Sacrifice, be a sacrifice, live a selfless life - B.S. Shadakshari Swami in Kannada Moral Stories by Shashi books and stories PDF | ತ್ಯಾಗ, ಬಲಿದಾನ ಆಗು ನಿಸ್ವಾರ್ಥ ಬದುಕು- ಬಿ.ಎಸ್. ಷಡಾಕ್ಷರಿ ಸ್ವಾಮಿ

The Author
Featured Books
Categories
Share

ತ್ಯಾಗ, ಬಲಿದಾನ ಆಗು ನಿಸ್ವಾರ್ಥ ಬದುಕು- ಬಿ.ಎಸ್. ಷಡಾಕ್ಷರಿ ಸ್ವಾಮಿ

ತ್ಯಾಗ, ಕರ್ಮ ಮತ್ತು ಕಲಿಯುಗದ ವಾಸ್ತವ - ಬಿ.ಎಸ್. ಷಡಾಕ್ಷರಿ ಸ್ವಾಮಿ -  ಶಶಿಯ ಯೋಚನಾ ತಾತ್ಪರ್ಯ...

"ಧರ್ಮೋ ರಕ್ಷತಿ ರಕ್ಷಿತಃ" ಎಂಬ ಮಾತು ಪ್ರಾಮಾಣಿಕರಿಗೆ ಕೇವಲ ಆಶ್ವಾಸನೆಯೇ? ಅಥವಾ ಈ ಕಲಿಯುಗದಲ್ಲಿ ಅಥವಾ ಭಾರತದಲ್ಲಿ ಪ್ರಾಮಾಣಿಕತೆ ಒಂದು ಶಾಪವೇ?

ಇನ್ನೇನು, ಸರಿಯಾಗಿ ಒಂದು ವರ್ಷದ ಹಿಂದೆ ನಮ್ಮನ್ನಗಲಿದ, ಬದುಕಿನುದ್ದಕ್ಕೂ ಸತ್ಯ ಮತ್ತು ಧರ್ಮಕ್ಕಾಗಿ ಹೋರಾಡಿ ತ್ಯಾಗಮಯ ಜೀವನ ನಡೆಸಿದ  ದುರಂತ ಉದ್ಯಮಿ  ಬಿ.ಎಸ್. ಷಡಾಕ್ಷರಿ ಸ್ವಾಮಿ ಅವರ ದುರಂತ ಬದುಕು ಹೇಳುತ್ತೇನೆ ಕೇಳಿ...

ಇದು ಕೇವಲ ಒಬ್ಬ ಇಂಜಿನಿಯರ್‌ನ ಜೀವನ ಕಥೆಯಲ್ಲ, ಬದಲಿಗೆ ಸಮಕಾಲೀನ ಸಮಾಜದಲ್ಲಿ ನೆಲೆಗೊಂಡಿರುವ ಭ್ರಷ್ಟಾಚಾರದ ಮಡುವಿನಲ್ಲಿ ನಿಷ್ಠುರ ಪ್ರಾಮಾಣಿಕತೆ ಹೇಗೆ ನಲುಗುತ್ತದೆ ಎಂಬುದಕ್ಕೆ ಒಂದು ಜೀವಂತ ಸಾಕ್ಷಿ.

ಬಾಲ್ಯ 

ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಬಿಟ್ಟಸಂದ್ರ ಪುಟ್ಟೇಗೌಡ ಪಾಳ್ಯದಲ್ಲಿ ಶರಣ ದಂಪತಿಗಳಾದ ಶ್ರೀ ಸದಾಶಿವಯ್ಯ ಮತ್ತು ಶ್ರೀಮತಿ ಶರಣೆ ಗಂಗಮ್ಮ ಅವರ ೯ ನೆ ಮಗುವಾಗಿ ೭ ನೆ ಸುಪುತ್ರ ರಾಗಿ ಜನಿಸಿದರು...ತುಂಬು ಕುಟುಂಬ ಮನೆ ತುಂಬ ಮಕ್ಕಳು ಬಡತನ...

ನವೆಂಬರ್ ೧೦ ೧೯೬೧ ರಾತ್ರಿ ಕಾರ್ಮೋಡ ದ ಮಿಂಚು ಸಿಡಿಲು ಆಹ್ ತಣ್ಣನೆ ರಾತ್ರಿ ೮:೧೫ ಕ್ಕೆ ಶಾಂತ ಮೂರ್ತಿ , ಕರುನಾಳು,ಕಲಿಯುಗದಲ್ಲಿ  ಸದಾ ಶೋಷಣೆ, ದೌರ್ಜನ್ಯ, ರಾಜಕೀಯ, ಬ್ರಷ್ಟ ವ್ಯವಸ್ಥೆ ಗೆ ಸಾಕ್ಷಿ ಆಗಿ ಇರುವ ಸಮಾಜದಲ್ಲಿ ನೈತಿಕತೆ ಯ ಪ್ರತಿಧ್ವನಿ ಆಗಿ ಶ್ರೀ ಬಿ ಎಸ್ ಷಡಕ್ಷರಿ ಸ್ವಾಮಿ ಅವರ ಜನನ ಆಯಿತು...

ನಂತರ ಸೂರ್ಯನಷ್ಟೇ ಚುರುಕು , ಪಿತೃ ವಾಕ್ಯ ಪರಿಪಾಲಕನ್ನಾಗಿ ತನ್ನ ಬಾಲ್ಯ ದಿಂದ ಯುವನ್ನ ವನ್ನು ದಾಟಿದರು


ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಂಡೆ ಮಠದಲ್ಲಿ ಮಾಡಿದರು

ನಂತರ ಧಾರವಾಡದಲ್ಲಿ ತನ್ನ  ಬಿಎಸ್ಸಿ, ತುಮಕೂರಿನ ಸಿದ್ಧಗಂಗಾ ಇನ್ಸ್ಟಿಟು of ಟೆಕ್ನಾಲಜಿ ಅಲ್ಲಿ ಬಿ. ಇ ಮಾಡಿದರು

. ⚔️ ಕಷ್ಟದಿಂದ ಕಲೆತ ವಿದ್ಯೆ: ಸಹೋದರ ಪ್ರೇಮದ ಕಾಣಿಕೆ

ಷಡಾಕ್ಷರಿ ಸ್ವಾಮಿಗಳು ೧೯೬೧ರ ನವೆಂಬರ್ ೧೦ರಂದು ಮಾಗಡಿ ತಾಲ್ಲೂಕಿನ ಬಿಟ್ಟಸಂದ್ರ ಗ್ರಾಮದಲ್ಲಿ ಜನಿಸಿದರು. ಹತ್ತು ಮಕ್ಕಳಿರುವ ಕುಟುಂಬದಲ್ಲಿ ಬಡತನದ ಬೇಗೆ ತೀವ್ರವಾಗಿತ್ತು. ಅವರ ಬಾಲ್ಯ ಹೋರಾಟಮಯವಾಗಿತ್ತು. ಆದರೆ, ಅವರ ಪ್ರೀತಿಯ ಸಹೋದರರ ತ್ಯಾಗಮಯ ಬೆಂಬಲ ಮತ್ತು ನಿರಂತರ ಪ್ರೋತ್ಸಾಹದಿಂದ ಅವರು ದ್ವಿ-ಪದವಿ (Double Graduation) ಮತ್ತು ಸಿವಿಲ್ ಇಂಜಿನಿಯರಿಂಗ್ ಪದವಿಗಳನ್ನು ಪಡೆದರು. ಈ ವಿದ್ಯೆಯೇ ಬಡತನದ ಕೋಟೆಯನ್ನು ಭೇದಿಸುವ ಅವರ ಆಯುಧವಾಗಿತ್ತು. ಇದು ಕೇವಲ ಓದಲ್ಲ, ಸಹೋದರರ ನಿಸ್ವಾರ್ಥ ಪ್ರೇಮಕ್ಕೆ ಸಿಕ್ಕ ಫಲವಾಗಿತ್ತು.
ಷಡಕ್ಷರಿ ಅವರಿಗೆ ಇದರ ಬಗ್ಗೆ ಬಹಳ ಕೃತಜ್ಞತೆ ಇತ್ತು...

2. 💔 ಭ್ರಷ್ಟ ವ್ಯವಸ್ಥೆಗೆ ಮುಖಾಮುಖಿ: ಆದರ್ಶದ ನಿರ್ಧಾರ

ಶಿಕ್ಷಣ ಪೂರ್ಣಗೊಳಿಸಿ, ಎ.ಪಿ.ಎಂ.ಸಿ.ಯಲ್ಲಿ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಆದರೆ, ಪ್ರಾಮಾಣಿಕತೆ ಅವರ ಮೈಯಲ್ಲಿತ್ತು. ಸರ್ಕಾರಿ ವ್ಯವಸ್ಥೆಯಲ್ಲಿನ  ಭ್ರಷ್ಟ ಅಧಿಕಾರಿಗಳು ಮತ್ತು ಬಡ ರೈತರ  ಹಣವನ್ನು ಲೂಟಿ ಮಾಡುವ ಪ್ರವೃತ್ತಿ ಅವರಿಗೆ ಸಹಿಸಲಾಗಲಿಲ್ಲ. ಹಣಕ್ಕಾಗಿ ಜನರನ್ನು ಹಿಂಸಿಸುವ, ಕೆಲಸಕ್ಕಾಗಿ ಲಂಚ ಕೇಳುವ ಈ ವ್ಯವಸ್ಥೆಯನ್ನು ತೊರೆದು, ಆತ್ಮಸಾಕ್ಷಿಗೆ ಬೆಲೆ ಕೊಟ್ಟು ತಮ್ಮ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಈ ನಿರ್ಧಾರ, ಆರ್ಥಿಕವಾಗಿ ನಷ್ಟವಾದರೂ, ಆತ್ಮಗೌರವ ಮತ್ತು ಆದರ್ಶಗಳನ್ನು ಎತ್ತಿ ಹಿಡಿದ ಧೈರ್ಯದ ಹೆಜ್ಜೆಯಾಗಿತ್ತು.

ಸರ್ಕಾರಿ ಕೆಲಸ ಬಿಟ್ಟ ನಂತರ, ತಮ್ಮದೇ ಆದ ಗುತ್ತಿಗೆ ಕೆಲಸ ಆರಂಭಿಸಿದರು.ಯಾರ ಸಹಾಯವೂ ಇಲ್ಲ, ತನ್ನ ತಾಯಿಯನ್ನು ಕಾಡಿ ಬೇಡಿ ೫೦೦ ರೊ ಅನ್ನು ತಂದು ಗುತ್ತಿಗೆ ರಿಜಿಸ್ಟ್ರೇಷನ್ ಮಾಡಿಸಿದರು .. ಅದೇ ರೀತಿ ಅವರ ಹಿತೈಷಿಗಳು ಆಗು ಹಲವರು ಅವರ ಪ್ರಥಮ ಕೆಲಸದಲ್ಲಿ ಪ್ರೋತ್ಸಾಹ ಕೊಟ್ಟರು...

ಸರ್ಕಾರಿ ಕಿರುಕುಳದ ಪುನರಾವರ್ತನೆ: ಗ್ರಾಮದ ಬಳಿ ಸೇತುವೆ ಮತ್ತು ರಸ್ತೆ ಕೆಲಸ ಮಾಡುವಾಗಲೂ,ಕೆಲ  ಭ್ರಷ್ಟ  ಸರ್ಕಾರಿ ಇಂಜಿನಿಯರ್‌ಗಳು ಇವರ ಕಷ್ಟದ ದುಡಿಮೆಯ ಹಣವನ್ನು ಲೂಟಿ ಮಾಡಿ, ಮಾನಸಿಕವಾಗಿ ಹಿಂಸಿಸಿದರು. ಅಂತಹ ದುಷ್ಟ ಅಧಿಕಾರಿಗಳ ಪೈಕಿ ಒಬ್ಬನಿಗೆ ಪತ್ನಿ ಆತ್ಮಹತ್ಯೆ ಮತ್ತು ಮಗಳ ಅಪಘಾತದಲ್ಲಿ ಸಾವು ಸಂಭವಿಸಿದ್ದು, ಇದು ಕರ್ಮ ಸಿದ್ಧಾಂತದ ಒಂದು ಮುಖವನ್ನು ತೋರಿಸುತ್ತದೆ.ಇಂದು ಸರ್ಕಾರಿ ಗುತ್ತಿಗೆ ಮಾಡಲು ಹೋಗಿ ಹಲವಾರು ಪ್ರಾಮಾಣಿಕ ಗುತ್ತಿಗೆದಾರರು ಆತ್ಮಹತ್ಯೆ ಕೂಡ ಮಾಡಿ ಕೊಂಡಿದ್ದಾರೆ ಮಾಡಿ ಕೊಳ್ಳುತ್ತಾ ಇದ್ದಾರೆ 


ಆದರೆ ಇಂದು ಕೂಡ ಸರಕಾರಿ ಕೆಲಸದಲ್ಲಿ ನಿಸ್ವಾರ್ಥ ಆಗಿ ಪ್ರಾಮಾಣಿಕವಾಗಿ , ದೇಶದ ಸಲುವಾಗಿ , ದೇಶ ಕಾಯುತ್ತಾ ದೇಶದ ಒಳಿತಿಗಾಗಿ ದುಡಿದು, ದುಡಿಯುತ್ತಾ ಇರುವವರು ಬಹಳಷ್ಟು ಜನ ಇದ್ದಾರೆ , ಇಂದು ಕೂಡ ಇದ್ದಾರೆ, ಆದರೆ ಇಂತಹ ಜನರಿಂದ ವ್ಯವಸ್ಥೆಗೆ ಕೆಟ್ಟ ಹೆಸರು ಮತ್ತು ಕಪ್ಪು ಚುಕ್ಕಿ...ಮತ್ತು ಯಾರಿಗೂ ತೊಂದರೆ ಆಗದ ರೀತಿ ಯಾರಿಗೂ ಅನ್ಯಾಯ ಮಾಡದೆ ಬದುಕಿದ ಎಷ್ಟೋ  ಸರ್ಕಾರಿ ನೌಕರರು, ಅಧಿಕಾರಿಗಳು ಇದ್ದಾರೆ ಮತ್ತು ವ್ಯವಸ್ಥೆ ಉಳಿದಿರುವುದು ಇಂಥವರಿಂದ...


ಇದರಿಂದ ಅಲ್ಲವೇ ಭಾರತ ಅತ್ಯಂತ ಕ್ರೂರ ದಾಳಿಗಳಿಗೆ ಒಳಗಾದರೂ ಪ್ರಪಂಚದ ೨೦೦ ದಾಳಿಗಳಿಗೆ ಒಳಗಾಗಿ ಕೂಡ ಇಂದು ಒಂದು ದೇಶವಾಗಿ ಇರುವುದು...

ಖಾಸಗಿ ವಲಯದ ನಂಬಿಕೆದ್ರೋಹ: ಸರ್ಕಾರಿ ಕೆಲಸ ಬಿಟ್ಟರೂ, ಖಾಸಗಿ ವಲಯದಲ್ಲಿ ವಂಚನೆ ತಪ್ಪಲಿಲ್ಲ. ಅನೇಕ ಮಂದಿ ತಮ್ಮ ಕೆಲಸ ಮಾಡಿಸಿಕೊಂಡು, ಹಣ ನೀಡದೆ ಮೋಸ ಮಾಡಿದರು. ಮುಖ್ಯವಾಗಿ, ಕೊಜೇಂದ್ರ ಎಂಬ  ವ್ಯಕ್ತಿ ೧೯೯೦ರಲ್ಲೇ ಬರೋಬ್ಬರಿ ೧೫ ಲಕ್ಷ ರೂ. ವಂಚಿಸಿದ್ದ.

ಅದೇ ರೀತಿ ಖಾಸಗಿ ಸಂಘ ಸಂಸ್ಥೆ ಅಲ್ಲಿ ಒಬ್ಬ ಕರ್ನಾಟಕದ ಪ್ರಸಿದ್ಧ ಮಾಜಿ ಮಹಿಳಾ ರಾಜಕಾರಣಿ ಒಬ್ಬರು ಒಂದು ಸಂಘ ಸಂಸ್ಥೆ ಅಲ್ಲಿ ದ್ವೇಷ ದಿಂದ ಷಡಕ್ಷರಿ ಸ್ವಾಮಿ ಅವರ ಕೆಲಸವನ್ನು ಹತ್ತಿಕಿ ಕೊಡಬಾರದ ಕಿರುಕುಳ ಕೊಟ್ಟರು ಮತ್ತು ಷಡಕ್ಷರಿ ಸ್ವಾಮಿ ಅವರಿಗೆ ಬಹಳ ನಷ್ಟ ಉಂಟು ಮಾಡಿದರು...


ಈ ಕೊಜೇಂದ್ರ  ಎಂಬ ವಂಚಕನಾಗಲಿ, ಆತನ ಮಕ್ಕಳಾಗಲಿ ಇಂದಿಗೂ ಸುಖವಾಗಿರುವುದು ಮತ್ತು ಒಳ್ಳೆ ಉದ್ಯೋಗದಲ್ಲಿ ಇರುವದು ನೋಡಿದರೆ, ಸ್ವಾಮಿಗಳ ರಕ್ತ-ಬೆವರಿನಿಂದ ಕಟ್ಟಿದ ಮನೆಯಲ್ಲಿ ಯಾವುದೇ ಶಿಕ್ಷೆಯಿಲ್ಲದೆ ನೆಮ್ಮದಿಯಿಂದಿರುವುದು, ನಿಜಕ್ಕೂ "ದೇವರ ನ್ಯಾಯ"ದ ಕುರಿತು ತೀವ್ರ ಪ್ರಶ್ನೆಗಳನ್ನು ಮೂಡಿಸುತ್ತದೆ.
ಈಗೆ ಹಲವರು ಮಂದಿ ಷಡಕ್ಷರಿ ಸ್ವಾಮಿ ಅವರಿಂದ ಕೆಲಸ ಮಾಡಿಸಿಕೊಂಡು ಹಣ ನೀಡದರಿಂದ ನಂತರ ಖಾಸಗಿ ಒಪ್ಪಂದ , ಗೃಹನಿರ್ಮಣವನ್ನು ಸಂಪೂರ್ಣ ೨೦೦೨ ರಿಂದ ನಿಲ್ಲಿಸಿಬಿಟ್ಟರು...

ಮದುವೆ 

ಷಡಕ್ಷರಿ ಸ್ವಾಮಿ ಅವರು ಮಾಡುವೆ ೧೯೯೨ ಅಲ್ಲಿ ಮಾಡುವೆ ಆದರು...

ಸಕಲೇಶಪುರದ ಪ್ರಸಿದ್ಧ ಕಾಫಿ ಬೆಳೆಗಾರು ಆಗಿದ್ದ ಶ್ರೀ ದೇವಪ್ಪ ಗೌಡರು ಮತ್ತು ಪಟೇಲ್ ಮಲ್ಲೇಗೌಡರ ಮೊಮ್ಮಗಳು ಪಟೇಲ್ ಚೇರ್ಮನ್ ಶ್ರೀ ಶಾಂತಪ್ಪ ಗೌಡರ ಏಕೈಕ ಮಗಳೊಂದಿಗೆ ವಿವಾಹ ಆದರು.

ನಂತರ ತನ್ನ ಸಹೋದರರ ಮನೆಯಲ್ಲಿ  ಆಶ್ರಯ ದೊರೆಯಿತು ಅಲ್ಲಿಂದ ಶುರುವಾದ ಅವರ ವೈವಾಹಿಕ ಜೀವನ  ನಂತರ ೬ ತಿಂಗಳ ನಂತರ ಅವರು ಅವರ ಸ್ನೇಹಿತರಾದ ಹಲವಾರು ಸಂದರ್ಭದಲ್ಲಿ ಅವರಿಗೆ ಒಳಿತು ಮಾಡಿ ಕೊನೆಗಾಲದಲ್ಲೂ ಅವರ ಬಿಸಿನೆಸ್ ಗೆ ಬೆನ್ನೆಲುಬಾಗಿ ನಿಲ್ಲುವ ಯೋಜನೆ ಅಲ್ಲಿ ಇದ್ದ ಮತ್ತು ಆತ್ಮೀಯ ನೈಜ ಸ್ನೇಹಿತರೊಬ್ಬರ  ಸಹಾಯ ದೊರಕಿ ಬಸವೇಶ್ವರ ನಗರದ ಮನೆಯಲ್ಲಿ ಸಂಸಾರ ಶುರು ಮಾಡಿದರು...


4. 🙏 ದಿವ್ಯ ಮಾರ್ಗದರ್ಶನದಲ್ಲಿ ಸಮರ್ಪಣಾ ಭಾವ

ತಮ್ಮ ಆತ್ಮೀಯ ಸಹೋದರರ ಮಾರ್ಗದರ್ಶನ ಮತ್ತು ಧಾರ್ಮಿಕ ಪ್ರೇರಣೆಯಿಂದ, ಷಡಾಕ್ಷರಿ ಸ್ವಾಮಿಗಳು ತಮ್ಮ ಬದುಕಿನ ಅತಿದೊಡ್ಡ ಮತ್ತು ಗೌರವಾನ್ವಿತ ದಾರಿಯನ್ನು ಕಂಡುಕೊಂಡರು. 'ನಡೆದಾಡುವ ದೇವರು' ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ದಿವ್ಯ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ  ಪೂರ್ವ ಪುಣ್ಯ ಫಲದಂತೆ ಸಿದ್ಧಗಂಗಾ ಮಠದ ಮತ್ತು ರಕ್ಷಣಾ ವಲಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಇಸ್ರೋ ಮಹತ್ವದ ನಿರ್ಮಾಣ ಕಾರ್ಯಗಳನ್ನು ಆರಂಭಿಸಿದರು.

ಅವರ ಮಹಾನ್ ನಿರ್ಮಾಣ ಕಾರ್ಯಗಳ ಪಟ್ಟಿ:

ಹೊನ್ನರಾಯನಹಳ್ಳಿ ಬ್ರಿಡ್ಜ್

ಮಾಗಡಿ ತಾಲೂಕಿನಲ್ಲಿ ರಸ್ತೆಗಳು

ಎಪಿಎಂಸಿ ಮಾರುಕಟ್ಟೆ

ಸರ್ವಜ್ಞ ಶಿಕ್ಷಣ ಸಂಸ್ಥೆಯ ಬಿಲ್ಡಿಂಗ್

ಸಿದ್ಧಗಂಗಾ ಮಠ ವಿಜಯನಗರ ಶಾಖೆ.

ಸಿದ್ಧಗಂಗಾ ಪಬ್ಲಿಕ್ ಸ್ಕೂಲ್, ಚಂದ್ರ ಲೇಔಟ್ – ಮುಸ್ಲಿಂ ಬಾಹುಳ್ಯದ, ಅತ್ಯಂತ ಕಠಿಣವಾದ ಭೂಪ್ರದೇಶದಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿ ಪೂರ್ಣಗೊಳಿಸಿದರು.

ಸಿದ್ಧಗಂಗಾ ಸ್ಕೂಲ್, ವಿಜಯನಗರ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನ ೧೦ ಕ್ಕಿಂತ ಹಲವು ಪ್ರಮುಖ ಕಟ್ಟಡಗಳು ಮತ್ತು ನಿರ್ಮಾಣಗಳು...

ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್, ಬಾಗೆ.

ಜೆಎಸ್‌ಎಸ್ ನರ್ಸಿಂಗ್ ಕಾಲೇಜು, ಸಕಲೇಶಪುರ.

ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜು, ನೆಲಮಂಗಲ – ಇಲ್ಲಿ ಸ್ಥಳೀಯ ಗೂಂಡಾಗಳು ಕಾರಿನ ಗಾಜು ಒಡೆದು ೮ ಲಕ್ಷ ರೂ. ಕಳವು ಮಾಡಿದ್ದರು ಮತ್ತು ಇಲ್ಲಿ ಹಲವಾರು ಸಲಿ ಸ್ವಾಮಿ ಅವರ ಸೆಂಟ್ರಿಂಗ್ ಶೀಟ್ ಕಳ್ಳತನ ಆಗಿತ್ತು.

ಸಿದ್ಧಗಂಗಾ ಮಠದ    ಆವರಣದೊಳಗಿನ ಅನೇಕ ಕಟ್ಟಡಗಳು.

ಶರಣ ಸೇವಾ ಸಮಾಜದ ಚೌಲ್ಟ್ರಿ.

ಈಗೆ ಹಲವಾರು ಮನೆಗಳು , ಕಟ್ಟಡಗಳು ಮತ್ತು ಹಲವಾರು ನಿರ್ಮಾಣ ಕೆಲಸಗಳು ಮಾಡಿದ್ದರು..

ಸರಿಸುಮಾರು ೪೦ — ೫೦ ಕೋಟಿ ರೂ.ಗಳ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಿದರೂ, ಈ ಎಲ್ಲ ಕೆಲಸಗಳಿಗಾಗಿ ಅವರು ತಮ್ಮ ಪೋಷಕರಿಂದಾಗಲಿ, ಯಾರಿಂದಾಗಲಿ ಒಂದು ರೂಪಾಯಿ ಹೂಡಿಕೆ ಪಡೆದಿರಲಿಲ್ಲ. ಎಲ್ಲವನ್ನೂ ಸಾಲದ ಮೇಲೆ ಮಾಡಿದ್ದು, ಅವರ ಶ್ರಮ, ನಿಷ್ಠೆ ಮತ್ತು ನಂಬಿಕೆಗೆ ಸಾಕ್ಷಿಯಾಗಿತ್ತು.ಇಂದಿಗೆ ಅವರು ಮಾಡಿದ ಕೆಲಸಗಳ ಮೌಲ್ಯ ನೂರು ಕೋಟಿ ದಾಟಬಹುದು...

5. 💰 ರಾಷ್ಟ್ರ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ: ಫಲವೇನು?.


ಷಡಾಕ್ಷರಿ ಸ್ವಾಮಿಗಳು ಕೇವಲ ಗುತ್ತಿಗೆದಾರರಾಗಿರಲಿಲ್ಲ, ಅವರು ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದರು.

ಉದ್ಯೋಗ ಸೃಷ್ಟಿ: ತಮ್ಮ ಜೀವನಾವಧಿಯಲ್ಲಿ ೧೦೦ಕ್ಕೂ ಹೆಚ್ಚು ಜನರಿಗೆ ಉದ್ಯೋಗಕ್ಕೆ ಕಾರಣ ಆದರು...

ಅವರಿಗೆ ೧೯೯೪ ರಲ್ಲಿ ವಿಶ್ವದ ಪ್ರಸಿದ್ಧ ದೇಶ ಕೆನಡಾ ಅಲ್ಲಿ ಕೆನಡಾದ ಪ್ರತಿಷ್ಠಿತ ಸಂಸ್ಥೆ ಅಲ್ಲಿ  ಉದ್ಯೋಗ ಲಭಿಸಿತು ಆದರೆ ದೇಶ ಪ್ರೇಮ, ಸಮಾಜದ ಮೇಲಿನ ಕಳಕಳಿ ಮತ್ತು ದೇಶಕ್ಕೆ ಒಬ್ಬ ಒಳ್ಳೆ ಉದ್ಯಮಿ ಆಗಿ ಬೆಳೆಯಬೇಕು ಎಂಬ ಆಶಯ ಮತ್ತು ಹೋಗಲು ೨ ಲಕ್ಷ ರೊ ಇಲ್ಲದ ಕಾರಣ ಹೋಗಲಿಲ್ಲ...ಇದು ಅವರು ಜೀವನದಲ್ಲಿ ಮಾಡಿದ ಅತಿ ದೊಡ್ಡ ತಪ್ಪು..ಅಂದು ಅವರು ಕೆನಡಾ ಗೆ ಹೋಗಿದ್ದರೆ ಇಂದು ಅವರು ಅಮೆರಿಕದ ಪ್ರಜೆ ಆಗಿ ನೆಮ್ಮದಿ ಆಗಿ ದೀರ್ಘಾಯುಷಿ ಆಗಿ ಬದುಕ ಬಹುದಾಗಿತ್ತು...

ಆರ್ಥಿಕ ಕೊಡುಗೆ: ಸರ್ಕಾರಕ್ಕೆ ೧ ಕೋಟಿ ರೂ.ಗೂ ಹೆಚ್ಚು ತೆರಿಗೆ ಪಾವತಿಸಿದರು. ಬ್ಯಾಂಕುಗಳಿಗೆ ೨-೩ ಕೋಟಿ ರೂ. ಬಡ್ಡಿ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಗೆ ಸುಮಾರು ೧ ಕೋಟಿ ರೂ. ಬಡ್ಡಿ ಪಾವತಿಸಿದರು.

ಇಷ್ಟೆಲ್ಲ ಮಾಡಿದರೂ, ಅವರ ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಇರಲಿಲ್ಲ. ಒಂದು  ಮನೆ ಕಟ್ಟಿದ ನಂತರ, ಒಂದು ಮನೆಯೇ ಅವರಿಗೆ ಶಾಪ ಆಯಿತು, ಖಾಸಗಿ ಧಾರ್ಮಿಕ ಸಂಸ್ಥೆ ಅಲ್ಲಿ ಇದ್ದ ನಿವೃತ್ತ ಅಧಿಕಾರಿಗಳು ಖಾಸಗಿ   ಸಂಸ್ಥೆಗಳ ಮೂಲಕ ಅವರ ಅವಕಾಶಗಳನ್ನು ಕಸಿದು, ಷಡಕ್ಷರಿ ಸ್ವಾಮಿ ಅವರ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿ ದೇವರಿಗೆ ಕಿವಿ ಚುಚ್ಚಿ ೭ ತಿಂಗಳು ಅವರನ್ನು ಉದ್ಯೋಗ ಇಂದ  ದೂರವಿಟ್ಟರು ಮತ್ತು ಆಹ್ ವಿಶೇಷ ದೇವರೇ ನೆಲಸಿರುವ ಸೇವಾ ಸ್ಥಳದಿಂದ ದೂರ ಮಾಡಲು ಎಲ್ಲಾ ಪ್ರಯತ್ನ ಮಾಡಿದರು. ಸತತ ೭ ತಿಂಗಳ ಕಾಲ ನಿರುದ್ಯೋಗಿಗಳಾದರು ಮತ್ತು ಅವರು ಮನೆ ಕಟ್ಟಿದ ಕ್ಷಣ ದಿಂದ ತನ್ನ ಸಾವಿನ ವರೆಗೂ ಹಲವಾರು ಕಷ್ಟ ನಷ್ಟ ನೋವು ಅನುಭವಿಸಿದರು ... ಇದು ವಿಜ್ಞಾನಕ್ಕೆ ಸವಾಲು ಮತ್ತು ಆಧುನಿಕ ಯುಗದಲ್ಲೂ ನಂಬಲು ಸಾಧ್ಯವೇ ಇಲ್ಲದ ವಿಷಯಗಳಿಂದ ಅವರ ಜೀವನ ನೋವು ನಿಂದ ಕೂಡಿತ್ತು...


ಸಕಲೇಶಪುರದ ಪ್ರತಿಷ್ಠಿತ ಸಂಸ್ಥೆಯ ಯೋಜನೆಯಲ್ಲಿ ಅವರಿಗೆ ಜೀವನದ ಅತಿದೊಡ್ಡ ಮತ್ತು ಅಪಾರ ನಷ್ಟ ಸಂಭವಿಸಿತು. ಅಪಾರ ನಷ್ಟವಾದರೂ, ಸಾಲ ಮಾಡಿ, ಸಂಸ್ಥೆಯ ಮೇಲಿನ ಭಕ್ತಿಗಾಗಿ , ಕುಟುಂಬದ ಮರ್ಯಾದೆ ಗಾಗಿ , ಧರ್ಮದ ಹಾದಿ ಗೋಸ್ಕರ , ಇಬ್ಬರು ಕಂಟ್ರಾಕ್ಟರ್ ಅರ್ಧಕ್ಕೆ ಬಿಟ್ಟ ಕೆಲಸವನ್ನು ಬಿಟ್ಟು ಹೋದರು ಕೂಡ ತನ್ನ ಮಕ್ಕಳ ಮನೆಯ ಭವಿಷ್ಯವನ್ನು ಚಿಂತಿಸದೆ ತನ್ನ ಮಡದಿಯ ಚಿನ್ನ, ಮನೆ , ಸರ್ವಸ್ವನ್ನು ಅಡ ಇಟ್ಟು ಯೋಜನೆ ಅನ್ನು ಪೂರ್ಣ ಮಾಡಿದರು. ಆದರೆ, ಈ ನಿಸ್ವಾರ್ಥ ಸೇವೆಯಾಗಲಿ, ತ್ಯಾಗವಾಗಲಿ ಎಂದಿಗೂ ಮಾನ್ಯತೆ ಪಡೆಯಲಿಲ್ಲ ಅಥವಾ ಸಮಾಜ ಅಥವಾ ಆಹ್ ಕ್ಷಣದಿಂದ ಆಹ್  ಧರ್ಮ ಸಂಸ್ಥೆ ಕೂಡ ಗುರುತಿಸಲಿಲ್ಲ.. ತನ್ನ ಮಗನ ವಿದ್ಯಾಭ್ಯಾಸಕ್ಕೆ ನೆರವು ಬೇಡಿದಾಗಲೂ ಅದನ್ನು ನಿರಾಕರಿಸಲಾಯಿತು, ಇದು ಅವರ ಕೆಟ್ಟ ಸಮಯವೂ ಗೊತ್ತಿಲ್ಲ ಅಥವಾ ವಿಧಿ ಆಟಾಟೋಪವೋ ತಿಳಿಯದು.ಇಂದಿಗೂ ಕೂಡ ಅದರ ಸಾಲದ ಫಲವಾಗಿ ಅವರ ಇಡೀ ಕುಟುಂಬ ನರಳಿ ನೀರಾಗಿದೆ...ಇಂದು ಷಡಕ್ಷರಿ ಸ್ವಾಮಿ ಮಾಡಿದ ಮಹತ್ತ ತ್ಯಾಗ ಯಾವ ಧರ್ಮ ಕರ್ಮ ದೇವರು ಕೂಡ ಕಾಪಾಡಲಿಲ್ಲ...

6. 😥 ಕಲಿಯುಗದ ವಾಸ್ತವ: ದಲಿತ ಕವಿಯ ನುಡಿ
ಈ ದುಃಸ್ಥಿತಿಯನ್ನು ನೋಡಿದಾಗ, ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸಾವರ್ಕರ್, ಗಾಂಧೀಜಿ ಮತ್ತು ಎಲ್ಲ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ವ್ಯರ್ಥವಾಯಿತೇ ಎಂಬ ಪ್ರಶ್ನೆ ಮೂಡುತ್ತದೆ.

ದಲಿತ ಕವಿ ಡಾ. ಸಿದ್ಧಲಿಂಗಯ್ಯನವರ ಪ್ರಸಿದ್ಧ ಗೀತೆ ಇಲ್ಲಿ ನೆನಪಿಗೆ ಬರುತ್ತದೆ:

"ಯಾರಿಗೆ ಬಂತು ಸ್ವತಂತ್ರ, ೪೭ರ ಸ್ವಾತಂತ್ರ್ಯ   , ಪೊಲೀಸರ ಬೂಟಿಗೆ ಬಂತು, ಶ್ರೀಮಂತರ ಜೇಬಿಗೆ ಬಂತು"


7. 🔱 ಕರ್ಮ, ದೇವರು ಮತ್ತು ಅಂತಿಮ ಪ್ರಶ್ನೆ


ಭೂಗಳ್ಳರ ದೌರ್ಜನ್ಯ: ಸಿದ್ಧಗಂಗಾ ಮಠದ ಆಸ್ತಿ ರಕ್ಷಣೆಗೆ ಕಾಂಪೌಂಡ್ ಹಾಕುವಾಗ ಸ್ಥಳೀಯ ಗೂಂಡಾ ಮತ್ತು ಭೂಗಳ್ಳನಿಂದ ಕೊಲೆ ಯತ್ನಕ್ಕೂ ಒಳಗಾಗಿದ್ದರು. ಆದರೆ ದೇವರ ದಯೆ ಮತ್ತು ಶ್ರೀಗಳು ಮಧ್ಯ ಪ್ರವೇಶಿಸಿದಕ್ಕೆ ಅವರು ಉಳಿದರು...

ಇನ್ನೊಬ್ಬ ಭ್ರಷ್ಟ, ನಿವೃತ್ತ ಸರ್ಕಾರಿ ಉದ್ಯೋಗಿ, ಹಣಕಾಸು ಮಾಫಿಯಾ ನಡೆಸುತ್ತಿದ್ದ ಈ ವ್ಯಕ್ತಿ, ಸ್ವಾಮಿಗಳ ರಕ್ತ-ಬೆವರಿನಿಂದ ಸಂಪಾದಿಸಿದ್ದ ಏಕೈಕ ನಿವೇಶನವನ್ನೇ ಸ್ವಾಮಿ ಅವರ ಬಾಲ್ಯ ಸ್ನೇಹಿತನ ಜೊತೆ ಗೂಡಿ ಕಸಿದು ಕೊಂಡ! ಈ  ಪರಮ ಪಾಪಿ ಮತ್ತು ಅವನ ಮಕ್ಕಳು ಇಂದಿಗೂ ಶಿಕ್ಷೆಗೊಳಗಾಗದಿರುವುದು "ದೇವರ ನ್ಯಾಯಸಮ್ಮತತೆ"ಯನ್ನೇ ಪ್ರಶ್ನಿಸುವಂತೆ ಮಾಡುತ್ತದೆ ಮತ್ತು ಕರ್ಮ ಮತ್ತು ದೇವರ ಬಗ್ಗೆ ಪ್ರಶ್ನೆ ಮೂಡುತ್ತದೆ... ಆಹ್ ವ್ಯಕ್ತಿ ಸರ್ಕಾರಿ ಕೆಲಸದಲ್ಲಿ ಇದ್ದಾಗಲೂ ಕೂಡ ಎಷ್ಟೋ ಮನೆ ಹಾಳು ಮಾಡಿ ಎಷ್ಟೋ ಬಡ ಜನರ ಕಣ್ಣೀರಿನ ಮೇಲೆ ಕೋಟೆ ಕಟ್ಟಿ ಮರೆಯುತ್ತಿದ್ದಾನೆ ಇಂದಿಗೂ ಕೂಡ...ಮೊನ್ನೆ ಈ ಪರಮ ಪಾಪಿ ತನ್ನ ಪಾಪದ ಪ್ರಾಯಚಿತ ಗೋಸ್ಕರ ಯಾವ್ದೋ ದೇವರನ್ನೇ ಕೋಟಿ ಕೊಟ್ಟು ಕೊಂಡುಕೊಂಡಿದ್ದಾನೆ ಎಂಬ ಸುದ್ದಿ , ಮತ್ತು ಅವನು ಅವನ ಮಕ್ಕಳೇ ಚೆನ್ನಾಗಿ ಬದುಕುತ್ತಿರುವುದು ನೋಡಿದರೆ ಆಹ್ ದೇವರು ನಿಜ ಇದ್ದಾನೆಯೇ ಅಥವಾ ಅವನು ಈ ರಾಷ್ಟ್ರದಲ್ಲಿ ದೇವರೇ ಬ್ರಷ್ಟನೆ ಎಂಬ ಪ್ರಶ್ನೆ ಮೂಡುವುದು ಸಹಜ...

ತಾತ್ವಿಕ ನೋವು: ಪ್ರಾಮಾಣಿಕರಿಗೆ ಕಷ್ಟ, ವಂಚಕರಿಗೆ ಸುಖ – ಈ ವಿರೋಧಾಭಾಸಕ್ಕೆ ಸ್ವಾಮಿಗಳಂತಹ ಜೀವನ ಸಾಕ್ಷಿ. 


"ದೇವೋ ದುರ್ಬಲ ಘಾತಕಃ" (ದೇವರು ದುರ್ಬಲರನ್ನು ಮಾತ್ರ ಕೊಲ್ಲುತ್ತಾನೆ/ ಬಲಿ ತೆಗೆದುಕೊಳ್ಳುತ್ತಾನೆ) ಎಂಬ ಸಂಸ್ಕೃತ ಸೂಕ್ತಿಯಂತೆ: "ಅಶ್ವಂ ನೈವ ಚ ಗಜಂ ನೈವ ಚ ವ್ಯಾಘ್ರಂ ನೈವ ಚ ದೇವೋ ದುರ್ಬಲ ಘಾತಕಃ" – ಅಂದರೆ, ದೇವರು ಹುಲಿ, ಆನೆಗಳ ತ್ಯಾಗವನ್ನು ಕೇಳದೆ, ಕುರಿ, ಕೋಳಿಗಳಂತಹ ಅಮಾಯಕ ಪ್ರಾಣಿಗಳ ಬಲಿಯನ್ನೇ ಬಯಸುತ್ತಾನೆ. ಈ ಕಲಿಯುಗದಲ್ಲಿ ಪ್ರಾಮಾಣಿಕತೆಯೇ ದುರ್ಬಲತೆಯೇ? ಭಗವಂತನೇ ಅತ್ಯಂತ ಭ್ರಷ್ಟನೇ? ಎಂಬ ಆಳವಾದ ಪ್ರಶ್ನೆ ಕಾಡುತ್ತದೆ.


ಷಡಕ್ಷರಿ ಸ್ವಾಮಿ ತನ್ನ ಜೀವಮಾನದಲ್ಲಿ ಒಂದೆರಡು ಟ್ರಿಪ್ ಹೋಗಿರಬಹುದು, ಎಂದು ಸ್ಟಾರ್ ಹೋಟೆಲ್ ಅಲ್ಲಿ ಊಟ ಮಾಡಿಲ್ಲ , ಬ್ರಾಂಡೆಡ್ ಬಟ್ಟೆ ವಾಚ್ ಫೋನ್ ಬಳಸಿಲ್ಲ , ಹಿರಿಯ ಮಗನ ಶಾಲಾ ಶುಲ್ಕ ೮೦೦ ರೊ, ಕಾಲೇಜ್ ಫ್ರೀ ೧೪೦೦೦ ರೊ, ಟ್ಯೂಷನ್ ಫೀ ೧೦೦೦೦೦ ರೊ ಆಗು ಇಂಜಿನಿಯರಿಂಗ್ ಶುಲ್ಕ ೭ ಲಕ್ಷ ಇನ್ನೂ ಉಳಿದ ಶುಲ್ಕ ಅವನೇ ಸಾಲ ಮಾಡಿ ಕಟ್ಟಿ ನಂತರ ಪೋಸ್ಟ್ graduation ಸಾಲ ಮಾಡಿ ಓಡಿ ಇಂದು ಅತ್ಯಂತ ಸಣ್ಣ ಸಂಬಳದಲ್ಲಿ ಬದುಕು ನೆಡೆಸುತ್ತು ಹಲವಾರು  ಅಜ್ಞಾತ ಶಕ್ತಿಗಳು ಮೂಲಕ ಕಿರುಕುಳ ಅನುಭವಿಸಿ ಅನುಭವಿಸುತ್ತಾ     ಬಹಳಷ್ಟು ಜೀವನದಲ್ಲಿ ನೊಂದು ಬೆಂದ ಒಳ ಪಟ್ಟಿ ಜೀವನ ನೀಡುಸ್ತುತ್ತ ಇದ್ದಾನೆ, ಷಡಕ್ಷರಿ ರೀತಿಯಲ್ಲಿ ಹೋರಾಟದ ಜೀವನ ತಾತನ ಆಸ್ತಿ ಅಪ್ಪನ ದುಡ್ಡು ಆಸ್ತಿ ಇಲ್ಲದೆ ಸ್ವಂತ ವಾಗಿ ಹೊರಟಮಯ ಜೀವನ ನಡೆಸ್ತಾ ಇದ್ದಾರೆ..



💐 ಕೊನೆಯ ನುಡಿ: ಮೋಕ್ಷಕ್ಕಾಗಿ ಪ್ರಾರ್ಥನೆ



ಷಡಾಕ್ಷರಿ ಸ್ವಾಮಿಗಳ ಕುಟುಂಬ ಮತ್ತು ಮಕ್ಕಳು ಇಂದಿಗೂ ಅವರ ಸಾಲಗಳನ್ನು ತೀರಿಸಲು ಹೋರಾಡುತ್ತಿದ್ದಾರೆ. ಮಕ್ಕಳು ಶಿಕ್ಷಣ ಸಾಲ ಮಾಡಿ, ಅರೆಕಾಲಿಕ ಕೆಲಸ ಮಾಡುತ್ತಾ ತಮ್ಮ ಬಾಲ್ಯದ ತ್ಯಾಗವನ್ನು ಮುಂದುವರೆಸಿದ್ದಾರೆ. 

ಬಹಳ ನೋವಿನ ಸಂಗತಿ ಷಡಕ್ಷರಿ ಸ್ವಾಮಿ ನೈತಿಕತೆ, ಧರ್ಮ ಆಗು ಒಂದು ಮನೆಗೋಸ್ಕರ ಬಹಳ ನೋವು ತಿಂದು ತನ್ನ ಜೀವನವನ್ನು ಬಲಿ ಕೊಟ್ಟುಕೊಳ್ಳುವ ಸಂದರ್ಭ ಬಂದಿದ್ದು, ಬಹುಶಃ ಅವರು ಇಂದು ಒಂದು ಮನೆ ಕಟ್ಟದೆ ಹೋಗಿದ್ದಾರೆ ಅವರು ಇಂದು ಸುಖವಾಗಿ ದೀರ್ಘ ಆಯುಷಿಗಳಾಗಿ ಬದುಕುತ್ತಿದರು ಅನ್ನಿಸುತ್ತೆ...

ತನ್ನ ಹಿರಿಯ ಮಗ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯ ಅಲ್ಲಿ ಸೀಟ್ ಸಿಕ್ಕರು ಕೂಡ ಓದಿಸಲು ಆಗಲಿಲ್ಲ ಮತ್ತು ಅವನಿಗೆ ಲಂಡನ್ ಇನ ಪ್ರತಿಷ್ಠಿತ "ಕಿಂಗ್ಸ್ ಕಾಲೇಜ್ - Kings College " ಅಲ್ಲೂ ಉನ್ನತ ವ್ಯಾಸಂಗಕ್ಕೆ ಸೀಟ್ ಸಿಕ್ಕಿತು ಆದರೆ ದುರದೃಷ್ಟ ಅವನು SSLC ಮುಗಿಸಿದ ನಂತರ ಅವನ ಹೆಗಲು ಹೇರಿತು...ಇದು ವಿಜ್ಞಾನ ಆಗು ಆಧುನಿಕ ಯುಗದಲ್ಲಿ ನಂಬಲು ಸಾಧ್ಯವೇ ಇಲ್ಲ...ಪ್ರಸಿದ್ಧ ಧಾರ್ಮಿಕ ಪಂಡಿತರ ಅಭಿಪ್ರಾಯದ ಪ್ರಕಾರ ಮಕ್ಕಳ ಜೀವನ ಮತ್ತು ಜೀವ ತೆಗೆಯಲು ಕಾತುರರಾಗಿದ್ದಾರೆ ಎಂಬ ಸಂಶಯ

ಷಡಕ್ಷರಿ ಅವರ ಸಾವು ಎಷ್ಟು ಜನಕ್ಕೆ ದುಃಖ ತಂದಿಡಿತೋ ಅದೇ ರೀತಿ ಕುಶಿಯಾದವರು ಎಷ್ಟೋ...

ಬಹಳ ದುಃಖದ ಸಂಗತಿ ಅಂದ್ರೆ ಇಂದು ಸಮಾಜದಲ್ಲಿ ಕಳ್ಳರು,ಕೊಲೆ ಗಡುಕರು ಕಾನೂನಿನ ಕಣ್ಣು ತಪ್ಪಿಸಿ ದೇವರ ಗೆ ಚಂದ ಕೊಟ್ಟು  ಚೆನ್ನಾಗಿ ಜೀವನ ಮಾಡುತ್ತಾ ಇದ್ದಾರೆ ,

ಆದರೆ ಷಡಾಕ್ಷರಿ ಸ್ವಾಮಿ ನೆಮ್ಮದಿ ಇಂದ ಯಾವುದೇ ತಲೆ ನೋವು ಗಳು ಇಲ್ಲದೆ ಇಬ್ಬರು ಮಕ್ಕಳಿಗೆ ಒಳ್ಳೆ ಓದಿಸಿ ವಿದೇಶಕ್ಕೆ ಕಳುಹಿಸಿ ಮದುವೆ ಮಾಡಿ ಅವರ ಕನಸಿನ ಮನೆಯಲ್ಲಿ ಒಂದೆರಡು ದಿನ ನೆಮ್ಮದಿ ಯ ನಿದ್ರೆ ಮಾಡಿದ್ದರು ಒಳ್ಳೆಯದಾಗಿತ್ತು ಮತ್ತು ನಂತರ  ಆಹ್ ಪರಮಾತ್ಮನ ಆತ್ಮಕ್ಕೆ ಲೀನ ಆಗಬಹುದಾಗಿತ್ತು...


ಆದರೆ ಅವರು ನಿದ್ದೆ ಇಲ್ಲದೆ, ಸದಾ ಚಿಂತೆ, ಬ್ಯುಸಿನೆಸ್ ಲಾಸ್, ಕಿರುಕುಳ ಮತ್ತು ತಮ್ಮ ಎರಡು ಸುಪುತ್ರರ ಮದುವೆ ನೋಡಿದೇ ಸತ್ತಿದ್ದು ಅವರು ಮಾಡಿದ ಯಾವ ಪೂಜೆ ಪುನಸ್ಕಾರ ಒಳ್ಳೆ ಕೆಲಸಗಳು ದೇವರು ಧಾರ್ಮಿಕ ಸಂಸ್ಥೆಗಳಿಗೆ ಅವರು ನೀಡಿದ ಕೊಡುಗೆ ಯಾವದೂ ಅವರನ್ನು ರಕ್ಷಣೆ ಮಾಡದೇ ಇರುವುದು ನೋಡಿದರೆ ದೇವರ ಬಗ್ಗೆ ನಮಗೆ ಒಂದು ಕ್ಷಣ ಯೋಚನೆ ಮಾಡಬೇಕಾಗುತ್ತದೆ

ಅದುನ್ನೇ ಕರುನಾಡಿನ ಖ್ಯಾತ ಸಾಹಿತಿಗಳು ಚಿಂತಕರು ಶ್ರೀ ಕುವೆಂಪು , S L ಭೈರಪ್ಪ ಅವರು ಹೇಳಿದ್ದು

ದೇವರು ಒಂದು ಕಲ್ಪನೆ ಮಾನವ ಸೃಷ್ಟಿಸಿರುವ ಒಂದು ಭಯ ಎಂದು.

ಸದಾ ಒಳಿತು , ಪರೋಪಕಾರ ಮತ್ತು ಬೇರೆ ಅವರಿಗೆ ಒಳ್ಳೇದು ಯೋಚನೆ ಮಾಡಿದ ಸ್ವಾಮಿ ಅವರ ಕೈ ಕೊನೆ ಗಲದಲ್ಲಿ ಕೆಲವೇ ಕೆಲವು ಒಳ್ಳೆ ಸ್ನೇಹಿತರು ಮತ್ತು ಕೆಲವು ಕುಟುಂಬದವರು ಬಿಟ್ಟರೆ ಯಾರೂ ಅವರ ನೋವು ಗೆ ಸ್ಪಂದನೆ ಮಾಡಲಿಲ್ಲ ಸಮಾಜ ಅವರಿಗೆ ನೀಡಿದ ಕೊಡುಗೆ ಇದೇ.


ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ತಮ್ಮ ಪೂಜ್ಯ ಗುರುಗಳಾದ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಲಿಂಗೈಕ್ಯರಾದ ದಿನಾಂಕ ಮತ್ತು ಸಮಯದಲ್ಲೇ ನಿಧನ ಹೊಂದಿದ್ದು, ಅವರ ನಿಷ್ಠೆಗೆ ಸಿಕ್ಕ ಪರಮ ಸದ್ಗತಿ.

ಇಷ್ಟೊಂದು ಕಷ್ಟ ಅನುಭವಿಸಿದ ನಂತರ, ಅವರಿಗೆ ಈ ಭ್ರಷ್ಟ ಜಗತ್ತಿನಲ್ಲಿ, ಈ ಕಲಿಯುಗದ ಭಾರತದಲ್ಲಿ ಮರುಜನ್ಮವಿರದಂತೆ, ಅವರ ಆತ್ಮವು ಮೋಕ್ಷವನ್ನು ಪಡೆಯಲಿ ಎಂದು ನಾವು ಎಲ್ಲರೂ ಪ್ರಾರ್ಥಿಸೋಣ. ತ್ಯಾಗಮಯ ಬದುಕಿಗೆ ನಮ್ಮ ಶಿರಬಾಗಿ ನಮನ.


ಷಡಕ್ಷರಿ ಸ್ವಾಮಿ ಅವರು ಸಂಸಾರಸ್ಥರಾಗಿದ್ದರು ಕೂಡ ಒಬ್ಬ ತ್ಯಾಗಿ. , ಸಂತ ನ ರೀತಿ ಪರೋಪಕಾರ ವೆ ಧರ್ಮ ಎಂದು ಬದುಕಿದರು...ಅವರು ಸ್ವಾರ್ಥ ಚಿಂತನೆ ಮಾಡಿದ್ದಾರೆ ಇಂದು ಅವರ ಮಕ್ಕಳು ಎಷ್ಟೋ ಚೆನ್ನಾಗಿ ಇದ್ದು ಅವರು ಕೂಡ ಚೆನ್ನಾಗಿ ಇರಬಹುದಾಗಿತ್ತು.. ಆದರೆ ಅವರು ಆಸೆ ಪಟ್ಟಿದು ಒಂದು ಮನೆ , ಎಷ್ಟೋ ಪ್ರಾಣಿ ಪಕ್ಷಿ ಗಳಿಗೆ ಒಂದು ಗೂಡು ಎಂದು ಆಸೆ ಅದೇ ರೀತಿ ಇವರಿಗೂ ಕೂಡ ಒಂದು ಮನೆ ಕಟ್ಟಿ ಸುಖ ಆಗಿ ಇರಬೇಕು ಅಂತ ಆಸೆ ಪಟ್ಟಿದು ಇಂದು ಅವರ ಬಲಿ ಜೊತೆಗೆ ಅವರ ಮಕ್ಕಳು ಕುಟುಂಬ ಕಣ್ಣೀರಿನ ಮೇಲೆ ನೀರು ತೊಳೆಯುತ್ತಿದ್ದಾರೆ...

ಬಿಡಿ ಆಹ್ ದೇವರು ಇದ್ದಿದೆ ಆದರೆ ಸೂಕ್ತ ಬಹುಮಾನ ಕೊಡಲಿ ಅವರಿಗೆ.. ಈ ಭೂಮಿ ಯಾರಿಗೇನು ಶಾಶ್ವತ ಅಲ್ಲ...

ಅವರಿಗೆ ನಿಜ ಮರು ಜನ್ಮ ಇದ್ದರೆ ಅವರು ಆತ್ಮವು ಯಾವುದರು ಒಳ್ಳೆ ರಾಷ್ಟ್ರದಲ್ಲಿ ಜನಿಸಲಿ

ಎಲ್ಲರೂ ಇಂತ ತ್ಯಾಗಮಯಿ ಆತ್ಮಕ್ಕೆ ಶಾಂತಿ ಕೋರಿ ಇವರ ಜೀವನ ವನ್ನು ಅನುಸರಿಸೋಣ...


ಓಂ ಶಾಂತಿ.


ಇಂದ,

ಶಶಿ ಕುಮಾರ ಶರ್ಮಾ ಪುತ್ತೂರು

( ಇದು ಲೇಖಕರ ವಿಚಾರಕ್ಕೆ ಬಂದ ವಿಷಯ , ಇದು ಷಡಕ್ಷರಿ ಸ್ವಾಮಿ ಅವರಿಂದ ತಿಳಿದು ಮೂಡಿರುವ ಸಂಚಿಕೆ , ಇದಕ್ಕೆ ಷಡಾಕ್ಷರಿ ಸ್ವಾಮಿ ಅವರ ಮಕ್ಕಳು, ಪತ್ನಿ, ಕುಟುಂಬ, ಸಹೋದರರು, ಕುಟುಂಬಸ್ಥರು ಅಥವಾ ಲೇಖಕರು ಹೊಣೆ ಅಲ್ಲ ,ಕಾನೂನು ಗೌರವಿಸಿ ಷಡಕ್ಷರಿ ಸ್ವಾಮಿ ಅವರ ಕೊಟ್ಟ ತಿಳುವಳಿಕೆ ಅಕ್ಷರ ರೂಪ ಅಲ್ಲಿ ತರಲಾಗಿದೆ , ಇದು ಷಡಕ್ಷರಿ ಅವರು ಜೀವಮಾನದಲ್ಲಿ ತಿಳಿಸಿದ ವಿಷಯ ಮತ್ತು ಯಾರು ಹೊಣೆಗಾರರು ಅಲ್ಲ ಮತ್ತು ಬರುವ ಪಾತ್ರ ನಿಜ ಜೀವನದಲ್ಲಿ  ಯಾರಿಗಾದರೂ ಹೋಲಿಕೆ ಆದರೂ ಕೂಡ ಅದುಕ್ಕೆ ಯಾರು ಕೂಡ ಹೊಣೆಯಲ್ಲ ಮತ್ತು ಅದು ಕಾಲ್ಪನಿಕ ಪಾತ್ರಗಳು ಅಥವಾ ನೈಜ ಪಾತ್ರಗಳು ಎಂಬುದು ಕೂಡ ಗೊತ್ತಿಲ್ಲ)