ರಾತ್ರಿ ಊಟ ಮಾಡದೇ ಹಾಗೇ ಮಲಗಿದ್ದ ಅಭಿ ಗೆ ಅವನ ಮುದ್ದಾದ ಮಗಳು ಅನಾ ಬಂದು ಎಬ್ಬಿಸಿದಾಗ ನಿದ್ದೆಯಿಂದ ಎಚ್ಚರ ಆಯಿತು. ಅಭಿ ಕಣ್ ಬಿಟ್ಟು ಮಗಳ ಮುದ್ದು ಮುಖ ನೋಡ್ತಾ ಗುಡ್ ಮಾರ್ನಿಂಗ್ ಬಂಗಾರ ಅಂತ ಹೇಳ್ತಾನೆ.
ಅನಾ,,,, ಗುಡ್ ಮಾರ್ನಿಂಗ್ ಪಪ್ಪಾ, ಅಂತ ಹೇಳಿ ಕೆನ್ನೆಗೆ ಮುತ್ತಿಟ್ಟು, ತುಸು ಕೋಪದಿಂದ ಪಪ್ಪಾ ರಾತ್ರಿ ನಿನಗೋಸ್ಕರ ಎಷ್ಟು ಕಾದೆ ಗೊತ್ತಾ, ನೀನು ಬರಲೇ ಇಲ್ಲಾ. ನೀನು ಬರ್ತೀಯ ಬರ್ತೀಯ ಅಂತ ನೋಡಿ ನೋಡಿ ಹಾಗೇ ಮಲಗಿ ಬಿಟ್ಟೆ.
ಅಭಿ,,, ಸಾರೀ ಬಂಗಾರ ಕೆಲಸ ಜಾಸ್ತಿ ಇತ್ತು ಅದಕ್ಕೆ ಲೇಟ್ ಆಗಿ ಬಿಡ್ತು ಸಾರೀ ಅಂತ ಹೇಳಿ ಮಗಳ ಕೆನ್ನೆಗೆ ಮುತ್ತಿಟ್ಟು, ಇನ್ಮೇಲೆ ಅಷ್ಟು ಲೇಟ್ ಮಾಡೋದಿಲ್ಲ ಸರಿನಾ.
ಅನಾ,,, ಥ್ಯಾಂಕ್ಸ್ ಪಪ್ಪಾ ಅಂತ ಹೇಳಿ ಅಪ್ಪಿಕೋಳ್ತಾಳೆ.
ಸ್ವಲ್ಪ ಸಮಯ ಮಗಳ ಜೊತೆಗೆ ಆಟವಾಡಿಕೊಂಡು ನಂತರ ಮಗಳನ್ನ ಬೆನ್ನ ಮೇಲೆ ಕೂರಿಸಿಕೊಂಡು ಮೆಟ್ಟಿಲು ಇಳಿದು ಹಾಲ್ ಗೆ ಬರ್ತಾನೇ. ಮಗಳನ್ನ ಕೆಳಗೆ ಇಳಿಸಿ ಅಜ್ಜಿ ಹತ್ತಿರ ಹೋಗು ನಾನು ಕೆಲಸಕ್ಕೆ ಹೋಗೋಕೆ ರೆಡಿ ಆಗಬೇಕು ಹೇಳ್ತಾನೆ. ಅನಾ,,, ಸರಿ ಪಪ್ಪಾ ಅಂತ ಅಜ್ಜಿ ಹತ್ತಿರ ಹೋಗ್ತಾಳೆ. ಅಭಿ ವಾಪಸ್ಸು ರೂಮ್ ಗೆ ಬಂದು ರೆಡಿ ಆಗೋಕೆ ಹೋಗ್ತಾನೆ.
ನಯನಾ ರೂಮಿಂದ ಹಾಲ್ ಗೆ ಬರ್ತಾಳೆ, ಅಡುಗೆ ಮನೇಲಿ ಅಮ್ಮನ ಜೊತೆಗೆ ಮಗಳು ಇರೋದನ್ನ ನೋಡಿ ಅಡುಗೆ ಮನೆಗೆ ಹೋಗ್ತಾಳೆ.
ನಯನಾ,,, ಅಮ್ಮ ನಾ ಕೈಲಿ ಮಗಳು ಇರೋದನ್ನ ನೋಡಿ ಅಮ್ಮ ಅವಳನ್ನ ನನ್ನ ಕೈಗೆ ಕೊಡು ಅಂತ ಕೇಳ್ತಾಳೆ
ಸುಭದ್ರ,,,ಗ್ಯಾಸ್ ನಾ ಆಫ್ ಮಾಡಿ ಪರ್ವಾಗಿಲ್ಲ ಬಿಡೆ, ನೀನು ಕಾಫಿ ನಾ ಮಿಕ್ಸ್ ಮಾಡ್ಕೋ ನಾನ್ ಹೋಗಿ ನಿಮ್ಮಪ್ಪ ನಾ ಎಬ್ಬಿಸಿ ಬರ್ತೀನಿ, ಎಲ್ಲೋ ಹೋಗಬೇಕು ಅಂತ ಇದ್ರು ಅಂತ ಹೇಳಿ ಗಂಡನನ್ನ ಎಬ್ಬಿಸೋಕೆ ಮೊಮ್ಮಗಳ ಜೊತೆಗೆ ಅವರ ರೂಮ್ ಕಡೆಗೆ ಹೋಗ್ತಾರೆ.
ನಯನಾ,,, ಹಾಲನ್ನ ಬಿಸಿ ಮಾಡಿಕೊಂಡು ಕಾಫಿ ಮಿಕ್ಸ್ ಮಾಡಿಕೊಂಡು ಹಾಲ್ ಗೆ ಬರ್ತಾಳೆ ಅದೇ ಸಮಯಕ್ಕೆ ಸರಿಯಾಗಿ ಅಭಿ ರೆಡಿ ಆಗಿ ಕೆಳಗೆ ಬರ್ತಾನೇ. ನಯನಾ ಅಭಿ ನಾ ನೋಡಿ ನೋಡದಂತೆ ಹೋಗಿ ಸೋಫಾ ಮೇಲೆ ಕೂತ್ಕೋತಾಳೆ. ಅಭಿ ಅವಳ ಕಡೆಗೆ ತಿರುಗಿ ನೋಡದೆ ಹೊರಗೆ ಹೋಗಿ ಬೈಕ್ ಸ್ಟಾರ್ಟ್ ಮಾಡಿಕೊಂಡು ಸೂಪರ್ ಮಾರ್ಕೆಟ್ ಕಡೆಗೆ ಹೋಗ್ತಾನೆ.
#####
ಪಾನ್ ಶಾಪ್ ಹತ್ತಿರ
ರಾಜ್,,, ಯಾವುದೊ ಮಗ ಬಿಯರ್ ಬ್ರಾಂಡ್ ತಲೆ ಭಾರ ಇನ್ನು ಹಾಗೇ ಇದೆ ಅಂತ ತಲೆ ಇಡ್ಕೊಂಡ್ ಕೂತ್ಕೊಂಡು ಕೇಳ್ತಾನೆ.
ನಿರಂಜನ್,,, ನಿನ್ನ ಬ್ರಾಂಡ್ ಮಚ್ಚಾ, ಮನೆಗೆ ಹೋಗೋವಾಗ ಸಾಕಾಗಿಲ್ಲ ಅಂತ ಬೇಡ ಬೇಡ ಅಂತ ಅಂದ್ರು ರಮ್ 90 ಹೊಡೆದೆ, ಇವಾಗ ಅನುಭವಿಸು ಮಗನೆ ಅಂತ ಹೇಳ್ತಾ ಸಿಗರೇಟ್ ಗೆ ಬೆಂಕಿ ನಾ ಹಚ್ಚಿ ಕೊಳ್ತಾನೆ.
ರಾಜ್,,, ತು ಹೋಗಿ ಹೋಗಿ ನಿನ್ನ ಕೇಳ್ದೆ ಅಲ್ವಾ ಅಂತ ಹೇಳಿ ಸೈಲೆಂಟ್ ಆಗ್ತಾನೆ.
ಸ್ವಲ್ಪ ಸಮಯದ ನಂತರ ಅಭಿ ಅಲ್ಲಿಗೆ ಬೈಕ್ ಅಲ್ಲಿ ಬರ್ತಾನೇ. ರಾಜ್ ಕೂತಿರೋದನ್ನ ನೋಡಿ. ಲೋ ಮಚ್ಚಾ ಏನಾಯ್ತೋ ಯಾಕ್ ಹಾಗೇ ಕೂತಿದ್ದೀಯ.
ನಿರಂಜನ್,,, ನೈಟ್ ಮಿಕ್ಸ್ ಹೊಡೆದ ಮಚ್ಚಾ ಅದಕ್ಕೆ ಈಗ ಗಂಡ ಬಿಟ್ಟು ಹೋದವನ ಹಾಗೇ ತಲೆ ಮೇಲೆ ಕೈ ಇಟ್ಕೊಂಡು ಕೂತಿದ್ದಾನೆ. ಅಂತ ಹೇಳ್ತಾ ನಗ್ತಾನೇ.
ಅಭಿ,,, ಎಷ್ಟು ಸರಿ ಹೇಳಿದ್ದೀನಿ ಮಿಕ್ಸ್ ಹೊಡಿಬೇಡ ಅಂತ ಹೇಳಿ ಹೋಗಿ ಒಂದು ಮಜ್ಜಿಗೆ ಪಾಕೆಟ್ ತಂದು ರಾಜ್ ಕೈಗೆ ಕೊಟ್ಟು ಇದನ್ನ ಕುಡಿ ಸರಿ ಹೋಗುತ್ತೆ. ಏನಾದ್ರು ತಿಂದ
ರಾಜ್,,, ಎಲ್ಲಿ ಮಚ್ಚಾ ಈ ತಲೆ ಭಾರ ನೇ ಹೆವಿ ಇದೆ ಇನ್ನೆಲ್ಲಿ ತಿನ್ನೋದು.
ಅಭಿ,,, ಸರಿ ಬಾ ಹೋಗಿ ತಿಂಡಿ ಮಾಡೋಣ ಅಂತ ಹೇಳಿ ಅವನನ್ನ ಕರೆದುಕೊಂಡು ಟಿಫನ್ ಸೆಂಟರ್ ಗೆ ಹೋಗ್ತಾನೆ.
ಇಬ್ಬರಿಗೂ ತಿಂಡಿ ಆರ್ಡರ್ ಮಾಡಿಕೊಂಡು ಬಂದು ಟೇಬಲ್ ಅಲ್ಲಿ ಕೂತು ತಿಂಡಿ ತಿಂತ ಇರ್ತಾರೆ.
ಅದೇ ಸಮಯಕ್ಕೆ ಸರಿಯಾಗಿ ಪ್ರಿಯಾ ತೇಜು ಅಲ್ಲಿಗೆ ಬಂದು,
ಪ್ರಿಯಾ,,, ರಾಜ್ ಗೆ ಏನೋ ನಿನ್ನ ಗಂಡ ಬಿಟ್ಟು ಹೋದ ಅಂತೇ ಹೇಳೇ ಇಲ್ಲಾ ಯಾವಾಗ ಮದುವೆ ಆಯ್ತು ಅಂತ ಕೇಳ್ತಾ ಟೇಬಲ್ ಹತ್ತಿರ ಬರ್ತಾಳೆ.
ರಾಜ್,,, ತಿಂಡಿ ತಿಂತ ಇದ್ದವನು ಪ್ರಿಯಾ ಮಾತಿಗೆ ಕೋಪ ಮಾಡಿಕೊಂಡು ಅವಳ ಕಡೆಗೆ ನೋಡ್ತಾ. ಯಾವನೇ ನಿನಗೆ ಹೇಳಿದ್ದು.
ತೇಜು,,, ಇನ್ಯಾವನು ನಿನ್ನ ಚಡ್ಡಿ ದೋಸ್ತ್ ಹೇಳ್ದ.
ರಾಜ್,,, ಅವನು ಹೇಳ್ದ ಅಂತ ಬಂದು ಇಷ್ಟು ಜನರ ಮಧ್ಯ ಬಂದು ಕೇಳಬೇಕಾ, ನಿಮ್ಮನ್ನ ಅಂತ ಇನ್ನು ಏನೋ ಹೇಳೋಕೆ ಬರ್ತಾನೇ
ಪ್ರಿಯಾ,,, ಲೋ ಮೊದಲು ತಿಂಡಿ ತಿನ್ನು ಆಮೇಲೆ ಮಾತಾಡೋಣ ಅಂತ ಹೇಳಿ ಹೋಗಿ ಕಾಫಿ ತಗೊಂಡು ಬಂದು ಅವರ ಜೊತೆಗೆ ಕುತ್ಕೋ ತಾರೇ ಇಬ್ಬರು.
ತೇಜು,,, ಅಭಿ ನಾ ನೋಡಿ ಯಾಕೋ ಮನೇಲಿ ತಿಂಡಿ ಮಾಡಿಲ್ವಾ.
ನಿರಂಜನ್,,, ಅಲ್ಲಿಗೆ ಬರ್ತಾ ಅವನು ಎಲ್ಲಿ ಮನೇಲಿ ಇದ್ದಾನೆ. ರೂಮ್ ಅಲ್ಲಿ ಇರೋದು ರಾತ್ರಿ ನೈಟ್ ಷೋ ಮುಗಿಸಿಕೊಂಡು ಹೋಗೋ ಅಷ್ಟೋತ್ತಿಗೆ ಲೇಟ್ ಆಯ್ತು, ಅದಕ್ಕೆ ಮಾಡಿಲ್ಲ ಅಂತ ಅನ್ನಿಸುತ್ತೆ.
ಪ್ರಿಯಾ,,, ಹೌದ ಮತ್ತೆ ನಮಗೆ ಮನೆಯಿಂದ ಬರೋದು ಅಂತ ಹೇಳ್ದೆ?
ಅಭಿ,,, ಇಲ್ವೆ ಇಲ್ಲಿಂದ ಮನೆಗೆ ಸ್ವಲ್ಪ ದೂರ ನೈಟ್ ಮತ್ತೆ ಬೆಳಿಗ್ಗೆ ಹೋಗಿ ಬರೋಕೆ ಟೈಮ್ ಆಗುತ್ತೆ, ಅಷ್ಟೋತ್ತಲ್ಲಿ ಅಮ್ಮ ನಾ ಡಿಸ್ಟರ್ಬ್ ಮಾಡೋದು ಏನಕ್ಕೆ ಅಂತ ಇಲ್ಲೇ ಸೂಪರ್ ಮಾರ್ಕೆಟ್ ಓನರ್ ಬಾಡಿಗೆ ಮನೆಗಳು ಇದ್ದಾವೆ ಅಲ್ವಾ ಅಲ್ಲೇ ಒಂದು ರೂಮ್ ತಗೊಂಡು ಇದ್ದೀನಿ. ನೈಟ್ ಈ ನನ್ನ ಮಕ್ಕಳಿಂದನೇ ಲೇಟ್ ಆಗಿದ್ದು ಅಂತ ಹೇಳ್ತಾ ತಿಂಡಿ ತಿಂತಾನೆ.
ನಿರಂಜನ್,,, ಲೋ ನಾನ್ ಏನ್ ಮಾಡಿದೆ ಈ ನನ್ನ ಮಗ ಅಲ್ವಾ ಮಾಡಿದ್ದು ಅಂತ ರಾಜ್ ಕಡೆಗೆ ತೋರುಸ್ತಾನೆ.
ರಾಜ್,,, ತಲೆ ಇಡ್ಕೊಂಡ್ ಲೋ ಇವಾಗ ಇರೋದೆ ಸಾಕು ಇನ್ನು ನೀವು ಟಾರ್ಚರ್ ಕೊಡಬೇಡಿರೋ, ನಂದೇ ತಪ್ಪಾಯ್ತು ಸರಿನಾ.
ತೇಜು,,, ಆಯ್ತು ತಿಂಡಿ ತಿನ್ನು ಅಂತ ಹೇಳ್ತಾಳೇ.
ಸ್ವಲ್ಪ ಸಮಯದ ನಂತರ ತಿಂಡಿ ತಿಂದು 5 ಜನ ಸೂಪರ್ ಮಾರ್ಕೆಟ್ ಹತ್ತಿರ ಬರ್ತಾರೆ.
ಮೇಘ,,, ಏನೇ ಎಲ್ಲರೂ ಒಟ್ಟಿಗೆ ಬರ್ತಾ ಇದ್ದೀರಾ ಎಲ್ಲಿ ಹೋಗಿದ್ರಿ?
ತೇಜು,,, ಅದ ರಾಜ್ ನಾ ಗಂ...
ರಾಜ್,,, ಕೈ ಮುಗಿದು ಸಾಕು ನಿಲ್ಲಿಸೆ. ಹಿಂಸೆ ಕೊಡಬೇಡಿ ಅಂತ ಹೇಳಿ ಶೇಟರ್ ಓಪನ್ ಮಾಡೋಕೆ ಹೋಗ್ತಾನೆ.
ಅವನು ಹೋಗಿದ ರೀತಿ ನೋಡಿ ಎಲ್ಲರೂ ನಗ್ತಾರೆ. ನಿರಂಜನ್ ಕೂಡ ಅವನಿಗೆ ಹೆಲ್ಪ್ ಮಾಡೋಕೆ ಹೋಗ್ತಾನೆ.
#######
ವಿಶ್ವನಾಥ್ ತಿಂಡಿ ಮಾಡ್ತಾ ಮಗಳ ಕಡೆಗೆ ನೋಡ್ತಾ,, ನಯನಾ ನಾಳೆ ನಿನಗೆ ಏನಾದ್ರು ಕೆಲಸ ಇದೆಯಾ.
ನಯನಾ,,, ಏನು ಇಲ್ಲಾ ಅಪ್ಪ ಯಾಕೆ?
ವಿಶ್ವನಾಥ್,,, ಏನಿಲ್ಲಾ ನಾಳೆ ನಾನು ಹೊರಗೆ ಹೋಗ್ತಾ ಇದ್ದೀನಿ, ನಾಳೆ ಸಂಡೆ ಬೇರೆ, ಸೂಪರ್ ಮಾರ್ಕೆಟ್ ಅಲ್ಲಿ ಕೆಲಸ ಜಾಸ್ತಿ ಇರುತ್ತೆ. ನೀನು ಹೋಗಿ ಆಫೀಸ್ ಅಲ್ಲಿ ಕುತ್ಕೋ ನಾನ್ ಬರೋವರೆಗೂ. ಇಲ್ಲಾ ಅಂದ್ರೆ ಆಫೀಸ್ ಕಸ್ಟಮರ್ಸ್ ಬಿಲ್ಲಿಂಗ್, ಸ್ಟಾಕ್ ಇದೆಲ್ಲಾ ನೋಡಿಕೊಳ್ಳೋಕೆ ಅವರಿಗೆ ಸ್ವಲ್ಪ ಕಷ್ಟ ಆಗುತ್ತೆ. ಅದಕ್ಕೆ ನಿನ್ ಹೋಗಿ ನಾನ್ ಬರೋವರೆಗೂ ಇದ್ರೆ ಅವರಿಗೂ ಸ್ವಲ್ಪ ಹೆಲ್ಪ್ ಆಗುತ್ತೆ ಅದಕ್ಕೆ ಕೇಳ್ದೆ.
ನಯನಾ,,, ಅಷ್ಟೇ ತಾನೇ ಅಪ್ಪ ನಾನ್ ಹೋಗಿ ಇರ್ತೀನಿ ಬಿಡಿ.
ಅನಾ ರೂಮಿನಿಂದ ಅಮ್ಮ ಬಟ್ಟೆ ಹಾಕು ಬಾ ಅಂತ ಜೋರಾಗಿ ಕೂಗ್ತಾಳೆ.
ನಯನಾ,,, ಬಂದೆ ಕಣೆ ಅಂತ ಎದ್ದು ರೂಮ್ ಕಡೆಗೆ ಹೋಗ್ತಾಳೆ.
....
ನಯನಾ ಹೋದಮೇಲೆ, ಹೆಂಡತಿ ಸುಭದ್ರ ಕಡೆಗೆ ನೋಡಿ ಯಾಕೆ ಒಂತರಾ ಇದ್ದಿಯಾ ಏನಾಯ್ತು ಅಂತ ಕೇಳ್ತಾರೆ.
ಸುಭದ್ರ,,, ಏನಿಲ್ಲಾ ರೀ, ಅಭಿ ನಾ ನೆನೆಸ್ಕೊಂಡು ತುಂಬಾ ಬೇಜಾರಾಗ್ತಾ ಇದೆ, ಮನೇಲಿ ತಿಂಡಿ ಊಟ ನೀರು ಸಹ ಕುಡಿಯೋದಿಲ್ಲ. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದ್ರೆ ರಾತ್ರಿ ಯಾವಾಗೋ ಮನೆಗೆ ಬರ್ತಾನೇ. ಮಾಡಿ ಇಟ್ಟಿರೋ ಊಟ ಹಾಗೇ ಇರುತ್ತೆ. ಅಲ್ಲರೀ ಅವರಿಬ್ಬರು ಗಂಡ ಹೆಂಡತಿ ನೇ ಅಲ್ವಾ. ಗಂಡ ಅನ್ನೋ ಸ್ವಲ್ಪ ಕನಿಕರ ಕೂಡ ಇಲ್ಲದೆ ಹೋಯ್ತು ಇವಳಿಗೆ. ತಿಂದ ಇಲ್ವಾ ಹೇಗಿದ್ದಾನೆ ಅನ್ನೋ ಚೂರು ಯೋಚ್ನೆ ಇಲ್ಲಾ. ಮದುವೆ ಆಗಿ ಇಷ್ಟು ವರ್ಷ ಆದ್ರು ಮಾತಾಡದೆ ಇದ್ರೆ ಹೇಗೆ ಅರ್ಥ ಮಾಡಿಕೊಳ್ಳದೆ ಇದ್ರೆ ಹೇಗೆ. ತಪ್ಪು ಮಾಡಿದ್ದು ನಾವು. ನಾವು ಬಲವಂತ ಮಾಡಿ ಇಬ್ಬರಿಗೂ ಮದುವೆ ಮಾಡಿಸಿದ್ದು. ಕೋಪ ದ್ವೇಷ ಏನೇ ಇದ್ರು ಅದು ನಮ್ಮ ಮೇಲೆ ತೋರಿಸ ಬೇಕು. ಅವನ ಮೇಲೆ ಅಲ್ಲ. ಅವಳು ಒಂದು ಹೊತ್ತು ಊಟ ಮಾಡದೇ ಇದ್ರೆ ನನ್ನ ಕರಳು ಚೂರ್ ಅಂತ ಅನಿಸುತ್ತೆ. ಅಂತದ್ರಲ್ಲಿ ಅವನ ತಾಯಿಗೆ ಇಲ್ಲಿ ಅವನು ಇರೋ ಪರಿಸ್ಥಿತಿ ನೋಡಿದ್ರೆ ಅವರು ಎಷ್ಟು ನೋವು ಪಡೋದಿಲ್ಲ. ಅವರ ಕಣ್ಣೀರು ನಮ್ಮನ್ನ ಸುಮ್ನೆ ಬಿಡುತ್ತಾ ಹೇಳಿ ಅಂತ ಸ್ವಲ್ಪ ನೋವಿನಿಂದ ಹೇಳ್ತಾರೆ.
ವಿಶ್ವನಾಥ್,,, ಸುಭದ್ರ ನೋಡು ನಿನಗೂ ಗೊತ್ತು ಇದನ್ನ ನಾವು ಕೂತು ಮಾತಾಡೋ ವಿಷಯ ಅಲ್ಲ ಅಂತ. ಇದನ್ನ ನಿನ್ನ ಮಗಳು ಅರ್ಥ ಮಾಡಿಕೊಳ್ಳಬೇಕು. ಅವಳಿಗೆ ಅಭಿ ಬಗ್ಗೆ ಅರ್ಥ ಆಗಬೇಕು. ಅಲ್ಲಿವರೆಗೂ ನಾನು ನೀನು ಏನು ಮಾಡೋದಕ್ಕೆ ಆಗೋದಿಲ್ಲ.
ಸುಭದ್ರ,,, ಏನೋ ಹೋಗ್ರಿ ನನಗಂತೂ ಏನ್ ಮಾಡಬೇಕು ಅನ್ನೋದೇ ಅರ್ಥ ಆಗ್ತಾ ಇಲ್ಲಾ.
ವಿಶ್ವನಾಥ್,,, ಸುಭದ್ರ ಕಾಲ ಎಲ್ಲಾನು ಅರ್ಥ ಮಾಡಿಸುತ್ತೆ ಬಿಡು ಅಂತ ಹೇಳಿ ಅವರಿಗೆ ಸಮಾಧಾನ ಮಾಡಿ ತಿಂಡಿ ತಿಂತಾರೆ.
#######
ಸೂಪರ್ ಮಾರ್ಕೆಟ್ ಕ್ಯಾಶ್ ಕೌಂಟರ್ ಅಲ್ಲಿ ಪ್ರಿಯಾ, ಅಭಿ ಬಿಲ್ಲಿಂಗ್ ಮಾಡ್ತಾ ನಿಂತಿರ್ತಾರೆ. ವಿಶ್ವನಾಥ್ ಸೂಪರ್ ಮಾರ್ಕೆಟ್ ಒಳಗೆ ಬರ್ತಾರೆ. ಪ್ರಿಯಾ ತೇಜು ಅವರಿಗೆ ಗುಡ್ ಮಾರ್ನಿಂಗ್ ಹೇಳ್ತಾರೆ. ವಿಶ್ವನಾಥ್ ಅವರಿಗೆ ಗುಡ್ ಮಾರ್ನಿಂಗ್ ಹೇಳಿ ಆಫೀಸ್ ಗೆ ಹೋಗ್ತಾರೆ.
ತೇಜು,,, ಪ್ರಿಯಾ ಸರ್ ಬಂದ್ರು ನಿನ್ ಹೋಗು ನಾನ್ ನೋಡ್ಕೋತೀನಿ.
ಪ್ರಿಯಾ,,, ಸರಿ ನೋಡ್ಕೋ ಅಂತ ಹೇಳಿ ಕೆಲವೊಂದು ಪೇಪರ್ಸ್ ನಾ ಫೈಲ್ ನಾ ತೆಗೆದು ಕೊಂಡು ಆಫೀಸ್ ರೂಮ್ ಗೆ ಹೋಗ್ತಾ ಡೋರ್ ನಾಕ್ ಮಾಡ್ತಾಳೆ
ವಿಶ್ವನಾಥ್,, ಬಾ ಪ್ರಿಯಾ...
ಪ್ರಿಯಾ,,, ಸರ್ ನೆನ್ನೆ ಸೇಲ್ಸ್ ಫೈಲ್. ಸ್ಟಾಕ್ ಫೈಲ್. ಅಂತ ಹೇಳಿ ಟೇಬಲ್. ಮೇಲೆ ಇಡ್ತಾಳೆ.
ವಿಶ್ವ,,, ಇದನ್ನ ನಾನ್ ನೋಡ್ತೀನಿ. ನಾಳೆ ನಾನ್ ಹೊರಗೆ ಹೋಗ್ತಾ ಇದ್ದೀನಿ, ಬರೋದಕ್ಕೆ ಸಂಜೆ ಆಗುತ್ತೆ, ನಾಳೆ ಆಫೀಸ್ ಗೆ ನಯನಾ ಬರ್ತಾಳೆ. ಅವಳು ನಿಮಗೆ ಹೆಲ್ಪ್ ಮಾಡ್ತಾಳೆ.
ಪ್ರಿಯಾ,,, ಸರ್ ಅವಳಿಗೆ ಏನಕ್ಕೆ ತೊಂದ್ರೆ, ನಾವೆಲ್ಲ ಇದ್ದೀವಿ ಅಲ್ವಾ ನೋಡ್ಕೋತೀವಿ.
ವಿಶ್ವ,,, ನೋಡ್ಕೋತೀರಾ ಪ್ರಿಯಾ ಅದಕ್ಕೆ ಅಲ್ವಾ, ಈ ಸೂಪರ್ ಮಾರ್ಕೆಟ್ ನಾ ನಿಮ್ ಕೈಗೆ ಕೊಟ್ಟಿರೋದು. ನಾಳೆ ಸಂಡೆ ಬೇರೆ ಅದು ಬೇರೆ ಹಬ್ಬಗಳ ಸೀಸನ್ ಬೇರೆ ಕಸ್ಟಮರ್ಸ್ ಜಾಸ್ತಿ ಬರ್ತಾ ಇರ್ತಾರೆ. ನಿಮಗೆ ಸಹಾಯ ಆಗಿ ಇರಲಿ ಅಂತ ಬರೋಕೆ ಹೇಳ್ದೆ.
ಪ್ರಿಯಾ,,, ಸರಿ ಸರ್, ಬೇರೆ ಏನಾದ್ರು ಕೆಲಸ ಇದೆಯ ಸರ್.
ವಿಶ್ವ,,, ಏನಿಲ್ಲಾ ನಿನ್ ಹೋಗು, ಏನಾದ್ರು ಇದ್ರೆ ಕಾಲ್ ಮಾಡ್ತೀನಿ.
ಪ್ರಿಯಾ,,, ಓಕೆ ಸರ್ ಅಂತ ಹೇಳಿ ಆಫೀಸ್ ರೂಮಿಂದ ಹೊರಗೆ ಬಂದು. ಬಿಲ್ಲಿಂಗ್ ಕೌಂಟರ್ ಹತ್ತಿರ ಹೋಗ್ತಾಳೆ.
ಪ್ರಿಯಾ,, ತೇಜು ಅಭಿ ನಾ ನೋಡಿ,, ಅಭಿ ಸರ್ ನಾಳೆ ಹೊರಗೆ ಹೋಗ್ತಾ ಇದ್ದಾರೆ, ಅವರ ಮಗಳು ನಯನಾ ಬರ್ತಾಳೆ ಅಂತ ಹೇಳಿದ್ಲು.
ತೇಜು,,, ಏನು ನಯನಾ ಬರ್ತಾ ಇದ್ದಾಳ, ಮದುವೆಗೂ ಮೊದಲು ಈ ಸೂಪರ್ ಮಾರ್ಕೆಟ್ ಗೆ ಬಂದವಳು, ಆಮೇಲೆ ಬರೋದನ್ನೇ ಬಿಟ್ಟು ಬಿಟ್ಟಳು. ಮದುವೆಗೂ ಕರೆದಿಲ್ಲ, ಅವಳ ಗಂಡನನ್ನ ಕೂಡ ಪರಿಚಯ ಮಾಡಿಸಿಲ್ಲ, ಮಾತಾಡಿಸೋಕು ಸಿಗಲಿಲ್ಲ, ಬರ್ಲಿ ಒಂದು ಕೈ ನೋಡ್ಕೋತೀನಿ.
ಪ್ರಿಯಾ,,, ಲೇ ನಿನಗೆ ಗೊತ್ತು ತಾನೇ ಅವಳು ಏನಕ್ಕೆ ಬರೋದನ್ನ ಬಿಟ್ಲು ಅಂತ, ಇಷ್ಟ ಇಲ್ಲಾ ಅಂದ್ರು ಅವರ ಮನೆಯವರು ಅವಳಿಗೆ ಮದುವೆ ಮಾಡಿಸಿದ್ರು. ಅ ಕೋಪಕ್ಕೆ ಅವಳು ಇಲ್ಲಿಗೆ ಬರೋದನ್ನ ಬಿಟ್ಟು ಬಿಟ್ಲು. ಇಷ್ಟು ವರ್ಷ ಆದಮೇಲೆ ಮತ್ತೆ ಇಲ್ಲಿಗೆ ಬರ್ತಾ ಇದ್ದಾಳೆ, ನಿನ್ ಯಾಕೆ ಏನು ಅನ್ನೋದನ್ನ ಕೇಳೋಕೆ ಹೋಗಬೇಡ ಮತ್ತೆ ಅವಳ ಮನಸ್ಸಿಗೆ ಹರ್ಟ್ ಅದ್ರೆ ಕಷ್ಟ.
ತೇಜು,,, ಅದು ನಿಜಾನೆ ಕಣೆ ಅಂತ ಹೇಳ್ತಾಳೆ.
ಅಭಿ ಇವರ ಮಾತಿನ ಬಗ್ಗೆ ಅಷ್ಟೊಂದು ಗಮನ ಕೊಡದೆ ಕೇಳಿಸಿಕೊಳ್ಳದೆ ಅವನ ಪಾಡಿಗೆ ಅವನು ವರ್ಕ್ ಮಾಡ್ತಾ ಇದ್ದು ಬಿಡ್ತಾನೆ...
################################