ಪ್ರಿಯಾ,,, ಸೂಪರ್ ಮಾರ್ಕೆಟ್ ಹತ್ತಿರ ನಿರಂಜನ್ ಮೇಘ ಇಬ್ಬರು ಕೂತು ಮಾತಾಡ್ತಾ ಇರೋದನ್ನ ನೋಡಿ, ಏನೋ ಫ್ಯೂಚರ್ ವೈಫ್ ಬಂದಿದ್ದೆ, ಫ್ರೆಂಡ್ಸ್ ನ ಬಿಟ್ಟು ಬಿಟ್ಟ.
ತೇಜು,,, ಅಷ್ಟೇ ಕಣೆ, ಹುಡುಗನ ಲೈಫ್ ಗೆ ಒಂದು ಹುಡುಗಿ ಬರೋವರೆಗೂ ಒಂದು ಲೆಕ್ಕ, ಬಂದಮೇಲೆ ಒಂದು ಲೆಕ್ಕ. ನೆನ್ನೆವರೆಗೂ ಫ್ರೆಂಡ್ಸ್ ಅಂತ ಇದ್ದವನು ಇವಾಗ ನೋಡು, ಅವರನ್ನ ಬಿಟ್ಟು ಹೇಗೆ ಇದ್ದಾನೆ ಅಂತ.
ಮೇಘ,,, ಲೇ ಸಾಕ್ ನಿಲ್ಲಿಸ್ರೆ, ಅವರಿಬ್ಬರೂ ಟೆಂಟ್ ಹೌಸ್ ಹತ್ತಿರ ಹೋಗಿದ್ದಾರೆ. ಇವನು ಹೋಗ್ತೀನಿ ಅಂದ ಅಭಿ ನೇ ಒಬ್ಬಳೇ ಇದ್ದಾಳೆ ಜೊತೆಗೆ ಇರು, ತೇಜು ಪ್ರಿಯಾ ಬಂದಮೇಲೆ ಸೂಪರ್ ಮಾರ್ಕೆಟ್ ನ ಓಪನ್ ಮಾಡಿ ಅಂತ ಹೇಳಿ ಹೋದ್ರ, ಅಷ್ಟೇ. ಅದಕ್ಕೆ ನೀವು ಈ ರೀತಿ ಮಾತಾಡ್ತಾ ಇದ್ದೀರಾ.
ಪ್ರಿಯಾ,, ಹೌದ. ಆದ್ರು ಪರ್ವಾಗಿಲ್ಲ. ನೀವು ಮಾಡಿದ್ದು ತಪ್ಪು ಅಂತ ಹೇಳಿ. ಲೋ ಮಾತಾಡಿದ್ದು ಸಾಕು, ಎದ್ದು ಹೋಗಿ ಶೇಟರ್ ಓಪನ್ ಮಾಡು ಹೋಗು.
ನಿರಂಜನ್,,, ಪ್ರಿಯಾ ತೇಜು ನ ನೋಡಿ ನಿಮ್ಮನ್ನ ಯಾವನ್ ಕಟ್ಕೋತಾನೋ ಅವನ ಬದುಕು ಬಸ್ಟ್ಯಾಂಡ್ ಅಂತ ಹೇಳಿ ಎದ್ದು ಹೋಗ್ತಾನೆ.
ತೇಜು ನಗ್ತಾ ಅದು ಬಂದಾಗ ನೋಡೋಣ ಅಂತ ಹೇಳಿ ಅವನಿಗೆ ಹೆಲ್ಪ್ ಮಾಡೋಕೆ ಹೋಗ್ತಾಳೆ.
####
ಸಾರಿಕಾ ಬಸ್ ಇಳಿದು ನೆಲದ ಮೇಲೆ ಹೆಜ್ಜೆ ಇಡೋವಾಗ, ದೇವರ ಹತ್ತಿರ ಕಣ್ ಮುಚ್ಚಿ ಒಂದು ಬೇಡಿಕೆ ನ ಕೋರಿ, ಬಸ್ ಇಳಿದು ಆಟೋ ದಲ್ಲಿ ಲಾಯರ್ ಹೇಳಿದ ಅಡ್ರೆಸ್ ಕಡೆಗೆ ಹೋಗ್ತಾಳೆ.
ರೂಪೇಶ್ ತಂದೆ ಹತ್ತಿರ ಅಂಕಲ್ ಪೃಥ್ವಿ ಹೇಳಿದ ವಿಷಯ ನ ಹೇಳ್ತಾನೆ. ವಿಷಯ ಪೂರ್ತಿ ಕೇಳಿದ ಅವರ ತಂದೆ, ಪೃಥ್ವಿ ಹೇಳಿದ ಅಲ್ವಾ, ಸದ್ಯಕ್ಕೆ ವಿಶ್ವ, ಮತ್ತೆ ಆ ಅಭಿ ವಿಷಯ ಬಿಟ್ಟು ಬಿಡೋಣ, ಒಂದಲ್ಲ ಒಂದು ದಿನ ಮಾವ ಅಳಿಯ ನನ್ನ ಕೈಗೆ ಸಿಕ್ಕೇ ಸಿಗ್ತಾರೆ. ಈಗ ನಾನು ಕಾರ್ಪೊರೇಟರ್ ಆಗೋದೇ ನನಗೆ ಮುಖ್ಯ, ನೀನು ಯಾವುದೇ ಕಾರಣಕ್ಕೂ ಅಭಿ ವಿಷಯಕ್ಕೆ ಹೋಗಬೇಡ, ನಿನ್ನ ಸ್ನೇಹಿತರಿಗೆ, ಅಭಿ ಯಾರು ಅವನ ಬ್ಯಾಕ್ಗ್ರೌಂಡ್ ಏನು ಅನ್ನೋದನ್ನ ಅವನಿಗೆ ಗೊತ್ತಾಗದ ಹಾಗೇ ತಿಳ್ಕೊಳ್ಳೋಕೆ ಹೇಳು. ರೂಪೇಶ್ ಸರಿ ಅಪ್ಪ ಅಂತ ಹೇಳ್ತಾನೆ.
###
ಸೂಪರ್ ಮಾರ್ಕೆಟ್ ಬಿಲ್ಡಿಂಗ್ ಟೆರೇಸ್ ಮೇಲೆ ಅಭಿ ಬಿರಿಯಾನಿ ತಯಾರು ಮಾಡ್ತಾ ಇರ್ತಾನೆ. ಅವನಿಗೆ ಹೆಲ್ಪ್ ಮಾಡೋಣ ಅಂತ ಪ್ರಿಯಾ ಬರ್ತಾಳೆ ಅಲ್ಲಿಗೆ.
ಪ್ರಿಯಾ,,, ಲೋ ನಿನಗೆ ಬಿರಿಯಾನಿ ಮಾಡೋಕೆ ಬರುತ್ತೆ ಅಂತ ಹೇಳೇ ಇಲ್ಲಾ. ನಯನಾ ತುಂಬಾ ಲಕ್ಕಿ ಕಣೋ, ನಿನ್ನಂತ ಹುಡುಗನ್ನ ಗಂಡ ನಾಗಿ ಪಡೆದ್ದಿದ್ದಕ್ಕೆ.
ಅಭಿ,,, ನಗ್ತಾ ಲಕ್ಕಿ ಅವಳಲ್ಲ ನಾನು ಲಕ್ಕಿ, ಪ್ರಿಯಾ, ಇಷ್ಟ ಇಲ್ಲದ ಹುಡುಗನನ್ನ ಮದುವೆ ಆಗಿ, ಕೊನೆಗೆ ಅವನನ್ನೇ ಗಂಡನಾಗಿ ಒಪ್ಪಿಕೊಂಡು, ಅವನ ಮೇಲೆ ಬೆಟ್ಟದಷ್ಟು ಪ್ರೀತಿ ನ ತೋರಿಸ್ತಾ, ಅವನ ಸರಿ ತಪ್ಪುಗಳನ್ನ ಅರ್ಥ ಮಾಡಿಕೊಂಡು, ಜೀವನ ಪೂರ್ತಿ ಕಷ್ಟ ಸುಖ ಏನೇ ಇರಲಿ ಜೊತೆಯಾಗಿ ಇರ್ತೀನಿ ಅಂತ ಹೇಳೋದು ಇದೆ ಅಲ್ವಾ, ಅಂತ ಒಳ್ಳೆ ಮನಸ್ಸು ಎಲ್ಲರಿಗೂ ಇರೋದಿಲ್ಲ. ನಯನಾ ತುಂಬಾ ಒಳ್ಳೆ ಹುಡುಗಿ, ಅಂತ ಹುಡುಗಿನ ಖುಷಿಯಾಗಿ ಸಂತೋಷ ವಾಗಿ ನೋಡ್ಕೊಳ್ಳೋಕೆ ಏನ್ ಮಾಡಿದ್ರು ತಪ್ಪಿಲ್ಲ.
ಪ್ರಿಯಾ,,, ಅದು ನಿಜಾನೇ, ನಯನಾ ತರ ಒಳ್ಳೆ ಮನಸ್ಸು ಯಾರಿಗೂ ಇರೋದಿಲ್ಲ. ಅವಳನ್ನ ಕಾಲೇಜ್ ಟೈಮ್ ಯಿಂದ ನೋಡ್ತಾ ಇದ್ದೀನಿ, ಕಾಲೇಜ್ ಆಯಿತು ಮನೆ ಆಯಿತು, ಅಷ್ಟೇ. ಅವಳ ಫ್ಯಾಮಿಲಿ ನೇ ಅವಳ ಪ್ರಪಂಚ, ಅವಳ ಅಕ್ಕ ಪ್ರೀತಿ ಮಾಡೋದು ವಿಷಯ ಮನೆಯವರಿಗೆ ಗೊತ್ತಾದಾಗ, ಹುಡುಗನ ಬಗ್ಗೆ ತಿಳ್ಕೊಂಡ್ರು, ಹುಡುಗ ಏನೋ ಒಳ್ಳೆಯವನೇ ಆಗಿದ್ದ, ಆದರೆ ಅವರ ಅಪ್ಪ ತಮ್ಮ ಇಷ್ಟ ಆಗಲಿಲ್ಲ. ಅದಕ್ಕೆ ಮನೆಯವರು ಬೇಡ ಅಂತ ಹೇಳ್ತಾ ಇದ್ರು. ಬಟ್ ನಯನಾ ಅವರ ಅಪ್ಪ ಅಮ್ಮ ನ ಒಪ್ಪಿಸಿ ಇಬ್ಬರಿಗೂ ಮದುವೆ ಮಾಡಿಸಿದ್ಲು. ಆಮೇಲೆ ಎಲ್ಲರೂ ಒಟ್ಟಿಗೆ ಅವರ ಮನೇಲಿ ಸಂತೋಷ ವಾಗಿ ಇದ್ರು. ಬಟ್ ದೇವರಿಗೆ ಅದು ಇಷ್ಟ ಇಲ್ಲಾ ಅಂತ ಕಾಣುತ್ತೆ ಅದಕ್ಕೆ ಅವಳ ಅಕ್ಕ ಭಾವ ಕಾರ್ ಆಕ್ಸಿಡೆಂಟ್ ಅಲ್ಲಿ ತಿರಿ ಹೋದರು. ಒಂದು ಕಡೆ ಅವರನ್ನ ಕಳೆದುಕೊಂಡ ನೋವು ಇನ್ನೊಂದು ಕಡೆ, ಅವರ ಪ್ರೀತಿಗೆ ಪ್ರತಿ ರೂಪ ಆಗಿದ್ದ ಅವರ ಮಗು. ಆ ಮಗು ಗೋಸ್ಕರ ಅವಳ ಲೈಫ್ ನೇ ಚೇಂಜ್ ಮಾಡ್ಕೊಂಡ್ಲು. ಆ ಮಗುಗೆ ತಾಯಿ ಆದ್ಲು. ವಿಶ್ವನಾಥ್ ಸರ್ ಅದೆಷ್ಟೋ ಸಾರಿ ಆಫೀಸ್ ಅಲ್ಲಿ ಕೂತು ಕಣ್ಣೀರು ಹಾಕಿರೋದನ್ನ ನಾನೆ ನೋಡಿದ್ದೀನಿ. ಬಟ್ ದೇವರ ಹಾಗೇ ನೀನು ಬಂದೆ ಕಣೋ, ಸರ್ ನ ಮೊದಲಿನ ಹಾಗೇ ಸಂತೋಷ ವಾಗಿ ಇರೋದನ್ನ ನೋಡಿದೆ. ನಯನಾ ಅವಳ ಲೈಫ್ ಪಾರ್ಟ್ನರ್ ಜೊತೆಗೆ ಹೇಗೆ ಸಂತೋಷ ವಾಗಿ ಇರಬೇಕು ಅಂತ ಕನಸು ಕಂಡಿದ್ದಳೋ ಹಾಗೇ ಇರೋದನ್ನ ನೋಡ್ತಾ ಇದ್ದೀನಿ. ನೀವಿಬ್ರು ಆ ಮಗುನ ನಿಮ್ಮ ಸ್ವಂತ ಮಗುವಿಗಿಂತ ಹೆಚ್ಚಾಗಿ ನೋಡ್ಕೊಳ್ಳೋದನ್ನ ನೋಡ್ತಾ ಇರೋವಾಗ, ಅಬ್ಬಾ ಅರ್ಥ ಮಾಡ್ಕೊಳ್ಳೋ ಹುಡುಗ ಸಿಕ್ರೆ ಲೈಫ್ ಇಷ್ಟು ಚೆನ್ನಾಗಿ ಇರುತ್ತಾ ಅಂತ ನಿನ್ನ ನೋಡಿ ಅನ್ನಿಸ್ತು.
ಅಭಿ,,, ಆಗೋದೆಲ್ಲಾ ನಮ್ ಒಳ್ಳೇದಕ್ಕೆ ಪ್ರಿಯಾ.
ಪ್ರಿಯಾ,,, ಏನ್ ಒಳ್ಳೇದೋ ಏನೋ ಹೋಗೋ, ನನ್ನ ಬೆಸ್ಟ್ ಫ್ರೆಂಡ್ ಕಣೆ ನೀನು ಅಂತ ಹೇಳ್ತಾ ಇದ್ದವಳು, ನನಗೆ ಹೇಳ್ದೆನೆ ನಿನ್ನ ಮದುವೆ ಮಾಡ್ಕೊಂಡ್ಲು. ನಾನು ಇನ್ನು ಸಿಂಗಲ್ ಆಗಿ ಇದ್ದೀನಿ.
ಅಭಿ,,, ನಗ್ತಾ ನೀನು ಸಿಂಗಲ್, ಅದನ್ನ ನಾವು ನಂಬೇಕು. ನಮ್ ಸೂಪರ್ ಮಾರ್ಕೆಟ್ ಗೆ, ಮಧ್ಯಾಹ್ನ ಲಂಚ್ ಟೈಮ್ ಗೆ ಸರಿಯಾಗಿ ಒಬ್ಬ ಕಸ್ಟಮರ್ ಬರ್ತಾನೇ. ವಯಸ್ಸು ಒಂದು 27 ಇರಬಹುದು, ಇಡೀ ಸೂಪರ್ ಮಾರ್ಕೆಟ್ ಎಲ್ಲಾ ಓಡಾಡಿ ಒಂದೇ ಒಂದು ಡೈರಿ ಮಿಲ್ಕ್ ಚಾಕಲೇಟ್ ನ ತಗೊಂಡು, ಬಂದು ಬಿಲ್ಲಿಂಗ್ ಕೌಂಟರ್ ಹತ್ತಿರ ಬಂದು , ಎಷ್ಟೇ ಜನ ಕಸ್ಟಮರ್ ಇದ್ರು ಕಾದು ಒಂದು ಹುಡುಗಿ ಹತ್ತಿರಾನೆ ಬಿಲ್ ಮಾಡಿಸಿ ಆ ಚಾಕಲೇಟ್ ನ ತಗೊಂಡು ಹೋಗ್ತಾನೆ. ಇದರಲ್ಲಿ ಸ್ಪೆಷಲ್ ಏನಪ್ಪಾ ಅಂದ್ರೆ ಮಾರನೇ ದಿನ ನಮ್ ಸ್ಟೋರ್ ಅಲ್ಲಿ ಆ ಹುಡುಗಿ ಕೆಲಸ ಮಾಡೋವಾಗ ಆ ಚಾಕಲೇಟ್ ನ ತಿಂತ ಕೆಲಸ ಮಾಡ್ತಾ ಇರ್ತಾಳೆ. ಮತ್ತೆ ನಮ್ ಹತ್ತಿರ ಬಂದು ನಾವ್ ಸಿಂಗಲ್ ಅಂತ ಡವ್ ಮಾಡೋದು.
ಪ್ರಿಯಾ ಶಾಕ್ ಆಗಿ,,, ಲೋ ಈ ವಿಷಯ ನಿನಗೆ ಹೇಗೋ ಗೊತ್ತು. ಇಷ್ಟು ದಿನ ಯಾರಿಗೂ ಗೊತ್ತಿಲ್ಲಾ ಅಂತ ಅಂದುಕೊಂಡು ಇದ್ದೆ. ನಿನಗೆ ಗೊತ್ತಾಗಿ ಬಿಟ್ಟಿದೆ.
ಅಭಿ,,, ಒಂದು ದಿನ ಅದ್ರೆ ಪರ್ವಾಗಿಲ್ಲ ದಿನ ಅದೇ ಅದ್ರೆ ಗೊತ್ತಾಗದೆ ಇರುತ್ತಾ, ಯಾರು ಆ ಹುಡುಗ.
ಪ್ರಿಯಾ,,, ಮಾವನ ಮಗ ಕಣೋ, ಇಲ್ಲೇ mnc ಕಂಪನಿ ಅಲ್ಲಿ ವರ್ಕ್ ಮಾಡ್ತಾ ಇದ್ದಾನೆ. ಅಪ್ಪ ನೋಡಿದ್ರೆ ಮನೆ ಅಳಿಯ ಬೇಕು ಅಂತ ಇದ್ದಾರೆ. ಅವನ ಮನೇಲಿ ಮನೆಗೆ ಸೊಸೆ ಬರಬೇಕು ಅಂತ ಇದ್ದಾರೆ. ನಾವಿಬ್ರು ಫ್ರೆಂಡ್ಸ್ ಅಂತ ಅಷ್ಟೇ ಗೊತ್ತು, ಲವ್ ಮಾಡ್ತಾ ಇದ್ದಿವಿ ಅಂತ ಗೊತ್ತಿಲ್ಲ. ಮನೇಲಿ ಈ ವಿಷಯ ಹೇಳೋಣ ಅಂದ್ರೆ, ಅಪ್ಪ ಬಿಲ್ಕುಲ್ ಒಪ್ಪೋದಿಲ್ಲಾ ಒಬ್ಬಳೇ ಮಗಳು, ನಿನ್ನ ಎಲ್ಲೋ ಕಳಿಸಿ ನಾವು ಬಿಟ್ಟು ಇರೋಕೆ ಆಗಲ್ಲಾ ಅಂತಾರೆ. ಅವರ ಮನೇಲಿ, ಮನೆ ಅಳಿಯ ಅಂದ್ರೆ ಒಪ್ಪೋದೆ ಇಲ್ಲಾ. ನಮಗೆ ಏನ್ ಮಾಡಬೇಕು ಅಂತಾನೆ ಗೊತ್ತಿಲ್ಲ. ಅದಕ್ಕೆ 2 3 ವರ್ಷದಿಂದ ಹೀಗೆ ನಡೀತಾ ಇದೆ.
ಅಭಿ,,, ಬಿಡು ಏನು ಯೋಚ್ನೆ ಮಾಡಬೇಡ, ಏನಾದ್ರೂ ಒಂದು ಮಾಡೋಣ, ನಿನ್ನ ಲೈಫ್ ನ ಸೆಟ್ ಮಾಡ್ತೀನಿ.
ಪ್ರಿಯಾ,,, ಏನು ನೀನು ನನ್ನ ಲೈಫ್ ನ ಸೆಟ್ ಮಾಡ್ತಿಯಾ, ಅದು ನೋಡೋಣ.
ನಯನಾ,,, ಟೆರೇಸ್ ಮೇಲೆ ಬರ್ತಾ ಏನೇ ಲೈಫ್ ಸೆಟ್ ನೋಡೋಣ ಅಂತ ಇದ್ದಿಯಾ ಏನ್ ವಿಷಯ ಅಂತ ಕೇಳ್ತಾ ಅಲ್ಲಿಗೆ ಬರ್ತಾಳೆ.
ಪ್ರಿಯಾ,,, ನಯನಾ ಗೆ ಸ್ವಲ್ಪ ಆಟ ಆಡಿಸೋಣ ಅಂತ ಅನ್ಕೊಂಡು. ಏನು ಇಲ್ವೆ ಅಭಿ ನ ಲವ್ ಮಾಡ್ತಾ ಇದ್ದೀನಿ ಅಂತ ನಿನಗೆ ಹೇಳ್ದೆ ಅಲ್ವಾ, ಅದನ್ನ ಅಭಿಗೆ ಹೇಳ್ದೆ ಅದಕ್ಕೆ ಅವನು, ಇವಾಗ ಹೇಳಿದ್ರೆ ಹೇಗೆ ಮೊದಲೇ ಹೇಳಿದ್ರೆ ಓಕೆ ಹೇಳ್ತಾ ಇದ್ದೆ. ಈಗ್ಲೂ ಕಾಲ ಏನು ಮಿಂಚಿಲ್ಲ. ನಾನ್ ನೋಡ್ಕೋತೀನಿ ನಿನ್ನ ಲೈಫ್ ಸೆಟ್ಟಲ್ ಮಾಡ್ತೀನಿ ಅಂತ ಇದ್ದಾ. ಅಷ್ಟೇ ಅಂತ ಹೇಳಿ ಅಭಿ ಕಡೆಗೆ ನೋಡಿ ಕಣ್ ಹೊಡಿತಾಳೆ.
ನಯನಾ,,, ಅಷ್ಟೇ ತಾನೇ ಅದಕ್ಕೆ ಯಾಕೆ ತಲೆ ಕೆಡಸಿ ಕೊಳ್ತಿಯಾ, ಅಭಿ ನ ಮದುವೆ ಮಾಡ್ಕೊಂಡು ನಮ್ ಮನೆಗೆ ಬಂದು ಬಿಡು, ಇಬ್ರು ಹ್ಯಾಪಿ ಆಗಿ ಅಭಿ ಜೊತೆಗೆ ಲೈಫ್ ಲೀಡ್ ಮಾಡೋಣ. ಹೇಗಿದ್ರು ನೀನು ನನ್ನ ಬೆಸ್ಟ್ ಫ್ರೆಂಡ್, ನಾನು ಇಷ್ಟು ಮಾತ್ರ ಮಾಡದೇ ಇದ್ರೆ ಫ್ರೆಂಡ್ಶಿಪ್ ಗೆ ಬೆಲೆ ಏನಿದೆ ಹೇಳು. ಅಪ್ಪ ಅಮ್ಮ ಹತ್ತಿರ ಮಾತಾಡ್ತೀನಿ. ನೀನು ಮದುವೆ ರೆಡಿ ಆಗು ಅಂತ ವಾಪಸ್ಸು ಕೌಂಟರ್ ಕೊಡ್ತಾಳೆ.
ಪ್ರಿಯಾ,,,ನಯನಾ ಮಾತಿಗೆ ಶಾಕ್ ಆಗಿ, ಬೆಚ್ಚಿ ಬಿದ್ದು ಕೈ ಮುಗಿದು ಅಮ್ಮ ತಾಯಿ ನಾನೇನೋ ತಮಾಷೆಗೆ ಹೇಳ್ದೆ, ಬಿಟ್ಟು ಬಿಡು ನನ್ನ. ನಿನ್ನ ಗಂಡನ್ನ ನೀನೇ ಇಟ್ಕೋ. ನನಗೆ ಏನು ಬೇಡ.
ನಯನಾ,,, ನಗ್ತಾ ಮತ್ತೆ ಏನಕ್ಕೆ ಹೇಳ್ದೆ, ನಾನಂತು ಫಿಕ್ಸ್ ಆಗೋದೇ, ನೀನು ಅಭಿ ನ ಮದುವೆ ಮಾಡ್ಕೊಳ್ಳೇ ಬೇಕು ಅಷ್ಟೇ.
ಅಭಿ,,, ನೋಡೇ ನಯನಾ ನೇ ಓಕೆ ಹೇಳಿದ್ಲು ಅಲ್ವಾ ಅವಳಿಗೆ ಏನು ಪ್ರಾಬ್ಲಮ್ ಇಲ್ಲಾ ಅಂತೇ. ಏನ್ ಮಾಡೋಣ..
ಪ್ರಿಯಾ,,, ಲೋ ನಿನ್ ಕೂಡ ಏನೋ ಅವಳ ಜೊತೆಗೆ ಸೇರ್ಕೊಂಡು. ನಾನ್ ಇಲ್ಲಾ ಅಂದ್ರೆ ನಮ್ ಹುಡುಗ ಹುಚ್ಚ ಆಗಿ ಬಿಡ್ತಾನೆ. ಹೋಗಿ ಹೋಗಿ ನಿಮ್ ಇಬ್ಬರ ಮಧ್ಯ ಬಂದು ಸಿಕ್ಕಿ ಹಾಕಿ ಕೊಂಡೆ ಅಲ್ವಾ ನನಗೆ ಬುದ್ದಿ ಇಲ್ಲಾ. ನನಗೆ ಕೆಲಸ ಇದೆ ನಾನ್ ಬರ್ತೀನಿ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾಳೆ.
ನಯನಾ ಅಭಿ ಇಬ್ರು ನಗ್ತಾರೆ.
ನಯನಾ,,, ನಗ್ತಾ ರೀ ಏನಾದ್ರೂ ಹೆಲ್ಪ್ ಮಾಡಬೇಕಾ.
ಅಭಿ,,, ಏನು ಬೇಡ ಮಗಳು ಎಲ್ಲಿ.
ನಯನಾ,,, ಆಫೀಸ್ ಅಲ್ಲಿ ಅಜ್ಜಿ ತಾತ ನ ಜೊತೆಗೆ ಇದ್ದಾಳೆ ಅಂತ ಹೇಳ್ತಾ ಅಭಿ ಗೆ ಹೆಲ್ಪ್ ಮಾಡೋಕೆ ಹೋಗ್ತಾಳೆ.
ಸ್ವಲ್ಪ ಸಮಯದ ನಂತರ ಮಟನ್ ಬಿರಿಯಾನಿ, ಮಟನ್ ಕರ್ರಿ, ಮಟನ್ ಫ್ರೈ, ಎಲ್ಲಾ ರೆಡಿ ಆಗುತ್ತೆ.
ಮಧ್ಯಾಹ್ನ ಟೈಮ್ ಅಲ್ಲಿ ಕಸ್ಟಮರ್ ಕಮ್ಮಿ ಇರೋದನ್ನ ನೋಡಿ, ಅಭಿ, ರಾಜ್ , ಇಬ್ಬರೇ ಕೌಂಟರ್ ಹತ್ತಿರ ಬಂದು ಎಲ್ಲರನ್ನು ಊಟ ಮಾಡೋಕೆ ಕಳಿಸ್ತಾನೆ. ಪ್ರಿಯಾ ನಯನಾ ಇಬ್ಬರು ಎಲ್ಲರಿಗೂ ಫುಡ್ ಸರ್ವ್ ಮಾಡ್ತಾರೆ. ಸ್ವಲ್ಪ ಸಮಯದ ನಂತರ ಎಲ್ಲರೂ ಊಟ ಮಾಡಿಕೊಂಡು ಬರ್ತಾರೆ. ಎಲ್ಲರೂ ಅಡುಗೆ ತುಂಬಾ ಚೆನ್ನಾಗಿತ್ತು ಅಂತ ಹೇಳಿ ಅಭಿ ಗೆ ಥ್ಯಾಂಕ್ಸ್ ಹೇಳ್ತಾರೆ. ನಿರಂಜನ್ ತೇಜು ಮೇಘ,,, ನಾವ್ ನೋಡ್ಕೋತೀವಿ ನೀವು ಹೋಗಿ ಊಟ ಮಾಡಿ ಅಂತ ಹೇಳಿ ಅಭಿ ನ ರಾಜ್ ನ ಕಳಿಸ್ತಾರೆ. ಅಭಿ, ನಯನಾ ರಾಜ್ ಪ್ರಿಯಾ ನಾಲಕ್ಕು ಜನ ಮಾತಾಡಿಕೊಂಡು ಖುಷಿಯಾಗಿ ಊಟ ಮಾಡಿ ಮುಗಿಸ್ತಾರೆ.
ನಯನಾ ಅನಾ ಅಭಿ ಜೊತೆಗೆ ಸ್ವಲ್ಪ ಟೈಮ್ ಸ್ಪೆಂಡ್ ಮಾಡ್ತಾ ಸೂಪರ್ ಮಾರ್ಕೆಟ್ ಅಲ್ಲೇ ನಂತರ ಮನೆಗೆ ಬೇಕಾದ ಸಾಮಗ್ರಿ ಗಳನೆಲ್ಲ ತೆಗೆದುಕೊಂಡು ಅಭಿ ಬೈ ಹೇಳಿ ಮನೆ ಕಡೆಗೆ ಹೋಗ್ತಾರೆ.
#####
ಹೀಗೆ ಕೆಲವು ದಿನಗಳು ಕಳೆದು ಹೋಗುತ್ತೆ..