Abhinayanaa in Kannada Love Stories by S Pr books and stories PDF | ಅಭಿನಯನಾ

The Author
Featured Books
Categories
Share

ಅಭಿನಯನಾ

   ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್ಜೆ ನಾ ಇಟ್ಟುಕೊಂಡು ಅಪ್ಪನ ರೂಮಿನ ಕಡೆಗೆ ಹೊರಟಳು 3 ವರ್ಷದ ಅನಾ, ಮೊಮ್ಮಗಳು ಓಡ್ತಾ  ಇರೋದನ್ನ ನೋಡಿ ಅವಳ ಅಜ್ಜಿ ಬಂಗಾರ ನಿಧಾನಕ್ಕೆ ಹೋಗು ನಿಮ್ ಪಪ್ಪಾ ಎಲ್ಲೂ ಹೋಗೋದಿಲ್ಲ ಅಂತ ಹೇಳಿ ಮೊಮ್ಮಗಳನ್ನ ಅಪ್ಪಿಕೊಂಡು ಕೆನ್ನೆಗೆ ಮುತ್ತೊಂದನ್ನ ಕೊಟ್ಟು, ಬಾ ನಾನು ಕರ್ಕೊಂಡು ಹೋಗಿ ಮೇಲೆ ಬಿಡ್ತೀನಿ ಅಂತ ಹೇಳಿ ಮೊಮ್ಮಗಳನ್ನ ಮೆಟ್ಟಿಲಿನ ಮೇಲೆ ಹತ್ತಿಸಿಕೊಂಡು ಹೋಗಿ ಅವರ ಅಪ್ಪನ ರೂಮ್ ಹತ್ತಿರ ಬಿಟ್ಟು ನಿಧಾನಕ್ಕೆ ಹುಷಾರಾಗಿ ಹೋಗು ಅಂತ ಹೇಳ್ತಾರೆ ಸುಭದ್ರ. ಅಜ್ಜಿ ಕೆನ್ನೆಗೆ ಸಿಹಿಯಾದ ಮುತ್ತನ್ನ ಕೊಟ್ಟು ಸರಿ ಅಜ್ಜಿ ಅಂತ ಅಪ್ಪನ ರೂಮ್ ಒಳಗೆ ಹೋಗ್ತಾಳೆ. ಮೊಮ್ಮಗಳ ಸಂತೋಷ ನೋಡಿ ಅಜ್ಜಿ ನಗ್ತಾ ಅವರ ಕೆಲಸ ಮಾಡೋಕೆ ವಾಪಸ್ಸು ಹೋಗ್ತಾರೆ.

    ಅಪ್ಪನ ಮುಖ ನೋಡಲು ಹಾಗೋ ಇಗೋ ಕಷ್ಟ ಪಟ್ಟು ಬೆಡ್ ಮೇಲೆ ಹತ್ತಿ, ಹೋಗಿ ಅಪ್ಪನ ಮುಖ ನೋಡ್ತಾ ಗುಡ್ ಮಾರ್ನಿಂಗ್ ಪಪ್ಪಾ ಅಂತ ಹೇಳ್ತಾ ಕೆನ್ನೆಗೆ ಮುತ್ತನ್ನ ಕೊಡ್ತಾಳೆ. ಮಗಳ ಧ್ವನಿ ಕೇಳಿ ಕಣ್ ಬಿಟ್ಟು ಮಗಳ ಮುಖ ನೋಡ್ತಾ ಗುಡ್ ಮಾರ್ನಿಂಗ್ ಬಂಗಾರ, ಅಂತ ಕೆನ್ನೆಗೆ ಮುತ್ತನ್ನ ಕೊಟ್ಟು ಅಪ್ಪಿಕೋಳ್ತಾ ಪಪ್ಪಾ ನಾ ನೋಡೋಕೆ ಇಷ್ಟು ಬೇಗ ಎದ್ದು ಬಂದ ಅಂತ ಕೇಳ್ತಾನೆ ಅಭಿ. ಹ್ಮ್ ಹೌದು ಪಪ್ಪಾ ಅಂತ ಹೇಳಿ ಅಪ್ಪನ ಎದೆಮೇಲೆ ಮಲಗ್ತಾಳೇ. ನನ್ನ ಬಂಗಾರ ಅಂತ ಹೇಳಿ ಅಪ್ಪಿಕೊಂಡು ಅಪ್ಪ ಮಗಳು ಇಬ್ಬರು ಇನ್ನು ಸ್ವಲ್ಪ ಹೊತ್ತು ನಿದ್ದೆ ಮಾಡ್ತಾರೆ. 

   ಮತ್ತೆ ಅಲಾರಾಂ ಸೌಂಡ್ ಗೆ ಎಚ್ಚರ ಆಗುತ್ತೆ ಅಭಿ ಗೆ. ಅಭಿ ಕಣ್ ಬಿಟ್ಟು ನೋಡ್ತಾನೆ ಮಗಳು ಆರಾಮಾಗಿ ಎದೆಮೇಲೆ ಮಲಗಿರೋದನ್ನ ನೋಡಿ, ಅವಳ ನಿದ್ದೆಗೆ ತೊಂದ್ರೆ ಮಾಡದೇ ಪಕ್ಕದಲ್ಲಿ ಮಲಗಿಸಿ ಹಣೆಗೆ ಮುತ್ತೊಂದನ್ನ ಕೊಟ್ಟು. ಎದ್ದು ವಾಶ್ರೂಮ್ ಕಡೆಗೆ ಹೋಗ್ತಾನೆ. ಸ್ವಲ್ಪ ಸಮಯದ ನಂತರ ಫ್ರೆಷ್ ಅಪ್ ಆಗಿ ಬಂದು ಡ್ರೆಸ್ ಚೇಂಜ್ ಮಾಡಿಕೊಂಡು ಹೊರಗೆ ಬರ್ತಾನೇ. ಅಷ್ಟೋತ್ತಿಗೆ ಮಗಳು ಎದ್ದು ಕೂತಿರ್ತಾಳೆ. ಮಗಳನ್ನ ನೋಡಿ ಇಷ್ಟು ಬೇಗ ಎದ್ದ ಇನ್ನು ಸ್ವಲ್ಪ ಹೊತ್ತು ನಿದ್ದೆ ಮಾಡೋದು ಅಲ್ವಾ ಬಂಗಾರ ಅಂತ ಕೇಳ್ತಾನೆ ಅಭಿ.

ಅನಾ.. ಪಪ್ಪಾ ನಾನು ಇನ್ನು ಸ್ವಲ್ಪ ಹೊತ್ತು ಮಲಕೊಂಡ್ರೆ ಅಷ್ಟೇ ಅಮ್ಮ ರಾಕ್ಷಸಿ ಆಗಿ ಬಿಡ್ತಾಳೆ.

ಅಭಿ.. ಓ ಹೌದಲ್ಲ,, ಸರಿ ಬಾ ಅಂತ ಹೇಳಿ ಮಗಳನ್ನ ಬೆನ್ನ ಮೇಲೆ ಕೂರಿಸಿಕೊಂಡು ರೂಮಿಂದ ಹೊರಗೆ ಬಂದು ಮೆಟ್ಟಿಲು ಇಳಿತಾ ಹಾಲ್ ಗೆ ಬರ್ತಾಳೆ. 

ಅನಾ ಹಾಲ್ ಅಲ್ಲಿ ಅವರ ಅಮ್ಮ ಕೂತಿರೋದನ್ನ ನೋಡಿ ಪಪ್ಪಾ ಅಮ್ಮ ಇದ್ದಾಳೆ ಇಳಿಸು ನಾನು ಅಜ್ಜಿ ಹತ್ತಿರ ಹೋಗ್ತೀನಿ ಅಂತ ಹೇಳ್ತಾಳೆ. 

ಅಭಿ ನಗ್ತಾ ಸರಿ ಅಂತ ಹೇಳಿ ಮಗಳನ್ನ ನೆಲದ ಮೇಲೆ ಇಳಿಸ್ತಾನೆ. 

ಅನಾ ಅಡುಗೆ ಮನೇಲಿ ಇರೋ ಅಜ್ಜಿ ಹತ್ತಿರ ಓಡಿ ಹೋಗ್ತಾಳೆ. 

ಅಭಿ  ದೇವರ ಕೋಣೆಗೆ ಹೋಗಿ ದೇವರಿಗೆ ಕೈ ಮುಗಿದು ಮನೆಯಿಂದ ಹೊರಗೆ ಹೋಗ್ತಾನೆ. 

ಮೊಮ್ಮಗಳು ಬಂದಿದ್ದನ್ನ ನೋಡಿ ಸುಭದ್ರ ಮೆಟ್ಟಿಲು ಇಳಿದು ನೀನೇ ಬಂದ ಅಂತ ಕೇಳ್ತಾರೆ.

ಅನಾ.. ಇಲ್ಲಾ ಅಜ್ಜಿ ಪಪ್ಪಾ ನನ್ನ ಬೆನ್ನಮೇಲೆ ಕೂರಿಸಿಕೊಂಡು ಕರ್ಕೊಂಡು ಬಂದು ಬಿಟ್ರು.

ಸುಭದ್ರ.. ನಿಮ್ ಪಪ್ಪಾ ಕರ್ಕೊಂಡು ಬಂದು ಬಿಟ್ರ ಸರಿ ಬಾ ನಿಮ್ ಪಪ್ಪಾಗೆ ತಿಂಡಿ ಕೊಡೋಣ ಅಂತ ಹೇಳಿ ಮೊಮ್ಮಗಳನ್ನ ಎತ್ತಿಕೊಂಡು ಹಾಲ್ ಗೆ ಬಂದು ನೋಡ್ತಾರೆ. ಹಾಲ್ ಅಲ್ಲಿ ಅಭಿ ಕಾಣಿಸೋದಿಲ್ಲ. ಅಲ್ಲೇ ಸೋಫಾ ಮೇಲೆ ಕೂತಿರೋ ಮಗಳನ್ನ ನೋಡಿ ಕೇಳೋಣ ಅಂತ ಅಂದುಕೊಳ್ಳೋ ಅಷ್ಟರಲ್ಲಿ ಹೊರಗಡೆ ಬೈಕ್ ಸೌಂಡ್ ಕೇಳಿ ಅಭಿ ಕೆಲಸಕ್ಕೆ ಹೊರಟ ಅಂತ ಅಂದುಕೊಂಡು, ಅಲ್ಲೇ ಕೂತಿದ್ದ ಮಗಳನ್ನ ನೋಡಿ ಇವರಿಬ್ಬರು ಯಾವಾಗ ಸರಿ ಹೋಗ್ತಾರೆ ಅಂತ ಮನಸಲ್ಲಿ ಅಂದುಕೊಂಡು. ಮೊಮ್ಮಗಳನ್ನ ಇಳಿಸಿ ಹೋಗಿ ಬ್ರಷ್ ಮಾಡಿಕೊಂಡು ಬಾ ಅಂತ ಹೇಳಿ ಕಳಿಸ್ತಾರೆ. 

ಅನಾ.. ಸರಿ ಅಜ್ಜಿ ಅಂತ ಹೇಳಿ ರೂಮ್ ಕಡೆಗೆ ಹೋಗ್ತಾಳೆ.

ರೂಮಿಂದ ಹೊರಗೆ ಬರ್ತಾ ತನ್ನ ಹೆಂಡತಿ ಸುಭದ್ರ ಮಗಳನ್ನ ನೋಡ್ತಾ ಇರೋದನ್ನ ನೋಡಿ ಅವರ ಗಂಡ ವಿಶ್ವನಾಥ್,, ಏನ್ ಸುಭದ್ರ ಹಾಗೇ ನಿಂತುಕೊಂಡು ಇದ್ದಿಯಾ ಏನಾಯ್ತು ಅಂತ ಕೇಳ್ತಾರೆ.

ಸುಭದ್ರ,,, ಗಂಡನ ಕಡೆಗೆ ನೋಡ್ತಾ ಏನು ಇಲ್ಲಾ, ನಿಮಗೆ ಕಾಫಿ ತಗೋ ಬರ್ತೀನಿ ಅಂತ ಹೇಳಿ ಅಡುಗೆ ಮನೆ ಕಡೆಗೆ ಹೋಗ್ತಾರೆ.

ವಿಶ್ವನಾಥ್,, ಹೋಗಿ ಸೋಫಾ ಮೇಲೆ ಕೂತ್ಕೊಂಡು ಮಗಳ ಕಡೆಗೆ ನೋಡ್ತಾ ನಯನಾ ಅನಾ ಎಲ್ಲಿ ಹೋದ್ಲು ಅಂತ ಕೇಳ್ತಾರೆ.

ನಯನಾ,, ರೂಮ್ ಅಲ್ಲಿ ಬ್ರಷ್ ಮಾಡೋಕೆ ಹೋದ್ಲು ಅಪ್ಪ.

ವಿಶ್ವನಾಥ್,,, ಹೌದ ಅಭಿ ಕೆಲಸಕ್ಕೆ ಹೋದ್ನ?

ನಯನಾ,,, ಅವರ ಪ್ರಶ್ನೆ ಗೆ ಏನು ಉತ್ತರ ಕೊಡದೆ ಎದ್ದು ರೂಮ್ ಕಡೆಗೆ ಹೋಗ್ತಾಳೆ.

ವಿಶ್ವನಾಥ್ ಸೈಲೆಂಟ್ ಆಗಿ ನ್ಯೂಸ್ ಪೇಪರ್ ನಾ ತೆಗೆದುಕೊಂಡು ಓದೋಕೆ ಶುರು ಮಾಡ್ತಾರೆ.

ಅಡುಗೆ ಮನೆಯಿಂದ ಕಾಫಿ ತಗೋಬಂದು ಗಂಡನ ಕೈಗೆ ಕೊಡ್ತಾ, ಏನ್ರಿ ಇದು ಇವರಿಬ್ಬರು ಹೀಗೆ ಇದ್ದಾರೆ ಇನ್ನು ಎಷ್ಟು ದಿನ ಅಂತ ಇನ್ನು ಹೀಗೆ ಇರ್ತಾರೆ ಅಂತ ಕೇಳ್ತಾರೆ.

ವಿಶ್ವನಾಥ್,, ಸುಭದ್ರ ನನಗೆ ನಿನ್ನ ನೋವು ಅರ್ಥ ಆಗುತ್ತೆ, ನಿನಗೂ ಗೊತ್ತು ಪರಿಸ್ಥಿತಿ ಏನು ಅಂತ, ಸ್ವಲ್ಪ ದಿನ ಎಲ್ಲಾ ಸರಿ ಹೋಗುತ್ತೆ ನೀನೇನು ಯೋಚ್ನೆ ಮಾಡಬೇಡ.

ಸುಭದ್ರ,,, ಇನ್ನು ಯಾವಾಗ ಸರಿ ಹೋಗ್ತಾರೋ ಏನೋ ಅಂತ ಅಂದುಕೊಂಡು ಅಡುಗೆ ಮನೆ ಕಡೆಗೆ ಹೋಗ್ತಾರೆ.

######

ಅಭಿ ಬೈಕ್ ನಾ ನಿಲ್ಲಿಸಿ, ಹೋಗಿ ಪಾನ್ ಶಾಪ್ ಹತ್ತಿರ ಒಂದು ಸಿಗರೇಟ್ ಒಂದು ಟೀ ಇಸ್ಕೊಂಡು, ಟೀ ಕುಡಿತಾ ಸಿಗರೇಟ್ ಸೇದ್ತಾ ಕೂತ್ಕೋತಾನೆ. 

ಅಣ್ಣ ನನಗೊಂದು ಸಿಗರೇಟ್ ಅಂತ ಹೇಳಿ ಪಾನ್ ಶಾಪ್ ಅವನ ಹತ್ತಿರ ಸಿಗರೇಟ್ ಇಸ್ಕೊಂಡು ಬಂದು ಅಭಿ ಪಕ್ಕ ಕೂತು, ಹೋಗೆ ಬಿಡ್ತಾ ಮಚ್ಚಾ ಇವತ್ತು ಬಾಸ್ ಮೂವಿ ರಿಲೀಸ್ ನೈಟ್ ಷೋ ಗೆ ಟಿಕೆಟ್ ಬುಕ್ ಮಾಡಿದ್ದೀನಿ ಹೋಗೋಣ ಅಂತ ಹೇಳ್ತಾನೆ ನಿರಂಜನ್.

ಅಭಿ,,, ನಿರಂಜನ್ ನಾ ನೋಡಿ ಮೂವಿ ಓಕೆ ಅದ್ರೆ ನೈಟ್ ಸಿಟ್ಟಿಂಗ್ ಗೆ?

ನಿರಂಜನ್,,, ಅದಕ್ಕೆ ಇದ್ದಾನೆ ಅಲ್ವಾ ನಮ್ ಎಣ್ಣೆ ಮಹಾರಾಜ ಅವನು ಕೊಡಿಸ್ತಾನೆ.

ರಾಜ್,,,  ನನ್ನ ಮಕ್ಕಳ್ರ ಯಾಕ್ ಬಂದು ಬಿಡ್ರಿ ದಿನ ಎಣ್ಣೆ ಕೊಡಿಸೋಕೆ ನಾನ್ ಏನ್ ಬಾರ್ ಇಟ್ಟಿದ್ದೀನ ಇಲ್ಲಾ ಬಾರ್ ಓನರ್ ಏನಾದ್ರು ನನ್ನ ಮಾವನ. ಎಣ್ಣೆ ಇಲ್ಲಾ ಏನು ಇಲ್ಲಾ ನನ್ನತ್ರ ದುಡ್ಡು ಕೂಡ ಇಲ್ಲಾ.

ಅಭಿ,,, ಆಯ್ತು ಬಿಡೋ ಅದಕ್ ಯಾಕ್ ಹೀಗಾಡ್ತೀಯ ನಡೀರಿ ಹೋಗಿ ಸೂಪರ್ ಮಾರ್ಕೆಟ್ ಓಪನ್ ಮಾಡೋಣ ಟೈಮ್ ಆಯ್ತು. 

ನಿರಂಜನ್,, ಹ್ಮ್ ನಡಿ ಮಚ್ಚಾ ಅಂತ ಹೇಳಿ ಪಾನ್ ಶಾಪ್ ಅವನಿಗೆ ಮಚ್ಚಾ ಅಕೌಂಟ್ ಅಲ್ಲಿ ಬರ್ಕೊ ಅಂತ ಹೇಳಿ ಮೂರು ಜನ ಸೂಪರ್ ಮಾರ್ಕೆಟ್ ಹತ್ತಿರ ಬರ್ತಾರೆ.


ಸೂಪರ್ ಮಾರ್ಕೆಟ್ ಹತ್ತಿರ ಮೂರು ಜನ ಹುಡುಗೀರು ನಿಂತು ಇರೋದನ್ನ ನೋಡಿ.

ರಾಜ್,,,ಮಚ್ಚಾ ಬೆಳ್ ಬೆಳಿಗ್ಗೆ ಚಂದಾ ಕೇಳ್ಕೊಂಡು ಬರೋವ್ರು ಜಾಸ್ತಿ ಆಗೋದ್ರು ಮಚ್ಚಾ.

ತೇಜು,,, ಯಾಕೋ ನನ್ನ ಮಗನೆ ತಿಂದು ಜಾಸ್ತಿ ಆಯ್ತಾ. 

ಪ್ರಿಯಾ,,, ಲೇ ತೇಜು ಹೋಗಿ ಹೋಗಿ ಅವನ ಹತ್ತಿರ ಮಾತಾಡ್ತೀಯಾ ಅಲ್ವಾ ಸುಮ್ನೆ ಇರೆ, ಇರ್ರಿಟೇಷನ್ ಗೆ ಇರ್ರಿಟೇಟ್ ಮಾಡೋವ್ನು ಅವನು ನಿನ್ ಸುಮ್ನೆ ಇರೆ.

ಮೇಘ,,, ಲೇ ನಾವು ಹೀಗೆ ಅಂದೇ ಅವನು ಇನ್ನು ಜಾಸ್ತಿ ಮಾಡ್ತಾ ಇರೋದು, ಒಂದು ಸರಿ ಸರಿಯಾಗಿ ಬಿಸಿ ಮುಟ್ಟಿಸಿದ್ರೆ ಸರಿ ಹೋಗ್ತಾನೆ.

ರಾಜ್,,, ಅಬ್ಬೊ ಇತರ ಹೇಳ್ದೋವ್ರು ತುಂಬಾ ಜನ ನಾ ನೋಡಿ ಬಿಟ್ಟಿದ್ದೀನಿ. 

ನಿರಂಜನ್,,, ಲೋ ಮಚ್ಚಾ ಸಾಕ್ ಇನ್ನ, ಇವಾಗ ಮುಚ್ಕೊಂಡು ಇದ್ರೆ ಒಳ್ಳೇದು ಇಲ್ಲಾ ಅನ್ಕೋ, ನೈಟ್ ಗೆ ಪಿಚ್ ಗೆ ಅಕೊಳ್ತಾನೆ ಬೇಕಾ ಅದೆಲ್ಲಾ ನಿನಗೆ ಅಂತ ಅಭಿ ಕಡೆಗೆ ನೋಡಿ ಹೇಳ್ತಾನೆ.

ರಾಜ್,,, ಅಭಿ ಕಡೆಗೆ ನೋಡಿ, ಮತ್ತೆ ನಿರಂಜನ್ ಕಡೆಗೆ ನೋಡಿ ಸುಮ್ನೆ ತಮಾಷೆ ಮಾಡಿದೆ ಮಚ್ಚಾ..

ಮೇಘ,,, ತಮಾಷೆ ಮಾಡಿದ್ದು ಸಾಕು ಹೋಗಿ ಶೇಟರ್ ಓಪನ್ ಮಾಡೊಗು.

ರಾಜ್ ಓಕೆ ಮೇಡಂ ಅಂತ ಹೇಳಿ ಶೇಟರ್ ಓಪನ್ ಮಾಡೋಕೆ ಹೋಗ್ತಾನೆ 

 *ಶೇಟರ್ ಓಪನ್ ಮಾಡಿ ಎಲ್ಲರೂ ಸೂಪರ್ ಮಾರ್ಕೆಟ್ ಒಳಗೆ ಹೋಗ್ತಾರೆ. *

ಒಳಗೆ ಹೋಗ್ತಾ ಇದ್ದಾ ಹಾಗೇ ಎಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿ ಆಗ್ತಾರೆ. 

 ಸ್ವಲ್ಪ ಸಮಯದ ನಂತರ, ಪ್ರಿಯಾ ಬಂದು ಬಿಲ್ಲಿಂಗ್ ಕೌಂಟರ್ ಅಲ್ಲಿ ನಿಂತಿದ್ದ ಅಭಿ ನಾ ನೋಡಿ ಅಭಿ ನೆನ್ನೆ ರಿಪೋರ್ಟ್ ಅಂತ ಹೇಳಿ ಕೆಲವೊಂದು ಪೇಪರ್ಸ್ ನಾ ಕೊಡ್ತಾಳೆ.

ಅಭಿ,,, ಥ್ಯಾಂಕ್ಸ್ ಪ್ರಿಯಾ, ಹೆಲ್ಪರ್ಸ್ ಗೆ ಹೇಳು ಸ್ಟಾಕ್ ಬರುತ್ತೆ ಅನ್ಲೋಡ್ ಮಾಡೋಕೆ ಹೇಳು ಹಾಗೇ ಈ ಮಂತ್ ರಿಪೋರ್ಟ್ ನಾ ಎಲ್ಲಾ ಫೈಲ್ ಮಾಡಿ ಓನರ್ ಟೇಬಲ್ ಮೇಲೆ ಇಟ್ಟು ಬಿಡು. 

ಪ್ರಿಯಾ,, ಸರಿ ಅಭಿ.

ಸೂಪರ್ ಮಾರ್ಕೆಟ್ ಗೆ ಕಸ್ಟಮರ್ಸ್ ಬರೋಕೆ ಶುರು ಮಾಡ್ತಾರೆ. ಎಲ್ಲರೂ ಅವರವರ ಕೆಲಸದಲ್ಲಿ ಇದ್ದು ಬಿಡ್ತಾರೆ. ಅಭಿ ಪ್ರಿಯಾ ತೇಜು ಮೂರು ಜನ ಬಿಲ್ಲಿಂಗ್ ಕೌಂಟರ್ ಹತ್ತಿರ ಬಿಲ್ ಮಾಡ್ತಾ ಇದ್ದು ಬಿಡ್ತಾರೆ . ಮೇಘ ನಿರಂಜನ್ ಕಸ್ಟಮರ್ಸ್ ಗೆ ಹೆಲ್ಪ್ ಮಾಡ್ತಾ ಇದ್ರೆ, ರಾಜ್ ಮತ್ತೆ ಇಬ್ಬರು ಹೆಲ್ಪರ್ಸ್ ಜೊತೆಗೆ ಸ್ಟಾಕ್ ನಾ ಅನ್ಲೋಡ್ ಮಾಡೋ ಕೆಲಸದಲ್ಲಿ ಇದ್ದು ಬಿಡ್ತಾರೆ. 

ಮಧ್ಯಾಹ್ನ ಆಗೋಗುತ್ತೆ, ಅಭಿ ಒಬ್ಬೊಬ್ಬರಿಗೆ ಊಟ ಮಾಡೋಕೆ ಹೇಳಿ ಅವನ ಕೆಲಸ ಅವನು ಮಾಡ್ತಾ ಇರ್ತಾನೆ..

ಎಲ್ಲರೂ ಊಟ ಮಾಡಿದ ಮೇಲೆ, ನಿರಂಜನ್ ಕೌಂಟರ್ ಹತ್ತಿರ ಬಂದು ಅಭಿ ನಾ ನೋಡಿ ಮಚ್ಚಾ ಬಾ ಹೋಗಿ ಊಟ ಮಾಡ್ಕೊಂಡು ಬರೋಣ. ಅಭಿ ಪ್ರಿಯಾ ಗೆ ಹೇಳಿ ನಿರಂಜನ್ ಜೊತೆಗೆ ಊಟ ಮಾಡೋಕೆ ಹೋಗ್ತಾನೆ.

ಇಬ್ಬರು ಊಟ ಮಾಡಿ ಪಾನ್ ಶಾಪ್ ಹತ್ತಿರ ಬಂದು  1 ಸಿಗರೇಟ್ ಸೇದಿ. ಮತ್ತೆ ಸೂಪರ್ ಮಾರ್ಕೆಟ್ ಗೆ ಬರ್ತಾರೆ. ಸಂಜೆ 8 ಗಂಟೆ ಗೆ ಪ್ರಿಯಾ ಮೇಘ ತೇಜು ಮೂರು ಜನ ಕೆಲಸ ಮುಗಿಸಿಕೊಂಡು ಅಭಿ ಗೆ ಬೈ ಹೇಳಿ ಮನೆಗೆ ಹೋಗ್ತಾರೆ.

ರಾತ್ರಿ 10 ಗಂಟೆ ಗೆ ಸೂಪರ್ ಮಾರ್ಕೆಟ್ ಕ್ಲೋಸ್ ಮಾಡಿಕೊಂಡು. ಅಭಿ, ನಿರಂಜನ್, ರಾಜ್ ಮೂರು ಜನ ಸಿನಿಮಾ ಗೆ ಹೋಗ್ತಾರೆ. ನೈಟ್ ಸಿನಿಮಾ ನೋಡ್ಕೊಂಡು. ಮೂರು ಜನ ಎರಡೆರಡು ಬಿಯರ್ ನಾ ಕುಡಿದು. ಒಬ್ಬರಿಗೊಬ್ಬರು ಬೈ ಹೇಳಿ ಮನೆ ಕಡೆಗೆ ಹೋಗ್ತಾರೆ.

ಅಭಿ ಬೈಕ್ ಅಲ್ಲಿ ಮನೆ ಹತ್ತಿರ ಬಂದು ಬೈಕ್ ನಿಲ್ಲಿಸಿ, ಮೇನ್ ಡೋರ್ ಓಪನ್ ಮಾಡಿಕೊಂಡು, ಅವನ ರೂಮ್ ಗೆ ಹೋಗಿ ಮಲಗಿ ಬಿಡ್ತಾನೆ. 

* ಲೈಫ್ ಅಲ್ಲಿ ಯಾವತ್ತು ನಾವು ಅಂದುಕೊಂಡ ಹಾಗೇ ನಡೆಯೋದಿಲ್ಲ, ಸಮಯ ಒಂದೊಂದು ರೀತಿ ಪಾಠ ನಾ ಕಲಿಸುತ್ತೇ, ನಾವು ಅದನ್ನ ಕಲಿತು ಕಾಲಕ್ಕೆ ತಕ್ಕ ಹಾಗೇ ಬದಲಾಗುತ್ತ  ಜೀವನದಲ್ಲಿ ಹೆಜ್ಜೆ ನಾ ಮುಂದೆ ಇಡ್ತಾ ಇರಬೇಕು. ಇಲ್ಲಾ ಅಂದ್ರೆ ಜೀವನ ನಿಂತ ನೀರಾಗಿ ಬಿಡುತ್ತೆ.*

***************************************