Mahi - 21 in Kannada Love Stories by S Pr books and stories PDF | ಮಹಿ - 22

The Author
Featured Books
Categories
Share

ಮಹಿ - 22

    ಅಜ್ಜಿ ಕೊಟ್ಟ ಡಾಕ್ಯುಮೆಂಟ್ಸ್ ನಾ ಫ್ಯಾಕ್ಟರಿ ನಾ ಕೀ ನಾ ತೆಗೆದುಕೊಂಡ ಮೇಲೆ, ಎಲ್ಲರಿಗೂ ಖುಷಿ ಆಯ್ತು. 

ನಾನು ತಾತ ನಾ ನೋಡ್ತಾ. ತಾತ  ನಿಮ್ಮಿಂದ ನನಗೆ ಒಂದು ಹೆಲ್ಪ್ ಆಗಬೇಕು ಅಂತ ಕೇಳ್ದೆ. ತಾತ ಏನ್ ಬೇಕು ಕೇಳೋ ಅಂತ ಹೇಳಿದ್ರು. ಏನಿಲ್ಲಾ ತಾತ  ಮೈಸೂರ್ ಗೆ ಬಂದು ನೀಲಾ ಅವರ ತಾತ ನಾ ಹತ್ತಿರ ನೀವು ಇನ್ವೆಸ್ಟ್ಮೆಂಟ್ ಮಾಡೋ ವ್ಯಕ್ತಿ ಹಾಗೇ ಬಂದು ಮಾತಾಡಬೇಕು. ಯಾವುದೇ ಕಾರಣಕ್ಕೂ ನಾನು ನಿಮ್ಮ ಮೊಮ್ಮಗ ಅಂತ ಹೇಳಬಾರ್ದು. ಏನಪ್ಪಾ ಇವನು ಬರಿ ಫ್ಯಾಕ್ಟರಿ ಕೀ ಡಾಕ್ಯುಮೆಂಟ್ಸ್ ನಾ ತೆಗೆದುಕೊಂಡು ದುಡ್ಡು ತೆಗೆದುಕೊಳ್ಳದೆ ಇನ್ವೆಸ್ಟ್ಮೆಂಟ್ ಮಾಡ್ತಾ ಇದ್ದೀನಿ ಅಂತ ಬಂದು ಹೇಳಿ ಅಂತ ಹೇಳ್ತಾ ಇದ್ದಾನೆ ಅಂತ ಕನ್ಫ್ಯೂಸ್ ಆಗಬೇಡಿ. ಅಜ್ಜಿ ಹೆಸರಲ್ಲಿ ಇರೋ ಈ ಫ್ಯಾಕ್ಟರಿ ಗೆ ನಾನೆ ಇನ್ವೆಸ್ಟ್ಮೆಂಟ್ ಮಾಡ್ತೀನಿ ಬಟ್  ನೀವು ಇನ್ವೆಸ್ಟ್ಮೆಂಟ್ ಮಾಡೋ ಹಾಗೇ ಹೇಳಿ ಸಾಕು ಅಂತ ಹೇಳ್ದೆ. ತಾತ ಲೋ ನಿನ್ ಇನ್ವೆಸ್ಟ್ಮೆಂಟ್ ಮಾಡೋಕೆ ನಿನ್ನ ಹತ್ತಿರ ಅಷ್ಟು ದುಡ್ಡು ಎಲ್ಲೋ ಇದೆ ಅಂತ ಕೇಳಿದ್ರು. ದಾಕ್ಷಾಯಣಿ ಚಿಕ್ಕಮ್ಮ ಶ್ರುತಿ ಚಿಕ್ಕಮ್ಮ, ನಗ್ತಾ ಮಾವ ಅವನ ಅವನು ನಿಮ್ ಮೊಮ್ಮಗ, ಬುದ್ದಿವಂತ, ಬರಿ ಫ್ಯಾಕ್ಟರಿ ಕೀ ನಾ ಕೇಳ್ತಾ ಇದ್ದಾನೆ ಅಂತ ಅರ್ಥ ಮಾಡಿಕೊಳ್ಳಿ  ಅವನು ಏನು ಅಂತ ಹೇಳಿದ್ರು. ತಾತ ವಿಷಯ ನಾ ಅರ್ಥ ಮಾಡಿಕೊಂಡು ಸರಿ ಮೊಮ್ಮಗನೇ ನಿನ್ ಹೇಗೆ ಹೇಳ್ತೀಯೋ ಹಾಗೇ ಮಾಡ್ತೀನಿ ಅಂತ ಹೇಳ್ತಾರೆ.  ಸರಿ ತಾತ ನಾವಿನ್ನು ಹೊರಡ್ತೀವಿ ನಿಮಗೆ ಕಾಲ್ ಮಾಡಿ ಹೇಳ್ತಿನಿ ಅವಾಗ ಬನ್ನಿ ಅಂತ ಹೇಳ್ದೆ. ಶ್ರುತಿ ಚಿಕ್ಕಮ್ಮ ಲೋ ಏನೋ ಇದು ಹೀಗೆ ಬಂದು ಹಾಗೇ ಹೋಗ್ತಾ ಇದ್ದಿಯಾ ನಾಳೆ ಹೋಗಿವಂತೆ ಇರು ಅಂತ ಹೇಳಿದ್ರು. ಇಲ್ಲಾ ಅಮ್ಮ ಹೋಗಬೇಕು ತುಂಬಾ ಕೆಲಸ ಇದೆ, ಹೇಗಿದ್ರು ಮತ್ತೆ ಸಿಗ್ತೀನಿ ಅಲ್ವಾ ಅಂತ ಹೇಳ್ದೆ. ಶ್ರುತಿ ಚಿಕ್ಕಮ್ಮ ಸರಿ ಹೋಗಿವಂತೆ ನಿನ್ ಕೋತಿ ಗ್ಯಾಂಗ್ ಬರುತ್ತೆ ಅವರನ್ನ ಮಾತಾಡಿಸಿಕೊಂಡು ಹೋಗು ಇಲ್ಲಾ ಅಂದ್ರೆ ಮನೆ ನಾ ಕುರುಕ್ಷೇತ್ರ ಮಾಡಿ ಬಿಡ್ತಾರೆ ಅಂತ ಹೇಳಿದ್ರು. ಸರಿ ಅಮ್ಮ ಅಂತ ಹೇಳಿ ಮನೆಯವರ ಜೊತೆಗೆ ಮಾತಾಡ್ತಾ ಸ್ವಲ್ಪ ಹೊತ್ತು ಕಾಲ ಕಳೆದೆ.   

 ಸಂಜೆ ಆಗ್ತಾ ಇದ್ದಾ ಹಾಗೇ ಕಾಲೇಜ್ ಸ್ಕೂಲ್ ಯಿಂದ ತಮ್ಮಂದಿರು ತಂಗಿರು ಬಂದ್ರು, ಅವರು ನನ್ನ ನೋಡಿ ತುಂಬಾ ಖುಷಿ ಆದ್ರು. ಯಾವಾಗ ಬಂದೆ ಹೇಗಿದ್ದೀಯ ಅನ್ನೋದನ್ನ ಕೇಳೋದು ಬಿಟ್ಟು ಮನೆಗೆ ಅತಿಥಿ ಬಂದಿದ್ದಾನೆ ಅಂತ ನನ್ನ ಮೇಲೆ ಯುದ್ಧಕ್ಕೆ ನಿಂತ್ರು. ಅವರ ಕೋಪ ತಣ್ಣಗೆ ಆದಮೇಲೆ ಕೂಲ್ ಆಗಿ ಮಾತಾಡೋಕೆ ಶುರು ಮಾಡಿದ್ರು. ತಂಗಿ ಅಣ್ಣ ಇವರು ಯಾರು ಅಂತ ನೀಲಾ ನಾ ನೋಡಿ ಕೇಳಿದ್ರು. ಅಜ್ಜಿ ನಿಮ್ ಅತ್ತಿಗೆ ಅಂತ ಹೇಳಿದ್ರು. ಅಷ್ಟೇ ನಾಲಕ್ಕು ಜನ ಪಾರ್ಟಿ ಚೇಂಜ್ ಮಾಡಿ ಹೋಗಿ ನೀಲಾ ಜೊತೆಗೆ ಸೇರ್ಕೊಂಡ್ರು, ಪರಿಚಯ ಮಾಡಿಕೊಂಡು ತುಂಬಾ ಬೇಗ ಹೊಂದಿಕೊಂಡು ನನ್ನ ಬಗ್ಗೆ ಇರೋ ಬರೋ ಕಂಪ್ಲೇಂಟ್ಸ್ ನಾ ಹೇಳೋಕೆ ಶುರು ಮಾಡಿದ್ರು. ಪಾಪ ಚಿಕ್ ವಯಸ್ಸಿನಿಂದ ಮನೆಯವರು ನನ್ನ ಮೇಲೆ ತೋರಿಸೋ ಪ್ರೀತಿ ನಾ ನೋಡಿ ಯಾರಿಗೆ ಹೇಳ್ಕೊಬೇಕೋ ಅಂತ ಗೊತ್ತಾಗದೆ ಮನಸಲ್ಲೇ ಇಟ್ಕೊಂಡು ಇದ್ರು ಅಂತ ಅನ್ನಿಸುತ್ತೆ. ಒಂದೊಂದೇ ಹೇಳೋಕೆ ಶುರು ಮಾಡಿದ್ರು. ನೀಲಾ ಅವರು ಹೇಳೋ ಕಂಪ್ಲೇಂಟ್ಸ್ ನಾ ಕೇಳಿ ಅವರಿಗೆ ನಾನ್ ಎಷ್ಟು ತೊಂದ್ರೆ ಕೊಟ್ಟಿದ್ದೀನಿ ಅಂತ ಅರ್ಥ ಮಾಡಿಕೊಂಡು  ನನ್ನ ಮನಸಲ್ಲೇ ಬೈಕೊಳ್ಳೋಕೆ ಶುರು ಮಾಡಿದ್ಲು. ನೀಲಾ ಅವರಿಗೆ ಸಮಾಧಾನ ಮಾಡ್ತಾ ಆಯ್ತು ಹೇಳಿದ್ದಿರಾ ಅಲ್ವಾ ನಾನ್ ವಿಚಾರಿಸಿ ಕೊಳ್ತೀನಿ ಇನ್ಮೇಲೆ ಅವನು ನಿಮ್ ಹತ್ತಿರ ಒಂದು ಮಾತು ಮಾತಾಡೋಕು ನೂರು ಸರಿ ಯೋಚ್ನೆ ಮಾಡಿ ಮಾತಾಡಬೇಕು ಹಾಗೇ ಮಾಡ್ತೀನಿ ಅಂತ ಅವರಿಗೆ ಮಾತು ಕೊಟ್ಟಳು.  ನಾಲಕ್ಕು ಜನಕ್ಕೂ ತುಂಬಾ ಖುಷಿಯಾಗಿ ಅವರಿಗೆ ಆನೆ ಬಲ ಬಂದ ಹಾಗೇ ಆಯ್ತು. ಎಲ್ಲರೂ ಥ್ಯಾಂಕ್ಸ್ ಅತ್ತಿಗೆ ಅಂತ ಹೇಳಿದ್ರು. ದಾಕ್ಷಾಯಣಿ ಲೋ ಇಷ್ಟು ದಿನ ಅಣ್ಣ ಅಣ್ಣ ಅಂತ ಇದ್ರಿ ಇವಾಗ ಅತ್ತಿಗೆ ಬಂದ ತಕ್ಷಣ ಅತ್ತಿಗೆ ಪಾರ್ಟಿ ಆಗೋದ್ರ ಅಂತ ಹೇಳಿದ್ರು. ಅದಕ್ಕೆ ಅವರು ಹೌದು ಅಂತ ಜೋರಾಗಿ ಕಿರುಚಿದ್ರು. 

  ಸ್ವಲ್ಪ ಸಮಯ ಅವರ ಜೊತೆಗೆ ಕಳೆದು ಸರಿ ನಾವಿನ್ನು ಹೊರಡ್ತೀವಿ ಅಂತ ಹೇಳ್ದೆ. ತಂಗಿ ಒಬ್ಬಳು ಬಂದು ಅಣ್ಣ ಏನು ಹೀಗೆ ಬಂದು ಹಾಗೇ ಹೋಗ್ತಾ ಇದ್ದಿಯಾ ನಿನ್ ಇತ್ತೀಚಿಗೆ ಬರೋದೇ ಅಪರೂಪಾ ಸ್ವಲ್ಪ ದಿನ ಇದ್ದು ಹೋಗೋ ಪ್ಲೀಸ್ ಅಂತ ಕೇಳ್ಕೊಂಡ್ಲು ಇನ್ನು ಮೂರು ಜನ ಕೂಡ ಅಣ್ಣ ಪ್ಲೀಸ್ ಇರು ಅಂತ ಕೇಳಿದ್ರು.  4 5 ದಿನಗಳಲ್ಲಿ ಮತ್ತೆ ಸಿಗ್ತೀನಿ ಇವಾಗ ಹೋಗಬೇಕು ತುಂಬಾ ಕೆಲಸ ಇದೆ ಅಂತ ಹೇಳ್ದೆ. ಮತ್ತೆ ಸಿಗ್ತೀನಿ ಅಂತ ಹೇಳಿದಕ್ಕೆ ಅವರಿಗೆ ತುಂಬಾ ಖುಷಿಯಾಗಿ ಸರಿ ಆಯ್ತು ಅಂತ ಹೇಳಿ ಒಬ್ಬ ತಂಗಿ ಅಣ್ಣ ಈಗ್ಲೇ ಬಂದೆ ಅಂತ ಹೇಳಿ ಅವಳ ರೂಮ್ ಗೆ ಓಡಿ ಹೋಗಿ 2 ನಿಮಿಷ ದ ನಂತರ ಕೈಲಿ ಒಂದು ಗಿಫ್ಟ್ ಬಾಕ್ಸ್ ಇಡ್ಕೊಂಡು ಬಂದು ನನ್ನ ಕೈಗೆ ಕೊಟ್ಟು ನಿನ್ನ ಬರ್ತ್ಡೇ ಗೆ ಗಿಫ್ಟ್ ಕೊಡೋಣ ಅಂತ ಇದ್ವಿ ಅದ್ರೆ ನೀನು ಬೆಂಗಳೂರಲ್ಲಿ ಇಲ್ಲಾ ಕೆಲಸದ ಮೇಲೆ ಬೇರೆ ಕಡೆಗೆ ಹೋಗಿದ್ದೀಯ ಅಂತ ಹೇಳಿದ್ರು. ಅದಕ್ಕೆ ಗಿಫ್ಟ್ ಕೊಡೋಕೆ ಹಾಗಲಿಲ್ಲ, ಅಂತ ಹೇಳಿದ್ಲು.  ನಾನು ಗಿಫ್ಟ್ ನಾ ಓಪನ್ ಮಾಡಿ ನೋಡಿದೆ ಅದರಲ್ಲಿ ಚಿಕ್ಕ ವಯಸ್ಸಲ್ಲಿ ತೆಗೆದ ಗ್ರೂಪ್ ಫೋಟೋ ನಾ ಫ್ರೇಮ್ ಮಾಡಿಸಿದ್ರು ನೋಡಿ ತುಂಬಾ ಖುಷಿ ಆಯ್ತು. ಥ್ಯಾಂಕ್ಸ್ ಅಂತ ಹೇಳ್ದೆ. ಅವರೆಲ್ಲಾ ನಗ್ತಾ ಥ್ಯಾಂಕ್ಸ್ ನಾವು ನಿನಗೆ ಹೇಳಬೇಕು. ಇಷ್ಟು ದಿನ ಆದಮೇಲೆ ನಿನ್ ಕೊಡೊ ಕಾಟನ ಹೇಳ್ಕೊಳ್ಳೋಕೆ ನಮಗೆ ಅತ್ತಿಗೆ ನಾ ಕೊಟ್ಟಿದ್ದಕ್ಕೆ ಅಂತ ಹೇಳಿದ್ರು. ಮನೆಯವರೆಲ್ಲ ಅವರ ಮಾತಿಗೆ ನಕ್ಕರು. ನಾನು ಕೂಡ ನಕ್ಕು. ಸರಿ ನಾವಿನ್ನು ಹೊರಡ್ತೀವಿ ಅಂತ ಹೇಳಿ ಎಲ್ಲರಿಗೂ ಬೈ ಹೇಳಿ ತಾತಗೆ  ಕಾಲ್ ಮಾಡಿ ಮಾತಾಡ್ತೀನಿ ಅಂತ ಹೇಳಿ ನಾನು ನೀಲಾ ಅಲ್ಲಿಂದ ಮೈಸೂರ್ ಕಡೆಗೆ ಹೊರಟ್ವಿ....

        ನಾನು ರೋಡ್ ನೋಡ್ಕೊಂಡು ಕಾರ್ ಡ್ರೈವ್ ಮಾಡ್ತಾ ಇದ್ರೆ. ನೀಲಾ ನನ್ನಾ ಭುಜ ನಾ ಇಡ್ಕೊಂಡು ಭುಜದ ಮೇಲೆ ತಲೆ ಇಟ್ಟು ತುಂಬಾ ಥ್ಯಾಂಕ್ಸ್ ಕಣೋ ನನ್ನ ಲೈಫ್ ಗೆ ಬಂದಿದ್ದಕ್ಕೆ, ಇಷ್ಟು ಪ್ರೀತ್ಸೋ ಫ್ಯಾಮಿಲಿ ನಾ ಪರಿಚಯ ಮಾಡಿಸಿದಕ್ಕೆ, ನನಗೆ ಕೊಟ್ಟಿದ್ದಕ್ಕೆ ಅಂತ ಹೇಳಿ. ಸಡನ್ ಆಗಿ ಇಡ್ಕೊಂಡು ಇರೋ ಕೈ ನಾ ಬಿಟ್ಟು ನನ್ನ ಮುಖ ನೋಡ್ತಾ. ಏನೋ ಕೇಳಬೇಕು ಅಂತ ಯೋಚ್ನೆ ಬಂದ್ರು ಏನೋ ನೆನಪಾಗಿ ಕೇಳದೆ ಮತ್ತೆ ಕೈ ಇಡ್ಕೊಂಡು ಭುಜದ ಮೇಲೆ ತಲೆ ಇಟ್ಟು ಕೊಂಡು ಕಣ್ ಮುಚ್ಚಿದಳು. ಅವಳು ಏನಕ್ಕೆ ಹಾಗೇ ನೋಡಿ ಮತ್ತೆ  ಭುಜದ ಮೇಲೆ ತಲೆ ಇಟ್ಟು ಕಣ್ ಮುಚ್ಚಿಕೊಂಡಳೋ ನನಗೆ ಅರ್ಥ ಆಯ್ತು. ನೀಲಾ ಹತ್ತಿರ ಮಾತಾಡ್ತಾ, ನಾನು ನಿನ್ನ ಹತ್ತಿರ ಪ್ರಾಮಿಸ್ ಅಷ್ಟೇ ಕೇಳಿದ್ದು, ನೀನು ನನ್ನ ಏನು ಕೆಳಬಾರ್ದು ಅಂತ ಪ್ರಾಮಿಸ್ ತಗೊಂಡು ಇಲ್ಲಾ. ನಿನಗೆ ಏನೇ ಕೇಳಬೇಕು ಅಂತ ಇದ್ರು ನನ್ನ ಕೇಳಬಹುದು. ನಿನಗೆ ಕೇಳೋ ಅಧಿಕಾರ ಇದೆ ತಿಳ್ಕೊಳ್ಳೋ ಅಧಿಕಾರ ಕೂಡ ಇದೆ ಅಂತ ಹೇಳಿದೆ. ನೀಲಾ ಹಾಗೇ ಕಣ್ಮುಚ್ಚಿ ಕೊಂಡೆ  ನಿನಗೆ ಏನ್ ಹೇಳಬೇಕು ಅನ್ನಿಸುತ್ತೋ ಅದನ್ನ ಹೇಳು ಸಾಕು ಅಂತ ಹೇಳಿದ್ಲು. 

  ಅಷ್ಟು ದೊಡ್ಡ ಸೀಕ್ರೆಟ್ ಏನು ಇಲ್ಲಾ ನನ್ನ ಲೈಫ್ ಅಲ್ಲಿ, ನನ್ನ ಕಾಲಿನ ಮೇಲೆ ನಾನು ನಿಂತ್ಕೋಬೇಕು ಅಂತ ಅನ್ನಿಸಿ ಈ ನಿರ್ಧಾರ ತಗೊಂಡೆ. ಮನೇಲಿ ಅರ್ಥ ಮಾಡಿಕೊಂಡು ಸರಿ ನಿನ್ ಇಷ್ಟ ಅಂತ ಹೇಳಿಬಿಟ್ರು. ನನ್ನ ಬಗ್ಗೆ ನನ್ನ ಫ್ಯಾಮಿಲಿ ಬಗ್ಗೆ ನನ್ನ ಫ್ರೆಂಡ್ಸ್ ಸರ್ಕಲ್ ಅಲ್ಲಿ ಕೆಲವರಿಗೆ ಬಿಟ್ಟು ಬೇರೆ ಯಾರಿಗೂ ನಾನು ರಿಚ್ ಕಿಡ್ ಅಂತ ಗೊತ್ತಿಲ್ಲ. ಇಂಫ್ಯಾಕ್ಟ್ ನಿಮ್ ಅಕ್ಕ ಶಿಲ್ಪಾ ಗು ಗೊತ್ತಿಲ್ಲ. ತುಂಬಾ ಒಳ್ಳೆ ಮನಸ್ಸು ಇರೋ ಹುಡುಗಿ ಶಿಲ್ಪಾ. ಏನಪ್ಪ ಇವನು ನಿಮ್ ಅಕ್ಕನ ಬಗ್ಗೆ ಈಗೆ ಹೇಳ್ತಾ ಇದ್ದಾನೆ ಅಂತ ಅನ್ಕೋಬೋದು, ಕಾರಣ ಇದೆ, ಶಿಲ್ಪಾ ವರ್ಕ್ ಮಾಡೋ ಟೀಂ ಅಲ್ಲಿ ಜಾಯಿನ್ ಆದಾಗ ಮೊದಲಿಗೆ ಮಾತಡಿಸಿದ್ದು ನಿಮ್ ಅಕ್ಕನೇ, ಕಷ್ಟ ನಾ ನೋಡಿದವಳು ಕಷ್ಟ ನಾ ಅರ್ಥ ಮಾಡಿಕೊಂಡವಳು, ನಾನು ಕಷ್ಟದಲ್ಲಿ ಇದ್ದೀನಿ ಅಂತ ಗೊತ್ತಾಗಿ ಅವಳ ಸೇವಿಂಗ್ಸ್ ಅಲ್ಲಿ ಇದ್ದಾ ದುಡ್ಡನ್ನ ಕೊಟ್ಟು  ಇಟ್ಕೋ  ನಿನ್ನ ಹತ್ತಿರ ಇದ್ದಾಗ ಕೊಡು ಅಂತ ಹೇಳಿದವಳು. ಯಾರೋ ಒಬ್ರು ನನ್ನ ಬಗ್ಗೆ ಕೀಳಾಗಿ ಮಾತಾಡಿದಕ್ಕೆ ಯಾರು ಏನು ಅಂತ ನೋಡದೆ ನನ್ನ ಪರ ನಿಂತು ನನಗೆ ಸಪೋರ್ಟ್ ಮಾಡಿದ್ಲು. ಒಬ್ಬರಿಂದ ಜಾಬ್ ಹೋಯ್ತು ಅಂತ ಗೊತ್ತಾದಾಗ ತುಂಬಾ ನೋವು ಪಟ್ಲು. ಜಾಬ್ ಗೆ ರಿಸೈನ್ ಮಾಡಿ, ನಿಮ್ ತಾತ ಭಾವ ನಾ ಹತ್ತಿರ ಮಾತಾಡಿ ನನಗೆ ಜಾಬ್ ಕೊಡಿಸಿದ್ಲು. ವಿಧಿ ನೋಡು ಹೇಗಿದೆ, ತಾತ ಅಜ್ಜಿಗೋಸ್ಕರ ಶುರು ಮಾಡಿದ ಕಂಪನಿ ಕಾರಣಾಂತರಗಳಿಂದ ಮುಚ್ಚಿ ಹೋಯ್ತು,  ಯಾರು ಅದರ ಬಗ್ಗೆ ತಲೆ ಕೆಡಸಿಕೊಳ್ಳಲಿಲ್ಲ, ಶಿಲ್ಪಾ ನನ್ನ ಇಲ್ಲಿಗೆ ಕರ್ಕೊಂಡು ಬರದೇ ಇದ್ದಿದ್ದ್ರೆ ಈ ಕೆಲಸ ನಾ ಕೊಡಸದೆ ಇದ್ದಿದ್ರೆ, ನಾನು ಕೆಲಸಾನ ಕಲಿಯದೇ ಇದ್ದಿದ್ರೆ, ಇವತ್ತು ನನಗೆ ಮುಚ್ಚಿ ಹೋಗಿರೋ ತಾತ ನಾ ಕನಸಿನ ಕಂಪನಿ ನಾ ಮತ್ತೆ ಶುರು ಮಾಡಬೇಕು ಅಂತ ಆಲೋಚನೆ ಬರ್ತಾನೇ ಇದ್ದಿಲ್ಲ, ಇವತ್ತು ನನ್ನ ಫ್ಯಾಮಿಲಿ ಇಷ್ಟು ಖುಷಿಯಾಗಿ ಇರೋಕೆ ಕಾರಣ ನಿಮ್ ಅಕ್ಕ. ಅವಳಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಸಾಕಾಗಲ್ಲ. ನೋಡು ಅಷ್ಟು ಹೆಲ್ಪ್ ಮಾಡಿರೋ ನಿಮ್ ಅಕ್ಕ ಗೆ ನಾನು ಅವರ ತಂಗಿ ನಾ ಲವ್ ಮಾಡ್ತಾ ಇದ್ದೀನಿ ಅವರ ಮನೆಗೆ ಅಳಿಯ ಆಗ್ತಾ ಇದ್ದೀನಿ ಅನ್ನೋ ವಿಷಯ ನೇ ಗೊತ್ತಿಲ್ಲ ಅಂತ ಹೇಳ್ದೆ. ನೀಲಾ ನನ್ನ ಈ ಲಾಸ್ಟ್ ಲೈನ್ ಗೆ ಸಡನ್ ಆಗಿ ನನ್ನ ಕೈ ಬಿಟ್ಟು ಮುಚ್ಚಿದ ಕಣ್ ಬಿಟ್ಟು  ಭುಜದ ಮೇಲಿಂದ ಎದ್ದು, ನನ್ನ ಕಡೆಗೆ ನೋಡ್ತಾ ಮಹಿ ನಿನಗೆ ಒಂದು ವಿಷಯ ಹೇಳಬೇಕು ಅಂತ ಹೇಳಿದ್ಲು. 

    ನಾನು ನೀಲಾ ನಾ ನೋಡ್ತಾ. ಅವಳು ಮುಖ ನಾ ಇಟ್ಕೊಂಡು ಇರೋ ರೀತಿ ನಾ ನೋಡಿ. ಲವ್ ಮಾಡೋ ವಿಷಯ ಶಿಲ್ಪಾ ಗೆ ಗೊತ್ತಾ ಅಂತ ಕೇಳ್ದೆ. ನೀಲಾ ಹೌದು ಅನ್ನೋ ಹಾಗೇ ತಲೆ ಆಡಿಸಿದಳು. ಹೇಗೆ ಅಂತ ಕೇಳ್ದೆ. ನಾನೆ ಹೇಳಿ ಬಿಟ್ಟೆ. ನಿನಗೆ ಪ್ರೊಪೋಸ್ ಮಾಡೋ ದಿನ ನಿನಗೆ ಹೇಳೋ ಮೊದಲೇ ಶಿಲ್ಪಾ ನಾ ಕೇಳ್ದೆ. ಶಿಲ್ಪಾ ನನಗೆ ಮಹಿ ಇಷ್ಟ ಆಗಿದ್ದಾನೆ ಪ್ರೊಪೋಸ್ ಮಾಡಬೇಕು ಅಂತ ಇದ್ದೀನಿ,  ಅವನು ಒಪ್ಕೋತಾನೋ ಇಲ್ವೋ ಗೊತ್ತಿಲ್ಲ ಬಟ್ ನಿನಗೆ ಏನಕ್ಕೆ ಹೇಳ್ತಾ ಇದ್ದೀನಿ ಅಂದ್ರೆ ಮನೆಯವರು ನಿನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ, ನೀನು ಅವನ ಮೇಲೆ ನಂಬಿಕೆ ಇಟ್ಟು ಮನೆಗೆ ಕರ್ಕೊಂಡು ಬಂದಿದ್ದೀಯಾ, ಒಂದು ವೇಳೆ ಮಹಿ ಒಪ್ಕೊಂಡ್ರೆ, ನನ್ನ ಪ್ರೀತಿ ನಾ. ನಿನಗೆ ಅವನ ಮೇಲೆ ಇರೋ ನಂಬಿಕೆ ಮನೆಯವರು ನಿನ್ನ ಮೇಲೆ ಇಟ್ಟಿರೋ ನಂಬಿಕೆ ಹೋಗ್ಬಾರ್ದು ಅಂತ ನಿನಗೆ ಹೇಳ್ತಾ ಇದ್ದೀನಿ. ನಿನಗೆ ಇಷ್ಟ ಇದ್ರೆ ಮಾತ್ರ ಹೋಗಿ ಪ್ರೊಪೋಸ್ ಮಾಡ್ತೀನಿ ಇಲ್ಲಾ ಅಂದ್ರೆ ಇಲ್ಲಾ ಅಂತ ಬಟ್ ಇದರಲ್ಲಿ ಮಹಿ ತಪ್ಪೇನು ಇಲ್ಲಾ ನಾನೆ ಅವನನ್ನ ಇಷ್ಟ ಪಡ್ತಾ ಇದ್ದೀನಿ ಅಂತ ಹೇಳ್ದೆ. ಅದಕ್ಕೆ ಶಿಲ್ಪಾ ನನ್ನ ಅಪ್ಪಿಕೊಂಡು ಮಹಿ ತುಂಬಾ ಒಳ್ಳೆ ಹುಡುಗ, ಅವನಿಗೆ ನಿನ್ ಇಷ್ಟ ಅದ್ರೆ ನನ್ನದೇನು ಅಭ್ಯಂತರ ಇಲ್ಲಾ, ಮನೆಯವರ ಹತ್ತಿರ ನಾನ್ ಮಾತಾಡ್ತೀನಿ ಅಂತ ಹೇಳಿದ್ಲು.  ಅಂತ ಹೇಳಿ ನೀಲಾ ಮಾತನ್ನ ಮುಗಿಸಿದ್ಲು. 

   ಹ್ಮ್ ಅಕ್ಕ ತಂಗಿರು ಮೊದಲೇ ಮಾತಾಡಿಕೊಂಡು ಇದ್ದೀರಾ ಅಂತ ಆಯ್ತು. ಸದ್ಯ ನನಗೆ ನಿಮ್ ಮನೇಲಿ ಮಾತಾಡೋ ರಿಸ್ಕ್ ತಪ್ಪಿ ಹೋಯ್ತು. ನಿಮ್ ಅಕ್ಕ ನೋಡ್ಕೋತಾಳೆ ಅಂತ ಹೇಳ್ದೆ. ಅದಕ್ಕೆ  ನೀಲಾ ತಲೆಬಗ್ಗಿಸಿ ಕೊಂಡು ಮಹಿ ಇನ್ನೊಂದು ವಿಷಯ  ನಾವಿಬ್ರು ಲವ್ ಮಾಡ್ತಾ ಇರೋ ವಿಷಯ ಶಿಲ್ಪಾ ಗೆ ಅಲ್ಲ ಇಡೀ ಮನೆಯವರಿಗೂ ಗೊತ್ತು ಅಂತ ಒಂದು ಬಾಂಬ್ ಹಾಕಿದ್ಲು. ನಾನು ಶಾಕ್ ಹಾಗಿ ಕಾರ್ ನಾ ಸೈಡ್ ಗೆ ನಿಲ್ಲಿಸಿ, ನೀಲಾ ಕಡೆಗೆ ನೋಡ್ತಾ ಏನ್ ಹೇಳ್ದೆ ಇನ್ನೊಂದು ಸರಿ ಹೇಳು ಅಂತ ಹೇಳ್ದೆ. ನೀಲಾ ನನ್ನ ಕಡೆಗೆ ನೋಡ್ತಾ ನಾವು ಲವ್ ಮಾಡೋ ವಿಷಯ ಮನೇಲಿ ಗೊತ್ತು ಅಂತ ಹೇಳಿದ್ಲು. ನಾನು ಹೇಗೆ ಅಂತ ಹೇಳ್ದೆ. ಅದು ನೀನು ಕೆಲಸಕ್ಕೆ ಜಾಯಿನ್ ಆಗಿ ಕೆಲಸ ಕಲಿಯೋದ್ರಲ್ಲಿ ತೋರಿಸ್ತಾ ಇರೋ ಶ್ರದ್ದೆ ನಾ ನೋಡಿ ಫ್ಯಾಕ್ಟರಿ ಯಿಂದ ಲೇಟ್ ಆಗಿ ಬರ್ತಾ ಇರೋದನ್ನ ನೋಡಿ , ತಾತ,, ಅಜ್ಜಿ ಅಪ್ಪ ಅಮ್ಮ ಅತ್ತೆ ಮಾವ ಅಕ್ಕ ಭಾವ ನಾ ಹತ್ತಿರ ಮಹಿ ನಾ ಏನೋ ಅನ್ಕೊಂಡು ಇದ್ದೆ ಅದ್ರೆ ಅವನು ಕೆಲಸ ಕಲಿತ ಇರೋ ರೀತಿ ಅವನು ತೋರಿಸ್ತಾ ಇರೋ ಶ್ರದ್ದೆ  ನನಗೆ ತುಂಬಾ ಇಷ್ಟ ಆಯ್ತು ಅವನಲ್ಲಿ ಏನೋ ಒಂದು ಹಠ ಇದೆ. ಒಳ್ಳೆ ಉದ್ದೇಶ ಇದೆ, ಪ್ರತಿಯೊಂದು ವಿಷಯ ನಾ ಕೇಳಿ ಕೇಳಿ ತಿಳ್ಕೊಳ್ತಾ ಇದ್ದಾನೆ, ಇಂತ ಹುಡುಗ ಸಿಗೋದು ಅಪರೂಪ ಇಂತ ಹುಡುಗ ನಮ್ ಮನೆಗೆ ಬಂದಿರೋದು ನನಗೆ ತುಂಬಾ ಸಂತೋಷ ಆಗ್ತಾ ಇದೆ ಅಂತ ಹೇಳಿದ್ರು. ಅಪ್ಪ ಕೂಡ ತಾತ ನಾ ಮಾತಿಗೆ ಹೌದು ಅಪ್ಪ  ಶಿಲ್ಪಾ ಹೇಳಿದಾಗ ಫ್ರೆಂಡ್ ಅಲ್ವಾ ಸಪೋರ್ಟ್ ಮಾಡ್ತಾ ಇದ್ದಾಳೆ ಅಂತ ಅನ್ಕೊಂಡೆ   ಅದ್ರೆ ಮಹಿ ಅದನ್ನೆಲ್ಲಾ ಸುಳ್ಳು ಮಾಡಿದ ತುಂಬಾ ಒಳ್ಳೆ ಹುಡುಗ ಅಂತ ಹೇಳಿದ್ರು. ನಾನು ಇದೆ ಒಳ್ಳೆ ಟೈಮ್ ಅಂತ ಅನ್ಕೊಂಡು ತಾತ ನಾನು ಮಹಿ ನಾ ಲವ್ ಮಾಡ್ತಾ ಇದ್ದೀನಿ ಅಂತ ಹೇಳ್ದೆ.

    ಎಲ್ಲರೂ ಶಾಕ್ ಆಗಿ ನನ್ನ ಕಡೆಗೆ ನೋಡ್ತಾ ಅಜ್ಜಿ ಏನು ಮಹಿ ನಾ ಲವ್ ಮಾಡ್ತಾ ಇದ್ದಿಯಾ, ಈ ವಿಷಯ ಅವನಿಗೆ ಗೊತ್ತಾ ಅಂತ ಕೇಳಿದ್ರು. ಅ ಅಜ್ಜಿ ಗೊತ್ತು ನಾನೆ ಅವನಿಗೆ ಹೇಳ್ದೆ ಅದ್ರೆ ಅವನು ಲವ್ ಮಾಡೋಕೆ ಮನಸ್ಸು ಇದ್ರೆ ಸಾಕು ಅದ್ರೆ ಜೀವನ ಮಾಡ್ಕೋಕೆ ಜೇಬಲ್ಲಿ ದುಡ್ಡು ಇರಬೇಕು. ಇವಾಗ ನಾನ್ ಇರೋ ಪರಿಸ್ಥಿತಿ ಅಲ್ಲಿ ನಿನ್ನ ಮದುವೆ ಮಾಡ್ಕೊಂಡು ಬೇರೆ ಹೋಗಿ ರಾಣಿ ತರ ನೋಡ್ಕೋತೀನಿ ಅಂತ ಸುಳ್ಳು ಭರವಸೆ ಕೊಡೋಕೆ ಹಾಗಲ್ಲ,  ಸೆಟಲ್ ಆಗಿ ಇರೋ ಹುಡುಗನ್ನ ನೋಡಿ ಮದುವೆ ಮಾಡ್ಕೋ, ಯಾಕಂದ್ರೆ ಏನು ಇಲ್ದೆ ಇರೋವ್ನು ನಾನು ಸೆಟಲ್ ಆಗೋಕೆ ತುಂಬಾ ಕಷ್ಟ ಪಡಬೇಕು, ನನ್ನ ನಂಬಿ ಬಂದ್ರೆ ನಿನಗೆ ತುಂಬಾ ಕಷ್ಟ. ನಿನ್ನ ಓದು ಮುಗಿಸಿಕೊಂಡು ನಿಮ್ ಭಾವ ಅಕ್ಕನಿಗೆ ಸಪೋರ್ಟ್ ಮಾಡು ಮನೇಲಿ ನೋಡೋ ಹುಡುಗನ್ನ ನೋಡಿ ಮದುವೆ ಮಾಡ್ಕೋ ಎಲ್ಲರೂ ಹ್ಯಾಪಿ ಹಾಗಿ ಇರ್ತಾರೆ ನಿನ್ ಲೈಫ್ ಕೂಡ ಹ್ಯಾಪಿ ಆಗಿ ಇರುತ್ತೆ ಅಂತ ಹೇಳ್ದ. ಅದ್ರೆ ನೀವೇ ಹೇಳಿ ಎಲ್ಲರೂ ಕಷ್ಟ ಬಿದ್ದೆ ಸೆಟ್ಟಲ್ ಆಗೋದು ಕೆಲವರು ಮಾತ್ರ ಅಪ್ಪ ಅಮ್ಮ ತಾತ ಮಾಡಿರೋ ಆಸ್ತಿನಾ ತಗೊಂಡು ಸೆಟಲ್ ಆಗ್ತಾರೆ. ಇವಾಗ ನಾನು ಕಷ್ಟ ಪಟ್ಟು ದುಡಿದ್ರೆ ಅಲ್ವಾ ಗೊತ್ತಾಗೋದು ಕಷ್ಟದ ಬೆಲೆ ದುಡ್ಡಿನ ಬೆಲೆ ಏನು ಅಂತ ಗೊತ್ತಾಗೋದು. ತಾತ ಕಷ್ಟದಲ್ಲಿ ಅಜ್ಜಿ ನಿಂತು ಕೊಂಡು ಸಪೋರ್ಟ್ ಮಾಡಿದಕ್ಕೆ ಅಲ್ವಾ ತಾತ ನಿಗೆ ಅಜ್ಜಿ ಮೇಲೆ ಈಗ್ಲೂ ಅಷ್ಟೊಂದು ಪ್ರೀತಿ ಇರೋದು. ಹೊರಗೆ ಅಷ್ಟೊಂದು ಜನಕ್ಕೆ ಕೆಲಸ ಹೇಳೋವ್ರು, ಅಜ್ಜಿ ಹತ್ತಿರ ಏನಾದ್ರು ಒಂದು ಕೆಲಸ ಮಾಡಬೇಕು ಅಂದ್ರೆ ಅಜ್ಜಿ ಹತ್ತಿರ ಮಾತಾಡಿ ಸರಿ ಏನು ತಪ್ಪೇನು ಯಾವರೀತಿ ಕೆಲಸ ಮಾಡಬೇಕು ಅಂತ ಅವರ ಹತ್ತಿರ ಕೇಳಿ ಅವರ ಅಭಿಪ್ರಾಯ ತಿಳ್ಕೊಂಡು ಒಂದು ನಿರ್ಧಾರ ಮಾಡಿ ಆಮೇಲೆ ತಾನೇ ತಾತ ಅ ಕೆಲಸ ಮಾಡೋದು. ತಾತ ಹೊರಗೆ ಹೋಗಿ ಮನೆಗೆ ಬಂದಾಗ ಅವರು ಮನಸ್ಸು ಯಾವರೀತಿ ಇದೆ ಅಂತ ಅಜ್ಜಿ ನಾ ಬಿಟ್ಟು ನಮಗೆ ಯಾರಿಗೂ ಗೊತ್ತಿಲ್ಲ. ಬರಿ ಅಜ್ಜಿ ನೇ ಅಂತ ಅಲ್ಲ ಅಮ್ಮ ಅತ್ತೆ ಕೂಡ ಅಷ್ಟೇ ಅಪ್ಪ ಮಾವ ಇವರೆಲ್ಲ ಏನಕ್ಕೆ ಅಕ್ಕ ಭಾವ ನೇ ನೋಡಿ,  ಅಕ್ಕ ಜಾಬ್ ಮಾಡಬೇಕು ಅಂತ ಅಂದಾಗ ಭಾವ ಒಂದು ಪ್ರಶ್ನೆ ಮಾಡಿಲ್ಲ ಓಕೆ ಅಂತ ಹೇಳ್ದ. ಅಕ್ಕ ಕೂಡ ಭಾವ ಕಷ್ಟ ಪಡೋದನ್ನ ನೋಡಿ ಭಾವ ನಿನ್ ಜೊತೆಗೆ ನಾನ್ ಇದ್ದೀನಿ ಅಂತ ಹೇಳಿದ್ಲು, ದುಡ್ಡು ಯಾವಾಗ ಬೇಕಾದ್ರು ಸಂಪಾದನೆ ಮಾಡಬಹುದು ಅದ್ರೆ ಅರ್ಥ ಮಾಡಿಕೊಂಡು ಜೊತೆಗೆ ನಿಂತು ನಾನ್ ಇದ್ದೀನಿ ಅಂತ ಹೇಳೋ ವ್ಯಕ್ತಿ ಸಿಗೋದು ತುಂಬಾ ಕಷ್ಟ. ಮಹಿ ಹತ್ತಿರ ಅಸ್ತಿ ದುಡ್ಡು ಅನ್ನೋದು ಇಲ್ದೆ ಇರಬಹುದು ಅದ್ರೆ ವ್ಯಕ್ತಿ ನಾ ನೋಡಿ ಅರ್ಥ ಮಾಡಿಕೊಳ್ಳೋ ಶಕ್ತಿ ಅವನಿಗೆ ಇದೆ ನಾನ್ ಅವನ ಜೊತೆಗೆ ಸಂತೋಷ ವಾಗಿ ಇರ್ತೀನಿ ಅನ್ನೋ ನಂಬಿಕೆ ಇದೆ ಅಂತ ಹೇಳ್ದೆ. ಎಲ್ಲರೂ ನಾನ್ ಹೇಳೋದನ್ನ ಕೇಳಿ ಸೈಲೆಂಟಾಗಿ ಇದ್ರು. ಅದ್ರೆ ಅಜ್ಜಿ ಏನ್ ಅರ್ಥ ಮಾಡಿಕೊಂಡಳೋ ಏನೋ ಗೊತ್ತಿಲ್ಲ.  ಪ್ರೀತಿ ಅಂತ ಹೇಳಿ ಅವನನ್ನ ಡಿಸ್ಟರ್ಬ್ ಮಾಡೋಕೆ ಹೋಗಬೇಡ. ಅವನ ಕೆಲಸ ಅವನನ್ನ ಮಾಡಿಕೊಳ್ಳೋಕೆ ಬಿಡು. ಪ್ರೀತಿ ಮಾಡ್ತಾ ಇದ್ದೀನಿ ನಿನ್ನ ಅಭಿಪ್ರಾಯ ಏನು ಅಂತ ಪದೇ ಪದೇ ಕೇಳೋಕೆ ಹೋಗಬೇಡ. ನಿನ್ ಮೇಲೆ ಅವನಿಗೆ ಪ್ರೀತಿ ಇದ್ರೆ  ನಿನಗೆ ಹೇಳದೇನೆ ಅವನು ನಿನ್ನ ಎಷ್ಟು ಪ್ರೀತಿ ಮಾಡ್ತಾನೆ ಅಂತ ಒಂದಲ್ಲ ಒಂದು ರೀತಿ ಗೊತ್ತಾಗೋ ಹಾಗೇ ಮಾಡ್ತಾನೆ. ಸೋ ನೀನು ನಿನ್ನ ಗುರಿ ಕಡೆಗೆ ಗಮನ ಕೊಡು ಅಂತ ಹೇಳಿದ್ಲು. ಅಪ್ಪ ಕೂಡ ಅಂತು ನನಗೆ ಅಳಿಯನ ಹುಡುಕೋ ಕೆಲಸ ತಪ್ಪಿತು ಅಂತ ಹೇಳಿದ್ರು. ಮನೆಯವರೆಲ್ಲ ನನ್ನ ಪ್ರೀತಿ ನಾ ಒಪ್ಪಿಕೊಂಡ್ರು ಅಂತ ಹೇಳಿ ಮಾತನ್ನ ಮುಗಿಸಿದ್ಲು. 

   ನಾನು ನೀಲಾ ನಾ ನೋಡ್ತಾ ನಾನ್ ನಿನಗೆ ಸರ್ಪ್ರೈಸ್ ಕೊಟ್ರೆ ನಿನ್ ಇತರ ಸರ್ಪ್ರೈಸ್ ಜೊತೆಗೆ ಶಾಕ್ ಕೊಡ್ತೀಯಾ ಅಂತ ಕೇಳ್ದೆ. ನೀಲಾ ನಗ್ತಾ  ಮಾಸ್ಟರ್ ನಾನು ಬರಿ ಮನೇಲಿ ಗೊತ್ತು ಅನ್ನೋ ವಿಷಯ ಹೇಳ್ದೆ ಅಷ್ಟೇ, ಅದ್ರೆ ತಾವು ನೇರವಾಗಿ ಕರ್ಕೊಂಡು ಹೋಗಿ ನನಗೆ ಶಾಕ್ ಮೇಲೆ ಶಾಕ್ ಕೊಟ್ರಿ. ಅದಕ್ಕೆ ಹೊಲಿಕೆ ಮಾಡ್ಕೊಂಡ್ರೆ ನಾನ್ ಕೊಟ್ಟ ಶಾಕ್ ಕಮ್ಮಿ ನೇ ಅಂತ ಹೇಳಿದ್ಲು. ನಾನು ಅವಳ ಮಾತಿಗೆ ನಗ್ತಾ ಕಾರ್ ಸ್ಟಾರ್ಟ್ ಮಾಡಿ ಮೈಸೂರ್ ಕಡೆಗೆ ಹೊರಟ್ವಿ...


****************************************