Mahi - 2 in Kannada Love Stories by S Pr books and stories PDF | ಮಹಿ - 2

The Author
Featured Books
Categories
Share

ಮಹಿ - 2

ಮಗ ಏನ್ ಈ ಟ್ರೈನರ್ ಹೀಗೆ ನಾ ನೋಡೋಕೆ ಅಷ್ಟು ಚೆನ್ನಾಗಿ ಇದ್ದಾರೆ, ಮುಖ ನಾ ಏನಕ್ಕೋ ಹಾಗೇ ಇಟ್ಕೊಂಡು ಇದ್ದಾರೆ. ಅಂತ ಪಕ್ಕದಲ್ಲಿ ಇದ್ದಾ ಉದಯ್ ಗೆ ಕೇಳ್ದೆ

ಉದಯ್,, ಮಗ ಸುಮ್ನೆ ಇರೋ ಅವರು ತುಂಬಾ ಸ್ಟ್ರಿಕ್ಟ್ ನಮಗೆ ಟ್ರೈನಿಂಗ್ ಕೊಡ್ತಾ ಇರೋದೇ ಹೆಚ್ಚು, ಅದರಲ್ಲಿ ನೀನ್ ಅವರ ಬಗ್ಗೆ ಹೀಗೆ ಹೇಳ್ದೆ ಅಂತ ಅವರಿಗೆ ಗೊತ್ತಾದ್ರೆ ನೀನ್ ಜೊತೆ ನನ್ನು ಕಂಪನಿ ಯಿಂದ ಹೊರಗೆ ಹಾಕ್ತಾರೆ.

ಲೋ ಅದಕ್ಕೆ ಯಾಕೋ ಟೆನ್ಶನ್ ಆಗ್ತೀಯಾ ಜಸ್ಟ್ ಹೇಳಿದೆ ಬಿಡು. ಅಂತ ಹೇಳಿ ಸೈಲೆಂಟ್ ಅದೇ.

ಸುಳ್ಳಲ್ಲ ನಿಜಾನೆ ಅಕಿರಾ ತುಂಬಾ ಮುದ್ದಾಗಿ ಕ್ಯೂಟ್ ಆಗಿ ಇದ್ದಾಳೆ. ಏನಪ್ಪಾ ಇವನು ಆಗಲೇ ಲೈನ್ ಹೊಡಿಯೋಕೆ ಶುರು ಮಾಡಿದ ಅನ್ಕೊಂಡ್ರಾ, no way ಚಾನ್ಸ್ ಎ ಇಲ್ಲಾ. ಜಸ್ಟ್ ಕಾಂಪ್ಲಿಮೆಂಟ್ ಅಷ್ಟೇ..

ಟ್ರೈನಿಂಗ್ ಮುಗಿಸಿ ಅಕಿರಾ ನನ್ನ ಕಡೆಗೆ ಒಂದು ವಾರ್ನಿಂಗ್ ಲುಕ್ ಕೊಟ್ಟು ಹೋದ್ಲು. ನಾನ್ ಏನ್ ಮಾಡಿದೆ ಇವಳಿಗೆ ನನ್ನ ಕಡೆ ಈಗೆ ನೋಡ್ಕೊಂಡು ಹೋದ್ಲು ಅಂತ ಮನಸಲ್ಲಿ ಅನ್ಕೊಂಡು ಟ್ರೈನಿಂಗ್ ರೂಮ್ ನಿಂದ ಹೊರಗೆ ಬಂದು ನನ್ನ ಪ್ಲೇಸ್ ಅಲ್ಲಿ ಲ್ಯಾಪ್ಟಾಪ್ ಇಟ್ಟು ಲಂಚ್ ಗೆ ಹೋಗೋಣ ಅಂತ ಆಫೀಸ್ ನಿಂದ ಹೊರಗೆ ಬಂದು ಲೈಫ್ ಹತ್ತಿರ ನಿಂತಿದೇ.

ಯಾರೋ ನನ್ನ ಭುಜದ ಮೇಲೆ ಕೈ ಹಾಕಿ ಏನ್ ಮಗ ಟ್ರೈನರ್ ಚೇಂಜ್ ಆಗಿದ್ದಾರೆ ಅಂತ ಕೇಳಿ ಪಟ್ಟೆ ನಿಜಾನಾ ಅಂತ ಹೇಳಿದ.. ನಾನ್ ಯಾವನ್ ಇವ್ನು ಅಂತ ತಿರುಗಿ ನೋಡಿದೆ. ನನ್ನ ಕಾಲೇಜ್ ಫ್ರೆಂಡ್ ಭುವನ್ 

ಹೌದು ಮಗ ಯಾರೋ ಹುಡುಗಿ ನೋಡೋಕೆನೋ ಸೂಪರ್ ಆಗಿ ಸಕ್ಕತ್ತಾಗಿ ಇದ್ದಾಳೆ ಅದ್ರೆ ಸ್ವಲ್ಪ ಅಟ್ಟಿಟ್ಯೂಡ್ ಅನ್ಕೊಂತೀನಿ, ಮೊದಲ ಸರಿ ಭೇಟಿ ಆದ್ವಿ ಅಂತ ಹಾಯ್ ಮಾಡಿದ್ರೆ, ಕೇರ್ ಮಾಡದೇ ಹೋಗಿ ಬಿಟ್ಲು, ನಾವ್ ಗೊತ್ತಲ್ಲಾ ತಿರುಪತಿ ಗೆ ಲಡ್ಡು ಕೊಡೋವ್ರು, ಕೇರ್ ಮಾಡದೇ ಮುಂದೆ ಹೋಗ್ತಾ ಇದ್ಲಾ ಪಾಪ ಅವಳು ಇವನು ನನ್ನ ಹಿಂದೇನೆ ಬರ್ತಾ ಇದ್ದಾನೆ ನನ್ನ ಏನಾದ್ರು ತಿನ್ನೋ ಹಾಗೇ ನೋಡ್ಕೊಂಡು ಬರ್ತಾ ಇದ್ದಾನ ಅಂತ ಅನ್ಕೊಂಡು ತಿರುಗಿ ನೋಡಿದ್ಲು, ಅವಳಿಗೆ ನಾನ್ ಹಿಂದೆ ಬರ್ತಾ ಇಲ್ಲಾ ಅಂತ ಗೊತ್ತಾಗಿ ಸುತ್ತಾ ನೋಡಿದ್ಲು. ನಾನ್ ಬೇರೆ ದಾರಿಲಿ ಹೋಗ್ತಾ ಇದ್ದೆ. ನನ್ನ ನೋಡಿ ಒಂದು ಲುಕ್ ಕೊಟ್ಲು ಮಗ, ನೆನೆಸ್ಕೊಂಡ್ರೆ ಈಗ್ಲೂ ನಗು ಬರುತ್ತೆ. ಮತ್ತೆ ಟ್ರೈನಿಂಗ್ ಮುಗಿಸಿಕೊಂಡು ಹೋಗೋವಾಗ ನನ್ನ ನೋಡಿ ಒಂದು ಲುಕ್ ಕೊಟ್ಲು ಮಗ, ಅದೇನೋ ವಾರ್ನಿಂಗ್ ಕೊಡೊ ತರ ಇತ್ತು  ನಾನು ಕೊಟ್ರೆ ಕೊಡ್ಲಿ ಅಂತ ಸುಮ್ಮನಾಗೋದೇ.

ಅದು ಸರಿ ನೀನೇನು ಇವತ್ತು ಆಫೀಸ್ ಕೆಫೆಟೇರಿಯಾ ಕಡೆ ಪ್ರಯಾಣ..

ಭುವನ್,, ಅದ ಮಗ ಯಾವಾಗ್ಲೂ ಹೊರಗಡೆ ಹೋಗ್ತಾ ಇದ್ರೆ ಜೇಬಲ್ಲಿ ದುಡ್ಡು ಖಾಲಿ ಆಗುತ್ತೆ ಅಂತ ಇವತ್ತು ಈ ಕಡೆಗೆ ಬಂದೆ,, ಸರಿ ಬಾ ಲಿಫ್ಟ್ ಬಂತು ಹೋಗೋಣ ಅಂತ ಇಬ್ಬರು ಲಿಫ್ಟ್ ಒಳಗೆ ಹೋಗಿ ಬಟನ್ ಪ್ರೆಸ್ ಮಾಡಿದ್ವಿ.

ಲಿಫ್ಟ್ ಡೋರ್ ಕ್ಲೋಸ್ ಆಗ್ತಾ ಇದ್ದಾ ಹಾಗೇ ಯಾರೋ ಸಡನ್ ಆಗಿ ಡೋರ್ ಮಧ್ಯ ಕೈ ಇಟ್ರು. ಲಿಫ್ಟ್ ಡೋರ್ ಓಪನ್ ಆಯ್ತು. ತು ಯಾರೋ ಇದು ಕ್ಲೋಸ್ ಆಗೋ ಟೈಮ್ ಅಲ್ಲಿ ಮಧ್ಯ ಕೈ ಇಟ್ಟಿದ್ದು, ಕೈ ನಾ ಹಾಗೇ ಕತ್ತರಿಸಿ ಬಿಡಬೇಕು ಅಂತ ಭುವನ್ ಗೆ ಹೇಳ್ದೆ.

ಭುವನ್,, ಮಗ ಸುಮ್ನೆ ಇರೋ ಹಾಗೆಲ್ಲ ಮಾತಾಡಬಾರದು. ಅವರು ನಮ್ಮ ಹಾಗೇ ಅಲ್ವಾ.

ಏನ್ ನಮ್ಮ ಹಾಗೇ ಅಷ್ಟು ಅರ್ಜೆಂಟ್ ಇರೋವ್ರು ಬೇಗ ಬರಬೇಕು.

ಭುವನ್,, ಮಗ ಸ್ವಲ್ಪ ನೋಡ್ಕೊಂಡು ಮಾತಾಡೋ.

ಲೋ ಏನೋ ನೋಡ್ಕೊಂಡು ಮಾತಾಡೋದು ಅಂತ ತಿರುಗಿ ನೋಡಿದೆ, ನನ್ನ ಕರ್ಮ ಲಿಫ್ಟ್ ಕ್ಲೋಸ್ ಆಗೋ ಟೈಮ್ ಅಲ್ಲಿ ಡೋರ್ ಮಧ್ಯ ಕೈ ಇಟ್ಟಿದ್ದು ಬೇರೆ ಯಾರು ಅಲ್ಲ ಅಕಿರಾ. ಅವಳ ಮುಖದಲ್ಲಿ ಭದ್ರಾಕಾಳಿ ಕಾಣ್ತಾ ಇದ್ದಾಳೆ, ಅವಳ ಕಣ್ಣು ನೋಡಿದ್ರೆ ಹೇಳ್ಬೋದು, ನನ್ನ ಕೊಲೆ ಮಾಡೋ ತರ ನೋಡ್ತಾ ಇದ್ದಾಳೆ ಅಂತ. ನಾನು ಮನಸಲ್ಲೇ ತು ಏನ್ ಕರ್ಮ ಗುರು ಇದು ಅಂತ ಅನ್ಕೊಂಡು ಸೈಲೆಂಟ್ ಆಗಿ ಬಿಟ್ಟೆ.

ಲಿಫ್ಟ್ ಕೆಫೆಟೇರಿಯಾ ಫ್ಲೋರ್ ಅಲ್ಲಿ ಸ್ಟಾಪ್ ಆಯ್ತು. ಬದುಕಿತು ಬಡ ಜೀವ ಅನ್ಕೊಂಡು ಮಗ ಬೇಗ ಬರೋ ಅಂತ ಅನ್ಕೊಂಡು ಫಾಸ್ಟ್ ಆಗಿ ಕೆಫೆಟೇರಿಯಾ ಡೋರ್ ಹತ್ತಿರ ಬಂದ್ವಿ, ಬೆನ್ನತ್ತಿದ ಬೇತಾಳದ ಹಾಗೇ ನನ್ನ ಹಿಂದೇನೆ ಬಂದ್ಲು ಅಕಿರಾ, ಭುವನ್ ಆಕ್ಸಿಸ್ ಮಾಡಿದ ನಾನು ಡೋರ್ ಓಪನ್ ಮಾಡಿಕೊಂಡು ಒಳಗೆ ಓಡಿದೆ..

ನನ್ನ ಕರ್ಮ ಇಲ್ಲೂ ನನ್ನ ಬಿಡಲಿಲ್ಲ...

ಹಲೋ ಮಿಸ್ಟರ್ ಅಂತ ಯಾರೋ ಕರೆದ ಹಾಗೇ ಆಯ್ತು, ನಾನು ನನ್ನ ಅಲ್ಲ ಅಂತ ಅನ್ಕೊಂಡು ನನ್ನ ಪಾಡಿಗೆ ನಾನು ಹೋಗ್ತಾ ಇದ್ದೆ. ಮತ್ತೆ ಜೋರಾಗಿ ಹಲೋ ಮಿಸ್ಟರ್ ಮಹಿ ನಿಂತ್ಕೋಳ್ರಿ ಅಂತ ಹೇಳಿದ್ರು. ನಾನು ಯಾರಪ್ಪ ಅಂತ ಅನ್ಕೊಂಡು ತಿರುಗಿ ನೋಡಿದೆ,. ಅಕಿರಾ.. ದೊಡ್ಡದಾಗಿ ಕಣ್ ಬಿಟ್ಟುಕೊಂಡು ಹತ್ತಿರ ಬಂದಳು 

ಅಕಿರಾ,, ಹಲೋ ಮಿಸ್ಟರ್ ನಿಮಗೆ ಸ್ವಲ್ಪ ಆದ್ರೂ ಬುದ್ದಿ ಇದೆಯಾ ಒಳಗೆ ಬರಬೇಕಾದ್ರೆ ಆಕ್ಸಿಸ್ ಮಾಡಿ ಒಳಗೆ ಬರಬೇಕು ಅನ್ನೋ ಕಾಮನ್ ಸೆನ್ಸ್ ಆದ್ರೂ ಇಲ್ವಾ ನಿಮಗೆ, ಇದನ್ನ ಏನಾದ್ರು ಕಾಲೇಜ್ ಕ್ಯಾಂಟೀನ್ ಅನ್ಕೊಂಡ್ರಾ ಇಷ್ಟ ಬಂದ ಹಾಗೇ ಬರೋಕೆ ಹೋಗೋಕೆ, ನಿಮಗೆ ಕಾಲೇಜ್ ಅಲ್ಲಿ ಆಡೋ ತರ ಆಡಬೇಕು ಅಂತ ಇದ್ರೆ ವಾಪಸ್ಸು ಕಾಲೇಜ್ ಗೆ ಹೋಗಿ. ಈ ರೀತಿ ಇಲ್ಲಿಗೆ ಬಂದು ಈ ತರ ಮಾಡಬೇಡಿ ಅಂತ ಕೋಪದಲ್ಲೇ ಹೇಳಿದಳು 

ಸುತ್ತಾ ಮುತ್ತಾ ಇದ್ದವರೆಲ್ಲ ನಮ್ಮನ್ನೇ ನೋಡ್ತಾ ಇದ್ರು. ನಾನು ಏನು ಮಾತನಾಡದೆ ಸೈಲೆಂಟ್ ಆಗಿ ಸಾರೀ ಅಂತ ಹೇಳಿ ಫುಡ್ ಕೌಂಟರ್ ಕಡೆಗೆ ಹೋದೆ.. ಭುವನ್, ಹೇಳಿಲ್ವ ಮಗ ಅವಳು ರಾಕ್ಷಸಿ ಅಂತ ಹೋಗಿ ಹೋಗಿ ನೀನು ಅವಳ ಹತ್ತಿರಾನೆ ಸಿಕ್ಕಿ ಹಾಕಿಕೊಂಡೆ.

ಬಿಡೋ ಆಗಿದ್ದು ಆಯ್ತು ಅಂತ ಹೇಳಿ ಇಬ್ಬರು ಲಂಚ್ ತೆಗೆದುಕೊಂಡು ಹೋಗಿ ಒಂದು ಖಾಲಿ ಇದ್ದಾ ಪ್ಲೇಸ್ ಅಲ್ಲಿ ಕುತ್ಕೊಂಡು ಲಂಚ್ ಮಾಡಿ, ಲಂಚ್ ಪ್ಲೇಟ್ ನಾ ವಾಶ್ ಏರಿಯಾ ದಲ್ಲಿ ಕೊಟ್ಟು ಹೊರಗೆ ಹೋಗೋಣ ಅಂತ ಬಂದ್ವಿ. ಭುವನ್ ಔಟ್ ಆಕ್ಸಿಸ್ ಮಾಡಿದ ನಾನು ಡೋರ್ ಓಪನ್ ಮಾಡಿಕೊಂಡು ಹೊರಗೆ ಬಂದೆ.. ಹೊರಗೆ ಬಂದು ನಾಲಕ್ಕು ಹೆಜ್ಜೆ ಇಟ್ಟನೋ ಇಲ್ವೋ. ಮತ್ತೆ ಹಲೋ ಮಿಸ್ಟರ್ ಅನ್ನೋ ಸೌಂಡ್ ಕೇಳಿಸ್ತು. 

ಮನಸಲೇ ಮತ್ತೆ ಸಿಕ್ಕಿ ಹಾಕಿ ಕೊಂಡೆ ಈ ರಾಕ್ಷಸಿ ಗೆ ಅಂತ ಅನ್ಕೊಂಡು ತಿರುಗಿ ನೋಡಿದೆ. ನೂರಕ್ಕೆ ನೂರು ಸತ್ಯ ಅದು ಅಕಿರಾ. 

ಅಕಿರಾ,, ಮಿಸ್ಟರ್ ಆಗಲೇ ಅಷ್ಟು ಹೇಳಿದ್ರು ಮತ್ತೆ ಅದೇ ರೀತಿ ಮಾಡಿದ್ದೀರಾ ನಿಮಗೆ ಬುದ್ದಿ ಇದೆಯಾ ಇಲ್ವಾ ಅಂತ ಕೇಳಿದ್ಲು..

ನನಗೆ ಯಾಕೋ ಈ ಟೈಮ್ ಸೈಲೆಂಟ್ ಆಗಿ ಇರಬೇಕು ಅಂತ ಅನ್ನಿಸಲಿಲ್ಲ. ಹೋಗಿ ಅವಳ ಮುಂದೆ ನಿಂತು ಅವಳ ಮುಖ ನೋಡ್ತಾ, ಲೇ ಆಫ್ ಟಿಕೆಟ್ ಹೋಗ್ಲಿ ಪಾಪ ಹೆಣ್ಣ್ ಹುಡುಗಿ ಏನ್ ಮಾತಾಡಬಾರದು ಅಂತ ನಾನು ಸುಮ್ನೆ ಇದ್ರೆ ನಿಂದು ತುಂಬಾ ಓವರ್ ಆಯ್ತು, ಇವಾಗ ನಿನ್ನ ಪ್ರಾಬ್ಲಮ್ ಏನು ನಾನು ಆಕ್ಸಿಸ್ ಮಾಡಿಲ್ಲ ಅಂತ ಅನ್ನೋದೇ ಅಲ್ವಾ ಅಂತ ಹೇಳಿ ಕತ್ತಲ್ಲಿ ಇದ್ದಾ id ಕಾರ್ಡ್ ನಾ ತೆಗೆದು ಅವಳ ಕೈಗೆ ಇಟ್ಟು ಅವಳ ಕೈ ನಾ ಇಡ್ಕೊಂಡು ಬಾ ಅಂತ ಕರೆದುಕೊಂಡು ಕೆಫೆಟೇರಿಯಾ ಆಕ್ಸಿಸ್ ಡೋರ್ ಹತ್ತಿರ ಹೋಗಿ, ಅವಳ ಕೈ ಗೆ ನನ್ನ id ಕಾರ್ಡ್ ಕೊಟ್ಟು, ಮಾಡು ಆಕ್ಸಿಸ್ ಅಂತ ಹೇಳಿದೆ. 

ಅಕಿರಾ,, ಒಂದು ಸರಿ ಆಕ್ಸಿಸ್ ಪಾಯಿಂಟ್ ಹತ್ತಿರ id ಕಾರ್ಡ್ ಇಟ್ಟು ಆಕ್ಸಿಸ್ ಮಾಡೋಕೆ ನೋಡಿದ್ಲು ಆಗಲಿಲ್ಲ. ಮತ್ತೆ ಒಂದು ಸರಿ ಮಾಡಿದ್ಲು ಆಗಲಿಲ್ಲ 3 4 ಟೈಮ್ಸ್ ಮಾಡಿ ನೋಡಿದ್ಲು ಆಗಲಿಲ್ಲ. 

ನೀನು ಇವತ್ತೆಲ್ಲಾ ಮಾಡಿದ್ರು ಅದು ಆಗೋದೇ ಇಲ್ಲಾ ಯಾಕಂದ್ರೆ ಅದು ಟೆಂಪರೆರಿ id ಕಾರ್ಡ್ ಅದಕ್ಕೆ ಆಕ್ಸಿಸ್ ಇರೋದಿಲ್ಲ, ನನ್ನ ಟ್ರೈನಿಂಗ್ ಪೂರ್ತಿ ಆದಮೇಲೆ ಒರಿಜಿನಲ್ id ಕಾರ್ಡ್ ವಿತ್ ಆಕ್ಸಿಸ್ ಬರುತ್ತೆ. ನೀನು ಇದೆ ಕಂಪನಿ ಅಲ್ಲಿ ಎಂಪ್ಲೋಯ್ ಅಲ್ವಾ, ಯಾಕೆ ಇಷ್ಟು ಚಿಕ್ಕ ವಿಷಯ ಕೂಡ ನಿನಗೆ ಗೊತಿಲ್ವಾ. ಈ ವಿಷಯ ನಾ ಆಗಲೇ ನೀನು ಕೇಳಿದಾಗ ಹೇಳೋಣ ಅಂತಾನೆ ಇದ್ದೆ, ಅಷ್ಟು ಜನರ ಮುಂದೆ ಹೇಳಿದ್ರೆ ನಿನ್ನ ತಪ್ಪು ಮಾಡಿದವಳ ಹಾಗೇ ನೋಡ್ತಾರೆ ಅಂತ ಹೇಳಿಲ್ಲ. ಇಲ್ಲಾ ಅಂದಿದ್ರೆ ಅಲ್ಲೇ ಹೇಳ್ತಾ ಇದ್ದೆ. ಅಕಿರಾ ಮುಖ ಚಿಕ್ಕದಾಗಿ ಬಿಡ್ತು..

ಅವಳ ಹತ್ತಿರ ಹೋಗಿ ನಿಂತೇ. ಅವಳಿಗೆ ಭಯ ಆಗೋಕೆ ಶುರುವಾಯ್ತು.. ಅವಳ ಕಣ್ಣಲ್ಲಿ ತಪ್ಪು ಮಾಡಿದೆ ಅನ್ನೋ ಭಾವನೆ ಕಾಣ್ತಾ ಇತ್ತು.  ಅವಳನ್ನೇ ನೋಡ್ತಾ ಲೇ   ಆಫ್ ಟಿಕೆಟ್ ಇನ್ನೊಂದ್ಸರಿ ಏನಾದ್ರು ವಿಷಯ ಗೊತ್ತಿಲ್ದೆ ಈಗೆ ಇಷ್ಟ ಬಂದ ಹಾಗೇ ಮಾತಾಡಿದೆ ಅಂತ ಇಟ್ಕೋ. ಏನು ಮಾಡೋದಿಲ್ಲ ಡೈರೆಕ್ಟ್ ನಿನಗೆ ಲಿಪ್ ಕಿಸ್ ಕೊಟ್ಟು ಅ ಬಾಯಿ ನಾ ಮುಚ್ಚಿ ಬಿಡ್ತೀನಿ, ಹುಷಾರು, ಅಂತ ಹೇಳಿ id ಕಾರ್ಡ್ ತೆಗೆದುಕೊಂಡು ಅಲ್ಲಿಂದ ಬಂದು ಬಿಟ್ಟೆ..

ಅಕಿರಾ ಫ್ರೆಂಡ್, ಶಿಲ್ಪಾ  ಲೇ ನಿನಗೆ ಮೊದಲೇ ಹೇಳಿದೆ ಬೇಡ್ವೇ ಅವನು ಸರಿ ಇಲ್ಲಾ ಅಂತ ಅನ್ನಿಸುತ್ತೆ ಸುಮ್ನೆ ಅವನ ಹತ್ತಿರ ಜಗಳ ಮಾಡೋಕೆ ಹೋಗಬೇಡ, ಅಂತ ಕೇಳ್ದ ನನ್ನ ಮಾತನ್ನ ನೋಡು ಇವಾಗ ಏನಾಯ್ತು. ನಿನ್ನ ಆಫ್ ಟಿಕೆಟ್ ಅಂತ ಹೇಳಿದ್ದು ಅಲ್ದೆ ಇನ್ನೊಂದು ಸರಿ ಹೀಗೆ ಮಾಡಿದ್ರೆ ಲಿಪ್ ಕಿಸ್ ಕೊಡ್ತೀನಿ ಅಂತ ಹೇಳ್ತಾ ಇದ್ದಾನೆ. ಪಕ್ಕ ಲೋಕಲ್ ಬ್ರಾಂಡ್ ಇದ್ದಾ ಹಾಗೇ ಇದ್ದಾನೆ. ಇನ್ಮೇಲೆ ನೀನ್ ಅವನ ಹತ್ತಿರ ಕೂಡ ಹೋಗಬೇಡ ಅರ್ಥ ಆಯ್ತಾ ನಾನ್ ಹೇಳಿದ್ದು ಬಾ ಅಂತ ಹೇಳಿ ಕರ್ಕೊಂಡು ಹೋದಳು..

ಅದೇ ಕೊನೆ  ಅಕಿರಾ ಮತ್ತೆ ನನ್ನ ಕಣ್ಣೆತ್ತು ನೋಡಲಿಲ್ಲ ಮುಖ ಕೊಟ್ಟು ಮಾತಾಡಿಸಲಿಲ್ಲ, ಅವಳ ಪಾಡಿಗೆ ಅವಳು ಟ್ರೈನಿಂಗ್ ಕ್ಲಾಸ್ ನಾ ಮುಗಿಸಿಕೊಂಡು ಹೋಗ್ತಾ ಇದ್ಲು, ನಾನು ನನ್ನ ಪಾಡಿಗೆ ನನ್ನ ಕೆಲಸ ಏನಿದೆಯೋ ಅದನ್ನ ಮಾಡಿಕೊಂಡು ಇರ್ತಾ ಇದ್ದೆ..

ಬಟ್ ವಿಧಿ ಬೇರೆ ಏನೋ ಇತ್ತು ಅಂತ ಕಾಣಿಸುತ್ತೆ. ನನ್ನ ಟ್ರೈನಿಂಗ್ ಮುಗಿದ ಮೇಲೆ. ನನ್ನ ಒಂದು ಪ್ರಾಜೆಕ್ಟ್ ಅಲ್ಲಿ ಹಾಕಿದ್ರು...

ಮ್ಯಾನೇಜರ್,, ಮಹಿ ಅಂತು ನಿನ್ನ ಟ್ರೈನಿಂಗ್ ಮುಗಿತು ಇವಗ ನಿನ್ನ ಕರ್ಕೊಂಡು ಹೋಗಿ ಒಂದು ಪ್ರಾಜೆಕ್ಟ್ ಟೀಂ ಗೆ ಪರಿಚಯ ಮಾಡಿಸ್ತೀನಿ, ಸೋ ಚೆನ್ನಾಗಿ ವರ್ಕ್ ಮಾಡು.

ನಾನು ಸರಿ ಸರ್ ಅಂತ ಹೇಳಿ ಮ್ಯಾನೇಜರ್ ಜೊತೆ ಪ್ರಾಜೆಕ್ಟ್ ಟೀಂ ಇರೋ ಕಡೆಗೆ ಹೋದ್ವಿ..

ಮ್ಯಾನೇಜರ್, ಪ್ರಾಜೆಕ್ಟ್ ಟೀಂ ಹತ್ತಿರ ಬಂದು, ಮಹಿ ಇದೆ ನಿನ್ನ ಹೊಸ ಪ್ರಾಜೆಕ್ಟ್ ಟೀಂ ನೀನ್ ಇವರ ಜೊತೆ ನೇ ಕೆಲಸ ಮಾಡಬೇಕು ಅಂತ ಹೇಳಿ ಪ್ರಾಜೆಕ್ಟ್ ಟೀಂ ಲೀಡರ್ ನಾ ಕರೆದ್ರು.. ಅವರು ಕರೆದ ಹೆಸರು ಕೇಳಿ ನನಗೆ 10000ವೋಲ್ಟೇಜ್ ಶಾಕ್ ಹೊಡೆದ ಹಾಗೇ ಆಯ್ತು, ಎಸ್ ಅದು ಬೇರೆ ಯಾರು ಅಲ್ಲ ಅಕಿರಾ....

ಮ್ಯಾನೇಜರ್ ಅಕಿರಾ.. ಅಂತ ಕರೆದ್ರು

ವರ್ಕ್ ಮಾಡ್ತಾ ಇದ್ದಾ ಅಕಿರಾ ಮ್ಯಾನೇಜರ್ ಮಾತಿಗೆ ತಿರುಗಿ ನೋಡಿ ಎದ್ದು ನಿಂತು ಹತ್ತಿರ ಬಂದರು 

ಮ್ಯಾನೇಜರ್. ಅಕಿರಾ ಇವತ್ತಿಂದ ನಿಮ್ ಟೀಂ ಗೆ ಹೊಸ ಇಂಟರ್ ನಾ ಹಾಕ್ತಾ ಇದ್ದೀನಿ. 

ಅಕಿರಾ ಹೌದ ಯಾರ್ ಸರ್ ಅವರು ಅಂತ ಕೇಳಿದ್ರು 

ಮ್ಯಾನೇಜರ್ ಹಿಂದೆ ಇದ್ದಾ ನಾನು ಅಕಿರಾಗೆ ಸರಿಯಾಗಿ ಕಾಣಿಸಲಿಲ್ಲ.

ಮ್ಯಾನೇಜರ್ ಹಿಂದೆ ತಿರುಗಿ ನನ್ನ ಅಕಿರಾ ಗೆ ತೋರಿಸಿ ನೋಡಿ ಇವರೆ ಅಂತ ಹೇಳಿದ್ರು 

ಅಕಿರಾಗೆ ನನ್ನ ನೋಡಿ ಶಾಕ್ ಜೊತೆಗೆ ಭಯ ಕೂಡ ಆಯ್ತು..ಹಾಗೇ ನೋಡ್ತಾ ನಿಂತು ಬಿಟ್ಟಳು.

ಮ್ಯಾನೇಜರ್,, ಮಹಿ ಇವರೆ ಅಕಿರಾ ಅಂತ ಈ ಪ್ರಾಜೆಕ್ಟ್ ನಾ ಟೀಂ ಲೀಡರ್ ನೀನು ಇವರ ಹತ್ತಿರಾನೆ ವರ್ಕ್ ಮಾಡಬೇಕು. ಅಂತ ಹೇಳಿ. ಅಕಿರಾ ಮಹಿ ಅಂತ ಸೋ ಇವರಿಗೆ ಏನ್ ವರ್ಕ್ ಮಾಡಬೇಕು ಅಂತ ಹೇಳಿ. ನನಗೆ ವರ್ಕ್ ಇದೆ ಅಂತ ಹೇಳಿ ಅಲ್ಲಿಂದ ಹೊರಟು ಹೋದ್ರು..

ಇಬ್ಬರಿಗೂ ಇದು ಬಿಗ್ ಶಾಕ್. ಇಬ್ಬರನ್ನು ನೋಡಿ ಶಿಲ್ಪಾ ಅಕಿರಾ ಹತ್ತಿರ ಬಂದು ಲೇ ಆಫೀಸ್ ಇದು. ಏನಾದ್ರು ಇದ್ರೆ ಆಮೇಲೆ ಮಾತಾಡೋಣ, ಮೊದಲು ಕೂಲ್ ಆಗು ಅಂತ ಹೇಳಿ. ಶಿಲ್ಪಾ ಮಹಿ ಬನ್ನಿ ನನ್ನ ಜೊತೆ ಅಂತ ಹೇಳಿ ಮುಂದೆ ಹೋದಳು ನಾನು ಅವಳ ಹಿಂದೆ ಹೋದೆ. ಶಿಲ್ಪಾ ಅವಳ ಪಕ್ಕದಲ್ಲಿ ಇದ್ದಾ ಖಾಲಿ ಪ್ಲೇಸ್ ನಾ ತೋರಿಸಿ, ಮಹಿ ನೀವು ಇಲ್ಲೇ ಕೂತ್ಕೊಳ್ಳಿ ಅಂತ ಹೇಳಿದ್ಲು ನಾನ್ ಡೆಸ್ಕ್ ಮೇಲೆ ಲ್ಯಾಪ್ಟಾಪ್ ಇಟ್ಟು ಚೇರ್ ಮೇಲೆ ಕುತ್ಕೊಂಡೆ. 

ಅಕಿರಾ ಇನ್ನೊಂದು ಸೈಡ್ ಇದ್ದಾ ವರ್ಕ್ ಟೇಬಲ್ ಹತ್ತಿರ ಬಂದು ಕುತ್ಕೊಂಡ್ಲು. ಅದೇ ಅವಳ ವರ್ಕ್ ಪ್ಲೇಸ್ ಅಂತ ಅನ್ಕೊಂತೀನಿ..

ಶಿಲ್ಪಾ ಮಹಿ ಒಂದು ಹತ್ತು ನಿಮಿಷ ನಿನಗೆ ವರ್ಕ್ ಏನು ಅಂತ ಹೇಳ್ತಿವಿ ಅಂತ ಹೇಳಿದ್ಲು..


*************************************



P. S