ಕಾಲ್ ಕಟ್ ಆಗಿದ್ದೆ ಖುಷಿ ಗಾಬರಿಯಾಗಿ ಭಯ ಬೀಳ್ತಾ. ಮೊಬೈಲ್ ಅಲ್ಲಿ ಮತ್ತೆ ಕಾಲ್ ಬ್ಯಾಕ್ ಮಾಡ್ತಾಳೆ.
ಸೀತಾ ಅವಳ ಮುಖದಲ್ಲಿ ಟೆನ್ಶನ್ ಗಾಬರಿ ನಾ ನೋಡಿ ಖುಷಿ ಅಂತಾಳೆ.
ಖುಷಿ... ಸೀತಾ ಪ್ಲೀಸ್ ಒಂದು ಎರಡು ನಿಮಿಷ ಪ್ಲೀಸ್ ಅಂತ ಹೇಳ್ತ ಮೊಬೈಲ್ ನಾ ಕಿವೀಲಿ ಇಟ್ಕೊಂಡು ಕಾಲ್ ಪಿಕ್ ಮಾಡೋ ಕಾಲ್ ಪಿಕ್ ಮಾಡೋ ಅಂತಾ ಹೇಳ್ತಾ ಅ ಕಡೆ ಈ ಕಡೆ ತಿರುಗಾಡ್ತಾ ಟೆನ್ಶನ್ ಆಗ್ತಾ ಇರ್ತಾಳೆ.. ಕಾಲ್ ಪಿಕ್ ಮಾಡೋದಿಲ್ಲ.
ಸೀತಾ.... ಖುಷಿ. ಏನಾಯ್ತು ಯಾಕ್ ಟೆನ್ಶನ್ ಅಲ್ಲಿ ಇದ್ದಿಯಾ ಅಂತ ಕೇಳ್ತಾಳೆ..
ಖುಷಿ... ಕಾಲ್ ಮಾಡ್ತಾ ನಿಮ್ಮಣ್ಣ ನಾ ಕಾಲ್ ಕಟ್ ಆಯ್ತು. ಲಾರಿ ಸೌಂಡ್ ಬೇರೆ ಬಂತು ಯಾಕೋ ಭಯ ಆಗ್ತಾ ಇದೆ ಅಂತ ಹೇಳ್ತಾ ಸ್ಪೀಕರ್ ಆನ್ ಮಾಡ್ತಾ ಕಾಲ್ ಪಿಕ್ ಮಾಡೋ ಬೇಗ ಬೇಗ ಬೇಗ ಅಂತ ಹೇಳ್ತಾ ಇರ್ತಾಳೆ.
ನಾನು ಜೋರಾಗಿ ಹಾರ್ನ್ ಹೊಡೆದ ಲಾರಿ ಅವನನ್ನ ಬೈಕೊಂಡು. ಬೈಕ್ ನಾ ಒಂದು ಸೈಡ್ ಗೆ ನಿಲ್ಲಿಸಿ. ಬೈಕ್ ಇಳಿದು ಮೊಬೈಲ್ ಬಿದ್ದ ಜಾಗದಲ್ಲಿ ಮೊಬೈಲ್ ನಾ ಹುಡುಕೋಕೆ ಶುರು ಮಾಡಿ ಕೊನೆಗೂ ಹುಡುಕಿ ಕೈಗೆ ತಗೊಂಡು ಕಾಲ್ ನಾ ಪಿಕ್ ಮಾಡಿದೆ.
ಖುಷಿ.... ಭಯದಲ್ಲಿ ರೀ ಎಲ್ಲಿದ್ದೀರಾ ನಿಮಗೆ ಏನು ಆಗಿಲ್ಲ ಅಲ್ವಾ.
ನಾನು... ಏನು ಆಗಿಲ್ವೆ.. ಲಾರಿ ಅವನು ಜೋರಾಗಿ ಹಾರ್ನ್ ಮಾಡಿದ ಅ ಇದರಲ್ಲಿ ಮೊಬೈಲ್ ನಾ ಕೆಳಗೆ ಬಿಟ್ಟು ಬಿಟ್ಟೆ .
ಖುಷಿ... ನಿನಗೆ ಯಾರ್ ಹೇಳಿದ್ದು ಬೈಕ್ ಡ್ರೈವ್ ಮಾಡ್ತಾ ಮಾತಾಡು ಅಂತ.
ನಾನು.. ಇಲ್ವೆ ಬೈಕ್ ನಾ ಸೈಡ್ ಗೆ ನಿಲ್ಲಿಸಿ ನೇ ಮಾತಾಡ್ತಾ ಇದ್ದೆ ಅ ಗೂಬೆ ನನ್ನ ಮಗನೆ ತುಂಬಾ ಹತ್ತಿರ ಬಂದು ಹಾರ್ನ್ ಮಾಡಿದ. ಅ ಸೌಂಡ್ ಗೆ ಸ್ವಲ್ಪ ಗಾಬರಿ ಆಯ್ತು.
ಖುಷಿ.... ಸರಿ ಹುಷಾರಾಗಿ ಬನ್ನಿ. ನನ್ನ ಬಗ್ಗೆ ಏನು ಯೋಚ್ನೆ ಮಾಡಬೇಡಿ ನನ್ನ ಜೊತೆಗೆ ನಿನ್ ತಂಗಿ ಇದ್ದಾಳೆ ಅತ್ತೆ ಮಾವ ತಾತಾ ಎಲ್ಲರೂ ಇದ್ದಾರೆ.
ನಾನು.... ಸರಿ ನಾನ್ ಹುಷಾರಾಗಿ ಬರ್ತೀನಿ. ಅ ಬಡ್ಡಿ ಮಗ ಲಾರಿ ಅವನು ಹಾರ್ನ್ ಹೊಡೆದ ಸೌಂಡ್ ಗೆ ಗಾಡಿ ಓಡಿಸೋಕು ಟೆನ್ಶನ್ ಆಗ್ತಿದೆ. ಒಂದು ಪಪ್ಪಿ ಕೊಟ್ರೆ ಟೆನ್ಶನ್ ಎಲ್ಲ ಹೋಗಿ ಫುಲ್ ಧೈರ್ಯ ಬರುತ್ತೆ.
ಖುಷಿ... ಛಿ. ಹೋಗ್ರಿ ನಿಮ್ ತಂಗಿ ಬೇರೆ ಇದ್ದಾಳೆ.
ನಾನು.... ಕೊಡೆ ಪರ್ವಾಗಿಲ್ಲ. ನನ್ನ ಹೆಂಡ್ತಿ ಹತ್ತಿರ ತಾನೇ ನಾನ್ ಪಪ್ಪಿ ಕೇಳ್ತಾ ಇರೋದು. ಪ್ಲೀಸ್.
ಖುಷಿ... ಹುಮ್ಮಾ 😘😘😘 ಅಂತ ಕಿಸ್ ಮಾಡಿ ಲವ್ ಯು ಹುಷಾರಾಗಿ ಬೇಗ ಮನೆಗೆ ಬಾ ಕಾಯ್ತಾ ಇರ್ತೀನಿ
ನಾನು.... ಲವ್ ಯು ಟು ಬಂಗಾರ ಅಂತ ಹೇಳಿ ಕಾಲ್ ಕಟ್ ಮಾಡಿದೆ.
*****
ಖುಷಿ ಕಾಲ್ ಕಟ್ ಮಾಡಿ ಬೆಡ್ ಕಡೆಗೆ ತಿರುಗುತ್ತಾಳೆ. ಸೀತಾ ಹೊಟ್ಟೆ ನಾ ಇಡ್ಕೊಂಡು ಬಿದ್ದು ಬಿದ್ದು ನಗೋಕೆ ಶುರು ಮಾಡ್ತಾಳೆ. ನಿಮಿಷ. ಖುಷಿ ಗೆ ಏನು ಅಂತ ಅರ್ಥ ಆಗಲ್ಲಾ.. ಅರ್ಥ ಆದಮೇಲೆ ಅವಳಿಗೆ ಏನ್ ಮಾತಾಡ್ಬೇಕು ಅನ್ನೋದೇ ಅರ್ಥ ಆಗಲ್ಲ.. ನಾಚಿ ನೀರಾಗಿ ಬಿಡ್ತಾಳೆ. ಹೋಗಿ ಬೆಡ್ ಮೇಲೆ ಬೆಡ್ಶೀಟ್ ಹಾಕೊಂಡು ಮುಖ ಮುಚ್ಕೊಂಡು ಮಲಗಿ ಬಿಡ್ತಾಳೆ..
ಸೀತಾ.. ಖುಷಿ ಅವಸ್ಥೆ ನಾ ನೋಡಿ ಜೋರಾಗಿ ನಗ್ತಾ.. ಇರ್ತಾಳೆ ಅವಳಿಗೆ ತಡಕೊಳ್ಳೋಕೆ ಆಗದೆ ಇರೋ ಅಷ್ಟು ನಗು ಬರ್ತಾ ಕಣ್ಣಲ್ಲಿ ಕಣ್ಣೀರು ಬರೋಕೆ ಶುರುವಾಗುತ್ತೆ.
ಸೀತಾ ಕೊನೆಗೂ ಅವಳ ನಗುನ ಕಂಟ್ರೋಲ್ ಮಾಡ್ಕೊಂಡು. ಖುಷಿ ಹತ್ತಿರ ಹೋಗಿ.. ಮುಖದ ಮೇಲೆ ಇರೋ ಬೆಡ್ಶೀಟ್ ನಾ ತೆಗೆದು ಖುಷಿ ಖುಷಿ ಅಂತ ಕರೀತಾಳೆ.
ಖುಷಿ.. ತು ಹೊಗೆ ನನ್ನ ಮಾತಾಡಿಸಬೇಡ.. ಅಂತ ಮುಖ ಮುಚ್ಚಿಕೊಂಡು ಬಿಡ್ತಾಳೆ...
ಸೀತಾ.... ನಗ್ತಾ ಗಂಡ ನಾ ಅಂತ ಹೇಳಿದಕ್ಕೆ ಕೋಪ ಮಾಡ್ಕೊಂಡೆ ಅದ್ರೆ ಪ್ರೀತಿ, ಮದುವೆ,ಡಿವೋರ್ಸ್, ಪ್ರೆಗ್ನೆಟ್. ಅದು 5 ತಿಂಗಳು. ಎಲ್ಲಿ ನನ್ನ ಸೊಸೆ ನಾ ಮಾತಾಡಿಸ್ತಿನಿ ಅಂತ ಖುಷಿ ಹೊಟ್ಟೆ ಮೇಲೆ ಕೈ ಇಡ್ತಾಳೆ...
ಖುಷಿ... ನಾಚಿಕೊಂಡು... ಪ್ಲೀಸ್ ಸೀತಾ ನಿನ್ ಹಾಗೆಲ್ಲ ಮಾತಾಡಬೇಡ ನನಗೆ ಒಂತರ ಆಗ್ತಾ ಇದೆ...
ಸೀತಾ ... ಅವಳ ಹೊಟ್ಟೆ ನ ಇಡ್ಕೊಂಡು. ನಗ್ತಾ ಅಯ್ಯೋ ಅಮ್ಮ. ಎರಡು ದಿನದ ಟೆನ್ಶನ್ ನಾ ಒಂದೇ ಸಲ ದೂರ ಮಾಡಿ ಬಿಟ್ಟೆ. ಸೀರಿಯಸ್ಲಿ ಲೈಫ್ ಅಲ್ಲಿ ಯಾವತ್ತೂ ಇಷ್ಟು ನಕ್ಕವಳೇ ಅಲ್ಲ ನಾನು . ಅವನ ಪರ್ಫಾರ್ಮೆನ್ಸ್ ಏನು ಅದಕ್ಕೆ ನಿನ್ನ ಪರ್ಫಾರ್ಮೆನ್ಸ್ ಏನು. ಇದಕ್ಕೆ ನಾ ಕಟ್ಕೊಂಡಿದ್ದು. ಮದುವೆ ಮಾಡ್ಕೊಂಡಿದ್ದು. ತಾಳಿ ಕಟ್ಟಿದ್ದು. ಸಂಸಾರ ಮಾಡಿದ್ದು. ಡಿವೋರ್ಸ್ ಬೇಕು. ಯಾವಳ್ ಜೊತೆಗೆ ಸಂಬಂಧ ಇಟ್ಕೊಂಡು ಇದ್ದಿಯಾ. ಅದಕ್ಕೆ ನಾ ನನ್ನ ಬಿಟ್ಟು ಹೋಗಿದ್ದು. 5 ತಿಂಗಳ ಪ್ರೆಗ್ನೆಟ್ ನಾನು. ಏನಾದ್ರೂ ಹೆಚ್ಚು ಕಮ್ಮಿ ಅದ್ರೆ ಹೆಂಡತಿ ನಾ ಹೀಗೆನಾ ನೋಡ್ಕೊಳ್ಳೋದು ... ಇದೆಲ್ಲಾ ಓಕೆ ಇದಕ್ಕೂ ನೆಕ್ಸ್ಟ್ ಲೆವೆಲ್. ಕಾಲ್ ಕಟ್ ಆಗಿದ್ದೆ.. ಸೀತಾ ನಿಮ್ ಅಣ್ಣ ಕಾಲ್ ಪಿಕ್ ಮಾಡ್ತಿಲ್ಲ , ಅನ್ನೋದು ಏನು, ಸ್ವಂತ ಗಂಡನಿಗೆ ಏನೋ ಆಯಿತು ಅನ್ನೋ ಭಯ ಹೆಂಡತಿ ಗೆ ಬರೋ ಹಾಗೇ ನಿನ್ನ ಮುಖದಲ್ಲಿ ಅ ಭಯ ಗಾಬ್ರಿ ಟೆನ್ಶನ್. ಅಮ್ಮೊ ಅಮ್ಮೊ. ಕಾಲ್ ಪಿಕ್ ಆಗಿ ಅವನ ವಾಯ್ಸ್ ಕೇಳಿದೇ ರೀ ಹೇಗಿದ್ದೀದ್ರ ಹುಷಾರಾಗಿ ಇದ್ದೀರಾ , ನನ್ನ ಬಗ್ಗೆ ಏನು ಟೆನ್ಶನ್ ತಗಿಬೇಡಿ ಅತ್ತೆ ಮಾವ ತಾತಾ ತಂಗಿ ಎಲ್ಲರೂ ಇದ್ದಾರೆ ಆರಾಮಾಗಿ ಬನ್ನಿ ಅನ್ನೋದು ಏನು. ಅವನು ಟೆನ್ಶನ್ ಆಗ್ತಿದೆ ಕಿಸ್ ಬೇಕು ಅಂತ ಕೇಳಿದ್ದೆ ಒಂದಲ್ಲ ಎರಡಲ್ಲ ಮೂರು ಕಿಸ್ ಜೊತೆಗೆ ಲವ್ ಯು. ಅವನು ಲವ್ ಯು ಟು ಬಂಗಾರ..
ನಿನ್ ಇರೋ ಅಂದಕ್ಕೆ. ನಿನ್ನ ಇಂಪ್ರೆಸ್ ಮಾಡೋಕೆ ನಿನ್ನ ಪ್ರೀತಿ ನಾ ಪಡೆಯೋಕೆ ಯಾವನ್ ಯಾವನ್ ಎಷ್ಟೆಷ್ಟು ಕಷ್ಟ ಬೀಳ್ತಾನೋ. ನಿನ್ ಕೊಡೊ ಒಂದು ಮುತ್ತಿಗೋಸ್ಕರ ಅದೆಷ್ಟು ಸರ್ಕಸ್ ಮಾಡ್ತಾನೋ ಅಂತ ಯೋಚ್ನೆ ಮಾಡ್ತಾ ಇದ್ದೆ.. ಎಲ್ಲಾ ನಿರೀಕ್ಷೆ ನಾ ಸೆಕೆಂಡ್ ಅಲ್ಲಿ ಉಲ್ಟಾ ಮಾಡಿ ಬಿಟ್ಟ.. ಅಯ್ಯೋ ಅಮ್ಮ.. ಅಂತ ಹೊಟ್ಟೆ ನಾ ಇಡ್ಕೊಂಡು ಎದ್ದು ಮತ್ತೆ ಖುಷಿ ಮುಖ ನೋಡ್ತಾ ಹೇಗಿತು ಮೊದಲ ಮುತ್ತಿನ ಅನುಭವ. ಮೊದಲ ಸಲ ಒಬ್ಬ ಹುಡುಗನಿಗೆ ಲವ್ ಯು ಹೇಳಿದ ಫೀಲ್. ಹೇಳೇ ಅಂತಾಳೆ.
ಖುಷಿ... ನೋಡು ನನಗೆ ಕೋಪ ತರಿಸಬೇಡ ಸುಮ್ನೆ ಇರು ಅಂತಳೇ ಮುಖ ಮುಚ್ಚಿಕೊಂಡೆ..
ಸೀತಾ... ಕೋಪ ಬಂದ್ರೆ ಮತ್ತೆ ಕಾಲ್ ಮಾಡ್ತಿಯಾ. ಈ ಸಲ ಮಕ್ಕಳು ಸ್ಕೂಲ್ ಯಿಂದ ಯಾಕ್ ಕರ್ಕೊಂಡು ಬಂದಿಲ್ಲ ಅಂತ ಜಗಳ ಮಾಡ್ತಿಯಾ. ಅಂತ ಹೇಳಿ ನಗ್ತಾಳೆ
ಖುಷಿ.. ನಿನ್ನ ಅಂತ ಕೋಪದಿಂದ ಎದ್ದು ಸೀತಾ ನಾ ಬೆಡ್ ಮೇಲೆ ತಳ್ಳಿ ಅವಳ ಬಾಯಿ ಮುಚ್ಚಿ ಸುಮ್ನೆ ಇದ್ರೆ ಸರಿ ಈಗ. ಇಲ್ಲಾ ಅಂದ್ರೆ.
ಸೀತಾ.. ಕೈ ನಾ ಬಿಡಿಸಿ ಕೊಂಡು ಹುಷಾರು ಕಣೇ ಹೊಟ್ಟೆಲಿ ನನ್ನ ಸೊಸೆ ಇದ್ದಾಳೆ ಅಂತ ಹೇಳ್ತಾಳೇ.
ಖುಷಿ.. ತುಸು ಕೋಪದಿಂದ ಹೊಗೆ ನೀನು ಅಂತ ಹೇಳಿ ಎದ್ದು ಕೂತು ಎರಡು ನಿಮಿಷ ಯೋಚ್ನೆ ಮಾಡಿ. ತಕ್ಷಣ ಸೀತಾ ಕಡೆ ನೋಡ್ತಾ. ಏನ್ ಹೇಳ್ದೆ ಹೇಳು ಅಂತ ಕೇಳ್ತಾಳೆ.
ಸೀತಾ ... ನಗುನ ನಾ ಕಂಟ್ರೋಲ್ ಮಾಡ್ಕೊಂಡು ತುಂಬಾ ಹೇಳ್ದೆ. ನಿನ್ ಏನ್ ಕೇಳ್ತಾ ಇದ್ದಿಯಾ.
ಖುಷಿ .. ಅದೇ ನನ್ನ ಹೊಟ್ಟೆಲಿ.
ಸೀತಾ.... ನನ್ನ ಸೊಸೆ ಅಂತ ಹೇಳ್ದೆ.
ಖುಷಿ.... ಅಂದ್ರೆ ಮಹಿ ನಿನಗೆ ಅಣ್ಣ ನಾ? ಇರು ಇರು ನಿನ್ನ ಜೊತೆಗೆ ತಂಗಿ ಇದ್ದಾಳೆ ಅತ್ತೆ ಇದ್ದಾಳೆ.. ಅಂದ. ಅಂದ್ರೆ ಅವನು ನಿನಗೆ ಅಣ್ಣ.. ಲವರ್ ಅಂತ ಕೇಳಿದಕ್ಕೆ ಇನ್ನೊಂದು ಸಲ ಹೇಳಿದ್ರೆ ಫ್ರೆಂಡ್ ಅಂತ ಕೂಡ ನೋಡಲ್ಲ ಹೊಡೆದು ಬಿಡ್ತೀನಿ ಅಂದೇ.. ನಿಜ ಹೇಳು ಸೀತಾ ಮಹಿ ನಿನಗೆ ಅಣ್ಣ ನಾ ?
ಸೀತಾ... ಹೌದು ಅಣ್ಣ ನೇ. ಅಣ್ಣ ಹಾಗೋಕೆ ಒಂದೇ ಜೊತೆಗೆ ಹುಟ್ಟಬೇಕು ಅಂತ ಏನು ಇಲ್ಲಾ ಅಲ್ವಾ. ಅವನು ತಂಗಿ ತರ ನೋಡ್ತಾನೆ ನಾನು ಮನಸಾರೆ ಅಣ್ಣ ಅಂತ ಕರೀತೀನಿ.. ನಮ್ಮಿಬ್ಬರ ಮಧ್ಯ ಇರೋದು ಪರಿಶುದ್ಧ ವಾದ ಅಣ್ಣ ತಂಗಿ ಸಂಬಂಧ ಅಷ್ಟೇ. ಅದಕ್ಕೆ ಹಾಗೇ ಹೇಳ್ದೆ ನಿನ್ ಕೇಳಿದಾಗ..
ಖುಷಿ... ಸಾರೀ.
ಸೀತಾ... ಇಟ್ಸ್ ಓಕೆ. ಹೌದು ನಾನ್ ಕೇಳಿದಕ್ಕೆ ಉತ್ತರ ಕೊಟ್ಟಿಲ್ಲ.
ಖುಷಿ.. ಏನು.
ಸೀತಾ.. ಅದೇ ಮೊದಲ ಮುತ್ತು. ಮೊದಲ ಪ್ರೀತಿ. ಅನುಭವ ಹೇಳೇ ಇಲ್ಲಾ.
ಖುಷಿ... ಕೋಪದಿಂದ. ಅವಳನ್ನ ತಬ್ಬಿಕೊಂಡು ನಿನ್ನ ಸುಮ್ನೆ ಇದ್ರೆ ಸರಿ ಇಲ್ಲಾ ಅಂದ್ರೆ ನೋಡ್ಕೋ.
ಸೀತಾ... ನೋಡಿದೆ ಎಲ್ಲಾ ನೋಡಿದೆ.
ಖುಷಿ.... ಹೊಗೆ ನಾನ್ ಹೋಗ್ತೀನಿ ಅಂತ ಹೇಳ್ತಾಳೆ ತುಸು ಕೋಪದಿಂದ..
ಸೀತಾ... ಸುಮ್ನೆ ತಮಾಷೆ ಮಾಡಿದೆ ಅತ್ತಿಗೆ.. ಅಣ್ಣ ಅತ್ತಿಗೆ ಮಧ್ಯ ನನಗೆ ಏನ್ ಕೆಲಸ..
ಖುಷಿ.. ಮತ್ತೆ ಸೀತಾ ನಾ ತಬ್ಬಿಕೊಂಡು ಅವನು ಬರ್ಲಿ ಇಬ್ಬರಿಗೂ ಸೇರಿ ಪೂಜೆ ಮಾಡ್ತೀನಿ...
ಸೀತಾ.... ಅದು ನೋಡೋಣ ಅಂತಾಳೆ ನಗ್ತಾ....
*********
ಧಮಯಂತಿ.... ಊಟ ಮಾಡ್ತಾ ಖುಷಿ ಕಾಲ್ ಮಾಡಿ ಮನೇಲಿ ಹೇಳ್ದ
ಖುಷಿ.... ಅ ಹೇಳ್ದೆ ಅತ್ತೆ.. ಪರ್ವಾಗಿಲ್ಲ ಸೀತಾ ಗೆ ಹುಷಾರು ಆಗೋವರೆಗೂ ಅಲ್ಲೇ ಇದ್ದು ಬಾ ಅಂತ ಹೇಳಿದ್ರು
ಸುಧೀರ್... ಮತ್ತೆ ಕಾಲೇಜ್
ಖುಷಿ.... 2 ದಿನ ಅಷ್ಟೇ ಅಲ್ವಾ ಮಾವ ಏನು ಪ್ರಾಬ್ಲಮ್ ಇಲ್ಲಾ.
ರಘುನಂದನ್... 2 ದಿನ ಮನೆ ಡಲ್ ಆಗಿಇತ್ತು ನಿನ್ ಬಂದೆ ಸೀತಾ ಮುಖದಲ್ಲಿ ಸಂತೋಷ ನಾ ನೋಡ್ತಾ ಇದ್ದೀನಿ.
ಸೀತಾ.... ತಾತಾ ನಾನ್ ಇಷ್ಟು ಖುಷಿಯಾಗಿ ಇರೋದು ಖುಷಿಯಿಂದಾನೆ ಅದ್ರೆ ಕಾರಣ ಮಾತ್ರ ಬೇರೆ ಇದೆ.
ಖುಷಿ... ತುಸು ಕೋಪದಿಂದ ಸೀತಾ ಕಡೆ ನೋಡ್ತಾ ಸುಮ್ನೆ ಇರು ಅಂತಾಳೆ.
ಧಮಯಂತಿ... ಏನು ಲವ್ ಅ? ಇಲ್ಲಾ ಯಾರಾದ್ರೂ ಹುಡ್ಗ ಪ್ರೊಪೋಸ್ ಮಾಡಿದ್ನ.
ಸುಧೀರ್... ನೋಡ್ತಿದ್ರೆ ಗೊತ್ತಾಗಲ್ವಾ ಅದೇ ಇರಬೇಕು.
ಸೀತಾ.... ಹೌದು ಅಪ್ಪ ಅದೇ ರೀತಿ ನೇ ಅದ್ರೆ ಬೇರೆ ರೀತಿ. ನನಗೆ ಇವಳ ಮೇಲೆ ಇದ್ದಾ ನಿರೀಕ್ಷೆ ನಾ ಎಲ್ಲಾ ಉಲ್ಟಾ ಮಾಡಿ ಬಿಟ್ಲು.
ಧಮಯಂತಿ... ಏನ್ ಮಾಡಿದ್ಲು.
ಖುಷಿ... ಕೋಪದಿಂದ ನೋಡು ನಾನ್ ಎದ್ದು ಹೋಗ್ಬಿತೀನಿ ಅಂತಾಳೆ..
ಸೀತಾ..... ಓಕೆ ಕೂಲ್ ಸಮಾಧಾನ. ಮೊದಲು ಊಟ ಮಾಡು ನಾನ್ ಯಾರಿಗೂ ಹೇಳಲ್ಲ.. ನಾನ್ ಏನು ಕೇಳಿಲ್ಲ ನಾನ್ ಏನು ನೋಡಿಲ್ಲ.. ನನ್ನ ಯಾರು ಏನು ಕೇಳಬೇಡಿ. ನೀಮಗೆ ಏನಾದ್ರೂ ಕೇಳಬೇಕು ಅನ್ನಿಸಿದ್ರೆ ಮಹಿ ಬಂದ ಮೇಲೆ ಅವನ್ನನ್ನೇ ಕೇಳಿ...
ಖುಷಿ... ಹೊಗೆ ನೀನು ಅಂತ ಎದ್ದೇಳೋಕೆ ಹೋಗ್ತಾಳೆ..
ಸೀತಾ... ಅವಳನ್ನ ಕೂರಿಸಿ. ಸಾರೀ ಪ್ರಾಮಿಸ್ ಇವತ್ತಿಗೆ ಈ ವಿಷಯ ನಾ ಇಲ್ಲಿಗೆ ನಿಲ್ಲಿಸ್ತೀನಿ ಓಕೆ ಪ್ಲೀಸ್ ಊಟ ಮಾಡು..
ಖುಷಿ.. ಪ್ರಾಮಿಸ್ ಅ?
ಸೀತಾ.... ಹ್ಮ್ ಪ್ರಾಮಿಸ್..
ಧಮಯಂತಿ... ಸರಿ ಊಟ ಮಾಡಿ ಅಂತ ಹೇಳ್ತಾರೆ
*****
ಜನಾರ್ಧನ್.... ಚೆರ್ಸ್ ಲೋಕಿ.
ಲೋಕಿ.... ಚೆರ್ಸ್ ಕಣೋ...
ಜನಾರ್ಧನ್.. ಡ್ರಿಂಕ್ಸ್ ಸಿಪ್ ಮಾಡ್ತಾ.. ನಾನ್ ಹೇಳಿಲ್ವಾ ಅವನ ಪ್ರಾಜೆಕ್ಟ್ ಟೀಂ ಅಲ್ಲಿ ಇರೋವ್ರೆಲ್ಲ ನಮ್ಮವರೇ ಅಂತ ಅವನಿಗಿಂತ ಕಮ್ಮಿ ಟೆಂಡರ್ ಹಾಕಿದ್ದೀವಿ... ಅ ಗವರ್ನಮೆಂಟ್ ಪ್ರಾಜೆಕ್ಟ್ ಬರೋದು ನಮಗೆ.
ಲೋಕೇಶ್... ಡ್ರಿಂಕ್ಸ್ ಗ್ಲಾಸ್ ನಾ ಇಳಿಸಿ. ಸುಧೀರ ನೋಡ್ತಾ ಇರು ಹೇಗೆ ನಿನ್ನ ತುಳೀತೀನಿ ಅಂತ ಹೇಳಿ ಮತ್ತೆ ಡ್ರಿಂಕ್ಸ್ ನಾ ಕುಡಿಯೋಕೆ ಶುರು ಮಾಡ್ತರೇ...
@@@@@@@@@@@@@@@@@@@@@@@@@@@@#