Mahi in Kannada Love Stories by S Pr books and stories PDF | ಮಹಿ

The Author
Featured Books
Categories
Share

ಮಹಿ

ಬೆಳಿಗ್ಗೆ 7 ಗಂಟೆ ಸಮಯ ಅಲಾರಾಂ ಜೋರಾಗಿ ಸೌಂಡ್ ಮಾಡ್ತಾ ಇದ್ರೂ ಕೇಳಿಸಿ ಕೇಳಿಸದ ಹಾಗೆ ಆರಾಮಾಗಿ ನಿದ್ದೆ ಮಾಡ್ತಾ ಇದ್ದ .. ಅಲಾರಾಂ ಸೌಂಡ್ 4 5 ಬಾರಿ ಬಡ್ಕೊಂಡು ಕೊನೆಗೆ ಸೈಲೆಂಟ್ ಆಗಿ ಬಿಡ್ತು..  

ಅಡುಗೆ ಮನೇಲಿ ತಿಂಡಿ ಮಾಡ್ತಾ ಇದ್ದಾ ಒಬ್ಬ ಮಹಿಳೆ.  ಗಡಿಯಾರ ನಾ ನೋಡಿ. ಕೋಪ ಮಾಡಿಕೊಂಡು ಅಡುಗೆ ಮನೆ ಬಿಟ್ಟು.. ರೂಮ್ ಕಡೆಗೆ ಹೋಗ್ತಾರೆ. 

ಬೆಡ್ ಮೇಲೆ ಇನ್ನು ಮಲಗಿರೋದನ್ನ ನೋಡಿ  ಲೋ ಇನ್ನು ಮಲಗಿದ್ದೀಯ ಎದ್ದೇಳು ಆಫೀಸ್ ಗೆ ಟೈಮ್ ಆಗ್ತಾ ಇದೆ ಅಂತ ಮಂಚದ ಮೇಲೆ ಬೆಡ್ಶೀಟ್ಮ ನಾ ಫುಲ್ ಹಾಕಿಕೊಂಡು ಮಲಗಿರೋ ಮಗನನ್ನ ಎಬ್ಬಿಸ್ತಾರೆ..  ಎರಡು ಮೂರು ಬಾರಿ ಕರೆದ್ರು ಏನು ರಿಯಾಕ್ಟ್ ಮಾಡಲಿಲ್ಲ.  ಕೊನೆಗೆ ಕೋಪ ಬಂದು.. ಮುಖದ ಮೇಲೆ ಇರೋ ಬೆಡ್ಶೀಟ್ ನಾ ತೆಗಿತಾರೆ.. 

ಅಮ್ಮ ಇನ್ನು ಸ್ವಲ್ಪ ಹೊತ್ತು ಮಲಗ್ತೀನಿ.. ಏನು ಇನ್ನು ಸ್ವಲ್ಪ ಹೊತ್ತು ಮಲಗ್ತೀಯ ಆಫೀಸ್ ಏನು ನಿಮ್ ತಾತ ನದ್ದ ಈಗ್ಲೇ 8 ಗಂಟೆ ಆಗ್ತಾ ಬಂದಿದೆ ಇನ್ನು ಮಲಗ್ತೀಯ.. 

ಮಲಗಿದ್ದವನು ಸಡನ್ ಆಗಿ ಕಣ್ ಬಿಟ್ಟು ಏನು 8 ಗಂಟೆ ಆಗ್ತಾ ಇದೆಯಾ ಅಂತ ಎದ್ದು ಸ್ಪೀಡ್ ಆಗಿ ವಾಶ್ರೂಮ್ ಡೋರ್ ಓಪನ್ ಮಾಡಿಕೊಂಡು ಒಳಗೆ ಹೋಗ್ತಾನೆ..

ಬೆಡ್ಶೀಟ್ ನಾ ಕ್ಲೀನ್ ಆಗಿ ಫೋಲ್ಡ್ ಮಾಡಿ ಅಡುಗೆ ಮನೆ ಕಡೆಗೆ ಹೋಗ್ತಾರೆ..

ಸ್ನಾನ ಮಾಡಿಕೊಂಡು ಬಂದವನು. ಬೈಕೊಳ್ತಾ ಅಲಾರಾಂ ಇಟ್ಟಿದೆ ಅಲ್ವಾ.. ಮತ್ತೆ ಸೌಂಡ್ ಬರಲೇ ಇಲ್ಲಾ.. ಏನೋ ಆಗಿರಬೇಕು.. ಇಲ್ಲಾ ಅಂದ್ರೆ ಸೌಂಡ್ ಬಂದ್ರು ಎಮ್ಮೆ ತರ ನಿದ್ದೆ ಮಾಡ್ತಾ ಇದ್ದು ಬಿಟ್ಟೇನೋ  ಗೊತ್ತಿಲ್ಲ.. ಈ ಟ್ರಾಫಿಕ್ ಅಲ್ಲಿ ಆಫೀಸ್ ಗೆ ಹೋಗೋ ಅಷ್ಟರಲ್ಲಿ.. ಮುಗಿದು ಹೋಗುತ್ತೆ ನನ್ನ ಕಥೆ ಅಂತ ಅವನ್ನನೇ ಅವ್ನು ಬೈಕೊಂಡು.. ಡ್ರೆಸ್ ಮಾಡಿಕೊಂಡು ಅವನ ಆಫೀಸ್ ಬ್ಯಾಗ್ ತೆಗೆದುಕೊಂಡು ಹಾಲ್ ಗೆ ಹೋಗ್ತಾನೆ..

ಹಾಲ್ ಅಲ್ಲಿ.. ಪೇಪರ್ ಓದ್ತಾ ಇರೋ ಅಪ್ಪ.. ಮಗನನ್ನ ನೋಡಿ.. ಏನೋ ಇವತ್ತು ಇಷ್ಟು ಲೇಟ್ ಆಗಿ ಎದ್ದಿದ್ದೀಯ ರಾತ್ರಿ ಬೇಗ ಮಲಗಿಲ್ವಾ. ಅಂತ ಕೇಳ್ತಾರೆ.. ಇದರ ಮಧ್ಯ ಒಂದು ಹೆಣ್ಣಿನ ಧ್ವನಿ ಕೇಳುತ್ತೆ.. ಅವನ ಮುಖ ನೋಡಿದ್ರೆ ಗೊತ್ತಾಗಲ್ವಾ.. ರಾತ್ರಿ ನೈಟ್ ಶೋ ಫಿಲಂ ನೋಡ್ಕೊಂಡು ಬರೋಕೆ ಲೇಟ್ ಆಗಿದೆ ಅದಕ್ಕೆ ಸಾಹೇಬ್ರು ಇಷ್ಟು ಲೇಟ್ ಆಗಿ ಎದ್ದಿರೋದು.. ಅಂತ ಹೇಳ್ತಾರೆ.. ಅಡುಗೆ ಮನೆ ಇಂದ ಬಂದ ಅಮ್ಮ.. ಲೇ ನೀನ್ ಸುಮ್ನೆ ಕುತ್ಕೋ.. ತಗೋಳೋ ತಿಂಡಿ ಮಾಡು.. ಅಂತ ಅವನ ಕೈಗೆ ತಿಂಡಿ ಕೊಡ್ತಾರೆ.. ಅವನು ತಿಂಡಿ ತಿಂದು ಎಲ್ಲರಿಗೂ ಬೈ ಹೇಳಿ .. ಬೈಕ್ ಸ್ಟಾರ್ಟ್ ಮಾಡಿಕೊಂಡು  ಆಫೀಸ್ ಕಡೆಗೆ ಹೋಗ್ತಾನೆ...


ಹಾಯ್.. ನನ್ ಹೆಸರು.. ಮಹಿ..  ಪ್ರೈವೇಟ್ ಕಂಪನಿ ಅಲ್ಲಿ ಸಾಫ್ಟ್ವೇರ್ ಜಾಬ್ ಮಾಡ್ತಾ ಇದ್ದೀನಿ.. ಆಗಂತ ನಾನೇನು ದೊಡ್ಡ ಸಾಫ್ಟ್ವೇರ್ ಇಂಜಿನಿಯರ್ ಅಲ್ಲ. ಜಾಬ್ ಗೆ ಜಾಯಿನ್ ಆಗಿ ಜಸ್ಟ್ 2 ಎರಡು ತಿಂಗಳು ಆಯ್ತು.. ಟ್ರೈನಿಂಗ್  ಪಿರಿಯಡ್ ಅಲ್ಲಿ ಇದ್ದೀನಿ ಇನ್ನ ಒನ್ ಮಂತ್ ಅದ್ರೆ.. ಟ್ರೈನಿಂಗ್ ಪಿರಿಯಡ್ ಮುಗಿಯುತ್ತೆ.. ಆಮೇಲೆ ಯಾವುದಾದ್ರೂ ಪ್ರಾಜೆಕ್ಟ್ ಟೀಮ್ ಅಲ್ಲಿ ಅಕ್ತಾರೆ.. ಅಕ್ಟುಲಿ ನನಗೆ ಈ ಸಾಫ್ಟ್ವೇರ್ ಫೀಲ್ಡ್ ಅಂದ್ರೆ ಆಗೋದೇ ಇಲ್ಲಾ ಮನೇಲಿ ಬೇಡ ಬೇಡ ಅಂದ್ರು ಇಂಜಿನಿಯರ್ ಕಾಲೇಜ್ ಗೆ ಜಾಯಿನ್ ಮಾಡಿದ್ರು.. ಅಪ್ಪನ ದುಡ್ಡಿಗೆ ಮೋಸ ಮಾಡಬಾರದು. ಸಂಬಂಧಿಕರ ಮಧ್ಯದಲ್ಲಿ ನಮ್ಮಮ್ಮ ಇಂಜಿನಿಯರ್ ಮುಗಿಸಿದ್ರು ಇನ್ನು ನೀನ್ ಮಗ ಮನೇಲಿ ಇದ್ದಾನ ಕೆಲಸಕ್ಕೆ ಹೋಗ್ತಾ ಇಲ್ವಾ ಅಂತ ಹೇಳೋದನ್ನ ಕೇಳಿಸಿಕೊಂಡು ಬೇಜಾರ್ ಆಗ್ಬಾರ್ದು ಅಂತ.. ಅವರಿಗೋಸ್ಕರ ಈ ಜಾಬ್.. ಮಾಡ್ತಾ ಇದ್ದೀನಿ..

ಅಪ್ಪ ರಾಮ ರಾವ್   ಸೆಂಟ್ರಲ್ ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ವರ್ಕ್ ಮಾಡ್ತಾರೆ.. ಅಮ್ಮ.. ವಸುಮತಿ.. ಅವರು ಕೂಡ ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲೇ ವರ್ಕ್ ಮಾಡ್ತಾ ಇದ್ರೂ ( ಇವಾಗ ಪೂರ್ತಿ ಮನೆ ನೋಡಿಕೊಳ್ಳೋ ಜವಾಬ್ದಾರಿ ತಗೊಂಡು ಇದ್ದಾರೆ ).. ಅಪ್ಪ ಅಮ್ಮ ಕಾಲೇಜ್ ಇಂದ ಫ್ರೆಂಡ್ಸ್ ಇಬ್ಬರಿಗೂ ಕಾಲೇಜ್ ಅಲ್ಲಿ ಲವ್ ಸ್ಟಾರ್ಟ್ ಆಯ್ತು.. ಇಬ್ಬರು ಸಂಬಂಧಿಕರೇ ಆಗಿರೋದ್ರಿಂದ ಲವ್ ಗೆ ಏನು ಪ್ರಾಬ್ಲಮ್ ಆಗಲಿಲ್ಲ ಮನೇಲಿ ಒಪ್ಪಿಕೊಂಡು ಇಬ್ಬರಿಗೂ ಮದುವೆ ಮಾಡಿದ್ರು.. ಅಕ್ಕ.. ಶ್ವೇತಾ  ಅವರು ಕೂಡ ಒಂದು ಪ್ರೈವೇಟ್ ಕಂಪನಿ ಅಲ್ಲಿ ಸಾಫ್ಟ್ವೇರ್ ಇಂಜಿನಿಯರ್.. ನನ್ ತರ ಅಲ್ಲ.. ಅಕ್ಕ ಪ್ರಾಜೆಕ್ಟ್ ಟೀಮ್ ಲೀಡರ್.. ಒಂದೇ ಕಂಪನಿ ಬಟ್ ಆಫೀಸ್ ಬೇರೆ ಬೇರೆ.. ಅವರ ಅನುಗ್ರಹ ನೇ ನನಗೆ ಈ ಜಾಬ್ ಸಿಕ್ಕಿದು.. ಸಾರೀ ಕೊಡಿಸಿದ್ದು.. ಮನೇಲಿ ಅಮ್ಮ ಲೋ ಜಾಬ್ ಮಾಡದೇ ಈಗೆ ಮನೇಲಿ ಇದ್ರೆ ಸಂಬಂಧಿಕರು ಒಬ್ಬೊಬ್ಬರು ಒಂದೊಂದು ಮಾತಾಡ್ತಾ ಇರ್ತಾರೆ.. ಪ್ಲೀಸ್ ಯಾವುದಾದ್ರೂ ಚಿಕ್ ಕೆಲಸ ಅಂತ ಮಾಡೋ ಪ್ಲೀಸ್ ದಿನ ತಲೆ ತಿಂತ ಇದ್ರೂ.. ನಾನು ಅವರ ಖುಷಿಗೆ ಜಾಬ್ ಗೆ ಅಪ್ಲೈ ಮಾಡ್ತಾ ಇದ್ದೆ.. ಇಂಟರ್ವ್ಯೂ ಅಲ್ಲಿ ಸರಿಯಾಗಿ ಉತ್ತರ ಕೊಡದೆ .. ವಾಪಸ್ಸು ಮನೆಗೆ ಬರ್ತಾ ಇದ್ದೆ..  ಇಂಟರ್ವ್ಯೂ ಜಸ್ಟ್ ಅಮ್ಮನ ಖುಷಿಗೋಸ್ಕರ ಅಷ್ಟೇ ಬಿಟ್ರೆ.. ನನಗೆ ಇಷ್ಟ ಅಂತ ಹೋಗ್ತಾ ಇರಲಿಲ್ಲ.. ನಮ್ ಅಕ್ಕನಿಗೆ ಯಾಕೋ ನಾನು ಬೇಕು ಬೇಕು ಅಂತಾನೆ ಸುಮ್ನೆ ಡ್ರಾಮಾ ಮಾಡ್ತಾ ಇದ್ದೀನಿ ಅಂತ ಗೊತ್ತಾಗಿ.. ಅವರ ಆಫೀಸ್ ಅಲ್ಲೇ ಇಂಟರ್ವ್ಯೂ ಇಲ್ಲದೆ ಡೈರೆಕ್ಟ್ ಜಾಬ್ ಆಫರ್ ಲೆಟರ್ ತಂದು ಕೊಟ್ಟು.. ಮುಚ್ಕೊಂಡು ನಾಳೆಯಿಂದ ಕೆಲಸಕ್ಕೆ ಹೋಗೋದನ್ನ ಕಲಿ ಅಂತ.. ನನ್ನ ಫ್ರೀಡಂ ಗೆ ಫುಲ್ ಸ್ಟಾಪ್ ಇಟ್ಟು ಬಿಟ್ಲು.. ನೋಡೋಕೆ ಚೆನ್ನಾಗಿ ಕ್ಯೂಟ್ ಇದ್ದಾಳೆ.. ಅದ್ರೆ ಬ್ರಹ್ಮ ರಾಕ್ಷಸಿ.. ನನ್ನ ಲೈಫ್ ಗೆ..  ನಾನು ಮನೇಲಿ ಎಸ್ಕೇಪ್ ಆಗೋಕೆ ನೋಡಿದ್ರೆ. ನನ್ನ ಲಾಕ್ ಮಾಡ್ತಾ ಇರ್ತಾಳೆ.. ಅದೇನೋ ಖುಷಿ ಅವಳಿಗೆ ನನ್ನ ಲಾಕ್ ಮಾಡಿಸಿದ್ರೆ ಮನೇಲಿ.. ರಾತ್ರಿ ನೈಟ್ ಶೋ ಮೂವಿ ಗೆ ಹೋಗಿದ್ದು ನಿಜ.. ಅದ್ರೆ ಮನೇಲಿ ಅಮ್ಮನಿಗೆ ಬಿಟ್ರೆ ಬೇರೆ ಯಾರಿಗೂ ಗೊತ್ತಿಲ್ಲ.. ಅದ್ರೆ ನಮ್ ಮನೆ cid ನಮ್ಮಕ್ಕ ಎಲ್ಲಾ ಕಂಡು ಇಡಿದು ಬಿಡ್ತಾಳೆ.. ಆಗಂತ ನನ್ನ ಮೇಲೆ ದ್ವೇಷ ಅಂತ ಏನು ಇಲ್ಲಾ.. ಸಂಬಂಧಿಕರು ನನ್ನ ಬಗ್ಗೆ ಏನಾದ್ರು ಮಾತಾಡಿದ್ರೆ ಅಕ್ಕನಿಗೆ ಇಷ್ಟ ಆಗೋದಿಲ್ಲ.. ಕೆಲವೊಂದು ಸರಿ ನನ್ನ ಹಿಂದೆ ಹಾಕಿಕೊಂಡು ಅವರ ಹತ್ತಿರ ಜಗಳ ಕೂಡ ಮಾಡಿದ್ಲು. ಅದ್ರೆ ಯಾವಾಗ್ಲೂ ಜಗಳ ಮಾಡಿಕೊಂಡೆ ಇರೋಕೆ ಆಗೋದಿಲ್ಲ ಅಲ್ವಾ.. ಅದಕ್ಕೆ ನನಗೆ ಈ ಜಾಬ್ ಮಾಡೋಕೆ ಹೇಳಿದ್ಲು.  ನಾನು ಕೂಡ ಅರ್ಥ ಮಾಡಿಕೊಂಡು ಜಾಬ್ ಮಾಡ್ತಾ ಇದ್ದೀನಿ... ಅಕ್ಕ ಚೆನ್ನಾಗಿ ವರ್ಕ್ ಮಾಡ್ತಾ ಇರೋದ್ರಿಂದ ಆನ್ ಟೈಮ್ ಪ್ರಾಜೆಕ್ಟ್ ನಾ ಕಂಪ್ಲೀಟ್ ಮಾಡ್ತಾರೆ. ಸೋ ಅಕ್ಕ ಆಫೀಸ್ ಗೆ ಬಂದು ಬೇಕಾದ್ರು ವರ್ಕ್ ಮಾಡಬಹುದು ಇಲ್ಲಾ ಮನೇಲಿ ಇದ್ದುಕೊಂಡೆ ವರ್ಕ್ ಮಾಡಬಹುದು.  

ಅಮ್ಮ ಅಪ್ಪ ಅಕ್ಕ ನಾನು.. ಹ್ಯಾಪಿ ಫ್ಯಾಮಿಲಿ.. ಫೈನಾಷಿಯಲ್ ಆಗಿ ಏನು ಪ್ರಾಬ್ಲಮ್ ಇಲ್ಲಾ.. ಅಪ್ಪ ನಾ ಫ್ಯಾಮಿಲಿ ಅಮ್ಮ ನಾ ಫ್ಯಾಮಿಲಿ ಒಳ್ಳೆ ಅಸ್ತಿ ದುಡ್ಡು ಇರೋ ಫ್ಯಾಮಿಲಿ ನೇ.. ಅದ್ರೆ ನಮ್ ಅಪ್ಪ ಅಮ್ಮ.. ಅವರ ದುಡಿದ ದುಡ್ಡಲ್ಲೆ ನಮ್ಮನ್ನ ಓದಿಸಿದ್ದು ಇಷ್ಟು ದೊಡ್ಡವರನ್ನಾಗಿ ಮಾಡಿದ್ದು..  ಇದು ನನ್ನ ಬಗ್ಗೆ ನನ್ನ ಫ್ಯಾಮಿಲಿ ಬಗ್ಗೆ....


ಟ್ರಾಫಿಕ್ ಅಲ್ಲಿ ರೆಡ್ ಸಿಗ್ನಲ್ ನೋಡಿ ಬೈಕ್ ನಿಲ್ಲಿಸಿ.. ಯಾವಾಗ ಗ್ರೀನ್ ಲೈಟ್ ಬರುತ್ತೆ ಅಂತ ನೋಡ್ತಾ ನಿಂತಿರ್ತಾರೆ.. ಮೊಬೈಲ್ ರಿಂಗ್ ಅದಕ್ಕೆ ಸದ್ದಿಗೆ ಪ್ಯಾಂಟ್ ಪಾಕೆಟ್ ಇಂದ ಮೊಬೈಲ್ ತೆಗೆದು ನೋಡ್ತಾ.. ಇವಾಗ ಈ ಕಾಲ್ ಪಿಕ್ ಮಾಡಿದ್ರೆ ಇಲ್ಲಾ ಅಂದ್ರು 3 ನಿಮಿಷ ಮಾತಾಡಬೇಕು.. ಟ್ರಾಫಿಕ್ ಪೊಲೀಸ್ ನೋಡಿದ್ರೆ ಮುಗಿತು ನನ್ನ ಕಥೆ.. ಅಂತ ಸೈಲೆಂಟ್ ಮಾಡಿ.. ಜೇಬಲ್ಲಿ ಇಟ್ಕೊತಾನೆ   ಸಿಗ್ನಲ್ ಬಿಟ್ಟಿದ್ದೆ ಬೈಕ್ ಸ್ಟಾರ್ಟ್ ಮಾಡಿಕೊಂಡು ಆಫೀಸ್ ಕಡೆಗೆ ಹೋಗ್ತಾನೆ..

ಆಫೀಸ್ ಬಿಲ್ಡಿಂಗ್ ಬೇಸ್ಮೆಂಟ್ ಅಲ್ಲಿ ಬೈಕ್ ನಾ ಪಾರ್ಕ್ ಮಾಡಿ..  ಮೊಬೈಲ್ ತೆಗೆದು ಮಿಸ್ಸೇಡ್ ಕಾಲ್ ಗೆ ವಾಪಸ್ಸು ಕಾಲ್ ಮಾಡ್ತಾನೆ..

ಹೇಳೋ ವಿಜಿ..

ಮಗ ಎಲ್ಲಿದ್ದೀಯ..

ಪಾರ್ಕಿಂಗ್ ಅಲ್ಲಿ ಬೈಕ್ ನಿಲ್ಲಿಸಿ ಆಫೀಸ್ ಗೆ ಬರ್ತಾ ಇದ್ದೀನಿ.. 

ಹೌದ ಆಫೀಸ್ ಗೆ ಬೇಡ ಸೀದಾ ಅಡ್ಡಕ್ಕೆ ಬಾ ಇಬ್ರು ಜೊತೆಗೆ ಹೋಗೋಣ..

( ವಿಜಿ.. ಕಾಲೇಜ್ ಟೈಮ್ ನಿಂದಾನು ಫ್ರೆಂಡ್ ಹಾಗೆ. ಈ ಆಫೀಸ್ ಅಲ್ಲಿ ಇರೋ ನನ್ನ ಒನ್ ಅಂಡ್ ಓನ್ಲಿ ಫ್ರೆಂಡ್. ನನಗಿಂತ ಸ್ವಲ್ಪ ಬೇಗ ಜಾಬ್ ಗೆ ಜಾಯಿನ್ ಅದ.. ಇದೆ ಕಂಪನಿ ಅಲ್ಲಿ ಟೀಮ್ ಲೀಡರ್ ಆಗಿ ಪ್ರಮೋಟ್ ಆಗಿದ್ದಾನೆ )


ಮೊಬೈಲ್ ನೋಡಿಕೊಂಡು ಅಡ್ಡಕ್ಕೆ ಬಂದ ಮಹಿ ನಾ ನೋಡಿ.. ವಿಜಿ. ಏನೋ ಮಗ ಇಷ್ಟು ಲೇಟ್ ಆಗಿ ಬಂದೆ   ಅಂತ ಕೈಲಿ ಹೊಡಿತಾ ಇದ್ದಾ ಸಿಗರೇಟ್ ನಾ ಅವನ ಕೈಗೆ ಕೊಡ್ತಾನೆ.. ಸಿಗರೇಟ್ ತಗೊಂಡು ಒಂದು ದಮ್ ಹೊಡೆದು ನೈಟ್ ಮೂವಿ ಗೆ ಹೋಗಿ ಬರೋಕೆ ಲೇಟ್ ಆಯ್ತು ಅದಕ್ಕೆ ಬೆಳಿಗ್ಗೆ ಲೇಟ್ ಆಗಿ ಎದ್ದೆ..

ವಿಜಿ ನಗ್ತಾ ಅಲ್ವ ಜಾಬ್ ಮಾಡ್ತಾ ಇದ್ರೂ ನಿನ್ನ 2nd ಶೋ ಫಿಲಂ ಕಾಯಿಲೆ ನಾ ಇನ್ನು ಬಿಟ್ಟಿಲ್ವಾ...

ಏನ್ ಮಾಡೋದು ಮಗ ಸಡನ್ ಆಗಿ ಎಲ್ಲಾನು ಬಿಡೋಕೆ ಆಗಲ್ಲಾ ಅಲ್ವಾ.. ಅದು ಅಲ್ಲದೆ ಬಾಸ್ ಡೈರೆಕ್ಟ್ ಮಾಡಿ ಆಕ್ಟಿಂಗ್ ಮಾಡಿರೋ ಮೂವಿ.. ಅದಕ್ಕೆ 2nd ಶೋ ಗೆ ಹೋಗಿದ್ದೆ.. 

ಹ್ಮ್ ಸರಿ.. ಹೇಗಿದೆ ಮೂವಿ.. 

ನಿನಗೆ ಗೊತ್ತು ಅಲ್ವಾ ಬಾಸ್ ಮೂವಿ ಹೇಗೆ ಇರುತ್ತೆ ಅಂತ ಒಂದು ಸರಿ ನೋಡಿದ್ರೆ ಅರ್ಥ ಆಗೋದೇ ಇಲ್ಲಾ 2 3 ಸರಿ ನೋಡಿದ್ರೆ ಅರ್ಥ ಆಗುತ್ತೆ..

ಹ್ಮ್ ಸರಿ ನಡಿ.. ಅಂತ ಸಿಗರೇಟ್ ಬಿಸಾಕಿ ಆಫೀಸ್ ಗೆ ಹೋಗ್ತಾರೆ...

*****

ಮಹಿ.. ಅವನ ಕ್ಯಾಬಿನ್ ಅಲ್ಲಿ ಕುತ್ಕೊಂಡು ಲ್ಯಾಪ್ ನಾ ಓಪನ್ ಮಾಡಿ.. ನೆನ್ನೆ ವರ್ಕ್ ಏನಾದ್ರು ಪೆಂಡಿಂಗ್ ಇದೆಯಾ ಅಂತ ನೋಡ್ತಾ ಇರ್ತಾನೆ.. ಸ್ವಲ್ಪ ಹೊತ್ತು ನೋಡಿ ಏನು ಇಲ್ಲಾ ಅಂತ ಗೊತ್ತಾದ ಮೇಲೆ  ಸುಮ್ನೆ  ಹಾಗೆ ಟೈಮ್ ಪಾಸ್ ಮಾಡ್ತಾ ಇರ್ತಾನೆ.. ಟ್ರೈನಿಂಗ್ ಪಿರಿಯಡ್ ಅಲ್ವಾ ಅಷ್ಟಾಗಿ ವರ್ಕ್ ಏನು ಇರೋದಿಲ್ಲ.. ಕೊಡೊ ವರ್ಕ್ ನಾ ಮುಗಿಸಿದ್ರೆ ಸಾಕು.. ಬೇರೇನೂ ಇರೋದಿಲ್ಲ..

ಲ್ಯಾಪ್ ನೋಡ್ತಾ ಇದ್ದವನಿಗೆ ಒಂದು ಮೇಲ್ ನೋಟಿಫಿಕೇಶನ್ ಬರುತ್ತೆ.. ಮೇಲ್ ನೋಡಿ ಸ್ಪಾಮ್ ಅನ್ಕೊಂಡು ಇಗ್ನೋರ್ ಮಾಡ್ತಾನೆ.. ಹಾಗೆ ಸ್ವಲ್ಪ ಹೊತ್ತು ಟೈಮ್ ಪಾಸ್ ಮಾಡ್ತಾನೆ..

15 ನಿಮಿಷ ದ ನಂತರ ಯಾರೋ ಮಹಿ ಅಂತ ಕರೀತಾರೆ. ಮಹಿ ತಿರುಗಿ ನೋಡ್ತಾನೆ.. ಅವನ ಎದುರಿಗೆ ಇಬ್ಬರು ವ್ಯಕ್ತಿ ಗಳು ನಿಂತಿರ್ತಾರೆ.. ಒಬ್ಬರು ಅವನ ಟ್ರೈನರ್ ರಘು .. ಇನ್ನೊಬ್ಬರು ಲೇಡೀಸ್..  ಹೆಸರು ಗೊತ್ತಿಲ್ಲ ನೋಡ್ತಾ ಇರೋದೇ ಇದೆ ಮೊದಲು 

ರಘು.. ನಾ ನೋಡಿ.. ಎದ್ದು ನಿಂತು ಸರ್ ಹೇಳಿ ಅಂತ ಹತ್ತಿರ ಹೋಗ್ತಾನೆ.. ರಘು ಮಹಿ ನಿನಗೆ ಟ್ರೇನಿಂಗ್ ನೋಟಿಫಿಕೇಶನ್ ಮೇಲ್ ಬಂದಿಲ್ವ.. ಇಲ್ಲಾ ಸರ್ ನಿಮ್ ಕಡೆಯಿಂದ ನನಗೆ ಯಾವುದೇ ಮೇಲ್ ಬಂದಿಲ್ಲ.. ನಾನು ನಿಮ್ ಮೇಲ್ ಗೋಸ್ಕರ ನೇ ಕಾಯ್ತಾ ಇದ್ದೆ.. ಅಂತ ಲ್ಯಾಪ್ ಕಡೆಗೆ ತೋರಿಸ್ತಾನೆ.. ರಘು ಲ್ಯಾಪ್ ನೋಡಿ ಮಹಿ ನನ್ನ ಕಡೆಯಿಂದ ಅಲ್ಲ ಬೇರೆ ಮೇಲ್ id ಇಂದ ನಿನಗೆ ಯಾವುದೇ ಮೇಲ್ ಬಂದಿಲ್ವ.  ಇಲ್ಲಾ ಸರ್ ಈ ಆಫೀಸ್ ಗೆ ಜಾಯಿನ್ ಆದಾಗಿಂದ ನನಗೆ ನಿಮ್ ಮೇಲ್ ಬಿಟ್ರೆ ಬೇರೆ ಯಾವ ಮೇಲ್ ಬರ್ತಾ ಇದ್ದಿಲ್ಲ ಅದಕ್ಕೆ.. ನಾನು ನಿಮ್ ಮೇಲ್ ಬಿಟ್ಟು  ಬೇರೆ ಯಾವುದು ನೋಡೋಕೆ ಹೋಗಲ್ಲ..

ರಘು ಹ್ಮ್ ಅರ್ಥ ಆಯ್ತು.. ಅಕ್ಟುಲಿ ನನ್ನ ಬೇರೆ ಪ್ರಾಜೆಕ್ಟ್ ಗೆ ಶಿಫ್ಟ್ ಮಾಡಿದ್ದಾರೆ.. ಎಲ್ಲರಿಗೂ ನೈಟ್ ಮೇಲ್ ಮಾಡಿದ್ದೆ ಬಟ್ ನಿನಗೆ ಮಾಡೋದು ಮಿಸ್ ಆಗಿ ಬಿಟ್ಟಿದೆ ಅದಕ್ಕೆ.. ಅದಕ್ಕೆ ನೀನು ಇಲ್ಲೇ ಇದ್ದಿಯಾ.. ರಘು ಪಕ್ಕದಲ್ಲಿ ಇದ್ದಾ ಹುಡುಗಿ ನಾ ತೋರಿಸಿ.. ಇವರು  ಅಕಿರಾ ನಿಮ್ ಹೊಸ ಟ್ರೈನರ್. ಇನ್ಮೇಲಿಂದ ಇವರೆ ನಿನಗೆ ಟ್ರೈನಿಂಗ್ ಕೊಡ್ತಾರೆ.. ಇವರು ನಿನಗೆ ಮೇಲ್ ಮಾಡಿದ್ರು ನೀನು ಬರದೇ ಇದ್ದದ್ದನ್ನ ನೋಡಿ ನನಗೆ ಹೇಳಿದ್ರು ಅದಕ್ಕೆ ಡೈರೆಕ್ಟ್ ಇಲ್ಲಿಗೆ ಬಂದೆ..

ಸೋ ಸಾರೀ ಸರ್.. ನಾನು ನೋಡಲೇ ಇಲ್ಲಾ.. ಅಕಿರಾ ನಾ ನೋಡ್ತಾ ಸಾರೀ ಮೇಡಂ...

ರಘು.. ಇಟ್ಸ್ ಓಕೆ ಮಹಿ.. ಇವರ ಜೊತೆಗೆ ಹೋಗು ಅಂತ ಹೇಳಿ ರಘು ಹೊರಟು ಹೋಗ್ತಾರೆ..

ಮಹಿ ಲ್ಯಾಪ್ ತೆಗೆದು ಕೊಂಡು.. ಅಕಿರಾ ಹಿಂದೆ ಹೋಗ್ತಾ ನೇ.. 

ಸ್ವಲ್ಪ ದೂರ ಬಂದ ಮೇಲೆ.. ಅಕಿರಾ ಗೆ ಅನುಮಾನ ಬರುತ್ತೆ ಹಿಂದೆ ಬರ್ತಾ ಇದ್ದಾನೆ ಅಲ್ವಾ ಏನಾದ್ರು ತಪ್ಪಾಗಿ ನನ್ನ ನೋಡ್ತಾ ಇದ್ದಾನ ಅಂತ.. ಒಮ್ಮೆ ತಿರುಗಿ ನೋಡ್ತಾಳೆ..  ಹಿಂದೆ ಮಹಿ ಕಾಣಿಸೋದಿಲ್ಲ.. ಅಕ್ಕ ಪಕ್ಕಾ ನೋಡ್ತಾಳೆ  ಬೇರೆ ದಾರಿಲಿ ಅಕಿರಾ ಗಿಂತ ಮುಂದೆ ಹೋಗ್ತಾ ಇರ್ತಾನೆ..

ಅಕಿರಾ ಏನು ಮಾತನಾಡದೆ  ಸೀದಾ ಟ್ರೇನಿಂಗ್ ರೂಮ್ ಒಳಗೆ ಹೋಗಿ.. ಕ್ಲಾಸ್ ಶುರು ಮಾಡ್ತಾಳೆ...


****************************


PS