....... ನಯನಾ ಅಭಿ ಗೆ ತಿಂಡಿ ಮಾಡಿಕೊಂಡು ಮಗಳನ್ನ ಕರ್ಕೊಂಡು ರೂಮ್ ಒಳಗೆ ಬರ್ತಾಳೆ. ತಿಂಡಿ ಪ್ಲೇಟ್ ನಾ ಟೇಬಲ್ ಮೇಲೆ ಇಟ್ಟು ಅಭಿ ಪಕ್ಕ ಕೂತು, ಅಭಿ ಅಂತ ಅವನನ್ನ ಮುಟ್ಟಿ ಕರೀತಾಳೆ. ಅಭಿ ಕಣ್ ಬಿಟ್ಟು ನೋಡ್ತಾನೆ ನಯನಾ ಪಕ್ಕದಲ್ಲಿ ಕೂತ್ಕೊಂಡು ಇರ್ತಾಳೆ.
ನಯನಾ,,, ತಿಂಡಿ ಮಾಡ್ಕೊಂಡು ಬಂದಿದ್ದೀನಿ ಎದ್ದೇಳಿ ತಿಂಡಿ ಮಾಡಿ ಮತ್ತೆ ರೆಸ್ಟ್ ಮಾಡೀವಿರಂತೆ.
ಅಭಿ,,, ನನಗೆ ಏನು ಬೇಡ ನೀವು ಹೋಗಿ.
ನಯನಾ,,, ಹಾಗೇ ಹೇಳಿದ್ರೆ ಹೇಗೆ ಬೆಳ್ಳಿಗೆ ಯಿಂದ ಏನು ತಿಂದಿಲ್ಲ ಸ್ವಲ್ಪ ತಿಂಡಿ ತಿನ್ನಿ ಇಲ್ಲಾ ಅಂದ್ರೆ ಇನ್ನು ಸುಸ್ತಾಗುತ್ತೆ ಎದ್ದೇಳಿ ಅಂತ ಅಭಿ ನಾ ಇಡಿದು ಎಬ್ಬಿಸಿ ಕೂರಿಸಿ. ಅನಾ ಕಡೆಗೆ ನೋಡಿ ಅನಾ ಅಡುಗೆ ಮನೇಲಿ ಬಿಸಿ ನೀರು ಇಟ್ಟಿದ್ದೀನಿ ಅಜ್ಜಿ ಗೆ ಹೇಳಿ ತಗೋ ಬಾ ಹೋಗು ಪಪ್ಪಾ ಗೆ ಅಂತ ಹೇಳ್ತಾಳೆ. ಅನಾ ಆಯ್ತು ಅಮ್ಮ ಅಂತ ಅಲ್ಲಿಂದ ಹೋಗ್ತಾಳೆ.
ನಯನಾ ಕೈಗೆ ತಿಂಡಿ ಪ್ಲೇಟ್ ನಾ ಇಡಿದುಕೊಂಡು ಅಭಿ ಗೆ ತಿನ್ನಿಸೋಕೆ ಹೋಗ್ತಾಳೆ.
ಅಭಿ,,, ಕೊಡಿ ನಾನೆ ತಿಂತೀನಿ...
ನಯನಾ ಅಭಿ ಕೈ ಕಡೆಗೆ ನೋಡ್ತಾ ಈ ಕೈಲಿ ತಿಂಡಿ ತಿಂತಿರಾ ಡ್ರಿಪ್ಸ್ ಇಂಜೆಕ್ಷನ್ ಇದೆ ಕೈಲಿ, ಅದೇನಾದ್ರು ಶೇಕ್ ಅದ್ರೆ ರಕ್ತ ಬರುತ್ತೆ ನಾನೆ ತಿಂಡಿ ತಿನ್ನಿಸ್ತೀನಿ ಅಂತ ಹೇಳಿ ಕೈ ತುತ್ತು ಮಾಡಿ ಅಭಿ ಬಾಯಿ ಮುಂದೆ ಇಡ್ತಾಳೆ. ಅಭಿ ಬಾಯಿ ತೆಗಿದೆ ಹಾಗೇ ಇರೋದನ್ನ ನೋಡಿ. ಬಾಯಿ ತೇಗಿ ರೀ ಇಲ್ಲಾ ಅಂದ್ರೆ ಹೇಗೆ ತಿನ್ನಿಸೋದು ಅಂತ ಹೇಳ್ತಾಳೆ. ಅಭಿ ಗೆ ಬೇರೆ ದಾರಿ ಇಲ್ಲದೆ ತಿನ್ನೋಕೆ ಶುರು ಮಾಡ್ತಾನೆ. ನಯನಾ ಅಭಿ ಗೆ ತಿಂಡಿ ತಿನ್ನಿಸ್ತಾ ಇರೋವಾಗ ಅನಾ ಬಿಸಿ ನೀರನ್ನ ತಗೋ ಬಂದು ಟೇಬಲ್ ಮೇಲೆ ಇಟ್ಟು ಹೋಗಿ ಅಭಿ ಪಕ್ಕ ಕೂತ್ಕೊಂಡು ಪಪ್ಪಾ ನೀನೇನು ಭಯ ಬೀಳಬೇಡ ಬೇಗ ಹುಷಾರಾಗ್ತೀಯ ಅಂತ ಮುದ್ದು ಮುದ್ದಾಗಿ ಹೇಳ್ತಾಳೆ. ಅಭಿ ಮಗಳ ಮಾತಿಗೆ ಒಂದು ಸ್ಮೈಲ್ ಮಾಡ್ತಾನೆ. ತಿಂಡಿ ತಿಂದ ಮೇಲೆ ಪ್ಲೇಟ್ ನಾ ಪಕ್ಕಕ್ಕೆ ಇಟ್ಟು. ಅಭಿ ಗೆ ನೀರನ್ನ ಕುಡಿಸಿ ಕೈ ನಾ ತೊಳೆದು ಕೊಂಡು. ಅನಾ ಈ ಪ್ಲೇಟ್ ನಾ ಹೋಗಿ ಅಡುಗೆ ಮನೇಲಿ ಇಡು ನಾನು ಪಪ್ಪಾ ನಾ ಮಲಗಿಸಿ ಬರ್ತೀನಿ ಅಂತ ಹೇಳ್ತಾಳೆ. ಅನಾ ಹ್ಮ್ ಸರಿ ಅಮ್ಮ ಅಂತ ಹೇಳಿ ಪ್ಲೇಟ್ ನಾ ತೆಗೆದುಕೊಂಡು ಹೋಗ್ತಾಳೆ..
ನಯನಾ ಅಭಿ ಪಕ್ಕ ಕೂತು ಅಭಿ ಕೈ ನಾ ಇಡ್ಕೊತಾಳೆ. ಅಭಿ ಗೆ ಯಾಕೆ ಏನು ಅಂತ ನೇ ಅರ್ಥ ಆಗೋದೇ ಇಲ್ಲಾ ನಯನಾ ಮುಖ ನಾ ನೋಡ್ತಾನೆ. ಅವಳ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಇರೋದು ಅವನಿಗೆ ಕಾಣುತ್ತೆ.
ನಯನಾ,,, ನನ್ನ ಲೈಫ್ ಅಲ್ಲಿ ಯಾರಿಗಾದ್ರೂ ಸಾರೀ ಥ್ಯಾಂಕ್ಸ್ ನಾ ಹೇಳದೆ ಇದ್ದೀನಿ ಅಂದ್ರೆ ಅದು ನಿನಗೆ ಅಭಿ, ಬಟ್ ಈ ಎರಡು ವಿಷಯ ಮಾತ್ರ ನಿನ್ನ ವಿಷಯ ದಲ್ಲಿ ತುಂಬಾ ಚಿಕ್ಕದು ಅಂತ ಅನ್ನಿಸುತ್ತೆ. ಅಪ್ಪ ಸಹಾಯ ಮಾಡಿದ್ರು ಅಂತ ಅವರ ಮಾತಿಗೆ ಬೆಲೆ ಕೊಟ್ಟು ಇಲ್ಲಿಗೆ ಬಂದ ನಿನಗೆ, ನಾನು ನಿನ್ನ ತಪ್ಪಾಗಿ ಅರ್ಥ ಮಾಡಿಕೊಂಡು ಅವಮಾನ ಮಾಡಿ ಮನೆಯಿಂದ ಹೊರಟು ಹೋಗು ಅಂತ ಹೇಳಿದೆ. ನಿನಗೆ ಅಷ್ಟು ಜ್ವರ ಇದ್ರು ಕಲ್ಲಿನ ಹಾಗೇ ನಿಂತು ನೋಡ್ತಾ ಇದ್ದೆ. ಅಪ್ಪನ ಹತ್ತಿರ ಇದ್ರೆ ಏನು ಸತ್ರೆ ಏನು ಅಂತ ಸ್ವಲ್ಪ ನು ಕನಿಕರ ಇಲ್ಲದೆ ಮಾತಾಡಿದೆ. ಯಾವಾಗಲು ಮಗಳ ಪರ ಇರ್ತಾ ಇದ್ದಾ ಅಪ್ಪ. ನಾನು ನಿನ್ನ ಬಗ್ಗೆ ಮಾತಾಡಿದ ಕ್ಷಣ ಸತ್ಯ ಏನು ನನ್ನ ತಪ್ಪೇನು ಅಂತ ನನಗೆ ಅರ್ಥ ಹಾಗೋ ಹಾಗೇ ಮಾತಾಡಿದ್ರು. ಅಪ್ಪನ ಪ್ರಾಣ ಕಾಪಾಡಿ ಅನಾ ಗೋಸ್ಕರ ಬಂದ ನಿನ್ನ ಅವಮಾನ ಮಾಡಿ ಕಳಿಸಿ ಎಷ್ಟು ದೊಡ್ಡ ತಪ್ಪು ಮಾಡಿದೆ ಅಂತ ನನಗೆ ಅರ್ಥ ಆಯ್ತು. ನೀನು ನನ್ನ ಕುತ್ತಿಗೆಗೆ ತಾಳಿ ಕಟ್ಟಿ ಇಷ್ಟು ವರ್ಷ ಆದ್ರು ಒಂದು ದಿನ ಕೂಡ ಹೇಗಿದ್ದೀಯ ತಿಂದ ಅಂತ ಕೇಳಿಲ್ಲ. ಅದ್ರೆ ಕುಡಿದು ನಡು ರಸ್ತೆ ಅಲ್ಲಿ ನನ್ನ ತಂದೆ ಗೆ ಅವಮಾನ ಮಾಡ್ತಾ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ ರೂಪೇಶ್ ನಾ ಅಪ್ಪ ಏನು ಮಾಡದೇ ನಮಗೋಸ್ಕರ ಅಷ್ಟು ಮಾತನ್ನ ಕೇಳಿಸಿಕೊಂಡು ಮೌನವಾಗಿ ಇದ್ದು ಬಿಟ್ಟರು. ಅದ್ರೆ ನೀನು ನನ್ನ ತಂದೆ ತಾಯಿಗೆ ಮಗನಾಗಿ. ನನಗೆ ಗಂಡನಾಗಿ. ಅನಾ ಗೆ ತಂದೆ ಆಗಿ. ಅವನು ಯಾರು ಏನು ಅಂತ ಹಿಂದೆ ಮುಂದೆ ನೋಡದೆ. ಮನೆಯವರ ವಿಷಯಕ್ಕೆ ಮನೆ ಹೆಣ್ಣುಮಕ್ಕಳ ವಿಷಯಕ್ಕೆ ಬಂದ್ರೆ ಏನಾಗುತ್ತೆ ಅಂತ ಅವನಿಗೆ ಸರಿಯಾದ ಪಾಠ ಕಲಿಸಿದೆ.
ಅಭಿ,,, ರೂಪೇಶ್ ಹೆಸರು ಕೇಳಿ ನಯನಾ ಮುಖ ನೋಡ್ತಾನೆ.
ನಯನಾ,,, ಗೊತ್ತಾಯಿತು ಅಭಿ, ಒಳ್ಳೆ ಮನಸ್ಸಿಂದ ಇಷ್ಟೆಲ್ಲಾ ಮಾಡಿದ ನಿನ್ನ ಅರ್ಥ ಮಾಡಿಕೊಳ್ಳದೆ ಅಪಾರ್ಥ ಮಾಡಿಕೊಂಡೆ. ಅದು ಎಷ್ಟು ದೊಡ್ಡ ತಪ್ಪು ಅಂತ ಅರ್ಥ ಆಯ್ತು. ಮನಸಾರೆ ಹೇಳ್ತಾ ಇದ್ದೀನಿ ಅಭಿ, ನಿನ್ನ ಪರಿಚಯ ನನಗೆ ಪರಿಸ್ಥಿತಿ ಸರಿಯಾಗಿ ಇದ್ದಾಗ ಆಗಿದ್ದಿದ್ರೆ. ನಾನೆ ನಿನ್ನ ಇಷ್ಟಪಟ್ಟು ಪ್ರೀತಿಸಿ ಮದುವೆ ಆಗ್ತಾ ಇದ್ದೆ. ಅದ್ರೆ ನನ್ನ ಲೈಫ್ ಗೆ ನೀನು ಬಂದಿದ್ದೆ ಬೇರೆ ಪರಿಸ್ಥಿತಿ ಅಲ್ಲಿ ಅದು ನಿನಗೂ ಚೆನ್ನಾಗಿ ಗೊತ್ತು. ನನಗೆ ಆಗ ಅನಾ ಬಿಟ್ರೆ ಬೇರೇನೂ ಬೇಕಾಗಿ ಇರಲಿಲ್ಲ. ಅಪ್ಪ ಅಮ್ಮನಿಗೆ ಎಷ್ಟು ಹೇಳಿದರು ಕೇಳಿಲ್ಲ. ಒಂದು ಕಡೆ ನನ್ನವರನ್ನ ಕಳೆದುಕೊಂಡ ನೋವು. ಒಂದು ಕಡೆ ಅನಾ. ಇನ್ನೊಂದು ಕಡೆ ನನ್ನಿಂದ ನೋವು ಪಡ್ತಾ ಇರೋ ನನ್ನ ಅಪ್ಪ ಅಮ್ಮ. ಅದ್ರೆ ನನ್ನ ಮನಸ್ಥಿತಿ ಬಗ್ಗೆ ಯೋಚ್ನೆ ಮಾಡೋವ್ರು ಅರ್ಥ ಮಾಡಿಕೊಳ್ಳೋವ್ರು ಯಾರು ಇರಲಿಲ್ಲ. ನನಗೆ ಇಷ್ಟ ಇಲ್ಲದೆ ನೀನು ನನ್ನ ಜೀವನಕ್ಕೆ ಬಂದಾಗ ಇದೆಲ್ಲಾ ನಿನ್ನ ಮೇಲೆ ದ್ವೇಷ ಮಾಡ್ಕೊಳ್ಳೋ ಹಾಗೇ ಮಾಡ್ತು. ಅದ್ರೆ ನಿನ್ನ ಒಳ್ಳೆ ಮನಸ್ಸಿನ ಮುಂದೆ ನನ್ನಲ್ಲಿ ಇದ್ದಾ ದ್ವೇಷ ಕೋಪ ಸತ್ತು ಸಮಾಧಿ ಆಗಿ. ನಿನ್ನ ಮೇಲೆ ಗೌರವ, ಪ್ರೀತಿ ಹುಟ್ಟೋಕೆ ಶುರುವಾಯ್ತು. ನನ್ನ ಜೀವನದಿಂದ ಹೊರಟು ಹೋಗು ಅಂತ ಹೇಳಿದ ಮನಸ್ಸೇ ಈಗ ಜೀವನ ಪೂರ್ತಿ ನಿನ್ನ ಜೊತೆ ನೇ ಬದುಕಬೇಕು ಅಂತ ಹೇಳ್ತಾ ಇದೆ. ಅಂತ ಹೇಳಿ ಕತ್ತಲ್ಲಿ ಇದ್ದಾ ತಾಳಿ ನಾ ಕೈಲಿ ಇಡ್ಕೊಂಡು. ಮನಸಾರೆ ಇಷ್ಟ ಪಟ್ಟು ನೀನು ಕಟ್ಟಿದ ಈ ತಾಳಿ ಮೇಲೆ ಪ್ರಮಾಣ ಮಾಡಿ ಹೇಳ್ತಾ ಇದ್ದೀನಿ ಅಭಿ ನನಗೆ ನೀನು ಬೇಕು. ಕಷ್ಟ ಸುಖ ಏನೇ ಇರಲಿ ನಿನ್ನ ಜೊತೆ ಬದುಕ ಬೇಕು. ನಿನ್ನ ಪ್ರೀತಿ ಬೇಕು. ನಾನು ಮಾಡಿದ ತಪ್ಪಿಗೆ ನೀನು ನನಗೆ ಏನ್ ಶಿಕ್ಷೆ ಬೇಕಾದ್ರು ಕೊಡು, ಅದ್ರೆ ನನ್ನಿಂದ ದೂರ ಮಾತ್ರ ಹೋಗಬೇಡ. ಅಂತ ಹೇಳಿ ಕಣ್ಣೀರು ಸುರಿಸುತ್ತಾ ಅಭಿ ನಾ ಗಟ್ಟಿಯಾಗಿ ತಬ್ಬಿಕೊಂಡು, iloveu ಅಭಿ, iloveu. ಐಮ್ ಸಾರೀ, iloveu ಅಂತ ಹೇಳ್ತಾ ಅಳ್ತಾಳೆ.
ಅಭಿ ಮನಸಲ್ಲಿ ಸಾವಿರ ಗೊಂದಲ ಇದ್ರು ಅ ಕ್ಷಣ ನಯನಾ ಮನಸ್ಸಿನ ಮಾತನ್ನೇ ಕೇಳು ಅಂತ ಅವನ ಮನಸ್ಸು ಹೇಳಿತು, ಅವನಿಗೆ ಅರಿವಿಲ್ಲದೆ ಅವನ ಕೈಗಳು ನಯನಾ ನಾ ಅಪ್ಪಿಕೊಂಡವು. ನಯನಾ ಗೆ ಅಭಿ ಅಪ್ಪಿಕೊಂಡ ಅ ಕ್ಷಣ ಅವಳ ಮನಸಲ್ಲಿ ಇದ್ದಾ ನೋವೆಲ್ಲಾ ಸತ್ತು ಸಂತೋಷದಿಂದ ತುಂಬಿ ಕೊಳ್ತು.
ಮಗಳನ್ನ ಊಟಕ್ಕೆ ಕರಿಯೋಣ ಅಂತ ಮೊಮ್ಮಗಳ ಜೊತೆಗೆ ರೂಮ್ ಹತ್ತಿರ ಬಂದು ನಯನಾ ಮಾತಾಡೋದನ್ನ ಕೇಳಿ ಅಲ್ಲೇ ರೂಮ್ ಡೋರ್ ಹತ್ತಿರ ನಿಂತು ಬಿಟ್ಟರು ಸುಭದ್ರ, ಇಷ್ಟೋತ್ತು ಮಾತಾಡಿದ ವಿಷಯ ಈಗ ಅವರಲ್ಲಿ ಇರೋ ಪ್ರೀತಿ ನೋಡಿ ಅವರ ಮನಸ್ಸಿಗೆ ಎಷ್ಟು ಖುಷಿ ಆಯ್ತು ಅಂತ ಅವರ ಕಣ್ಣಲ್ಲಿ ತುಂಬಿಕೊಂಡ ಕಣ್ಣೀರೇ ಹೇಳ್ತಾ ಇದೆ. ಸುಭದ್ರ ಅನಾ ಗೆ ರೂಮ್ ಒಳಗೆ ಹೋಗು ಅಂತ ಹೇಳಿ ಕಳಿಸಿ ಸುಭದ್ರ ಅಲ್ಲಿಂದ ಹೊರಟು ಹೋಗ್ತಾರೆ.
ಅಭಿ ನಯನಾ ಹಾಗೇ ತಬ್ಬಿಕೊಂಡು ಇರೋವಾಗ ಅನಾ ಬಂದು ಅಭಿ ನಾ ನಯನಾ ನಾ ತಬ್ಬಿಕೊಂಡು, iloveu ಪಪ್ಪಾ iloveu ಅಮ್ಮ ಅಂತ ಹೇಳ್ತಾಳೆ. ಸ್ವಲ್ಪ ಹೊತ್ತು ಮೂರು ಜನ ಹಾಗೇ ಅಪ್ಪಿಕೊಂಡು ಇದ್ದು ಬಿಡ್ತಾರೆ.
ಅನಾ,,, ಅಮ್ಮ ಹೀಗೆ ಇದ್ರೆ ಪಪ್ಪಾ ರೆಸ್ಟ್ ಮಾಡೋದು ಯಾವಾಗ, ನಾವು ಊಟ ಮಾಡೋದು ಯಾವಾಗ ಅಂತ ಕೇಳ್ತಾ, ಅಮ್ಮ ನಾ ಮುಖ ನೋಡ್ತಾಳೆ.
ನಯನಾ,,, ಛೇ ಮರೆತು ಹೋದೆ ಅಂತ ಸಾರೀ ಬಂಗಾರ ಅಂತ ಅನಾ ಕೆನ್ನೆಗೆ ಮುತ್ತಿಟ್ಟು. ಅಭಿ ಗೆ ರೀ ನೀವು ಸ್ವಲ್ಪ ಹೊತ್ತು ಮಲಕ್ಕೋಳ್ಳಿ, ಅಂತ ಹೇಳಿ ಅಭಿ ನಾ ಮಲಗಿಸಿ, ಅನಾ ನಾ ಕರ್ಕೊಂಡು ಬಾ ಹೋಗೋಣ ಅಂತ ಹೇಳಿ ಊಟ ಮಾಡೋಕೆ ಹೋಗ್ತಾರೆ.
ಕಣ್ ಮುಚ್ಚಿ ಮಲಗಿದ್ದ ಅಭಿ ಕಣ್ಣಲ್ಲಿ ಕಣ್ಣೀರು ಬರೋಕೆ ಶುರುವಾಗುತ್ತೆ. ಹಾಗೇ ನಿದ್ದೆಗೆ ಜಾರ್ತನೆ..
ನಯನಾ ಅನಾ ಸುಭದ್ರ ಮೂರು ಜನ ಒಟ್ಟಿಗೆ ಕೂತು ಊಟ ಮಾಡ್ತಾರೆ. ಊಟ ಅದ ಮೇಲೆ ಅನಾ ಗೆ ರೂಮ್ ಗೆ ಹೋಗಿ ಪಪ್ಪಾ ನಾ ಡಿಸ್ಟರ್ಬ್ ಮಾಡದೇ ಮಲಕ್ಕೋಳ್ಳೋಕೆ ಹೇಳ್ತಾಳೆ. ಅನಾ ಸರಿ ಅಮ್ಮ ಅಂತ ಹೇಳಿ ರೂಮ್ ಗೆ ಹೋಗಿ ಅಭಿ ನಾ ಅಪ್ಪಿಕೊಂಡು ಮಲಗಿ ಕೊಳ್ತಾಳೆ.
ನಯನಾ,,, ಅಮ್ಮ ನಾನ್ ಹೋಗಿ ಅಭಿ ಬಟ್ಟೆಗಳನೆಲ್ಲ ನನ್ನ ರೂಮ್ ಗೆ ಶಿಫ್ಟ್ ಮಾಡ್ತೀನಿ,
ಸುಭದ್ರ,,, ಒಬ್ಬಳೇ ಕಷ್ಟ ಆಗುತ್ತೆ ನಾನು ಬರ್ತೀನಿ ನಡಿ. ಅಂತ ಹೇಳಿ ಇಬ್ಬರು ಅಭಿ ಮಲಗ್ತಾ ಇದ್ದಾ ರೂಮಿಗೆ ಬರ್ತಾರೆ.
ಅಭಿ ಅ ಮನೆಗೆ ಬಂದ ಮೇಲೆ, ಅನಾ ಬಿಟ್ಟರೆ ಅ ರೂಮಿನೊಳಗೆ ಯಾರು ಬರಲಿಲ್ಲ. ನಯನಾ ಸುಭದ್ರ ಗೆ ರೂಮಿನ ಒಳಗೆ ಬಂದು ನೋಡ್ತಾರೆ ರೂಮ್ ಫುಲ್ ಕ್ಲೀನ್ ಆಗಿ ನೀಟ್ ಆಗಿ ಇರುತ್ತೆ. ಕಬೋರ್ಡ್ ತೆಗೆದು ನೋಡ್ತಾರೆ. ಅಭಿ ಬಟ್ಟೆಗಳೆಲ್ಲ ಕ್ಲೀನ್ ಆಗಿ ಫೋಲ್ಡ್ ಮಾಡಿ ಇಟ್ಟಿರೋದು ಕಾಣುತ್ತೆ. ಸ್ವಲ್ಪ ಬಟ್ಟೆಗಳೇ ಆದರೂ ಕ್ಲೀನ್ ಆಗಿ ಇಟ್ಟಿರೋದನ್ನ ನೋಡಿ ಇಬ್ಬರಿಗೂ ಖುಷಿ ಆಗುತ್ತೆ. ಅಮ್ಮ ಮಗಳು ಇಬ್ಬರು ಮಾತಾಡಿಕೊಂಡು ಶಿಫ್ಟ್ ಮಾಡೋ ಕೆಲಸ ನಾ ಶುರು ಮಾಡ್ತಾರೆ. ಸ್ವಲ್ಪ ಸಮಯದ ನಂತರ ಅ ಕೆಲಸ ಮುಗಿದು ಹೋಗುತ್ತೆ.
ಅನಾ ಅಭಿ ನಾ ಅಪ್ಪಿಕೊಂಡು ಮಲಗಿರೋದನ್ನ ನೋಡಿ
ಸುಭದ್ರ,,, ಹ್ಮ್ ಇಷ್ಟು ದಿನ ನಿನ್ನ ಜೊತೆಗೆ ಮಲಗ್ತಾ ಇದ್ಲು. ಈಗ ಅವರಪ್ಪ ಬಂದಿದ್ದೆ ನೋಡು ಹೇಗೆ ತಬ್ಬಿಕೊಂಡು ಮಲಗಿದ್ದಾಳೆ, ಇನ್ನ ಅವಳನ್ನ ಇಡಿಯೋದಕ್ಕೆ ಆಗೋದಿಲ್ಲ. ಅಂತ ಹೇಳ್ತಾ ರೂಮಿಂದ ಹೊರಗೆ ಬರ್ತಾರೆ.
ನಯನಾ,,, ಅಮ್ಮ ನಾ ಹಿಂದೇನೆ ನಡೆದುಕೊಂಡು ಹೋಗಿ ಹಾಲ್ ಅಲ್ಲಿ ಇರೋ ಸೋಫಾ ಮೇಲೆ ಕೂತು. ಅಮ್ಮ ಅಭಿ ಗೆ ಹುಷಾರಾದ ಮೇಲೆ ಶಾಪಿಂಗ್ ಗೆ ಹೋಗಬೇಕು. ಅವರಿಗೆ ಬಟ್ಟೆ ಗಳು ಕಮ್ಮಿ ಇದ್ದಾವೆ. ಕೆಲಸಕ್ಕೆ ಹಾಕೊಂಡು ಹೋಗೋಕೆ ಬಟ್ಟೆಗಳು, ನೈಟ್ ಹಾಕಿ ಕೊಳ್ಳೋಕೆ ಬಟ್ಟೆಗಳು. ಹೊರಗಡೆ ಹೊದಾಗ ಹಾಕ್ಕೋಳೋಕೆ, ಎಲ್ಲಾದ್ರೂ ಫಂಕ್ಷನ್ ಗೆ ಹೋಗಬೇಕಾದ್ರೆ ಹಾಕ್ಕೊಳ್ಳೋಕೆ. ಫುಲ್ ಶಾಪಿಂಗ್ ಮಾಡಬೇಕು ಅಂತ ಮಾತಾಡ್ತಾ ಇರೋವಾಗ
ಸುಭದ್ರ,,,, ಮಗಳು ಮಾತಾಡೋದನ್ನ ಕೇಳ್ತಾ ಖುಷಿ ಪಡ್ತಾ ನಗ್ತಾ ಇರ್ತಾರೆ.
ನಯನಾ,,, ಅಮ್ಮ ನಗ್ತಾ ಇರೋದನ್ನ ನೋಡಿ,, ಯಾಕಮ್ಮ ನಗ್ತಾ ಇದ್ದಿಯಾ, ಏನಾದ್ರು ಜಾಸ್ತಿ ಮಾತಾಡಿದ್ನ?
ಸುಭದ್ರ,,, ಇಲ್ಲಾ ನಯನಾ ತುಂಬಾ ಖುಷಿ ಆಗ್ತಾ ಇದೆ. ನಿನಗೆ ಏನೇನ್ ತಗೋಬೇಕು ಅನ್ನಿಸ್ತುತ್ತೋ ತಗೋ, ನೀವು ಸಂತೋಷ ವಾಗಿ ಇದ್ರೆ ನಮಗೆ ಅಷ್ಟೇ ಸಾಕು.
ನಯನಾ,,, ಅಮ್ಮ ನಿನ್ನ ಒಂದು ವಿಷಯ ಕೇಳ್ಳ?
ಸುಭದ್ರ,,, ಹ್ಮ್ ಕೇಳಮ್ಮ ಏನ್ ವಿಷಯ.
ನಯನಾ,,, ಅಮ್ಮ ಅಭಿ ನಾನು ಮದುವೆ ಅದ ವಿಷಯ ಅಭಿ ಮನೇಲಿ ಅವರ ಅಮ್ಮನಿಗೆ ಗೊತ್ತಾ?
ಸುಭದ್ರ,,,, ಇಲ್ಲಾ ನಯನಾ ಅಭಿ ಮದುವೆ ಆಗಿರೋ ವಿಷಯ ಅವರ ಮನೇಲಿ ಯಾರಿಗೂ ಗೊತ್ತಿಲ್ಲ. ಅಭಿ ನೇ ಹೇಳೋದು ಬೇಡ ಅಂತ ನಿಮ್ ಅಪ್ಪ ಗೆ ಹೇಳಿದ ಅಂತೇ.
ನಯನಾ,,,, ಹೌದ ಮತ್ತೆ ಇವಾಗ ಅವರ ಮನೇಲಿ ಮದುವೆ ಅದ ವಿಷಯ ಗೊತ್ತಾದ್ರೆ. ಅಭಿ ಅವರ ಅಮ್ಮ ನನ್ನ ಸೊಸೆ ಅಂತ ಅನಾ ನಾ ಮೊಮ್ಮಗಳು ಅಂತ ಒಪ್ಕೋತಾರ?
ಸುಭದ್ರ,,, ಖಂಡಿತ ಒಪ್ಕೋತಾರೆ ನೀನು ಅದರ ಬಗ್ಗೆ ಏನು ಯೋಚ್ನೆ ಮಾಡಬೇಡ. ಬೇಕಾದ್ರೆ ನೀನೇ ನೋಡು ಅಭಿ ಮನೇಲಿ ನಿನಗೆ ನಿನ್ನ ಮಗಳಿಗೆ ಯಾವ ರೀತಿ ಗೌರವ ಪ್ರೀತಿ ಸಿಗುತ್ತೆ ಅಂತ.
ನಯನಾ,,,,ಸರಿ ಅಮ್ಮ ನಾನ್ ಹೋಗಿ ಸ್ವಲ್ಪ ಹೊತ್ತು ಮಲಗ್ತೀನಿ, ಸಂಜೆ ಅಭಿ ನಾ ಮತ್ತೆ ಹಾಸ್ಪಿಟಲ್ ಗೆ ಕರ್ಕೊಂಡು ಹೋಗಬೇಕು,.
ಸುಭದ್ರ,,, ಹ್ಮ್ ಸರಿ ಹೋಗಿ ರೆಸ್ಟ್ ಮಾಡು.
ನಯನಾ ಎದ್ದು ರೂಮ್ ಗೆ ಹೋಗ್ತಾಳೆ..
####
ನಯನಾ...ಸಂಜೆ ಅಭಿ ನಾ ಹಾಸ್ಪಿಟಲ್ ಗೆ ಕಾರ್ ಅಲ್ಲಿ ಕಕೊಂಡು ಹೋಗ್ತಾಳೆ. ಈಗ ನಯನಾ ಗೆ ಅಭಿ ನೇ ಅವಳ ಪ್ರಪಂಚ ಆಗಿ ಬಿಟ್ಟ. ಅವನು ಪೂರ್ತಿ ಗುಣ ಆಗೋವರೆಗೂ ಮನೆ ಬಿಟ್ಟು ಎಲ್ಲಿಗೂ ಕಳಿಸೋದಿಲ್ಲ. ಹೀಗೆ ನಾಲಕ್ಕು ದಿನ ಗಳು ಕಳೆದು ಹೋದವು..
@@@@@@@@@@@@@@@@@@@@@@@@@