ಬೆಳ್ಳಿಗೆ ಮಗಳ ಮುದ್ದು ಮುದ್ದು ಮಾತಿಗೆ ಅಭಿ ಗೆ ಎಚ್ಚರ ಆಗುತ್ತೆ. ಅಭಿ ಕಣ್ ಬಿಟ್ಟು ನೋಡ್ತಾನೆ ಅನಾ ಮೊಬೈಲ್ ಅಲ್ಲಿ ಯಾರ್ ಜೊತೇನೋ ಮಾತಾಡ್ತಾ ಇರ್ತಾಳೆ. ಅಭಿ ಎದ್ದು ಅನಾ ಗೆ ಗುಡ್ ಮಾರ್ನಿಂಗ್ ಬಂಗಾರ ಅಂತ ಹೇಳ್ತಾನೆ. ಅನಾ ಮೊಬೈಲ್ ಅಲ್ಲಿ ಮಾತಾಡೋದನ್ನ ನಿಲ್ಲಿಸಿ, ಅಭಿ ಕಡೆಗೆ ನೋಡ್ತಾ ಗುಡ್ ಮಾರ್ನಿಂಗ್ ಪಪ್ಪಾ ಅಂತ ಹೇಳಿ ಹತ್ತಿರ ಬಂದು ತಬ್ಬಿಕೊಂಡು, ಕೆನ್ನೆಗೆ ಮುತ್ತನ್ನ ಕೊಟ್ಟು, ಮತ್ತೆ ಮೊಬೈಲ್ ನಾ ಕಿವಿಗೆ ಇಟ್ಕೊಂಡು ಅ ಅಜ್ಜಿ ಹೇಳಿ ಅಂತ ಹೇಳ್ತಾಳೆ. ಅಭಿ ಅನಾ ಗೆ ಯಾರು ಅಂತ ಕೇಳ್ತಾನೆ. ಅನಾ ಯಾರೋ ಗೊತ್ತಿಲ್ಲ ಪಪ್ಪಾ ನಿನ್ನ ಮೊಬೈಲ್ ಗೆ ಕಾಲ್ ಬರ್ತಾ ನೇ ಇತ್ತು, ನಿನ್ ಮಲಗಿದ್ದೆ, ಅದಕ್ಕೆ ನಾನೆ ಪಿಕ್ ಮಾಡಿ ಮಾತಾಡ್ತಾ ಇದ್ದೀನಿ. ಯಾರೋ ಅಜ್ಜಿ ನಿನ್ನ ಹೆಸರು ಕೇಳಿದ್ರು, ಪಪ್ಪಾ ಮಲಗಿದ್ದಾರೆ ಅಂತ ಹೇಳಿದೆ. ನಿನ್ ಯಾರು ಅಂತ ಕೇಳಿದ್ರು ನಿಮ್ಮ ಮಗಳು ಅಂತ ಹೇಳಿದೆ. ಅಷ್ಟೇ ಅವಾಗಿಂದ ಮಾತಾಡ್ತಾ ನೇ ಇದ್ದಾರೆ. ನನಗು ಅವರು ತುಂಬಾ ಇಷ್ಟ ಆದ್ರು ಅದಕ್ಕೆ ನಾನ್ ಕೂಡ ಮಾತಾಡ್ತಾ ಇದ್ದೀನಿ ಅಂತ ಹೇಳಿದ್ಲು. ಅಭಿ ಶಾಕ್ ಆಗಿ ಅನಾ ಹತ್ತಿರ ಮೊಬೈಲ್ ತಗೊಂಡು ನೋಡ್ತಾನೆ, ಅಭಿ ಅವರ ಅಮ್ಮ,
ಅಭಿ,,, ಮನಸಲ್ಲೇ ಮುಗಿತು ನನ್ನ ಕಥೆ, ಅಂತ ಅನ್ಕೊಂಡು. ಮೊಬೈಲ್ ನಾ ಕಿವಿಗೆ ಇಟ್ಕೊಂಡು ಅಮ್ಮ ಹೇಳು.
ಅಮ್ಮ,,, ಏನೋ ಹೇಳೋದು ಕತ್ತೆ, ಅಂತು ಹೇಳಿದ ಕೆಲಸ ಮಾಡಿ ಬಿಟ್ಟೆ, ಏನಪ್ಪಾ ಮಗ ಇಷ್ಟು ದಿನ ಆದ್ರು ಮನೆ ಕಡೆ ಬರಲೇ ಇಲ್ಲಾ ಅಂತ ಅನ್ಕೊಂಡೆ, ಅದ್ರೆ ನೀನು ಹೆಂಡತಿ ಮಗಳ ಜೊತೆಗೆ ಆರಾಮಾಗಿ ಇದ್ದಿಯಾ.
ಅಭಿ,,,, ಮಾತು ತಡವರಿಸ್ತಾ ಅಮ್ಮ ಅದು ಹಾಗಲ್ಲ ಅಮ್ಮ.
ಅಮ್ಮ,,,, ಹಾಗೂ ಅಲ್ಲ ಈಗೂ ಅಲ್ಲ, ಹೆಂಡತಿ ಮಗಳನ್ನ ಕರ್ಕೊಂಡು , ಮುಚ್ಕೊಂಡು ಮನೆಗೆ ಬಾ, ಇಲ್ಲಾ ಅಂದ್ರೆ ನಿನ್ ಎಲ್ಲಿ ಇದ್ದಿಯೊ ಅಲ್ಲಿಗೆ ನಾನೆ ಬರ್ತೀನಿ. ಆಮೇಲೆ ಗೊತ್ತಲ್ಲಾ ನಾನು ಬಂದ್ರೆ ಕಥೆ ಏನಾಗುತ್ತೆ ಅಂತ.
ಅಭಿ,,,, ಗೊತ್ತಾಯ್ತು ಅದ್ರೆ ಇವಾಗ ಬರೋಕೆ ಆಗಲ್ಲಾ ಕೆಲಸ ಇದೆ. ಸ್ವಲ್ಪ ದಿನ ಬಿಟ್ಟು ಕರ್ಕೊಂಡು ಬರ್ತೀನಿ.
ಅಮ್ಮ,,, ಹ್ಮ್ ಸರಿ ಹುಷಾರು,
ಅಭಿ,,, ಸರಿ ಅಮ್ಮ ಕೆಲಸಕ್ಕೆ ಹೋಗಬೇಕು ನಾನ್ ಮತ್ತೆ ಕಾಲ್ ಮಾಡ್ತೀನಿ ಹುಷಾರು ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ.
ಅನಾ,, ಪಪ್ಪಾ ಯಾರು ನಿಮ್ ಅಮ್ಮ ನಾ?
ಅಭಿ,,, ಅನಾ ನಾ ನೋಡ್ತಾ ಹ್ಮ್ಮ್ ಹೌದು.
ಅನಾ,,,, ಫುಲ್ ಖುಷಿಯಾಗಿ ನಾನು ಅಜ್ಜಿ ಹತ್ತಿರ ಮಾತಾಡಿದೆ, ಅಜ್ಜಿ ನನಗೆ ಇಷ್ಟ ಆದ್ರು. ಪಪ್ಪಾ ನನ್ನ ಅಜ್ಜಿ ಹತ್ತಿರ ಕರ್ಕೊಂಡು ಹೋಗು.
ಅಭಿ,,, ಕರ್ಕೊಂಡು ಹೋಗ್ತೀನಿ ಇವಾಗ ಅಲ್ಲ. ಸ್ವಲ್ಪ ಕೆಲಸಗಳು ಇದ್ದಾವೆ ಅದನ್ನ ಮುಗಿಸಿ ಆಮೇಲೆ ಕರ್ಕೊಂಡು ಹೋಗ್ತೀನಿ ಸರಿನಾ.
ಅನಾ,,, ಹ್ಮ್ ಸರಿ ಪಪ್ಪಾ ಅಂತ ಹೇಳಿ ಬೆಡ್ ಇಳಿದು. ರೂಮಿಂದ ಹೊರಗೆ ಹೋಗ್ತಾಳೆ.
ಅಭಿ ಎದ್ದು ಫ್ರೆಶ್ ಅಪ್ ಆಗೋಕೆ ಹೋಗ್ತಾನೆ.
ನಯನಾ ಅಮ್ಮನ ಜೊತೆಗೆ ಸೇರಿಕೊಂಡು ಅಡುಗೆ ಮನೇಲಿ ತಿಂಡಿ ಮಾಡ್ತೀನಿ ಇರಬೇಕಾದ್ರೆ. ಅನಾ ಓಡಿ ಅಡುಗೆ ಮನೆಗೆ ಬರ್ತಾ. ಅಮ್ಮ ಅಮ್ಮ ನಾನು ಅಜ್ಜಿ ಹತ್ತಿರ ಮಾತಾಡಿದೆ, ಅಜ್ಜಿ ಹತ್ತಿರ ಮಾತಾಡಿದೆ ಅಂತ ಹೇಳ್ತಾಳೆ.
ನಯನಾ ಸ್ವಲ್ಪ ಕನ್ಫ್ಯೂಸ್ ಆಗಿ, ಏನು ಅಜ್ಜಿ ಹತ್ತಿರ ಮಾತಾಡಿದ, ಯಾವ್ ಅಜ್ಜಿ ಹತ್ತಿರ.
ಅನಾ,,, ಅಮ್ಮ ಯಾವ್ ಅಜ್ಜಿ ಅಲ್ಲ ಪಪ್ಪಾ ನಾ ಅಮ್ಮನ ಹತ್ತಿರ, ಮೊಬೈಲ್ ಅಲ್ಲಿ ಮಾತಾಡಿದೆ.
ನಯನಾ,,, ಏನು ನಿಮ್ ಪಪ್ಪಾ ಅವರ ಅಮ್ಮನ ನಾ ಹತ್ತಿರ ಮಾತಾಡಿದ.
ಅನಾ,,, ಹೌದು ಅಮ್ಮ,, ಅಜ್ಜಿ ಎಷ್ಟು ಚೆನ್ನಾಗಿ ಮಾತಾಡಿದ್ರು ಗೊತ್ತಾ. ನನಗಂತೂ ಅಜ್ಜಿ ತುಂಬಾ ಇಷ್ಟ ಆದ್ರು. ನಾನು ಕೂಡ ಅವರಿಗೆ ತುಂಬಾ ಇಷ್ಟ ಅದೇ. ನನ್ನ ಮುದ್ದು ಬಂಗಾರ ಚಿನ್ನು ಪುಟ್ಟಿ ಅಂತ ಎಲ್ಲಾ ಕರೆದ್ರು.
ಸುಭದ್ರ,,, ಓ ಹೌದ ಅಂತ ಅವಳನ್ನ ಎತ್ತಿಕೊಂಡು ಕೆನ್ನೆಗೆ ಮುತ್ತಿಟ್ಟು. ನಿನಗೆ ಹೊಸ ಅಜ್ಜಿ ತುಂಬಾ ಇಷ್ಟ ಅದ್ರ, ಹಾಗಾದ್ರೆ ಈ ಅಜ್ಜಿ ನಾ ಮರೆತು ಬಿಡ್ತೀಯ.
ಅನಾ,,, ಇಲ್ಲಾ ಅಜ್ಜಿ, ನನಗೆ ನೀನು ಇಷ್ಟ ಅವರು ಇಷ್ಟ ಆದ್ರು.
ಸುಭದ್ರ,,, ನನ್ನ ಬಂಗಾರ ಅಂತ ಕೆನ್ನೆಗೆ ಮುತ್ತನ್ನ ಕೊಡ್ತಾರೆ.
ಅನಾ,,, ಅಷ್ಟೇ ಅಲ್ಲ ಅಜ್ಜಿ ಪಪ್ಪಾ ಹೇಳಿದ್ರು ಅಜ್ಜಿ ಹತ್ತಿರ ಕರ್ಕೊಂಡು ಹೋಗ್ತೀನಿ ಅಂತ.
ನಯನಾ, ಸುಭದ್ರ,, ಇಬ್ಬರು ಸ್ವಲ್ಪ ಶಾಕ್ ಆಗ್ತಾರೆ.
ನಯನಾ,,, ಯಾವಾಗ ಕರ್ಕೊಂಡು ಹೋಗ್ತಾರೆ ಅಂತ ಹೇಳಿದ್ರು ಪಪ್ಪಾ.
ಅನಾ,,, ಯಾವಾಗ ಅಂತ ಹೇಳಿಲ್ಲ ಅಮ್ಮ ಸ್ವಲ್ಪ ದಿನ ಕೆಲಸ ಇದೆ ಆಮೇಲೆ ಕರ್ಕೊಂಡು ಹೋಗ್ತೀನಿ ಅಂತ ಹೇಳಿದ್ರು.
ನಯನಾ,,, ಹೌದ ಸರಿ, ಮೊದಲು ಈ ಹಾಲು ಕುಡಿ. ಅಂತ ಹೇಳ್ತಾ ಅವಳ ಕೈಗೆ ಹಾಲಿನ ಲೋಟ ಕೊಟ್ಟು. ನಿಮ್ ಪಪ್ಪಾ ಎದ್ರಾ.
ಅನಾ,,, ಹ್ಮ್ ಎದ್ದು ಅಜ್ಜಿ ಹತ್ತಿರ ಮಾತಾಡಿ, ಸ್ನಾನ ಮಾಡೋಕೆ ಹೋದ್ರು.
ಸುಭದ್ರ,, ನಯನಾ ಕಡೆಗೆ ನೋಡಿ, ಅಭಿ ಕೆಲಸಕ್ಕೆ ಹೋಗೋಕೆ ರೆಡಿ ಆಗ್ತಾ ಇದ್ದಾರೆ ಏನೋ ಹೋಗಿ ನಿನ್ ನೋಡು, ನಾನ್ ಇಲ್ಲಿ ನೋಡ್ಕೋತೀನಿ.
ನಯನಾ,,, ಸರಿ ಅಮ್ಮ ಅಂತ ಹೇಳ್ತಾ ಅಲ್ಲಿಂದ ಹೊರಟು ರೂಮ್ ಗೆ ಬರ್ತಾಳೆ. ಅಭಿ ಸ್ನಾನ ಮಾಡ್ತಾ ಇರೋ ಸೌಂಡ್ ನಾ ಕೇಳಿ, ಕಬೋರ್ಡ್ ತೆಗೆದು ಅಭಿ ಬಟ್ಟೆಗಳನ್ನ ಬೆಡ್ ಮೇಲೆ ಇಟ್ಟು. ರೀ ಬಟ್ಟೆಗಳನ್ನ ಬೆಡ್ ಮೇಲೆ ಇಟ್ಟಿದ್ದೀನಿ. ನೀವು ಸ್ನಾನ ಮಾಡಿ ರೆಡಿ ಆಗಿ ಬನ್ನಿ ತಿಂಡಿ ಕೊಡ್ತೀನಿ.
ಸ್ನಾನ ಮಾಡ್ತಾ ಇದ್ದಾ ಅಭಿ ಗೆ ನಯನಾ ಮಾತಿಗೆ ಏನ್ ಹೇಳಬೇಕು ಅನ್ನೋದೇ ಅರ್ಥ ಆಗಲ್ಲಾ. ಮಾತಾಡಿಲ್ಲ ಅಂದ್ರೆ ತಪ್ಪಾಗುತ್ತೆ ಅಂತ ಅನ್ಕೊಂಡು, ಸರಿ ಅಂತ ಹೇಳ್ತಾನೆ.
ನಯನಾ,,, ಸರಿ ರೀ ಅಂತ ಹೇಳಿ ಮತ್ತೆ ಅಡುಗೆ ಮನೆ ಕಡೆ ಹೋಗ್ತಾ ಇರೋವಾಗ ಅವರ ಅಪ್ಪ ಹಾಲ್ ಗೆ ಬಂದು ಕೂತ್ಕೋತಾರೆ.
ವಿಶ್ವ,,, ನಯನಾ ನಾ ನೋಡಿ, ಅಭಿ ಎದ್ನ ನಯನಾ.
ನಯನಾ,, ಎದ್ದು ಸ್ನಾನ ಮಾಡ್ತಾ ಇದ್ದಾರೆ ಅಪ್ಪ, ಮೋಸ್ಟ್ಲಿ ಕೆಲಸಕ್ಕೆ ಹೋಗಬಹುದು, ಅದಕ್ಕೆ ತಿಂಡಿ ರೆಡಿ ಮಾಡೋಣ ಅಂತ ಹೋಗ್ತಾ ಇದ್ದೀನಿ.
ವಿಶ್ವ,,, ಇಷ್ಟು ಬೇಗ ಅವಸರ ಏನಿತ್ತು. ನಾನ್ ನೋಡ್ಕೋತ ಇದ್ದೆ ಅಲ್ವಾ. ಇನ್ನು ಸ್ವಲ್ಪ ದಿನ ಆರಾಮಾಗಿ ರೆಸ್ಟ್ ಮಾಡಬೋದಿತ್ತು ಅಲ್ವಾ.
ನಯನಾ,,, ಈ ವಿಷಯ ನಾ ನೀವೇ ನಿಮ್ ಅಳಿಯನಿಗೆ ಹೇಳಿ, ಬಂದಮೇಲೆ ಅಂತ ಅಡುಗೆ ಮನೆ ಕಡೆ ಹೋಗ್ತಾಳೆ.
ವಿಶ್ವ ನಯನಾ ಮಾತಿಗೆ ನಕ್ಕು ನ್ಯೂಸ್ ಪೇಪರ್ ನಾ ಕೈಗೆ ತಗೋತಾರೆ.
****
ಅಭಿ ರೆಡಿ ಆಗಿ ಹಾಲ್ ಗೆ ಬರ್ತಾನೇ.
ವಿಶ್ವ,,,ಅಭಿ ನಾ ನೋಡಿ, ಅಭಿ ಇವಾಗ ಹೇಗಿದ್ದೀಯ?
ಅಭಿ,,, ಪರ್ವಾಗಿಲ್ಲ ಸರ್ ಆರಾಮಾಗಿ ಇದ್ದೀನಿ. ಸೂಪರ್ ಮಾರ್ಕೆಟ್ ಕೀ ಕೊಡಿ ನಾನ್ ಹೋಗಿರ್ತೀನಿ ನೀವು ನಿಧಾನಕ್ಕೆ ಬನ್ನಿ.
ವಿಶ್ವ,,, ಇಷ್ಟು ಬೇಗೆ ಏನಕ್ಕೆ ಅಭಿ, ಇನ್ನು ಸ್ವಲ್ಪ ದಿನ ರೆಸ್ಟ್ ಮಾಡಬೋದಿತ್ತು ಅಲ್ವಾ.
ಅಭಿ,,, ಇವಾಗ ಆರಾಮಾಗಿ ಇದ್ದೀನಿ ಸರ್, ಏನು ತೊಂದ್ರೆ ಇಲ್ಲಾ..
ನಯನಾ,,, ರೀ ಮೊದಲು ತಿಂಡಿ ಮಾಡಿ ಬನ್ನಿ ಆಮೇಲೆ ಕೀ ತಂದು ಕೊಡ್ತೀನಿ ಅಂತ ಹೇಳ್ತಾ ಡೈನಿಂಗ್ ಟೇಬಲ್ ಮೇಲೆ ತಿಂಡಿ ನಾ ಇಡ್ತಾಳೆ.
ಅಭಿ ಏನು ಮಾತನಾಡದೆ ಹೋಗಿ ಡೈನಿಂಗ್ ಟೇಬಲ್ ಹತ್ತಿರ ಕೂತ್ಕೋತಾನೆ. ಅನಾ ಓಡಿ ಬಂದು ಪಪ್ಪಾ ನಾನ್ ಬಡಿಸ್ತೀನಿ ನಾನ್ ಬಡಿಸ್ತೀನಿ ಅಂತ ಹೇಳ್ತಾಳೆ. ನಯನಾ ನೀನೇ ಬಡಿಸುವಿಯಂತೆ ಬಾ ಅಂತ ಹೇಳಿ ಅನಾ ನಾ ಡೈನಿಂಗ್ ಟೇಬಲ್ ಮೇಲೆ ಕುರಿಸ್ತಾಳೆ. ಅನಾ ಅಭಿ ಮುಂದೆ ಪ್ಲೇಟ್ ಇಟ್ಟು ತಿಂಡಿ ನಾ ಬಡಿಸ್ತಾಳೆ. ಅಭಿ ಮೊದಲು ಅನಾ ಗೆ ತಿನ್ನಿಸಿ ನಂತರ ಅವನು ತಿನ್ನೋಕೆ ಶುರು ಮಾಡ್ತಾನೆ. ನೋಡ್ತಾ ನೋಡ್ತಾ ಅಪ್ಪ ಮಗಳು ಇಬ್ಬರು ತಿಂಡಿ ಮಾಡಿ ಮುಗಿಸ್ತಾರೆ. ನಯನಾ ಸೂಪರ್ ಮಾರ್ಕೆಟ್ ಕೀ ತಂದು ಅಭಿ ಕೈಗೆ ಕೊಡ್ತಾಳೆ. ಅಭಿ ಕೀ ತಗೊಂಡು, ಅನಾ ಗೆ ಬೈ ಹೇಳಿ, ಹೊರಗೆ ಹೋಗ್ತಾ ಇರೋವಾಗ,
ವಿಶ್ವ,,,ಅಭಿ ಹೇಗ್ ಹೋಗ್ತಿಯ, ನಿನ್ನ ಬೈಕ್ ಬೇರೆ ಇಲ್ಲಾ, ಕಾರ್ ಇದೆ ತಗೊಂಡು ಹೋಗು ಇಲ್ಲಾ ಇನ್ನೊಂದು ಬೈಕ್ ಇದೆ ಅಲ್ವಾ ಅದನ್ನ ತಗೊಂಡು ಹೋಗು.
ಅಭಿ,,, ಬೇಡ ಸರ್, ಹೊರಗಡೆ ನನ್ನ ಫ್ರೆಂಡ್ ನನ್ನ ಬೈಕ್ ನಾ ತಗೋ ಬಂದಿದ್ದಾನೆ ಅದರಲ್ಲೇ ಹೋಗ್ತೀನಿ.
ವಿಶ್ವ,,, ಸರಿ ಅಭಿ.
ಅಭಿ ಹೊರಗಡೆ ಬಂದು ಅವನ ಫ್ರೆಂಡ್ ಹತ್ತಿರ ಮಾತಾಡಿ ಬೈಕ್ ತಗೊಂಡು ಸೂಪರ್ ಮಾರ್ಕೆಟ್ ಗೆ ಹೋಗ್ತಾನೆ.
########
ಪಾನ್ ಶಾಪ್ ಹತ್ತಿರ ಟೀ ಕುಡಿತಾ, ರಾಜ್,,, ಮಚ್ಚಾ ಅಭಿ ಇವತ್ತಾದ್ರು ಬರ್ತಾನ,
ನಿರಂಜನ್,,, ಬರ್ಬೋದೇನೋ ಬಿಡೋ, ಇಲ್ಲಾ ಅಂದ್ರೆ ಇನ್ನು ಸ್ವಲ್ಪ ದಿನ ರೆಸ್ಟ್ ತಗೋಳಿ ಅಂತ ಹೇಳ್ತಾ ಇರೋವಾಗ. ಮೊಬೈಲ್ ರಿಂಗ್ ಆಗುತ್ತೆ, ಮಾತಾಡೋದನ್ನ ನಿಲ್ಲಿಸಿ ಮೊಬೈಲ್ ತೆಗೆದು ನೋಡ್ತಾ, ಮಚ್ಚಾ ಅಭಿ ನೇ ಕಾಲ್ ಮಾಡಿದ ಅಂತ ಹೇಳಿ ಕಾಲ್ ಪಿಕ್ ಮಾಡಿ ಹೇಳು ಮಚ್ಚಾ,
ಅಭಿ,,, ಲೋ ಅಲ್ಲಿ ಕುತ್ಕೊಂಡು ಏನೋ ಮಾಡ್ತಾ ಇದ್ದೀರಾ ಬರ್ರೋ, ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ.
ರಾಜ್,,, ಏನಂತೆ ಮಚ್ಚಾ ಅಭಿ ಕಾಲ್ ಮಾಡಿದ್ದು.
ನಿರಂಜನ್,,, ಕರಿತಾವ್ನೆ ಬಾ.
ರಾಜ್,,, ಬಂದವ್ನ ಸರಿ ನಡಿ ಹೋಗೋಣ ಅಂತ ಹೇಳಿ ಇಬ್ಬರು ಬೈಕ್ ಅಲ್ಲಿ ಸೂಪರ್ ಮಾರ್ಕೆಟ್ ಹತ್ತಿರ ಬರ್ತಾರೆ.
ಇಬ್ಬರು ಅಭಿ ನಾ ಮಾತಾಡಿಸಿ ಸೂಪರ್ ಮಾರ್ಕೆಟ್ ಓಪನ್ ಮಾಡ್ತಾರೆ.
ಮೂರು ಜನ ಒಳಗೆ ಬಂದು ಕೌಂಟರ್ ಹತ್ತಿರ ನಿಂತು ಮಾತಾಡ್ತಾ ಇರೋವಾಗ. ಪ್ರಿಯಾ ತೇಜು ಮೇಘ, ಮೂರು ಜನ ಬರ್ತಾರೆ ಅಭಿ ನಾ ನೋಡಿ ಖುಷಿ ಅವನ ಜೊತೆಗೆ ಸ್ವಲ್ಪ ಹೊತ್ತು ಮಾತಾಡಿ, ಆಮೇಲೆ ಅವರವರ ಕೆಲಸದಲ್ಲಿ ಬ್ಯುಸಿ ಆಗಿ ಬಿಡ್ತಾರೆ.
ಸ್ವಲ್ಪ ಸಮಯದ ನಂತರ, ಬಿಲ್ಲಿಂಗ್ ಕೌಂಟರ್ ಅಲ್ಲಿ ಪ್ರಿಯಾ ಅಭಿ ಮಾತ್ರ ಇರೋದನ್ನ ಪ್ರಿಯಾ ಗಮನಿಸಿ ಅಭಿ ಅಂತ ಕರೀತಾಳೆ.
ಅಭಿ,, ಅ ಹೇಳೇ.
ಪ್ರಿಯಾ,,, ಏನೋ ಸಮಾಚಾರ, ಹೊಸದಾಗಿ ಕಾಣಿಸ್ತಾ ಇದ್ದಿಯಾ.
ಅಭಿ,,, ಹೊಸದಾಗಿನ ನಾ ಅಂದ್ರೆ ಏನೇ ಅರ್ಥ.
ಪ್ರಿಯಾ,,, ಅಂದ್ರೆ ಸ್ವಲ್ಪ ಆಕ್ಟಿವ್ ಆಗಿ ಇದ್ದಿಯಾ ಅಲ್ವಾ ಅದಕ್ಕೆ ಕೇಳ್ದೆ.
ಅಭಿ,,, ಹಾಗೇನು ಇಲ್ಲಾ ನಾರ್ಮಲ್ ಹಾಗೇ ಇದ್ದೀನಿ.
ಪ್ರಿಯಾ,,, ಅಬ್ಬಾ ಚಾ, ನಂಬೇಕಾ ನಾನು, ಬಿಡು ನಿನ್ನ ಬಗ್ಗೆ ಗೊತ್ತಿದ್ರು ಹೋಗಿ ಹೋಗಿ ನಿನ್ನ ಕೇಳ್ತಾ ಇದ್ದೀನಿ ಅಲ್ವಾ ನನಗೆ ಬುದ್ದಿ ಇಲ್ಲಾ.
ಅಭಿ,,, ಲೇ ಸುಮ್ನೆ ಏನೇನೋ ಹೇಳಬೇಡ ಏನ್ ವಿಷಯ ಹೇಳು ಮೊದಲು.
ಪ್ರಿಯಾ,,,, ಹೌದ ಸರಿ ನಿನ್ನ ಮೊಬೈಲ್ ಕೊಡು.
ಅಭಿ,,, ಮೊಬೈಲ್ ಅ ಏನಕ್ಕೆ?
ಪ್ರಿಯಾ,,, ಕೊಡು ಹೇಳ್ತಿನಿ.
ಅಭಿ,,, ತಗೋ ಅಂತ ಹೇಳಿ ಅವಳ ಕೈಗೆ ಮೊಬೈಲ್ ಕೊಡ್ತಾನೆ.
ಪ್ರಿಯಾ,,,,ಅಭಿ ಮೊಬೈಲ್ ನಾ ಕೈಗೆ ತಗೊಂಡು ಸ್ಕ್ರೀನ್ ಆನ್ ಮಾಡಿ ಈ ಫೋಟೋ ದಲ್ಲಿ ಇರೋ ಮಗು ಯಾರು.
ಅಭಿ,,,, ಯಾಕೆ ಹೀಗೆ ಕೇಳ್ತಾ ಇದ್ದಿಯಾ ಹೊಸದಾಗಿ. ಈ ಫೋಟೋ ಏನು ಹೊಸದಾಗಿ ನೋಡ್ತಾ ಇದ್ದಿಯಾ. ತುಂಬಾ ವರ್ಷ ದಿಂದ ಮೊಬೈಲ್ ಅಲ್ಲಿ ಇದೆ ಫೋಟೋ ಇದೆ. ಅವಾಗೆಲ್ಲ ಕೇಳಿಲ್ಲ ಇವಾಗ ಕೇಳ್ತಾ ಇದ್ದಿಯಾ ಏನ್ ವಿಷಯ.
ಪ್ರಿಯಾ,,, ಮೊದಲು ಈ ಮಗು ಫೋಟೋ ನಿನ್ನ ಮೊಬೈಲ್ ಅಲ್ಲಿ ಮಾತ್ರ ನೋಡಿದೆ. ಬಟ್ ಸ್ವಲ್ಪ ದಿನಗಳ ಹಿಂದೆ ಇನ್ನೊಬ್ಬರ ಮೊಬೈಲ್ ಅಲ್ಲಿ ನೋಡಿದೆ ಅದಕ್ಕೆ ಕೇಳ್ತಾ ಇದ್ದೀನಿ.
ಅಭಿ,,, ಸಿಸ್ಟಮ್ ಕಡೆಗೆ ನೋಡ್ತಾ, ನಯನಾ ಮೊಬೈಲ್ ಅಲ್ಲಿ ನೋಡಿದ.
ಅಭಿ ಅ ಮಾತನ್ನ ಹೇಳಿದ್ದೆ ಶಾಕ್ ಆಯ್ತು.
ಪ್ರಿಯಾ,,, ಲೋ ನಿನಗೆ ಹೇಗೋ ಗೊತ್ತು, ನಾನು ಅವಳ ಮೊಬೈಲ್ ಅಲ್ಲಿ ನೋಡಿದ್ದು.
ಅಭಿ,,, ಬರಿ ನೋಡಿದ್ದೇ ಅಲ್ಲ, ನೀನು ಅವಳ ಹತ್ತಿರ ಏನೇನ್ ಮಾತಾಡಿದೆ ಅಂತಾನೂ ನನಗೆ ಗೊತ್ತು.
ಪ್ರಿಯಾ,,, ಮತ್ತೆ ಶಾಕ್ ಆಗಿ,,, ಲೋ ನಾನ್ ಅವಳ ಜೊತೆಗೆ ಮಾತಾಡಿದ್ದು ನಿನಗೆ ಹೇಗೆ ಗೊತ್ತಾಯಿತು. ನಯನಾ ಹೇಳಿದ್ಲ.
ಅಭಿ,,, ಅವಳು ಏನಕ್ಕೆ ಹೇಳ್ತಾಳೆ. ನೀವಿಬ್ರು ಮಾತಾಡೋವಾಗ ನಾನೆ ಕೇಳಿಸಿಕೊಂಡೆ.
ಪ್ರಿಯಾ,,, ಲೋ ಏನೋ ಹೇಳ್ತಾ ಇದ್ದಿಯಾ, ನಾನು ನಯನಾ ಮಾತಾಡೋವಾಗ ನೀನು ಹಾಸ್ಪಿಟಲ್ ಗೆ ಹೋಗಿದ್ದೆ ಅಲ್ವಾ. ನಾವ್ ಮಾತಾಡಿ ಕೊಂಡಿದ್ದು ನಿನಗೆ ಹೇಗೆ ಗೊತ್ತಾಯಿತು.
ಅಭಿ,,, ಹಾಸ್ಪಿಟಲ್ ಗೆ ಹೋಗಿದ್ದು ನಿಜ ಅದ್ರೆ, ಅವತ್ತು ನೀನು ನನಗೆ ಕಾಲ್ ಮಾಡಿದವಳು ಕಟ್ ಮಾಡಲೇ ಇಲ್ಲಾ. ನಾನು ನೋಡ್ಕೊಂಡು ಇಲ್ಲಾ. ನನ್ನ ಮೊಬೈಲ್ ಅಲ್ಲಿ ಆಟೋ ಕಾಲ್ ರೆಕಾರ್ಡ್ ಆನ್ ಇದೆ.
ಪ್ರಿಯಾ,,, ಹೌದ.. ಅದು ಸರಿ, ನಯನಾ ನಿನ್ನ ವೈಫ್ ಅಂತ ಏನಕ್ಕೆ ಹೇಳಿಲ್ಲ ಯಾರಿಗೂ.
ಅಭಿ,,, ಹೇಳೋ ಅವಶ್ಯಕತೆ ಬರಲಿಲ್ಲ ಹೇಳಿಲ್ಲ. ಬಟ್ ನಿನ್ ಏನಕ್ಕೆ ನನ್ನ ಬಗ್ಗೆ ಅವಳ ಹತ್ತಿರ, ಅ ರೀತಿ ಮಾತಾಡಿದೆ. ಲವ್ ಅಂತ ಹೇಳ್ದೆ ಏನಕ್ಕೆ?
ಪ್ರಿಯಾ,,, ಅದ ಇಬ್ರು ನನಗೆ ಗುಡ್ ಫ್ರೆಂಡ್ಸ್, ನಿನಗೆ ಜ್ವರ ಬಂದಿದ್ರು ಕೂಡ, ಅವಳು ಹಾಗೇ ಇರೋದನ್ನ ನೋಡಿ, ಇಬ್ಬರ ಮಧ್ಯ ಏನೋ ಪ್ರಾಬ್ಲಮ್ ಇದೆ ಅಂತ ಅರ್ಥ ಆಗಿ. ಅ ರೀತಿ ಮಾತಾಡಿದೆ. ಬಟ್ ಲವ್ ಅನ್ನೋ ಒಂದು ಸುಳ್ಳು ಬಿಟ್ಟು, ಬೇರೆ ಹೇಳಿದ್ದೆಲ್ಲ ನಿಜ. ನೀವು ಗಂಡ ಹೆಂಡತಿ ಅಂತ ಗೊತ್ತಾದಾಗ ಎಷ್ಟು ಖುಷಿ ಆಯ್ತೋ. ನಿಮ್ಮ ಮಧ್ಯ ದೂರ ಇದೆ ಅಂತ ಗೊತ್ತಾಗಿ ಅಷ್ಟೇ ನೋವಾಯ್ತು. ನಿಮ್ಮಿಬ್ಬರ ಮಧ್ಯ ಏನೇ ಪ್ರಾಬ್ಲಮ್ ಇದ್ರು ಇಬ್ರು ಕೂತು ಮಾತಾಡಿ ಕೊಂಡ್ರೆ ನೇ ಅಲ್ವಾ ಪ್ರಾಬ್ಲಮ್ ಕ್ಲಿಯರ್ ಆಗೋದು. ನಿಮ್ ಮಗಳು ಹ್ಯಾಪಿ ಆಗಿ ಇರೋದು.
ಅಭಿ,,, ಪ್ರಿಯಾ ಕೂತು ಮಾತಾಡಿ ಕ್ಲಿಯರ್ ಮಾಡೋ ಪ್ರಾಬ್ಲಮ್ ಆಗಿದ್ದಿದ್ರೆ ಇಷ್ಟು ಹತ್ತಿರ ಇದ್ದು ಅಷ್ಟೇ ದೂರ ಇರೋ ಸ್ಥಿತಿ ಬರ್ತಾ ಇದ್ದಿಲ್ಲ. ಪ್ರಾಬ್ಲಮ್ಸ್ ಆಗಿರೋದು ಅಲ್ಲ. ಮನಸ್ಸಿಗೆ ಗಾಯ ಆಗಿದೆ. ವಾಸಿ ಹಾಗೋಕೆ ಕಾಲ ಕೂಡಿ ಬರಬೇಕು. ಅದು ತುಂಬಾ ದೂರ ಇದೆ. ಮತ್ತೆ ಇನ್ನೊಂದು ವಿಷಯ, ನಯನಾ ಗೆ ನಾನು ಪರ್ಫೆಕ್ಟ್ ಅಲ್ಲ. ಆಗೋದು ಇಲ್ಲಾ. ಸದ್ಯಕ್ಕೆ ಈ ವಿಷಯ ನಾ ಅವಳಿಗೆ ಹೇಳೋಕೆ ನನಗೆ ಧೈರ್ಯ ಇಲ್ಲಾ.
ಪ್ರಿಯಾ,,, ನೀನೇನು ತಪ್ಪು ತಿಳ್ಕೊಳ್ಳೋದು ಇಲ್ಲಾ ಅಂದ್ರೆ, ನಾನ್ ಏನಾದ್ರು ಹೆಲ್ಪ್ ಮಾಡ್ಲಾ.
ಅಭಿ,,, ನಗ್ತಾ, ಸಮಸ್ಯೆ ಇರೋದು ಇಬ್ಬರ ಮಧ್ಯದಲ್ಲಿ ಅಲ್ಲ ಪ್ರಿಯಾ. ನನ್ನಲ್ಲಿ ನನ್ನ ಮನಸಲ್ಲಿ, ಈ ವಿಷಯ ನಾ ಇಲ್ಲಿಗೆ ಬಿಡು ತುಂಬಾ ಮಾತಾಡೋದು ಬೇಡ. ವರ್ಕ್ ಮಾಡು ಅಂತ ಹೇಳ್ತಾ ಅವನ ವರ್ಕ್ ಕಡೆಗೆ ಗಮನ ಕೊಡ್ತಾನೆ.
ಪ್ರಿಯಾ ಮತ್ತೆ ಏನು ಮಾತನಾಡದೆ ಸೈಲೆಂಟಾಗಿ ಬಿಡ್ತಾಳೆ.
@@@@@@@@@@@@@@@@@@@@@@@@