ಕಾರ್ತಿಕ್: "ಏನು ನಿನ್ನ ತಬ್ಬಿಕೊಳ್ಳೋಹಾಗಿಲ್ವ ನನ್ನಿಷ್ಟ ನನ್ನ ಗೆಳೆಯನ್ನ ನಾನು ತಬ್ಬಿಕೊಳ್ತೀನಿ" 

ಜೆಕೆ: "ಆಯ್ತು ಸರ್ ಆಗ ಸೂರ್ಯ ಹಾಗಾದ್ರೆ ನಾನು😒 ನೀನು ಬಾರೋ ಅಂತಾ ಜೆಕೆ ಇಬ್ಬರನ್ನು ತಬ್ಬಿಕೊಳ್ತಾಣೆ"

ಸೂರ್ಯ: "ನಾನು ಹೇಳ್ದೆ ಅಲ್ವೇನೋ ಜೆಕೆ ಕಾರ್ತಿಕ್ ಗೆ ಈ ರೂಮ್ ನೋಡಿ ದಿಗ್ಭ್ರಮೆ ಆಗ್ತಾನೆ ಅಂತ ಇವನೇ ಹೀಗೆ ಇನ್ನೂ ಪ್ರವೀಣ್ ನೋಡಿದ್ರೆ ಮುಗದೆ ಹೋಯ್ತು ನಿನ್ನ ಸೀಕ್ರೆಟ್ ರೂಮ್ ರಹಸ್ಯ ರಹಸ್ಯವಾಗಿ ಇರ್ತಾನೆ ಇರಲಿಲ್ಲ" 😅 

ಜೆಕೆ:" ಅದು ನಿಜ ಕಣೋ 😁ಕಾರ್ತಿ.. ನೀನು ಯಾಕೋ ಮುಖ ಒಂತಾರ ಮಾಡಿದೀಯ"? 

ಕಾರ್ತಿಕ್:" ಛೇ.. ಛೇ.. ಹಾಗೇನೂ ಇಲ್ವೊ ಇದನೆಲ್ಲ ನೋಡಿ ಸ್ವಲ್ಪ ಶಾಕ್ ಆಯ್ತು ಅಷ್ಟೆ" ,

ಓ.. ಹಾಗ ಸರಿ ಇಸ್ತೋತ್ತಲ್ಲಿ ನೀನು ನಾರ್ಮಲ್ ಆಗಿ ಮನೆಗೆ ಬರೋದಿಲ್ವಲ್ಲ ಏನಾದ್ರೂ ಪ್ರಾಬ್ಲಮ್ ಏನೋ? ಆಗ ಸೂರ್ಯ ಕೂಡ ಹೌದು ಇಸ್ಟೊತ್ತಲ್ಲಿ ನೀನು ಜೆಕೆ ಮನೆಗೆ ಬರೋದು ನೋಡೇ ಇಲ್ಲ 
ಕಾರ್ತಿಕ್: "ಏನು ಇಲ್ವೋ ರೂಮ್ ನಲ್ಲಿ ಒಬ್ಬನೇ ಇದ್ದು ಬೋರ್ ಆಗ್ತಾ ಇತ್ತು ಅದಕ್ಕೆ ಹೊರಗಡೆ ಹೋಗೋಣ ಬಾ ಅಂತಾ ಕರಿಯೋಕೆ ಬಂದೆ ಅಷ್ಟೆ" 

ಜೆಕೆ: "ಪಕ್ಕಾ ಅಷ್ಟೆ ನಾ ನಿಜಾ ಹೇಳು"?.. 

ಕಾರ್ತಿಕ್:" ಅಷ್ಟೆ ಕಣೋ😊 ಸರಿ ಈಗ ಹೋಗೋಣ ಬನ್ನಿ ಹಾಗಾದ್ರೆ ಸ್ವಾತಿ ಗೂ ಬರೋದಕ್ಕೆ ಹೇಳ್ತೀನಿ 

ಸೂರ್ಯ: "ಹಾ.. ಸರಿ ಕಣೋ ಹಾಗೆ ಮಾಡು ನಿಮ್ಮ ತಂಗಿ ನಾ ನಂಬಿಕೊಂಡ್ರೆ ಮುಗದೇ ಹೋಯ್ತು.. ನೋಡಿದೆಯಾ ಅವಳಿಗೆ ನನ್ನ ಬಗ್ಗೆ ಚಿಂತನೆ ಇಲ್ಲ ನಾನು ಅವಳಿಗೋಸ್ಕರ ಮನೆಗೆ ಬಂದ್ರೆ ನಂಗೆ ಒಂದು ಮಾತು ಹೇಳ್ದೆ ಹೋಗಿದಾಳೆ"..😕 

ಜೆಕೆ: "ನಾನು ನಿನಗೆ ಮೊದಲೇ ಬಡಕೊಂಡೆ ಆ ಕೋತಿ ಸರಿ ಇಲ್ಲ ಅದನ್ನ ಲವ್  ಮಾಡಬೇಡ ಅಂತಾ ಕೇಳಿದಿಯಾ ನನ್ನ ಮಾತನ್ನ ಈಗ ಅನಭವಿಸು"  

ಸೂರ್ಯ: "ಇರಲಿ ಭಾವಿಗೆ ಬಿದ್ದಾಗಲೇ ಎಲ್ಲರಿಗೂ ಗೊತ್ತಾಗೋದು ನಿನಗೂ ಮುಂದೆ ಗೊತ್ತಾಗುತ್ತೆ"

 ಜೆಕೆ: "ಏನೂ ನಾನು ನೀನ್ ತರ ಹೆದರೋ ಕೆಟಗರಿ ಅಲ್ಲ" 
ಸೂರ್ಯ: "ಲವ್ ಮಾಡೋ  ಮುಂಚೆ ಎಲ್ಲರೂ ಹೀಗೆ ಹೇಳೋದು"😂 

ಕಾರ್ತಿಕ್: "ಈಗ ಒಪ್ಗೊಂಡೆ ಕಣೋ ನಿಂಗೆ ಲವ್ ಅಲ್ಲಿ ತುಂಬಾ ಎಸ್ಪಿರಿಯನ್ಸ್ ಆಗಿದೆ ಅಂತ 🤭 ಜೆಕೆ  I am sorry ಕಣೋ ನಂಗೀಗ ಹೊರಗೇ ಹೋಗೋ ಮನಸೇ ಬರ್ತಿಲ್ಲ" 

ಜೆಕೆ:" ಸರಿ ಹಾಗಾದ್ರೆ ಇವತ್ತು ಇಲ್ಲೇ ಮಲ್ಕೋ ಕಾರ್ತಿಕ್: ಇಲ್ಲಿಯ... ಇಲ್ಲಾ ಕಣೋ ನಾನ್ ಹೋಗ್ತೀನಿ"

ಜೆಕೆ: "ನೀನು ಹೋಗ್ತೀನಿ ಅಂದ್ರು ನಾನ್ ಬಿಡೋಲ್ಲ ನಾನ್ ಫಿಕ್ಸ್ ಆಗಿದೀನಿ ಮುಗೀತು ಇವತ್ತು ನೀನು ಇಲ್ಲೇ ಇರ್ತಿಯಾ ಅಷ್ಟೆ" ! 

ಸೂರ್ಯ: "ಒಂದಿನ ಮಾಲ್ಕೊಂಡ್ರೆ ಏನು ಅಗಲ್ವೋ ಜೆಕೆ ಹೇಳಿದಮೇಲೆ ಮುಗೀತು ಅದೆ ಫೈನಲ್, ಸರಿ ಕಣ್ರೋ ನಾನ್ ಹೋಗ್ತೀನಿ ಅಮ್ಮ ಕಾಯ್ತೀರ್ತಾಳೆ ಅಂತಾ ಸೂರ್ಯ ಅಲ್ಲಿಂದ ಹೋರಾಡ್ತಾನೆ ಹಾಗೆ ಕಾರ್ತೀಕ್ ಕೂಡ ಅವತ್ತು ಅಲ್ಲೇ ಉಳಿದುಕೊಳ್ತಾನೆ.
   
            ಮುಂದುವರೆಯುವುದು....

ಲೇಖಕರ ನೋಟು:

ಕೆಲವು ಪ್ರೀತಿಗಳು ಶಬ್ದಗಳಿಗೆ ಮೀರಿ ಹೋಗಿರುತ್ತವೆ… ಜೆಕೆಯ ಪ್ರೀತಿಯೂ ಅಂತಹದೇ. ಸ್ವಾತಿ ಆ ಪ್ರೀತಿಯ ಸತ್ಯವನ್ನು ತಿಳಿದಾಗ ಏನು ಸಂಭವಿಸುತ್ತದೆ? ಗೆಲುವು ಅಥವ ನೋವು?

ಪ್ರಿಯ ಓದುಗರೇ, ಈ ಕಥೆಯ ಮುಂದಿನ ತಿರುವು ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. ನಿಮ್ಮ ಪ್ರೋತ್ಸಾಹವೇ ಮುಂದಿನ ಅಧ್ಯಾಯ ಬರೆಯಲು ನನ್ನ ಶಕ್ತಿಯಾಗಿದೆ.
----