ಅಭಿ ಗೆ ನಯನಾ ನಾ ಮದುವೆ ಅದ್ರೆ ಈ ರೀತಿ ಆಗುತ್ತೆ ಅಂತ ಗೊತ್ತಿರಲಿಲ್ಲ. ನಯನಾ ಗೆ ಅಭಿ ಮೇಲೆ ಈ ರೀತಿ ಪ್ರೀತಿ ಆಗುತ್ತೆ ಅಂತ ಕನಸಲ್ಲಿ ಕೂಡ ಆಲೋಚನೆ ಮಾಡಿರಲಿಲ್ಲ. ಈಗ ಇಬ್ಬರ ಆಲೋಚನೆ ತಲೆ ಕೇಳಗಾಗಿ ಊಹಿಸಿದ ಸ್ಥಿತಿ ಗೆ ತಂದು ನಿಲ್ಲಿಸಿದೆ.
ವರ್ಕ್ ಮಾಡ್ತಾ ಇದ್ದಾ ಅಭಿ ಮೊಬೈಲ್ ರಿಂಗ್ ಆಗುತ್ತೆ.. ಪ್ರಿಯಾ ಅಭಿ ಮೊಬೈಲ್ ನಾ ನೋಡಿ. ಲೋ ನಿನ್ನ ಹುಡುಗಿ ಕಾಲ್ ಮಾಡ್ತಾ ಇದ್ದಾಳೆ ಅಂತ ಹೇಳ್ತಾಳೆ.
ಅಭಿ ಮೊಬೈಲ್ ಕಡೆಗೆ ನೋಡಿ ಪ್ರಿಯಾ ಕಡೆಗೆ ನೋಡ್ತಾನೆ.
ಪ್ರಿಯಾ,,, ನನ್ನಾ ನೋಡಿದ್ದು ಸಾಕು ಮೊದಲು ಕಾಲ್ ಲಿಫ್ಟ್ ಮಾಡು.
ಅಭಿ,,, ಕಾಲ್ ಪಿಕ್ ಮಾಡಿ ಹಲೋ ಅಂತಾನೆ
ನಯನಾ,,, ರೀ ಊಟಕ್ಕೆ ಬರ್ತೀರಾ ಇಲ್ಲಾ ಅಲ್ಲಿಗೆ ತಗೊಂಡು ಬರ್ಲಾ.
ಅಭಿ,,, ಏನು ಬೇಡ ನಾನೆ ಬರ್ತೀನಿ.
ನಯನಾ,, ಸರಿ ರೀ ಬೇಗ ಬನ್ನಿ.
ಅಭಿ,,, ಸರಿ ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ.
ಅಭಿ ಮನಸಲ್ಲಿ ಸಾವಿರ ಗೊಂದಲ ಇದ್ರು. ನಯನಾ ಮಾತಿಗೆ ಏನು ಹೇಳದೆ ಹೇಳಿದ ಹಾಗೇ ಇದ್ದು ಬಿಡೋಕೆ ಪ್ರಯತ್ನ ಪಡ್ತಾ ನಯನಾ ಗೆ ಅನುಮಾನ ಬಾರದ ಹಾಗೇ ನೋಡ್ಕೋತಾನೆ. ಹೀಗೆ ತಿಂಗಳು ಕಳೆದು ಹೋಗುತ್ತೆ.
###########
ನಯನಾ ಮನೇಲಿ......
ಸೋಫಾ ಮೇಲೆ ಕುಳಿತ ಸುಭದ್ರ...
ಸುಭದ್ರ,,,, ನಯನಾ ನಿನ್ನ ಒಂದು ವಿಷಯ ಕೇಳ್ಳ.
ನಯನಾ,,, ಕೇಳಮ್ಮ ಅದಕ್ಕೆ ಯಾಕೆ ಪ್ರಶ್ನೆ ಮಾಡ್ತಾ ಇದ್ದಿಯಾ?
ಸುಭದ್ರ,,,, ಅಭಿ ಜೊತೆಗೆ ನೀನು ಇಷ್ಟು ಸಂತೋಷ ವಾಗಿ ಇದ್ದಿಯಾ ಅಲ್ವಾ, ಇದು ನಮಗೋಸ್ಕರ ನಾ ಇಲ್ಲಾ ನಿಜವಾಗ್ಲೂ ಅವನ ಜೊತೆಗೆ ಜೀವನಾ ಮಾಡಬೇಕು ಅಂತ ನಾ.
ನಯನಾ,,, ಅಮ್ಮ ಏನಕ್ಕೆ ಹೀಗೆ ಕೇಳ್ತಾ ಇದ್ದಿಯಾ. ನನ್ನ ತಪ್ಪನ್ನ ಅರ್ಥ ಮಾಡಿಕೊಂಡು ಅವನ ಜೊತೆಗೆ ಜೀವನ ಮಾಡಬೇಕು ಅಂತ ಇದ್ದೀನಿ, ನಿನ್ ನೋಡಿದ್ರೆ.?
ಸುಭದ್ರ,,,, ನಿನಗೆ ಅಭಿ ಮನಸ್ಫೂರ್ತಿ ಆಗಿ ಇಷ್ಟ ಆಗಿದ್ದಾನಾ?
ನಯನಾ,,, ಹೌದಮ್ಮ.. ಅಭಿ ನನಗೆ ಮನಸ್ಫೂರ್ತಿ ಆಗಿ ಇಷ್ಟ ಆಗಿದ್ದಾನೆ.
ಸುಭದ್ರ,,,, ಆಗಿದ್ರೆ ಅಭಿ ಗೆ?
ನಯನಾ,,, ಗೊತ್ತಿಲ್ಲ ಅಮ್ಮ ನನ್ನ ಜೊತೆಗೆ ಚೆನ್ನಾಗಿ ಇದ್ದಾನೆ. ಅದ್ರೆ ಅವನ ಮನಸಲ್ಲಿ ಏನಿದೆ ಅಂತ ಇದುವರೆಗೂ ನನಗೆ ಹೇಳಿಲ್ಲ. ನನಗಂತೂ ಅವನ ಮೇಲೆ ಪೂರ್ತಿ ನಂಬಿಕೆ ಇದೆ, ನನಗೆ ಅವನು ಮೋಸ ಮಾಡಲ್ಲ ಅಂತ.
ಸುಭದ್ರ,,,, ಏನ್ ಹೇಳ್ತಾ ಇದ್ದಿಯಾ ನಯನಾ.
ನಯನಾ,,, ಹೌದಮ್ಮ, ಅವನು ನನ್ನ ಮದುವೆ ಆಗೋಕೆ ಕಾರಣ ಅನಾ, ಮದುವೆ ಆಗಿ ಈ ಮನೆಗೆ ಬಂದಾಗಿಂದ ಒಂದು ದಿನ ಕೂಡ ಅವನು ನನ್ನ ಎದುರು ನಿಂತು ನನ್ನ ಮಾತಾಡಿಸೋಕೆ ಬಂದವನಲ್ಲ. ಈಗ ನಾನೆ ಅವನಿಗೆ ನಿನ್ನ ಪ್ರೀತಿ ಮಾಡ್ತಾ ಇದ್ದೀನಿ ಅಂತ ಹೇಳಿದ ಮೇಲೆ ಕೂಡ ಅವನು ಒಂದು ಕ್ಷಣ ಕೂಡ, ನಾನು ಅವನ ಸ್ವಂತ ಅನ್ಕೊಂಡು ಹೆಜ್ಜೆ ಇಟ್ಟವನು ಅಲ್ಲ. ಅವನ ಕಣ್ಣಲ್ಲಿ ನನ್ನ ಮೇಲೆ ಇರೋ ಗೌರವ ಕಾಣ್ತಾ ಇದೆ. ನಾನ್ ಅವನನ್ನ ಎಷ್ಟೇ ಮುಟ್ಟಿ ಮಾತಡಿಸಿದ್ರು, ಅವನು ಮಾತ್ರ ಇದುವರೆಗೂ ನನ್ನ ಗೊತ್ತಿಲ್ಲದೇ ಮುಟ್ಟೋಕೆ ಹೋಗಿಲ್ಲ. ಹೆಂಡತಿ ಗೆ ಗಂಡನಾಗಿ ಎಷ್ಟು ಗೌರವ ಮರ್ಯಾದೆ ಕೊಡಬೇಕೋ ಅದಕ್ಕಿಂತ ಜಾಸ್ತಿ ನೇ ನನಗೆ ಕೊಡ್ತಾ ಇದ್ದಾನೆ. ಇದೆಲ್ಲಾ ಒಬ್ಬರ ಮೇಲೆ ಪ್ರೀತಿ ಇದ್ದಾಗ ಮಾತ್ರ ಈರೀತಿ ಆಗೋಕೆ ಸಾಧ್ಯ. ಅಭಿ ಗೆ ನನ್ನ ಮೇಲೆ ತುಂಬಾ ಪ್ರೀತಿ ಇದೆ ಅನ್ನೋ ನಂಬಿಕೆ ನನಗೆ ಇದೆ. ಅದ್ರೆ ಅದನ್ನ ಅವನಿಂದ ಆಗ್ತಾ ಇಲ್ಲಾ. ನೀನೇ ಹೇಳ್ತಾ ಇದ್ದೆ ಅಲ್ವಾ ನಮಗೆ ಪ್ರೀತಿ ಅನ್ನೋದು ಬೇಕು ಅಂದಾಗ ಕಾಯಬೇಕು ಅಂತ. ಅವನ ಪ್ರೀತಿ ನನಗೆ ನನ್ನ ಉಸಿರು ಇರೋ ತನಕ ಬೇಕು ಅಮ್ಮ. ಅದಕೋಸ್ಕರ ಎಷ್ಟು ದಿನ ವರ್ಷ ಬೇಕಾದ್ರು ಕಾಯ್ತಿನಿ.
ಸುಭದ್ರ,,,, ನನಗೆ ತುಂಬಾ ಖುಷಿ ಆಗ್ತಾ ಇದೆ ನಯನಾ,,, ನೀನಿಷ್ಟು ಬದಲಾಗಿ ಅವನನ್ನ ಅರ್ಥ ಮಾಡಿಕೊಂಡು, ಈ ರೀತಿ ಹೇಳ್ತಾ ಇರೋದನ್ನ ಕೇಳಿ. ಅದ್ರೆ ನಿಮ್ಮಿಬ್ಬರ ಮಧ್ಯ ಅನಾ ಏನಾದ್ರು?
ನಯನಾ,,, ಅಮ್ಮ ಏನಕ್ಕೆ ಹಾಗೇ ಯೋಚ್ನೆ ಮಾಡ್ತಾ ಇದ್ದಿಯಾ? ಅನಾ ಅಭಿ ಮಗಳು ಅಲ್ಲ ಅಂತಾನಾ,, ಅಮ್ಮ ನಿಜ ಹೇಳ್ಳಾ, ಅನಾ ನಾ ನನಗಿಂತ ನಿಮಗಿಂತ ತುಂಬಾ ಚೆನ್ನಾಗಿ ನೋಡ್ಕೋತ ಇದ್ದಾನೆ. ನಮ್ಮಿಬ್ಬರಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ ಹುಟ್ಟೋಕೆ ಕಾರಣ ನೇ ಅನಾ,,, ಅವನ ಹೆಂಡತಿ ಆಗಿ ನಾನೆ ಹೇಳ್ತಾ ಇದ್ದೀನಿ. ನೀವು, ಹೆಂಡತಿ ಅಸ್ತಿ ಬೇಕಾ, ಇಲ್ಲಾ ಅನಾ ಬೇಕಾ ಅಂತ ಏನಾದ್ರು ಅವನ ಮುಂದೆ ಇಟ್ರೆ. ಒಂದು ಕ್ಷಣ ಯೋಚ್ನೆ ಮಾಡದೇ ಅನಾ ನೇ ಅಂತ ಹೇಳ್ತಾನೆ. ಅಂತ ಒಳ್ಳೆ ಮನಸ್ಸು ಇರೋವ್ನು ಅಭಿ ಅಮ್ಮ.
ಸುಭದ್ರ,,,, ನಯನಾ ನನ್ನ ಮಾತಿನ ಅರ್ಥ ಅದಲ್ಲ,,, ನೀವಿಬ್ರು ಅನಾ ನಾ ತುಂಬಾ ಚೆನ್ನಾಗಿ ನೋಡ್ಕೋತೀರಾ ಅನ್ನೋ ನಂಬಿಕೆ ನನಗೆ ಇದೆ. ಅದ್ರೆ ನೀವಿಬ್ರು ಒಂದಾಗೋಕೆ ಅನಾ ಏನಾದ್ರು ಸಮಸ್ಯೆ ಆಗ್ತಾ ಇದ್ದಾಳ ಅಂತ ಕೇಳ್ದೆ.
ನಯನಾ,,, ಅಮ್ಮನ ಮಾತಿಗೆ ಜೋರಾಗಿ ನಗ್ತಾ,,, ಅಮ್ಮ ನಿನ್ ಏನ್ ಹೇಳಬೇಕು ಅಂತ ಇದ್ದಿಯಾ ಅನ್ನೋದು ನನಗೆ ಅರ್ಥ ಆಯ್ತು. ನಾನು ಅವನ ಸ್ವಂತ ಅಂತ ಅವನಿಗೂ ಗೊತ್ತು ನನಗು ಗೊತ್ತು. ಅದ್ರೆ ನಾವು ಯಾವತ್ತೂ ಅದರ ಬಗ್ಗೆ ಯೋಚ್ನೆ ಮಾಡಿಲ್ಲ. ನೀನು ಅದರ ಬಗ್ಗೆ ಯೋಚ್ನೆ ಮಾಡೋದನ್ನ ಬಿಟ್ಟು ಬಿಡು ಸರಿನಾ.
ಸುಭದ್ರ,,, ನೀವಿಷ್ಟು ನಂಬಿಕೆ ಯಿಂದ ಇದ್ದೀರಾ ಅನ್ನೋವಾಗ ನನಗೆ ಏನು. ಅದು ಸರಿ ಅನಾ ಹೇಳ್ತಾ ಇದ್ಲು ಅಲ್ವಾ ಅಜ್ಜಿ ನಾ ನೋಡೋಕೆ ಪಪ್ಪಾ ಕರ್ಕೊಂಡು ಹೋಗ್ತಾನೆ ಅಂತ ಅದರ ಬಗ್ಗೆ ಏನಾದ್ರು ಕೇಳಿದ.
ನಯನಾ,,, ಎಲ್ಲಮ್ಮ, ನೀನೇ ನೋಡ್ತಾ ಇದ್ದಿಯಾ ಅಲ್ವಾ. ಹಬ್ಬದ ಸೀಸನ್ ಬೇರೆ, ನಾವು ಅಭಿ ಮನೆಗೆ ಹೋದ್ರೆ ಬರೋಕೆ ಇಲ್ಲಾ ಅಂದ್ರು ವಾರ ಆಗುತ್ತೆ. ಈ ಟೈಮ್ ಅಲ್ಲಿ ಅಪ್ಪ ನಾ ಬಿಟ್ಟು ಹೋದ್ರೆ ಅವರಿಗೆ ತುಂಬಾ ಕಷ್ಟ ಆಗುತ್ತೆ ಅಂತ ಅದರ ಬಗ್ಗೆ ಏನು ಮಾತಾಡೋಕೆ ಹೋಗಿಲ್ಲ. ಅನಾ ಕೂಡ ಏನು ಕೇಳೋಕೂ ಹೋಗಿಲ್ಲ. ಇನ್ನೇನು ಹಬ್ಬ ಮುಗಿತು ಅಲ್ವಾ. ನೋಡೋಣ ನಿನ್ನ ಅಳಿಯ ಏನ್ ಮಾಡ್ತಾನೋ ಅಂತ.
ಸುಭದ್ರ,,, ಅಂತು ನೀನು ಅಭಿ ನಾ ಅರ್ಥ ಮಾಡ್ಕೊಂಡು ಸಂತೋಷ ವಾಗಿ ಇದ್ದಿಯಾ ಅಲ್ವಾ ಅಷ್ಟೇ ಸಾಕು. ಎದ್ದು ಬಾ ನಿಮ್ಮಪ್ಪ ಅಭಿ ಊಟಕ್ಕೆ ಬರೋ ಟೈಮ್ ಆಯ್ತು,
ನಯನಾ,, ನೀನು ನಡಿ ನಾನ್ ಹೋಗಿ ಅನಾ ನಾ ಕರ್ಕೊಂಡು ಬರ್ತೀನಿ ಅಂತ ಎದ್ದು ರೂಮ್ ಕಡೆ ಹೋಗ್ತಾಳೆ.
******
ಪ್ರಿಯಾ,,,, ಅಭಿ,, ನಿನ್ನ ಮೊಬೈಲ್ ಅವಾಗಿಂದ ರಿಂಗ್ ಆಗ್ತಾ ನೇ ಇದೆ ಕಾಲ್ ಪಿಕ್ ಮಾತಾಡೋ.
ಅಭಿ,,, ಇರೆ ಮೊದಲು ಕೆಲಸ ಆಮೇಲೆ ಮಾತಾಡ್ತೀನಿ.
ನಿರಂಜನ್,,, ಮಚ್ಚಾ ನಾನ್ ನೋಡ್ಕೋತೀನಿ ನಿನ್ ಹೋಗಿ ಮಾತಾಡು ಅಂತ ಬಿಲ್ಲಿಂಗ್ ಹತ್ತಿರ ಬರ್ತಾನೇ.
ಅಭಿ ಮೊಬೈಲ್ ಅಲ್ಲಿ ಮಾತಾಡೋಕೆ ಹೊರಟು ಹೋಗ್ತಾನೆ.
######
ಲೋ ರೂಪೇಶ ಯಾಕೋ ಹೀಗೆ ಇದ್ದಿಯಾ ಏನಾಯ್ತು.
ರೂಪೇಶ್,,, ತಂದೆ ದೇವೇಂದ್ರ ಮಾತಿಗೆ ಕೋಪಗೊಂಡು,,, ಏನಕ್ಕ,, ನೋಡು ನನ್ನ ಹೇಗಿದ್ದೀನಿ ಅಂತ , ಯಾವನೋ ಒಬ್ಬ ಬಂದು ನನ್ನ ಈ ಸ್ಥಿತಿ ಗೆ ತಂದು ನಿಲ್ಲಿಸಿದ, ಎರಡು ವರ್ಷ ಆಯ್ತು ಏನ್ ಮಾಡಿದೆ ನೀನು, ಬರಿ ನಿನ್ನ ರಾಜಕೀಯ ದಲ್ಲೇ ಇದ್ದು ಬಿಟ್ಟೆ, ಇಷ್ಟು ವರ್ಷ ಆದ್ರು ಅವನು ಯಾರು ಅಂತ ನಿನ್ನಿಂದ ಕಂಡು ಹಿಡಿಯೋಕೆ ಆಗಲಿಲ್ಲ. ಹೊರಗಡೆ ಹೋಗಿ ನನ್ನ ಮುಖ ತೋರಿಸೋಕು ನನಗೆ ನಾಚಿಕೆ ಆಗ್ತಾ ಇದೆ. ಈ ರೀತಿ ಏನಕ್ಕೆ ಬದುಕಿದ್ದೀನಿ ಅಂತ ಅನ್ನಿಸ್ತಾ ಇದೆ.
ದೇವೇಂದ್ರ,,, ಲೋ ನೀನೇನು ದೊಡ್ಡ ಘನ ಕಾರ್ಯ ಮಾಡಿ ಬಂದಿದ್ದೀಯಾ ಹೇಳು. ಕುಡಿದು ನಿನ್ನ ಕಿತ್ತೊಗಿರೊ ಫ್ರೆಂಡ್ಸ್ ಜೊತೆಗೆ ದಿನ ಒಬ್ಬರ ಹತ್ತಿರ ಜಗಳ ಮಾಡ್ಕೊಂಡು ಬರ್ತಾ ಇದ್ದೆ, ಯಾವನೋ ಸರಿಯಾದ ಟೈಮ್ ನೋಡ್ಕೊಂಡು ನಿನಗೆ ಹೀಗೆ ಮಾಡಿದ್ದಾನೆ, ನಾನೇನು ಸುಮ್ನೆ ಕೈ ಕಟ್ಟು ಕೂತಿಲ್ಲ. ನಿನ್ನ ಈ ಸ್ಥಿತಿ ಗೆ ತಂದವನು ಎಷ್ಟು ಮುಖ್ಯ ನೋ ನನಗೆ ನನ್ನ ರಾಜಕೀಯ ಭವಿಷ್ಯ ಅಷ್ಟೇ ಮುಖ್ಯ, ನಾನೇನಾದ್ರೂ ನನ್ನ ಮಗನಿಗೆ ಈ ಸ್ಥಿತಿ ಗೆ ಯಾವನೋ ಒಬ್ಬ ಗುರುತು ಪರಿಚಯ ಇಲ್ಲದವನು ತಂದ ಅಂತ ಡಂಗುರ ಸಾರಿ ಹೇಳಿದೆ ಅನ್ಕೋ. ನನ್ನ ಮರ್ಯಾದೆ ಏನ್ ಆಗಬೇಡ. ನನಗೆ ಈಗ ನನ್ನಾ ರಾಜಕೀಯ ಭವಿಷ್ಯ ಮುಖ್ಯ, ಕಾರ್ಪೋರೇಶನ್ ಎಲೆಕ್ಷನ್ ಬರ್ತಾ ಇದೆ. ಪಾರ್ಟಿ ಲಿ ದುಡ್ಡು ಕೊಡೋದು ಅಷ್ಟಕ್ಕೇ ಇದೆ. ಎಲೆಕ್ಷನ್ ಗೆ ಟಿಕೆಟ್ ಕೊಟ್ಟು, ದುಡ್ಡು ಇಷ್ಟು ಕೊಡ್ತೀವಿ, ಮಿಕ್ಕಿದ್ದು ನೀವೇ ನೋಡ್ಕೋಬೇಕು ಅಂತ ಹೇಳಿ ಸೈಲೆಂಟ್ ಆಗಿ ಬಿಟ್ರು. ನನ್ನ ಬೇನಾಮಿ ಅಸ್ತಿ ನಾ ಕೂಡಿಟ್ಟ ದುಡ್ಡನ್ನ ಎಲ್ಲಾ ತಗೊಂಡಿದ್ದು ಆಯ್ತು. ಈಗ ಎಲೆಕ್ಷನ್ ಗೆ ದುಡ್ಡು ಸಾಕಾಗ್ತಾ ಇಲ್ಲಾ. ಅ ವಿಶ್ವನಾಥ್ ನೋಡಿದ್ರೆ, ನನ್ನ ಮಗನಿಗೆ ಕೊಡಬೇಕಾದ ಅಸ್ತಿ ನಾ ಎಲ್ಲಾ ಈಗ ಕೊಡಲ್ಲ ಅಂತ ಇದ್ದಾನೆ. ಸಾವಿರ ಲಕ್ಷ ನಾ ಬಿಡು ಹೋಗೋಕೆ ಅನ್ನೋಕೆ, ಕೋಟ್ಯಂತರ ರೂಪಾಯಿ, ಅ ಸೂಪರ್ ಮಾರ್ಕೆಟ್ ಲ್ಯಾಂಡ್ ಬೆಲೆ ಎಷ್ಟು ಗೊತ್ತಾ 50 ಕೋಟಿ, ಅದು ಏನಾದ್ರು ನನ್ನ ಕೈಗೆ ಬಂದ್ರೆ ಈ ಸಲಿ ನಾನೆ ಕಾರ್ಪೊರೇಟರ್, ನನಗೆ ಇಷ್ಟು ತಲೆ ನೋವು ಇರೋವಾಗ, ನೀನು ಈ ರೀತಿ ಆಡ್ತಾ ಇದ್ದಿಯಾ ಇದು ಎಷ್ಟು ಸರಿ. ಅಲ್ಲ ನಾನ್ ಒಂದು ವಿಷಯ ಕೇಳ್ತೀನಿ, ನಿನ್ನ ಈ ಸ್ಥಿತಿ ಗೆ ತಂದವನು ಯಾರು ಅಂತ ನಿನಗೆ ಗೊತ್ತ, ಇಲ್ಲಾ ನಿನ್ನ ಜೊತೆಗೆ ಇದ್ದಾ ನಿನ್ನ ಫ್ರೆಂಡ್ಸ್ ಗೆ ಏನಾದ್ರು ಗೊತ್ತಾ? . ಲೋ ಒಂದು ಹೇಳ್ತಿನಿ ಕೇಳಿಸ್ಕೊ ನಿನ್ನ ಈ ಸ್ಥಿತಿ ಗೆ ತಂದವನ ಮೇಲೆ ನಿನಗೆ ಎಷ್ಟು ಕೋಪ ದ್ವೇಷ ಇದೆಯೋ ಅದಕ್ಕಿಂತ ನೂರು ಪಟ್ಟು ಕೋಪ ದ್ವೇಷ ನನಗೂ ಇದೆ. ಅದ್ರೆ ಈಗ ರಿವೆಂಜ್ ಟೈಮ್ ಅಲ್ಲ , ಅ ವಿಶ್ವನಾಥ್ ಯಿಂದ ಅ ಅಸ್ತಿ ನಾ ಯಾವ ರೀತಿ ತಗೋಬೇಕು ಅನ್ನೋದನ್ನ ಯೋಚ್ನೆ ಮಾಡು. ನಾನು ಕಾರ್ಪೊರೇಟರ್ ಅದ ನೆಕ್ಸ್ಟ್ ಮಿನಿಟ್ ನಿನ್ನ ಈ ಸ್ಥಿತಿ ಗೆ ತಂದವನಾ ಹೆಣ ನಿನ್ನ ಮುಂದೆ ಇಡ್ತೀನಿ..
ರೂಪೇಶ್,,, ಕೊನೆಗೂ ನಿನ್ನ ರಾಜಕೀಯ ಬುದ್ದಿ ತೋರಿಸಿ ಬಿಟ್ಟೆ ಅಲ್ವಾ ಅಂತ ಹೇಳಿ ಕೋಪದಿಂದ ಅಲ್ಲಿಂದ ಹೊರಟು ಹೋಗ್ತಾನೆ.
######
ಅಭಿ ಬೈಕ್ ನಾ ನಿಲ್ಲಿಸಿ ಮನೆ ಒಳಗೆ ಬರ್ತಾನೇ. ವಿಶ್ವ ಅಭಿ ನಾ ನೋಡಿ,
ವಿಶ್ವ,,, ಅಭಿ ನೀನೇ ಬಂದ, ನಿನಗೆ ಕಾಲ್ ಮಾಡೋಣ ಅಂತ ಇದ್ದೆ ಬಾ ಊಟ ಮಾಡು.
ಅಭಿ,,, ಬಂದು ಡೈನಿಂಗ್ ಟೇಬಲ್ ಹತ್ತಿರ ಕೂತ್ಕೊಂಡು. ಏನ್ ಹೇಳಿ ಸರ್.
ವಿಶ್ವ,,, ಅಭಿ ಈ ಸರ್ ಅನ್ನೋದನ್ನ ಬಿಡ್ತೀಯ ಪ್ಲೀಸ್. ಇದೇನು ಸೂಪರ್ ಮಾರ್ಕೆಟ್ ಅಲ್ಲ. ಮನೆ ಇಲ್ಲಿ ನಾನು ನಿನಗೆ ಮಾವ ನೀನು ನನಗೆ ಅಳಿಯ.
ನಯನಾ,,, ಅಪ್ಪ ಅವರಿಗೆ ಏನ್ ಇಷ್ಟಾನೋ ಅದನ್ನ ಕರೀತಾರೆ ಬಿಡಿ. ಅಲ್ಲಿ ಹಾಗೇ ಕರಿ ಇಲ್ಲಿ ಈಗೆ ಕರಿ ಅನ್ನೋದು ಏನಕ್ಕೆ. ಅಂತ ಹೇಳಿ ಅಭಿ ಕಡೆಗೆ ನೋಡ್ತಾ. ರೀ ನಿಮಗೆ ಹೇಗೆ ಕರಿಬೇಕು ಅನ್ನಿಸುತ್ತೋ ಹಾಗೇ ಕರೀರಿ. ಅಂತ ಹೇಳ್ತಾ ಅಭಿ ಗೆ ಊಟ ಬಡಿಸ್ತಾಳೆ.
ಅಭಿ,,, zಊಟ ಮಾಡ್ತಾ,,, ಅನಾ ಗೆ ತಿನ್ನಿಸ್ತಾ ಬಂಗಾರಿ ನಾಳೆ ಅಜ್ಜಿ ನಾ ನೋಡೋಕೆ ಹೋಗೋಣ ರೆಡಿ ಆಗಿ ಇರು.
ಅನಾ,,, ಫುಲ್ ಖುಷಿ ಆಗಿ ಏನ್ ಪಪ್ಪಾ ಅಜ್ಜಿ ನಾ ನೋಡೋಕೆ ಹೋಗ್ತಾ ಇದ್ದೀವ, ಸೂಪರ್ ಪಪ್ಪಾ.
ನಯನಾ ಗೆ ಖುಷಿ ಆದ್ರು ನನಗೆ ಹೇಳಿಲ್ಲ ಅನ್ನೋ ಫೀಲ್ ಆಗುತ್ತೆ.
ಅಭಿ,,, ನಿಮ್ ಅಮ್ಮಗೂ ಹೇಳು ರೆಡಿ ಆಗೋಕೆ. ಆಮೇಲೆ ಮಗಳಿಗೆ ಮಾತ್ರ ಹೇಳಿದ ನನಗೆ ಹೇಳಿಲ್ಲ ಅಂತ ಅಂದ್ರೆ ಕಷ್ಟ.
ಅನಾ,,,, ನಗ್ತಾ ಪಪ್ಪಾ ನಾನು ನೀನು ಎಲ್ಲಿ ಇರ್ತೀವೋ ಅಲ್ಲಿ ಅಮ್ಮ ಇರಲೇ ಬೇಕು ಬೇರೆ ದಾರಿ ಇಲ್ಲಾ.
ಅಭಿ,,, ಹಾಗೇ ಹೇಳಬಾರದು ಬಂಗಾರ, ಅಮ್ಮನಿಂದ ನಾನು ನೀನು. ಯಾವತ್ತೂ ಅಷ್ಟೇ ನನ್ನ ಬಿಟ್ಟು ಕೊಟ್ಟರು ಅಮ್ಮ ನಾ ಬಿಟ್ಟು ಕೊಡಬೇಡ ಸರಿನಾ.
ನಯನಾ ಗೆ ಅಭಿ ನೇರವಾಗಿ ಹೇಳದೆ ಇದ್ರು, ಅ ಮಾತು ತುಂಬಾ ಇಷ್ಟ ಆಗುತ್ತೆ. ಮನಸಲ್ಲೇ ಖುಷಿ ಪಡ್ತಾ. ಅನಾ ಗೆ ಇಲ್ಲಿ ಅಮ್ಮ ಅಪ್ಪ ಮಗಳು ಅಂತ ಬೇರೆ ಬೇರೆ ಏನು ಇಲ್ಲಾ. ಅಮ್ಮ ಅಪ್ಪ ಮಗಳು ಮೂರು ಜನ ಒಂದೇ. ಯಾರನ್ನು ಯಾವುದೇ ಕಾರಣಕ್ಕೆ ಬಿಟ್ಟು ಕೊಡ ಬಾರದು ಗೊತ್ತಾಯಿತಾ.
ಅನಾ,,, ಅಮ್ಮ ನಾ ಮುಖ ನೋಡ್ತಾ ಹ್ಮ್ ಸರಿ ಅಮ್ಮ.
ವಿಶ್ವ ಸುಭದ್ರ ಗೆ ಮೂರು ಜನರ ಮಾತು ಮನಸ್ಸಿಗೆ ತುಂಬಾ ಖುಷಿ ಕೊಡುತ್ತೆ.
ವಿಶ್ವ ಊಟ ಮಾಡ್ತಾ ಇರೋವಾಗ ಅವರ ಮೊಬೈಲ್ ರಿಂಗ್ ಆಗುತ್ತೆ. ವಿಶ್ವ ಮೊಬೈಲ್ ಕಡೆಗೆ ನೋಡಿ ಊಟ ಬಿಟ್ಟು ಮೊಬೈಲ್ ನಾ ಇಡ್ಕೊಂಡು ಅಲ್ಲಿಂದ ಹೊರಗೆ ಹೋಗ್ತಾರೆ. ಸುಭದ್ರ, ನಯನಾ ಕರೆದ್ರು ಕೇಳಿಸದ ಹಾಗೇ ಹೊರಟು ಹೋಗ್ತಾರೆ.
10 ನಿಮಿಷ ದ ನಂತರ ವಿಶ್ವ ಮನೆ ಒಳಗೆ ಬರ್ತಾರೆ.
ಸುಭದ್ರ,,, ಏನ್ರಿ ನೀವು ಊಟ ಮಾಡೋವಾಗ ಹಾಗೇ ಎದ್ದು ಹೋಗ್ತೀರಾ. ಊಟ ಮಾಡಿ ಆಮೇಲೆ ಮಾತಾಡೋಕೆ ಆಗೋದಿಲ್ವಾ?
ವಿಶ್ವ,,, ಇಂಪಾರ್ಟೆಂಟ್ ಕಾಲ್ ಸುಭದ್ರ ಅದಕ್ಕೆ ಹೋದೆ ಅಂತ ಹೇಳಿ ಮತ್ತೆ ಊಟಕ್ಕೆ ಕೂತ್ಕೋತಾರೆ.
ಅಭಿ ವಿಶ್ವನಾಥ್ ಮುಖ ನಾ ಸರಿಯಾಗಿ ಗಮನಿಸಿ. ಸರ್ ಎಲ್ಲಾ ಓಕೆ ಅಲ್ವಾ ಅಂತ ಕೇಳ್ತಾನೆ.
ವಿಶ್ವ,,, ಎಲ್ಲಾ ಓಕೆ ಅಭಿ ಏನಕ್ಕೆ ಹಾಗೇ ಕೇಳ್ತಾ ಇದ್ದಿಯಾ?
ಅಭಿ,,, ಹಾಗೇ ಸುಮ್ನೆ ಕೇಳ್ದೆ ಅಂತ ಊಟ ಮಾಡೋದನ್ನ ಮುಂದುವರೆಸ್ತಾನೆ.
ಅಭಿ ಊಟ ಮಾಡಿ ಮುಗಿಸಿದ ಮೇಲೆ ರೂಮ್ ಗೆ ಹೋಗಿ ಸ್ವಲ್ಪ ಹೊತ್ತು ರೆಸ್ಟ್ ಮಾಡೋಣ ಅಂತ ಹೋಗ್ತಾನೆ.
ಅನಾ ನಯನಾ ಇಬ್ಬರು ರೂಮ್ ಗೆ ಹೋಗ್ತಾರೆ.
ನಯನಾ,,, ರೀ ಎಷ್ಟು ದಿನ ಇರ್ತೀವಿ ಅಮ್ಮ ನಾ ಮನೇಲಿ.
ಅಭಿ,,, ಗೊತ್ತಿಲ್ಲಾ, ಸ್ವಲ್ಪ ದಿನಕ್ಕೆ ಬಟ್ಟೆ ನಾ ಪ್ಯಾಕ್ ಮಾಡ್ಕೊಳ್ಳಿ, ಬೇಕಾದ್ರೆ ಆಮೇಲೆ ಅಲ್ಲೇ ತಗೊಳೋಣ .
ನಯನಾ,,, ಸರಿ ರಿ ಅಂತ ಹೇಳ್ತಾ, ಬಟ್ಟೆ ನಾ ಪ್ಯಾಕ್ ಮಾಡ್ಕೊಳ್ಳೋಕೆ ಹೋಗ್ತಾಳೆ.
ಅಭಿ ಬೆಡ್ ಮೇಲೆ ಮಲಗಿಕೊಂಡು ಸ್ವಲ್ಪ ಹೊತ್ತು ನಿದ್ದೆ ಮಾಡ್ತಾನೆ.
########
ಸ್ವಲ್ಪ ಸಮಯದ ನಂತರ ಪಪ್ಪಾ ಪಪ್ಪಾ ಅಂತ ಮಲಗಿರೋ ಅಭಿ ಅನಾ ಬಂದು ಎಬ್ಬಿಸ್ತಾಳೆ. ಅಭಿ ಅನಾ ಧ್ವನಿ ಕೇಳಿ ಭಯ ಬಿದ್ದು ಎದ್ದು ಅನಾ ಕಡೆಗೆ ನೋಡ್ತಾ, ಏನಾಯ್ತು ಬಂಗಾರ ಯಾಕ್ ಗಾಬರಿ ಆಗಿದ್ದೀಯಾ ಅಂತ ಕೇಳ್ತಾನೆ. ಅನಾ,, ಪಪ್ಪಾ ಅಜ್ಜಿ ಅಜ್ಜಿ ಅಂತ ಹೇಳೋವಾಗ ಅಭಿ ಮೊಬೈಲ್ ರಿಂಗ್ ಆಗುತ್ತೆ.. ಅಭಿ ಮೊಬೈಲ್ ಕಡೆಗೆ ನೋಡ್ತಾನೆ. ನಿರಂಜನ್ ಕಾಲ್. ಅಭಿ ಕಾಲ್ ಪಿಕ್ ಮಾಡಿ ಹಲೋ ಅಂತ ಹೇಳ್ತಾನೆ ಅಷ್ಟೇ. ನಿಮಿಷದಲ್ಲಿ ಕಾಲ್ ನಾ ಕಟ್ ಮಾಡಿ. ಅನಾ ಗೆ ಬಂಗಾರಿ ಅಮ್ಮ ಹತ್ತಿರ ಇರು ಅಂತ ಹೇಳಿ. ಮಗಳನ್ನ ಕರ್ಕೊಂಡು ಹಾಲ್ ಗೆ ಬರ್ತಾನೇ. ಹಾಲ್ ಅಲ್ಲಿ ಸುಭದ್ರ, ನಯನಾ ಇಬ್ಬರು ಕಣ್ಣೀರು ಹಾಕ್ತಾ ಏನೋ ಮಾತಾಡ್ತಾ ಇರ್ತಾರೆ. ಅಭಿ ನಾ ನೋಡಿ. ನಯನಾ ಓಡಿ ಅಭಿ ನಾ ತಬ್ಬಿಕೊಂಡು ಬೇಡ ರೀ ನೀವು ಹೋಗಬೇಡಿ, ಅಪ್ಪ ನೋಡ್ಕೋತಾರೆ ನೀವು ಹೋಗಬೇಡಿ ಅಂತ ಹೇಳ್ತಾಳೆ. ಅಭಿ ನಯನಾ ಮಾತನ್ನ ಕೇಳೋ ಸ್ಥಿತಿ ಅಲ್ಲೇ ಇರೋದಿಲ್ಲ. ನಯನಾ ಳಿಂದ ಬಿಡಿಸಿಕೊಂಡು ಬೈಕ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟು ಹೋಗ್ತಾನೆ. ಅಭಿ ಹೊರಟು ಹೋದಮೇಲೆ,, ಅಮ್ಮ ನನಗೆ ಯಾಕೋ ಭಯ ಆಗ್ತಾ ಇದೆ, ಬಾಮ್ಮ ಹೋಗೋಣ ಅಂತ ನಯನಾ ಅಮ್ಮನಿಗೆ ಹೇಳಿದ್ರೆ, ಸುಭದ್ರ ನಡಿ ಹೋಗೋಣ ಅಂತ ಹೇಳಿ, ಕಾರ್ ಅಲ್ಲಿ ಅಲ್ಲಿಂದ ಹೊರಟು ಸೀದಾ ಸೂಪರ್ ಮಾರ್ಕೆಟ್ ಕಡೆಗೆ ಹೋಗ್ತಾರೆ.
@@@@@@@@@@@@@@@@@@@@@@@@@