Abhinayanaa - 15 in Kannada Love Stories by S Pr books and stories PDF | ಅಭಿನಯನಾ - 15

The Author
Featured Books
  • बेटा

    बेटा बड़ी थकान महसुस हो रही थी। रास्ते में कई बार कई पेड़ के न...

  • मिड-डे मील

    प्राथमिक विद्यालय का प्रांगण कोलाहल से भरा हुआ था। आज स्कूल...

  • पहली नज़र का इश्क - 5

    स्कूल में सब कुछ सामान्य और खुशहाल लग रहा था, लेकिन बिकाश और...

  • राजकुमार का नाम

    आपने परियों की कहानी सुनी होगी, राजा रानी की कहानी सुनी होगी...

  • The Hiding Truth - 1

    अध्याय 1: प्रतिज्ञा और पुराना घरभविष्य की चकाचौंध और अत्याधु...

Categories
Share

ಅಭಿನಯನಾ - 15

  ಬೆಳಿಗ್ಗೆ ಅಲಾರಾಂ ಸದ್ದಿಗೆ ನಯನಾ ಗೆ ಎಚ್ಚರ ಆಯಿತು. ಕಣ್ ಬಿಟ್ಟು ನೋಡ್ತಾಳೆ, ಅನಾ ಅಭಿ ಎದೆಮೇಲೆ ಆರಾಮಾಗಿ ಅಪ್ಪಿಕೊಂಡು ಮಲಗಿರ್ತಾಳೆ. ಅಭಿ ಅವಳನ್ನ ಬೀಳದಂತೆ ಹಿಡಿದುಕೊಂಡು ಮಲಗಿರೋದನ್ನ ನೋಡಿ ಮನಸ್ಸಿಗೆ ತುಂಬಾ ಖುಷಿ ಆಗುತ್ತೆ. ಎದ್ದು ಮಗಳ ಕೆನ್ನೆಗೆ ಮುತ್ತು ಕೊಡೋಣ ಅಂತ ಹೋಗ್ತಾಳೆ. ಯಾರೋ ಇಡಿದುಕೊಂಡ ಫೀಲ್ ಆಗುತ್ತೆ. ನಯನಾ ಗೆ ಅದು ಅಭಿ ಅಂತ ಗೊತ್ತಾದಾಗ ಅವಳ ಮನಸ್ಸಿಗೆ ಹೇಳದಿರೋ ಅಷ್ಟು ಸಂತೋಷ, ಆನಂದ ಆಗುತ್ತೆ. ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಅಭಿ ಮುಖ ನಾ ನೋಡ್ತಾಳೆ. ಪ್ರಶಾಂತವಾಗಿ ಅಭಿ ಮಲಗಿರೋದನ್ನ ನೋಡಿ. ಅವನ ಮುಖ ನೋಡ್ತಾ ಮನಸಲ್ಲೇ, ಈ ರೀತಿ ಪ್ರೀತಿ ಕೊಡ್ತೀಯಾ ಅಂತ ಮೊದಲೇ ಗೊತ್ತಿದ್ರೆ ನಿನ್ನ ಇಷ್ಟು ದೂರ ಇಡ್ತಾನೆ ಇರಲಿಲ್ಲ. ನಿನಗೆ ನೋವು ಕೊಟ್ರು ದೂರ ಇಟ್ರು ಕೋಪ ಮಾಡ್ಕೊಂಡ್ರು. ಅದ್ಯಾವುದನ್ನು ಮನಸಲ್ಲಿ ಇಟ್ಟುಕೊಳ್ಳದೆ ನಮ್ಮ ಮೇಲೆ ಇಷ್ಟು ಪ್ರೀತಿ ನಾ ಇಟ್ಕೊಂಡು ಇದ್ದಿಯಾ. ಅಪ್ಪ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಸಾಕಾಗಲ್ಲ. ಅನಾ ಗೋಸ್ಕರ ಮದುವೆ ಬೇಡ ಏನು ಬೇಡ ಅಂತ ನಿರ್ಧಾರ ಮಾಡಿದ್ದ ನನಗೆ, ನನಗಿಂತ ಹೆಚ್ಚಾಗಿ ಪ್ರೀತಿ ಮಾಡಿ ಅವಳನ್ನ ಮಗಳಿಗಿಂತ ಹೆಚ್ಚಾಗಿ ನೋಡ್ಕೊಳ್ಳೋ ಅಭಿ ನಾ, ನನ್ನ ಲೈಫ್ ಗೆ ಅವಳ ಲೈಫ್ ಗೆ ತಂದು ಕೊಟ್ಟೆ, ನಾನೆ ದಡ್ಡಿ ಹಾಗೇ ನಿನ್ನ ಅಭಿ ನಾ ಅರ್ಥ ಮಾಡಿಕೊಳ್ಳದೆ ಹೋದೆ. ಐಮ್ ಸಾರೀ ಅಪ್ಪ. ಅಂತ ಮನಸಲ್ಲೇ ಹೇಳಿಕೊಂಡು. ಅಭಿ ನಾ ಅನಾ ನಾ ಡಿಸ್ಟರ್ಬ್ ಮಾಡದೇ, ಅಲ್ಲಿಂದ ಎದ್ದು. ಫ್ರೆಷ್ ಅಪ್ ಆಗಿ, ಅಡುಗೆ ಮನೆ ಕಡೆಗೆ ಹೋಗ್ತಾಳೆ. 

ಸುಭದ್ರ ಅವರು ರೂಮಿಂದ ಹೊರಗೆ ಬಂದು ಅಡುಗೆ ಮನೆ ಕಡೆ ಹೋಗ್ತಾರೆ. ಅಲ್ಲಿ ನಯನಾ ನಾ ನೋಡಿ. ಇಷ್ಟು ಬೇಗ ಎದ್ದೆ ಇನ್ನು ಸ್ವಲ್ಪ ಹೊತ್ತು ಮಲಗಬಾರ್ದ. ಅಂತ ಹೇಳ್ತಾ ನಯನಾ ಮುಖ ನೋಡ್ತಾರೇ. ನಯನಾ ಮುಖದಲ್ಲಿ ಸಂತೋಷ, ಖುಷಿ ನೋಡಿ. ನನ್ನ ಬಂಗಾರ ನೀನು ಯಾವಾಗೂ ಇದೆ ತರ ಖುಷಿಯಾಗಿ ಇರು ಅಂತ ಹಣೆಗೆ ಮುತ್ತೊಂದನ್ನ ಕೊಟ್ಟು. ತಿಂಡಿ ಕಾಫಿ ಮಾಡೋಕೆ ಶುರು ಮಾಡ್ತಾರೆ.

ನಯನಾ ಕಾಫಿ ಮಾಡಿಕೊಂಡು,  ಕಪ್ ಅಲ್ಲಿ ಹಾಕಿಕೊಂಡು ರೂಮ್ ಗೆ ಬರ್ತಾಳೆ. ಅನಾ ಇನ್ನು ಹಾಗೇ ಮಲಗಿರೋದನ್ನ ನೋಡಿ. ಮಹಾರಾಣಿ ಅವರಿಗೆ ಇನ್ನು ಪಪ್ಪಾ ನಾ ಎದೆಮೇಲೆ ಮಲಗಿಕೊಂಡಿದ್ದು ಸಾಕಾಗಿಲ್ವಾ. ಎದ್ದು ಹಾಲು ಕುಡಿದು ಸ್ನಾನ ಮಾಡಿ ರೆಡಿ ಅದ್ರೆ ಬೇಗ ಅಜ್ಜಿ ನಾ ನೋಡೋಕೆ ಹೋಗಬಹುದು ಅಂತ ಹೇಳ್ತಾ ಕಾಫಿ ಕಪ್ ನಾ ಟೇಬಲ್ ಮೇಲೆ ಇಟ್ಟು. ರೀ ಎದ್ದೇಳಿ ಎದ್ದು ಕಾಫಿ ಕುಡಿದು ಸ್ನಾನ ಮಾಡಿ ರೆಡಿ ಆಗಿ, ಅಂತ ಹೇಳ್ತಾ ಅಭಿ ನಾ ಎಬ್ಬಿಸ್ತಾಳೆ. 

ಅನಾ,,, ಏನಮ್ಮ ನೀನು ನನ್ನು ಮಲಗೋಕು ಬಿಡಲ್ಲ, ಪಪ್ಪಾ ನು ಮಲಗೋಕು ಬಿಡಲ್ಲ. ಅಂತ ತುಸು ಕೋಪದಿಂದ ಹೇಳ್ತಾ, ಎದ್ದು ಅಭಿ ಕೆನ್ನೆಗೆ ಮುತ್ತಿಟ್ಟು. ಮೊದಲು ನೀನು ಹೋಗಿ ರೆಡಿ ಆಗು ಆಮೇಲೆ ನಮಗೆ ಹೇಳು ಅಂತ ಹೇಳ್ತಾ ಅಲ್ಲೇ ಇದ್ರೆ ಹೊಡಿತಾಳೆ ಅಂತ ಅನ್ಕೊಂಡು ಅಲ್ಲಿಂದ ಪುರ್ ಅಂತ ಹೊಡಿ ಹೋಗತಾಳೆ.

ನಯನಾ ಅವಳು ಹೇಳಿ ಹೋದ ರೀತಿ ನೋಡಿ ನಗ್ತಾ, ಹೋಗಿ ರೂಮ್ ಡೋರ್ ಲಾಕ್ ಮಾಡಿ, ರೀ ನೀವು ಎದ್ದು ಕಾಫಿ ಕುಡೀರಿ ನಾನ್ ಹೋಗಿ ಸ್ನಾನ ಮಾಡ್ಕೊಂಡು ಬರ್ತೀನಿ ಅಂತ ಹೇಳಿ ಬಟ್ಟೆ ತೆಗೆದುಕೊಂಡು ಸ್ನಾನಕ್ಕೆ ಹೋಗ್ತಾಳೆ.

ಕೆಲವು ನಿಮಿಷಗಳ ಅಭಿ ಎದ್ದು ಕಾಫಿ ಕುಡಿತಾ ಕೂತ್ಕೋತಾನೆ.

ಸ್ವಲ್ಪ ಸಮಯದ ನಂತರ ನಯನಾ ಬಾತ್ರೂಮ್ ಡೋರ್ ಒಪನ್ ಮಾಡಿಕೊಂಡು ಹೊರಗೆ ಬರ್ತಾಳೆ. ಅಭಿ ಮೊಬೈಲ್ ಅಲ್ಲಿ ಮುಳಗಿ ಹೋಗಿ ಇರೋದನ್ನ ನೋಡಿ. 

ನಯನಾ ಅಭಿ ಹತ್ತಿರ ಬಂದು ಕೈಲಿ ಇರೋ ಮೊಬೈಲ್ ನಾ ತೆಗೆದು ಪಕ್ಕಕ್ಕೆ ಇಟ್ಟು. ರೀ ಮೊದಲು ಹೋಗಿ ಸ್ನಾನ ಮಾಡಿಕೊಂಡು ಬನ್ನಿ. ಅಂತ ಹೇಳ್ತಾ ಅಭಿ ನಾ ಎಬ್ಬಿಸಿ ಬಾತ್ರೂಮ್ ಗೆ ಕಳಿಸಿ ಬೆಡ್ ಕ್ಲೀನ್ ಮಾಡಿ. ಅಭಿ ಬಟ್ಟೆಗಳನ್ನ ಬೆಡ್ ಮೇಲೆ ಇಟ್ಟು, ನಯನಾ ರೆಡಿ ಆಗೋಕೆ ಕನ್ನಡಿ ಮುಂದೆ ನಿಂತು ಕೊಳ್ತಾಳೆ. ಅಭಿ ಸ್ನಾನ ಮಾಡಿಕೊಂಡು ಹೊರಗೆ ಬರ್ತಾನೇ. 

ನಯನಾ ಅಭಿ ನಾ ರೀ ನೀವು ರೆಡಿ ಆಗಿ ನಾನ್ ಹೋಗಿ ಅನಾ ನಾ ರೆಡಿ ಮಾಡ್ತೀನಿ,  ಅಂತ ಹೇಳಿ ರೂಮಿಂದ ಹೊರಗೆ ಹೋಗ್ತಾಳೆ. ಅಭಿ ರೆಡಿ ಆಗಿ, ಅವನ ಮೊಬೈಲ್ ಪರ್ಸ್ ನಾ ತೆಗೆದುಕೊಂಡು ರೂಮಿಂದ ಹೊರಗೆ ಹೋಗ್ತಾನೆ. 

ವಿಶ್ವ,,, ಸೋಫಾ ಮೇಲೆ ಕೂತ್ಕೊಂಡು ಪೇಪರ್ ಓದ್ತಾ ಇರ್ತಾರೆ. ಅಭಿ ನಾ ನೋಡಿ,  ಬಾ ಅಭಿ ಕುತ್ಕೋ ಕಾಫಿ ಕುಡಿದ.

ಅಭಿ,,, ಆಯ್ತು ಸರ್ ನಿಮ್ದು.

ವಿಶ್ವ,,, ಏನ್ ಅಭಿ ನೀನು ಸರ್ ಸರ್ ಅನ್ಕೊಂಡು, ಈಗಲಾದ್ರೂ ಮಾವ ಅಂತ ಕರೀಬಾರ್ದ.

ಅಭಿ,,, ಅಭ್ಯಾಸ ಆಗೋದಿದೆ ಸರ್, ಅದಕ್ಕೆ?

ವಿಶ್ವ,,, ಹ್ಮ್ ಸರಿ, ಅಂತ ಹೇಳ್ತಾ, ಅಭಿ ಕೈಗೆ ಒಂದು ಕವರ್ ನಾ ಕೊಡೋಕೆ ಹೋಗ್ತಾರೆ. 

ಅಭಿ,,, ಕವರ್ ನಾ ನೋಡಿ ಏನ್ ಸರ್ ಇದು?

ವಿಶ್ವ,,, ಇದರಲ್ಲಿ ಎರಡು ಲಕ್ಷ ಇದೆ, ತಗೊಂಡು ಹೋಗಿ ನಿಮ್ ತಾಯಿ ಅವರಿಗೆ ಕೊಡು. 

ಅಭಿ,,, ಬೇಡ ಸರ್, ಇಟ್ಕೊಳ್ಳಿ.

ಸುಭದ್ರ,,, ಅಡುಗೆ ಮನೆ ಯಿಂದ ಬರ್ತಾ, ಬೇಡ ಅಂತ ಹೇಳಬೇಡ ಅಭಿ, ಇವತ್ತು ಈ ಮನೆ ಇಷ್ಟು ನೆಮ್ಮದಿ ಆಗಿ ಸಂತೋಷ ವಾಗಿ ಇದೆ ಅಂದ್ರೆ ಅದಕ್ಕೆ ಕಾರಣ ನೀನೇ. ನನ್ನ ಮಗಳಿಗೆ ಅಳಿಯ ಸಿಕ್ಕ ಅನ್ನೋ ಸಂತೋಷ ಕ್ಕಿಂತ ನಮಗೆ ಒಬ್ಬ ಮಗ ಸಿಕ್ಕಿದ ಅನ್ನೋ ಸಂತೋಷ ನೇ ಜಾಸ್ತಿ ಕೊಟ್ಟೆ ನೀನು ನಮಗೆ. ನಮಗೆ ಒಬ್ಬ ಮಗ ಇದ್ರು ನಾವು ಇಷ್ಟು ಸಂತೋಷ ವಾಗಿ ಇರ್ತಾ ಇದ್ವೋ ಗೊತ್ತಿಲ್ಲಾ. ನೀನು ನಮ್ಮನ್ನ ಅಷ್ಟು ಪ್ರೀತಿಯಿಂದ ನೋಡ್ಕೋತ ಇದ್ದಿಯಾ. ನಮ್ಮವರೇ ಹಣ ಅಸ್ತಿ ಅಂತ ಕೇಳೋವಾಗ, ಏನು ಕೇಳದೆ ನಮಗೋಸ್ಕರ ಇಷ್ಟೆಲ್ಲಾ ಮಾಡ್ತಾ ಇರೋ ನಿನಗೆ ನಾವು ಏನು ಕೊಟ್ರು ಕಮ್ಮಿ ನೇ. ಅಂತ ಹೇಳ್ತಾ ವಿಶ್ವ ಕೈಲಿ ಇದ್ದಾ ಕವರ್ ನಾ ತೆಗೆದುಕೊಂಡು. ಅಭಿ ಮುಂದೆ ನಿಂತು ಅವನ ಕೈ ಇಡಿದು ಅವನ ಕೈಲಿ ಇಟ್ಟು. ಇದು ಒಬ್ಬ ತಾಯಿ ಆಗಿ ಮಗನಿಗೆ ಪ್ರೀತಿಯಿಂದ ಕೊಡ್ತಾ ಇರೋದು. ನನ್ನ ಅಮ್ಮ ಅಂತ ಕರಿಯೋದು ಮನಸ್ಸಿನಿಂದ ಅನ್ನೋದೇ ಆಗಿದ್ರೆ. ಈ ಅಮ್ಮನ ಮಾತಿಗೆ ಎದುರು ಹೇಳದೆ ಇದನ್ನ ತಗೋ. 

ಅಭಿ,,, ಸುಭದ್ರ ಅವರ ಈ ಮಾತಿಗೆ ಸಂಕಷ್ಟ ಕ್ಕೆ ಸಿಲುಕಿ, ವಿಶ್ವ ಕಡೆಗೆ ನೋಡ್ತಾ, ಏನ್ ಸರ್ ಇದು. 

ವಿಶ್ವ,,, ನಗತಾ ನನಗೆ ಏನು ಗೊತ್ತಿಲ್ಲ ಅಭಿ, ಮೊದಲು ನೀವು ಕೊಟ್ಟು ನೋಡಿ ತಗೊಂಡು ಇಲ್ಲಾ ಅಂದ್ರೆ ತಗೋಳೋ ಹಾಗೇ ನಾನ್ ಮಾಡ್ತೀನಿ ಅಂತ ಹೇಳಿದ್ರು. ಹಾಗೇ ಮಾಡಿದ್ರು. ಇದಕ್ಕೂ ನನಗೂ ಏನು ಸಂಬಂಧ ಇಲ್ಲಾ. ಇನ್ನ ಅಮ್ಮ ಉಂಟು ಮಗ ಉಂಟು ಅಂತ ಹೇಳಿ ಸೈಲೆಂಟ್ ಆಗ್ತಾರೆ. 

ಅಭಿ,,, ಸುಭದ್ರ ಕಡೆಗೆ ನೋಡ್ತಾ. ಅಮ್ಮ ಪ್ಲೀಸ್ ನಾನು ಹೇಳೋದನ್ನ ಅರ್ಥ ಮಾಡ್ಕೊಳ್ಳಿ.

ಸುಭದ್ರ,,, ಲೋ ಮುಚ್ಕೊಂಡು ತಗೋ, ಜಾಸ್ತಿ ಮಾತಾಡಬೇಡ. ಅರ್ಥ ಆಯ್ತಾ. 

ಅಭಿ ಗೆ ಕಂಪ್ಲೀಟ್ ಆಗಿ ಅರ್ಥ ಆಗಿ ಬಿಡ್ತು ಬೇರೆ ದಾರಿ ಇಲ್ಲದೆ ಕವರ್ ನಾ ತಗೋತಾನೆ.

ಸುಭದ್ರ,, ಹ್ಮ್ ಇದು ಮಗ ನಾ ಲಕ್ಷಣ. ಬಾ ತಿಂಡಿ ಕೊಡ್ತೀನಿ ಅಂತ ಹೇಳಿ ಅಡುಗೆ ಮನೆ ಕಡೆಗೆ ಹೋಗ್ತಾರೆ. 

ನಯನಾ ಅನಾ ನಾ ರೆಡಿ ಮಾಡಿ ಕರ್ಕೊಂಡು ಬರ್ತಾ, ಅಭಿ, ನಾ ವಿಶ್ವ ನಾ ನೋಡಿ, ರೀ ಬನ್ನಿ ತಿಂಡಿ ಮಾಡಿ. ಅಪ್ಪ ತಿಂಡಿ ಮಾಡಿ ಬನ್ನಿ ಅಂತ ಕರೀತಾಳೆ.

ವಿಶ್ವ,,, ನೀವು ಮಾಡಿ ನಾನು ಆಮೇಲೆ ಸ್ನಾನ ಮಾಡಿ ತಿಂಡಿ ಮಾಡ್ತೀನಿ. 

ನಯನಾ ರೀ ಬನ್ನಿ ಅಂತ ಅಭಿ ನಾ ಅನಾ ನಾ ಕರ್ಕೊಂಡು ತಿಂಡಿ ಮಾಡೋಕೆ ಹೋಗ್ತಾಳೆ. 

ಅಭಿ ನಯನಾ ಅನಾ ಮೂರು ಜನ ತಿಂಡಿ ಮುಗಿಸಿಕೊಂಡು ಹೊರಡೋಕೆ ರೆಡಿ ಆಗ್ತಾರೆ. 

ಅಭಿ ಡ್ರೈವಿಂಗ್ ಸೀಟ್ ಅಲ್ಲಿ ಕೂತ್ಕೊಂಡ್ರೆ ನಯನಾ ಅನಾ ಪಕ್ಕದ ಸೀಟ್ ಅಲ್ಲಿ ಕೂತ್ಕೋತಾರೇ.

ವಿಶ್ವ,, ಸುಭದ್ರ,,, ಅವರಿಗೆ ಬೈ ಹೇಳಿ ಕಳಿಸಿ ಕೊಡ್ತಾರೆ..

###########

1 ಗಂಟೆ ಪ್ರಯಾಣದ ನಂತರ, ಒಂದು ಊರಿನ ಒಳಗೆ ಬಂದು ಒಂದು ಬೀದಿಗೆ ಬರ್ತಾರೆ. ಅ ಬೀದಿಲಿ ಕಾರ್ ಹೋಗೋಕೂ ಸ್ವಲ್ಪ ಕಷ್ಟ ಆಗುತ್ತೆ ಅ ರೀತಿ ಬೈಕ್ ಗಳನ್ನ ನಿಲ್ಲಿಸಿ ಬಿಟ್ಟಿರ್ತಾರೆ.  

ಅಭಿ,,, ಅನಾ ನಾ ನೋಡ್ತಾ ಬಂಗಾರಿ ಸ್ವಲ್ಪ ಹೊತ್ತು ಕಿವಿನ ಮುಚ್ಕೋ.

ಅನಾ,,, ಸರಿ ಪಪ್ಪಾ ಅಂತ ಹೇಳ್ತಾ ಎರಡು ಕಿವಿನ ಮುಚ್ಚಿಕೊಳ್ತಾಳೆ. 

ಅಭಿ, ನಯನಾ ಕಡೆ ನೋಡ್ತಾನೆ. ನಯನಾ ಕೂಡ ಎರಡು ಕಿವಿನ ಮುಚ್ಚಿಕೊಳ್ತಾಳೆ. 

ಅಭಿ ನಾನ್ ಸ್ಟಾಪ್ ಆಗಿ, ಕಾರ್ ಹಾರೋನ್ ನಾ ಹೊಡಿಯೋಕೆ ಶುರು ಮಾಡ್ತಾನೆ.  ಸೌಂಡ್ ಕೇಳಿ ಅ ಬೀದಿಲಿ ಇದ್ದಾ ಜನರೆಲ್ಲಾ ಮನೆಯಿಂದ ಹೊರಗಡೆ ಬಂದು ಅಭಿ ಕಾರ್ ಕಡೆಗೆ ನೋಡ್ತಾ ನಿಲ್ತಾರೆ. ಒಬ್ಬ ವ್ಯಕ್ತಿ ಕಾರ್ ಹತ್ತಿರ ಬಂದು, ಯಾರು ಅಂತ ನೋಡ್ತಾನೆ. ಅಭಿ ನಾ ನೋಡಿ, ಅಭಿ ನೀನಾ ನಾನ್ ಯಾರೋ ಅನ್ಕೊಂಡೆ, ಏನಕ್ಕೆ ಈ ರೀತಿ ಸೌಂಡ್ ಮಾಡ್ತಾ ಇದ್ದಿಯಾ ಅಂತ ಕೇಳ್ತಾರೆ.

ಅಭಿ,, ಮತ್ತೆ ಇನ್ನೇನ್ ಅಣ್ಣ, ರೋಡ್ ಫುಲ್ ಈ ರೀತಿ ಬೈಕ್ ಗಳನ್ನ ನಿಲ್ಲಿಸಿ ಮನೆ ಒಳಗೆ ಕೂತ್ಕೊಂಡ್ರೆ. ಒಬ್ಬೊಬ್ಬರ ಮನೆ ಬಾಗಿಲಿಗೆ ಹೋಗಿ ಹೇಳೋಕೆ ಆಗುತ್ತಾ.

ಅಯ್ಯೋ ನಾನು ಹೇಳಿ ಹೇಳಿ ಸಾಕಾಯ್ತು. ನನಗೆ ದಿನ ಇದೆ ತಲೆ ನೋವು. ನೀನು ಮುಂದೆ ಹೋಗ್ತಾ ಇರು, ಬೈಕ್ ಬೇಕಾದವರು ಬಂದು ಸೈಡ್ ಗೆ ನಿಲ್ಲಿಸಿ ಕೊಳ್ತಾರೆ. 

ಅಭಿ,,, ಕಾರ್ ನಾ ಸ್ಟಾರ್ಟ್ ಮಾಡಿ ಮುಂದೆ ಮುಂದೆ ಹೋಗ್ತಾನೆ. ಅಡ್ಡ ದಿಡ್ಡಿ ಬೈಕ್ ನಿಲ್ಲಿಸಿದವರು ಅವರವರ ಬೈಕ್ ನಾ ಪಕ್ಕಕ್ಕೆ ನಿಲ್ಲಿಸಿ ಕೊಳ್ತಾ ಕಾರ್ ಹೋಗೋಕೆ ದಾರಿ ಮಾಡಿ ಕೊಡ್ತಾರೆ. 

ಸ್ವಲ್ಪ ಸಮಯದ ನಂತರ, ಕಾರ್ ನಾ ಒಂದು ಮನೆ ಮುಂದೆ ನಿಲ್ಲಿಸ್ತಾನೆ. ಅ ಮನೆ ಮುಂದೆ ಒಬ್ಬ ಮಹಿಳೆ ಕೈ ಕಟ್ಟಿಕೊಂಡು ಕಾರ್ ಕಡೆಗೆ ನೋಡ್ತಾ ಇರೋದನ್ನ ನೋಡಿ. ಅಭಿ ಅನಾ ಕಡೆಗೆ ನೋಡಿ, ನೋಡು ನಿಮ್ ಅತ್ತೆ ಹೇಗೆ ನೋಡ್ತಾ ಇದ್ದಾರೆ ಅಂತ ಹೇಳ್ತಾನೆ. ಅನಾ ಏನು ಅವರು ನನ್ನ ಅತ್ತೆ ನಾ ಅಂತ ಖುಷಿಯಾಗಿ ಕಾರ್ ಇಳಿದು ಓಡಿ ಹೋಗಿ, ಅತ್ತೆ ಅಂತ ಹೋಗಿ ಅವರ ಮುಂದೆ ನಿಂತು ಕೊಂಡು ಅವರ ಮುಖ ನೋಡ್ತಾ ಅತ್ತೆ ಹೇಗಿದ್ದೀರ ಅಂತ ಕೇಳ್ತಾಳೆ. 

ಅ ಮಹಿಳೆ,, ಅನಾ ನಾ ಎತ್ತಿಕೊಂಡು, ಕೆನ್ನೆಗೆ ಮುತ್ತಿಟ್ಟು ಬಂಗಾರಿ, ಎಷ್ಟು ಮುದ್ದಾಗಿ ಇದ್ದಿಯಾ. ಏನ್ ನಿನ್ನ ಹೆಸರು.

ಅನಾ,,, ಅನಾ ಅತ್ತೆ. 

ನಯನಾ ಅಭಿ ಇಬ್ಬರು ಕಾರ್ ಇಳಿದು ಅಲ್ಲಿಗೆ ಹೋಗ್ತಾರೆ. 

ಅನಾ,, ನಯನಾ ನಾ ತೋರಿಸಿ, ಅಮ್ಮ ಅಂತ ಹೇಳ್ತಾ. ಅಜ್ಜಿ ಎಲ್ಲಿ ಅಂತ ಕೇಳ್ತಾಳೆ

ಮಹಿಳೆ,,, ಅಮ್ಮ ನಿನ್ನ ಮೊಮ್ಮಗಳು ಸೊಸೆ, ಕಿತ್ತೊಗಿರೊ ನಿನ್ನ ಮಗ ಬಂದಿದ್ದಾನೆ ನೋಡು ಅಂತ ಹೇಳ್ತಾರೆ. 

ಮನೆ ಒಳಗಡೆ ಯಿಂದ,, ಬಂದೆ ಕಣೆ ಅವರನ್ನ ಅಲ್ಲೇ ಇರೋಕೆ ಹೇಳು, ಅಂತ ಹೇಳ್ತಾ ಆರತಿ ತಟ್ಟೆ ನಾ ಇಡ್ಕೊಂಡು, ಹೊರಗೆ ಬಂದು. ನಂದು ಆರತಿ ತಟ್ಟೆ ನಾ ತಗೊಂಡು ಅವರನ್ನ ಆರತಿ ಮಾಡಿ ಮನೆ ಒಳಗೆ ಕರ್ಕೊ ಅಂತ ಹೇಳ್ತಾರೆ.

ನಂದು,,, ಆಯ್ತು ದೇವಮ್ಮ, ಅಂತ ಹೇಳಿ ಅನಾ ನಾ ನಯನಾ ಕೈಗೆ ಕೊಟ್ಟು. ಆರತಿ ಮಾಡಿ ಮೂರು ಜನರನ್ನ ಮನೆ ಒಳಗೆ ಕರ್ಕೋತಾರೆ.

ನಯನಾ ಬಲಗಾಲಿಟ್ಟು ಮನೆ ಒಳಗೆ ಬಂದು, ಅತ್ತೆ ಆಶೀರ್ವಾದ ಮಾಡಿ ಅಂತ ಕಾಲಿಗೆ ಮುಗಿದು ಆಶೀರ್ವಾದ ತಗೋತಾಳೆ. 

ಅನಾ ಅಜ್ಜಿ ನನಗೂ ಕೂಡ ಅಂತ ಕಾಲಿಗೆ ಬಿಳೋಕೆ ಹೋದ್ರೆ, ನನ್ನ ಬಂಗಾರ ಅಂತ ಅನಾ ನಾ ಎತ್ತಿಕೊಂಡು ಮುದ್ದಾಡ್ತ, ಏನ್ ನಿನ್ನ ಹೆಸರು ಅಂತ ಕೇಳ್ತಾರೆ. ಅನಾ ಅಂತ ಹೇಳ್ತಾಳೆ. 

ನಂದಿನಿ,,, ನೋಡಿದ ಅಮ್ಮ ನಿನ್ನ ಮಗನನ್ನ, ನಾನ್ ಯಾವಾಗೋ ಹೇಳಿದೆ. ನಿನ್ನ ಮಗ ಕೈಲಿ ಒಂದು ಇಟ್ಕೊಂಡೇ ಈ ಮನೆಗೆ ಬರೋದು ಅಂತ. ಹಾಗೇ ಮಾಡಿದ. 

ನಯನಾ,,, ಇಲ್ಲಾ ಅತ್ತೆ ಅದು ಏನಾಯ್ತು ಅಂದ್ರೆ?

ದೇವಮ್ಮ,,, ಏನಮ್ಮ ನೀನು ಅವಳು ತಮಾಷೆಗೆ ಹೇಳಿದ್ರೆ. ನಮಗೆ ಏನು ಹೇಳಬೇಡ, ನಮಗೆ ಹೇಳ್ದೆ ಮದುವೆ ಅದ್ರೆ ಏನಂತೆ. ನೀವು ಸಂತೋಷ ವಾಗಿ ಇದ್ದೀರಾ ಅಲ್ವಾ, ಅದಕ್ಕಿಂತ ಸಂತೋಷ ವಾದ ವಿಷಯ ಏನಿದೆ. ನೀನು ಅದರ ಬಗ್ಗೆ ಏನು ತಲೆ ಕೆಡಸಿಕೊಳ್ಳ ಬೇಡ. ಬಾ ಕುತ್ಕೋ ಅಂತ ಹೇಳಿ. ಅಭಿ ಕಡೆಗೆ ನೋಡ್ತಾ. ಲೋ ಕಾರ್ ನಾ ರೋಡ್ ಅಲ್ಲೇ ನಿಲ್ಲಿಸಿದ್ದೀಯ, ಹೋಗಿ ಖಾಲಿ ಜಾಗದಲ್ಲಿ ನಿಲ್ಲಿಸಿ, ಬಾ ಹೋಗು.

ಅಭಿ,,, ಸೊಸೆ ಮೊಮ್ಮಗಳು ಬಂದಿದ್ದೆ. ಸ್ವಂತ ಮಗನನ್ನೇ ತಿಂದ ನೀರು ಕುಡಿತಿಯ, ಕೊನೆ ಪಕ್ಷ ಹೇಗಿದ್ದೀಯ ಅಂತ ಕೇಳೋ ಪರಿಸ್ಥಿತಿ ನನ್ನಂತ ಮಗನಿಗೆ ಬರಬಾರದು. 

ನಂದಿನಿ,,, ಅದೇ ಕಣೋ ನಾನು ನಿನಗೆ ಹೇಳೋದು, ನಿನ್ನಂತ ಪರಿಸ್ಥಿತಿ ಯಾವನಿಗೂ ಬರಬಾರದು, ಮುಚ್ಕೊಂಡು ಹೋಗಿ ಹೇಳಿದ ಕೆಲಸ ಮಾಡು ಹೋಗು. 

ಅಭಿ ಮತ್ತೆ ಏನು ಮಾತನಾಡದೆ ಸೈಲೆಂಟ್ ಆಗಿ ಅಲ್ಲಿಂದ ಹೊರಟು ಹೋಗ್ತಾನೆ.

#####

ದೇವಮ್ಮ,,, ನಯನಾ ನಾ ನೋಡ್ತಾ ನಿನ್ನ ಹೆಸರು ಏನಮ್ಮ ಮಗಳೇ.

ನಯನಾ,,, ನಯನಾ ಅತ್ತೆ. 

ದೇವಮ್ಮ,,,, ನಯನಾ ಹೀಗೆ ಕೇಳ್ತೀನಿ ನನ್ನ ಮೇಲೆ ಕೋಪ ಬೇಜಾರು ಏನು ಮಾಡ್ಕೋಬೇಡ. ಅಭಿ ನಿಮ್ ಮನೇಲಿ ಹೇಳಿ ಒಪ್ಪಿಸಿ ನಿನ್ನ ಮದುವೆ ಅದನ. ಇಲ್ಲಾ ನಿಮ್ ಮನೆಯವರ ಒಪ್ಪಿಗೆ ಕೇಳದೆ ನಿನ್ನ ಹೆದರಿಸಿ ಏನಾದ್ರು ಮದುವೆ ಅದನ.

ನಯನಾ,,, ಅಮ್ಮ ನೀವು ಅಂದುಕೊಳ್ಳೋ ಹಾಗೇ ಅಭಿ ಏನು ನನ್ನ ಹೆದರಿಸಿ ಇಲ್ಲಾ ನಮ್ ಮನೇಲಿ ಕೇಳದೆ ನನ್ನ ಮದುವೆ ಮಾಡ್ಕೊಂಡು ಇಲ್ಲಾ. ಅಪ್ಪ ಅಮ್ಮ ಇಬ್ರು ಒಪ್ಪಿದ ಮೇಲೇನೆ ರಿಜಿಸ್ಟರ್ ಮದುವೆ ಮಾಡ್ಕೊಂಡ್ವಿ. ಸಾರೀ ಅಮ್ಮ ನಿಮಗೆ ಹೇಳೋಕೆ ಆಗಲಿಲ್ಲ. 

ದೇವಮ್ಮ,,, ಸಾರಿ ಏನಕ್ಕೆ ಹೇಳ್ತಿಯ ಮಗಳೇ. ಅ ಟೈಮ್ ಅಲ್ಲಿ ನನ್ನ ಪರಿಸ್ಥಿತಿ ಕೂಡ ಅಷ್ಟೇನು ಚೆನ್ನಾಗಿ ಇರಲಿಲ್ಲ. ನನ್ನ ಮಗಳು ಬೇರೆ ನನ್ನ ಜೊತೇನೆ ಇದ್ದು ಬಿಟ್ಟಳು ನನ್ನ ನೋಡಿಕೊಳ್ತಾ.  ಅದಕ್ಕೆ ಅವನು ಹೇಳೋಕೆ ಹೋಗಲಿಲ್ಲ ಅಂತ ಅನ್ನಿಸುತ್ತೆ. ಅದು ಬಿಡು. ನಿನ್ನ, ನಿನ್ನ ಮಗಳನ್ನ ಚೆನ್ನಾಗಿ ನೋಡ್ಕೊಳ್ತಾ ಇದ್ದಾನ. ಇಲ್ಲಾ ಏನಾದ್ರು ತೊಂದ್ರೆ ಕೊಡ್ತಾ ಇದ್ದಾನ.

ನಂದಿನಿ,,, ಹೇಳು ನಯನಾ ಅವನು ಏನಾದ್ರು ಹಾಗೇ ಮಾಡ್ತಾ ಇದ್ದಾನ, ಹಾಗೇನಾದ್ರೂ ಇದ್ರೆ ಇಲ್ಲೇ ಅವನ ಕೈ ಕಾಲು ಮುರಿದು ಬಿಡ್ತೀನಿ. 

ನಯನಾ,,, ನಗ್ತಾ ಅಮ್ಮ ಏನು ಇಲ್ಲಾ.. ಅಭಿ ಇಬ್ಬರನ್ನು ತುಂಬಾ ಚೆನ್ನಾಗಿ ನೋಡ್ಕೊಳ್ತಾ ಇದ್ದಾನೆ.  ಅಪ್ಪ ಮಗಳು ಇಬ್ರು ಒಂದೇ ಪಾರ್ಟಿ. ನಮ್ಮಿಬ್ಬರನ್ನ ಅಷ್ಟೇ ಅಲ್ಲ, ಅಪ್ಪ ನಾ ಕೂಡ ಜಾಸ್ತಿ ಕೆಲಸ ಮಾಡೋಕೆ ಬಿಡೋದಿಲ್ಲ. ಅವರ ಕೆಲಸ ಕೂಡ ಅಭಿ ನೇ ನೋಡ್ಕೋತ ಇದ್ದಾನೆ. ಅಮ್ಮ ಮನೆಗೆ ಅಳಿಯ ಬಂದಿಲ್ಲ ಮಗ ಬಂದ ಅಂತ ತುಂಬಾ ಸಂತೋಷ ವಾಗಿ ಇದ್ದಾರೆ. 

ದೇವಮ್ಮ,,, ತುಂಬಾ ಸಂತೋಷ ಮಗಳೇ,  ನೀವು ಸಂತೋಷ ವಾಗಿ ಇದ್ರೆ ನಮಗೆ ಅಷ್ಟೇ ಸಾಕು. 

ನಂದಿನಿ,,, ಅನಾ ಕಡೆಗೆ ನೋಡ್ತಾ, ಮುದ್ದಾಡ್ತಾ ನನ್ನ ಮುದ್ದು ಬಂಗಾರಿ, ಬಾ ನಾವು ಹೋಗಿ ನಿನಗೆ ಐಸ್ಕ್ರೀಂ ಚಾಕಲೇಟ್ ತಗೊಂಡು ಬರೋಣ, ಅತ್ತೆ ಸೊಸೆ ಎಮೋಷನಲ್ ಆಗಿ ಏನೋ ಮಾತಾಡ್ಕೊಳ್ತಾ ಇದ್ದಾರೆ.

ಅನಾ ಗೆ ಐಸ್ಕ್ರೀಂ ಅಂದಿದ್ದೆ ಫುಲ್ ಖುಷಿ ಆದ್ರು ನಯನಾ ಕಡೆಗೆ ನೋಡ್ತಾಳೆ.

ನಂದಿನಿ,,, ಅನಾ ನೋಡೋದನ್ನ ನೋಡಿ ಏನು ನಿಮ್ ಮಮ್ಮಿ ನಾ ನೋಡ್ತಾ ಇದ್ದಿಯಾ. ನನ್ನ ಬಗ್ಗೆ ನಿಮ್ ಅಪ್ಪ ನಾ ಕೇಳು ಹೇಳ್ತಾನೆ. ನೀನು ಯಾರಿಗೂ ಭಯ ಬೀಳಬೇಡ. ಇಲ್ಲಿ ಇರೋವರೆಗೂ. ಅಂತ ಹೇಳಿ ಸೊಂಟದ ಮೇಲೆ ಕೂರಿಸಿಕೊಂಡು ಅಲ್ಲಿಂದ ಎದ್ದು ಹೊರಗೆ ಹೋಗ್ತಾರೆ.

################################