ಅಧ್ಯಾಯ : 17 "ಪ್ರೇಮದ ಪರೀಕ್ಷೆ"
ಮೂವರು UK ಗೆ ಬಂದ ತಕ್ಷಣ ಸುಂದರ್ ಅವರನ್ನು ಪಿಕ್ ಅಫ್ ಮಾಡ್ತಾರೆ... ನಂತರ ಎಲ್ಲರೂ ಸುಂದರ್ ಅವರ ಮನೆಗೆ ರೀಚ್ ಆಗ್ತಾರೆ... Welcome to our house ಮಕ್ಕಳೆ
ಜೆಕೆ ಮುಗುಳ್ನಗೆಯೊಂದಿಗೆ ಥ್ಯಾಂಕ್ ಯೂ ಅಂಕಲ್ ಎಂದು ಉತ್ತರಿಸಿದ
ಸುಂದರ್ : "ಹಾ! ನೀವು ಈಗ ಫ್ರೆಶ್ ಅಪ್ ಆಗಿ ಸ್ಪಲ್ಪ ರೆಸ್ಟ್ ಮಾಡಿ ಅಂತ ಗೆಸ್ಟ್ ರೂಮ್ ಗೆ ಕರ್ಕೊಂಡು ಹೋಗ್ತಾರೆ...
"ಸ್ಪಲ್ಪ ಸಮಯ ರೆಸ್ಟ್ ಮಾಡಿ ಮನೆಗೆ ಕಾಲ್ ಮಾಡಿ ಎಲ್ಲರೊಂದಿಗೂ ಮಾತಾಡ್ತಾ ಸ್ಪಲ್ಪ ಸಮಯ ಕಳಿತಾರೆ ...ನಂತರ ಮೂವರು ರೂಮ್ ನಿಂದ ಹೊರಬಂದಾಗ , ಸುಂದರ್ ಅವರು ಡಿನ್ನರ್ ಸಿದ್ಧತೆ ಮಾಡುತ್ತಿದ್ದರು"..
"ಅಂಕಲ್ ಈ ಮನೇಲಿ ನೀವು ಒಬ್ಬರೆ ಇರೋದ..?? ಸೂರ್ಯ ಕುತೂಹಲದಿಂದ ಕೇಳಿದ"
" ಇಲ್ಲ ಈ ಮನೇಲಿ ನಾನು ಮತ್ತು ನನ್ನ ವೈಫ್ ಇದೀವಿ ಆದರೆ ಅವಳು ಈಗ ಇಲ್ಲಿ ಇಲ್ಲ..
ಜೆಕೆ ಕುತೂಹಲದಿಂದ ಇಲ್ಲಿ ಇಲ್ಲಾ ಅಂದ್ರೆ...
"ಸುಂದರ್ ಮುಗುಳ್ನಗುತ್ತಾ,ಅವಳು ಅವರ ಫ್ರೆಂಡ್ಸ್ ಜೊತೆ ಟ್ರೀಪ್ ಗೆ ಹೋಗಿದಾಳೆ.. ಇನ್ನೂ ನಂಗೆ ಒಬ್ಬಳು ಮಗಳು ಅವಳು ತನ್ನ ಲೈಫ್ ನಾ ಎಂಜಾಯ್ ಮಾಡ್ತಾ ಬೇರೆ ಕಡೆ ಇದಾಳೆ... ಹಾ! ನೀವು ಇನ್ಮೆಲಿಂದ ಇಲ್ಲೇ ಇರಬೇಕು ಎಂದು ಪ್ರೀತಿಯಿಂದ ಒಂದು ಸಣ್ಣ ನಗುವನ್ನು ಬೀರುತ್ತಾ ಹೇಳಿದರು"...
" ಅಯ್ಯೋ ಅಂಕಲ್ ಇಲ್ಲ ನಾವು ಬೇರೆ ರೂಮ್ ಮಾಡ್ಕೋತಿವಿ ಸುಮ್ನೆ ನಿಮ್ಗೆ ತೊಂದರೆ ಕೊಡೋಕೆ ಇಷ್ಟ ಇಲ್ಲ ನೀವು ಈಗ ಮಾಡಿರೋದೆ ಹೆಚ್ಚು ನಮ್ಗೆ...ಅಂತ ಹೇಳುತ್ತಾ ಅಸಮಾದಾನ ತೋರಿಸಿದ ಅದಕ್ಕೆ ಕಾರ್ತಿಕ್ ಸಹ ಹೌದು ಅಂಕಲ್ ಎಂದು ಬೆಂಬಲಿಸಿದ"
ಆದರೆ ಸುಂದರ್ ಹಠದಿಂದ ಹೇಳಿದರು– "ನೋಡಿ ನಾನು ಅಲ್ರೆಡೀ ಶಶಿಧರ್ ಗೆ ಹೇಳಿ ಆಗಿದೆ ನೀವು ಇನ್ಮೆಲಿಂದ ಇದೆ ಮನೇಲಿ ಇರ್ತಿರಾ ಅಷ್ಟೆ ತುಂಬಾ ಯೋಚನೆ ಮಾಡೋಕೆ ಹೋಗಬೇಡಿ ನೀವು ಏನೇ ಹೇಳಿದ್ರೂ ನಾನು ಒಪ್ಪಿಕೊಳ್ಳಲ್ಲ.. ಅದು ಅಲ್ಲದೆ ಯೂನಿವರ್ಸಿಟಿ ಇಲ್ಲಿಂದ ತುಂಬಾ ದೂರನು ಆಗೋಲ್ಲ .. ನನಗೂ ಒಬ್ಬನೇ ಮನೇಲಿ ಇರೋಕೆ ತುಂಬಾ ಬೇಜಾರು ಪ್ಲೀಸ್ ಒಪ್ಗೊಳ್ಳಿ"..
"ಅವರ ಮಾತಿಗೆ ಮೂವರು ಇಲ್ಲ ಎನ್ನಲು ಆಗಲಿಲ್ಲ ಮೂವರು ಅಲ್ಲಿಯೇ ಇರೋದಕ್ಕೆ ಒಪ್ಪಿಕೊಳ್ತಾರೆ.. ಹಾಗೆ ಕಾಲೇಜ್ ಗೆ ಕೂಡ ಜಾಯಿನ್ ಆಗ್ತಾರೆ"...
ಕೆಲವು ತಿಂಗಳುಗಳ ನಂತರ........
"ಮೂರು ಜನರ 2 ನೇ ವರ್ಷದ ವರ್ಷದ ಫೈನಲ್ ಎಕ್ಸಾಮ್ಸ್ ನಡೆಯುತ್ತಿತ್ತು ಆ ರಾತ್ರಿ ಮೂವರು ಸೇರಿ ಓದುತ್ತಾ ಕುಳಿತ್ತಿದ್ದರು"
ಕಾರ್ತಿಕ್ ಹಾಸ್ಯವಾಗಿ ,ಜೆಕೆ ಅಲ್ಲಿ ನೋಡೋ ಸೂರ್ಯ ಏನೋ ಯೋಚನೆ ಮಾಡ್ತಾ ಹೇಗೆ ಕೂತಿದಾನೆ
"ಹೌದು ಕಣೋ ನಾನು ಅವಾಗಿಂದಲೇ ಗಮನಿಸುತ್ತಿದ್ದೇನೆ Mr.ಸೂರ್ಯ..ಏನೋ ಇಷ್ಟು ಓದಿ ಓದಿ ಕಿವಿ ಗೀವಿ ಹೊದ್ವ ಹೇಗೆ.. ಜೆಕೆ ಚುಟುಕಾಗಿ ಕೇಳಿದ"
‘ಸೂರ್ಯಾ’... ಕಾರ್ತಿಕ್ ಜೋರಾಗಿ ಕರೆಯುತ್ತಿದ್ದಂತೆಯೇ ಸೂರ್ಯ ಬೆಚ್ಚಿಬಿದ್ದ
" ಏನೋ ಅಷ್ಟು ಜೋರಾಗಿ ಕಿರುಚುತ್ತಿಯ ಎಂದು ಪ್ರಶ್ನಿಸಿದ?!
ಜೆಕೆ ಗಂಭೀರವಾಗಿ ಕೇಳಿದ ಹಲೋ ಇಬ್ಬರು ಎಸ್ಟೋತಿಂದ ಕರೀತಾ ಇದ್ದೀವಿ ಗೊತ್ತಾ..ಏನೋ ಯೋಚನೆ ಮಾಡ್ತೀದಿಯಾ ಅಂತಹದ್ದು??...ನಮ್ಮಿಬ್ಬರಿಗೂ ಟೆನ್ಶನ್ ಮಾಡಿಸುತ್ತಿದ್ದಿಯಲ್ಲ
ಸೂರ್ಯ ನಿಟ್ಟುಸಿರು ಬಿಟ್ಟು ಚಿಂತೆಯ ಕಣ್ಣಿನಿಂದ __
"ಅದು ಏನಿಲ್ಲ ಕಣೋ ಡೈಲಿ ತಪ್ಪದೆ ಕಾಲ್ ಮಾಡ್ತಿದ್ದ ಅಮ್ಮು ಇವತ್ತು ಬೆಳಿಗ್ಗೆ ಇಂದ ಕಾಲ್ ಮಾಡಿಲ್ಲ ನಾನೇ ಕಾಲ್ ಮಾಡಿದ್ರೂ ಪಿಕ್ ಮಾಡ್ತಿಲ್ಲ.. ಯಾಕೋ ಒಂತರಾ ಫೀಲ್ ಆಗ್ತಿದೆ ಕಣೋ ಎಂದ"...
"ಜೆಕೆ ನಕ್ಕು ಅವಳು ಕಾಲ್ ಮಾಡಿಲ್ಲ ಅಂದ್ರೆ ಕುಷಿಪಡೋದು ಬಿಟ್ಟು ಬೇಜಾರ್ ಮಾಡ್ಕೊಂದೀಯಾ"??
ಲೋ ನೀನೇ ಕಾಲ್ ಮಾಡಿ ನೋಡೋ ಒಂದ್ಸಲ ಪ್ಲೀಸ್... ಪ್ಲೀಸ್ ಎಂದು ಕೋರಿದ
"ಜೆಕೆ ಒಪ್ಪಿಕೊಂಡು ಅವಳಿಗೆ ಹಲವು ಸಲ ಕಾಲ್ ಮಾಡಿದ್ರು ಅಮ್ಮು ಫೋನ್ ಎತ್ತಲಿಲ್ಲ.
ಪಿಕ್ ಮಾಡ್ತಿಲ್ಲ ಕಣೋ ಮೊಬೈಲ್ ಸೈಲೆಂಟ್ನಲ್ಲಿ ಇಟ್ಟಿರಬಹುದೇನೋ. ಅವಳ ಬಗ್ಗೆ ಗೊತ್ತು ತಾನೇ ನಿನಗೆ" ಜೆಕೆ ಸಮಾಧಾನಪಡಿಸಿದ
"ಅದಕ್ಕೆ ಇಷ್ಟು ತಲೆ ಕೆಡೆಸಿಕೊಂಡಿದ್ದೀಯಾ?
ನಾಳೆ ನೇ ಲಾಸ್ಟ್ ಎಕ್ಸಾಮ್ ಇನ್ನೊಂದು ಎರಡು ದಿನದಲ್ಲಿ ನಾವೇ ಅಲ್ಲಿ ಹೋಗ್ತೀವಿ ಅವಾಗ ದಿನ ಪೂರ್ತಿ ಅವಳ ಜೊತೇನೆ ಇರು, ಈಗ ಸ್ಟಡಿ ಮಾಡು ಇಲ್ಲ ಅಂದ್ರೆ ಪಕ್ಕಾ ಫೇಲ್ ಆಗ್ತೀಯ ಮತ್ತೆ ಇಲ್ಲೇ ಬರ್ಬೇಕು ಅಂತ ಯೋಚನೆ ಮಾಡಿದಿಯೋ ಹೇಗೆ"... ಎಂದು ಕಿರುನಗೆ ಬೀರುವುದರ ಮೂಲಕ ಪ್ರಶ್ನಿಸಿದ
ಸೂರ್ಯ ತಾಳಲಾರದೆ__
"ಜೆಕೆ ಇನ್ನೊಂದ್ಸಲ ಮನೇಲಿ ಯಾರಿಗಾದ್ರೂ ಕಾಲ್ ಮಾಡಿ ಕೇಳು.. ಅವಳು ಮನೇಲಿ ಆರಾಮಾಗಿ ಇದಾಳೆ ಅಂದ್ರೆ ನಂಗೆ ಟೆನ್ಷನ್ ಸ್ವಲ್ಪ ಕಡಿಮೆ ಆಗುತ್ತೆ ಎಂದ" ...
"ಜೆಕೆ ಸೂರ್ಯನನ್ನು ಛೇಡಿಸುತ್ತಾ ಓ.. ನೋಡೋ ಕಾರ್ತಿ ನಮ್ಮ ಅಮ್ಮು ನಾ ಈಗಲೇ ಇಷ್ಟು ಕೇರ್ ಮಾಡ್ತಾನೆ"..
"ಸದ್ಯ ಆ ಕೋತಿ ಎಲ್ಲದರಲ್ಲೂ ಎಡವಟ್ಟು ಮಾಡ್ತಾಳೆ ಬಟ್ ಇದೊಂದು ವಿಷಯ ದಲ್ಲಿ ಸರಿಯಾದ ಡಿಸಿಷನ್ ತಗೊಂಡಿದಾಳೆ ಎಂದು ನಗುತ್ತಾ ತನ್ನ ಮೊಬೈಲ್ ಕೈಗೆತ್ತಿಕೊಂಡು ಯಶೋಧ ಅಮ್ಮನಿಗೆ ಕಾಲ್ ಮಾಡ್ಬೇಕು ಅನ್ನೋವಸ್ಟ್ರಲ್ಲಿ
ಶಶಿಧರ್ ಇಂದ ಕಾಲ್ ಬರುತ್ತೆ"...
"ಸೂರ್ಯ ಕುತೂಹಲದಿಂದ ಯಾರೋ ಅಮ್ಮು ನಾ ನಂಗೆ ಕೊಡಿಲ್ಲಿ ನಾನು ಮಾತಾಡ್ತೀನಿ ಎಂದು ನುಡಿದ"...
"ಜೆಕೆ ಬೇಜಾರಿನಿಂದಲೇ ಅಲ್ಲ ಕಣೋ ದೊಡ್ಡಪ್ಪ ಎಂದು ಹೇಳಿದಾಗ ಸೂರ್ಯನ ಮುಖದಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು ಹೌದಾ! ಸರಿ ಹಾಗಿದ್ರೆ ನೀನೇ ಮಾತಾಡು ಎಂದು ಹೇಳಿದ"...
ಜೆಕೆ,ಹಲೋ ದೊಡ್ಡಪ್ಪ____
"ಹಲೋ ಮಗನೆ sorry ನಂಗೆ ತುಂಬಾ ಟೈಮ್ ಇಲ್ಲ .. ಆದರೆ ನಿಂಗೆ ಈ ವಿಷಯ ಹೇಳಲೇ ಬೇಕಾಗಿತ್ತು ಅದಕ್ಕೆ ಕಾಲ್ ಮಾಡ್ದೆ...
ಅದು ಇವತ್ತು ನಿನ್ನ ತಂಗಿನ ನೋಡೋಕೆ ಗಂಡಿನ ಕಡೆಯವರು ಬರ್ತಿದ್ದಾರೆ
ನಮ್ಗೆ ತುಂಬಾ ಹತ್ರದ ಸಂಬಂಧ"...
ಆ ಮಾತು ಕೇಳಿದ ತಕ್ಷಣ ಜೆಕೆ ಫುಲ್ ಶಾಕ್ ಆಗ್ತಾನೆ ಹಾಗೆ ಕೋಪವು ಹೆಚ್ಚಾಯಿತು.. "ಆದರೆ ದೊಡ್ಡಪ್ಪ ಇದೆಲ್ಲ.. ಹೇಗೆ ಅದು ನಾನು ಇಲ್ದೇನೆ"..
ಈಕಡೆ ಸೂರ್ಯ ಕಾರ್ತಿಕ್ ಇಬ್ಬರು ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ಗಾಬರಿಯಾದರು...
ಶಶಿಧರ್ : "ಅದೆಲ್ಲ ಹೇಳೋಕೆ ಟೈಮ್ ಇಲ್ಲ ಕಣೋ ನೀವು ಕೂಡ ಎಕ್ಸಾಮ್ಸ್
ಮುಗಿದ ಮೇಲೆ ಬರ್ತೀರಾ ಅಲ್ವಾ ಅವಾಗ ಎಲ್ಲಾ ವಿಷಯನು ಗೊತ್ತಾಗುತ್ತೆ.. ಹಾ!.. ಇನ್ನೇನು ಅವರು ಬರೋ ಸಮಯ ,ಸುಧಾಕರ್ ಕರೀತಾ ಇದಾನೆ ನಾನು ಅಂತ ಕಾಲ್ ಕಟ್ ಮಾಡಿಬಿಟ್ಟರು"..
"ಜೆಕೆ ಮನಸ್ಸಲ್ಲಿ ಅಯ್ಯೋ ದೇವರೆ ಸೂರ್ಯನಿಗೆ ಈ ವಿಷಯ ಹೇಗೆ ಹೇಳಲಿ ,ಇಲ್ಲ ಮೊದಲು ಏನು ಆಗ್ತಿದೆ ಅಂತ ಪೂರ್ತಿ ವಿಷಯ ತಿಳ್ಕೋಬೇಕು"..
ಆದರೆ ಸೂರ್ಯ ಅತಿಯಾದ ಚಿಂತೆಗೆ ಒಳಗಾದಾ ಜೆಕೆ ಏನಾಯ್ತೋ ಯಾಕೋ ಟೆನ್ಷನ್ ನಲ್ಲಿ ಇದಿಯಾ?..
ಜೆಕೆ ಮಾತುಗಳನ್ನು ಬದಲಿಸಲು ಪ್ರಯತ್ನಿಸಿ ಸೂರ್ಯ ಅದು ಒಂದು ನಿಮಿಷ ಇರು ಕಾಲ್ ಮಾಡಿ ಬರ್ತೀನಿ , ಅಂತಾ ಜೆಕೆ ಅಲ್ಲಿಂದ ಹೋಗ್ಬೇಕಾದರೆ.. ಸೂರ್ಯ ಅವನ ಕೈಗಳನ್ನು ಹಿಡಿದು.. ಜೆಕೆ ನಮ್ಮಿಂದ ಏನನ್ನೂ ಮುಚ್ಚಿಡೊ ಪ್ರಯತ್ನ ಬೇಡ ಏನೇ ಮಾತಾಡೋದು ಇದ್ರು ಇಲ್ಲೇ ಮಾತಾಡು ,
ಕಾರ್ತಿಕ್ ಸಹ" ಹೌದು ಕಣೋ ಏನಾಯ್ತು ಅಂತ ಹೇಳು ನಮ್ಗೂ ಟೆನ್ಷನ್ ಆಗ್ತಿದೆ"...
ಜೆಕೆ ಮಾತು ತಪ್ಪಿಸಲು ಪ್ರಯತ್ನಿಸಿದರು ಕೊನೆಗೆ ಹೇಳಲೇಬೇಕಾಯಿತು...
ಜೆಕೆ : ಹೇಳ್ತೀನಿ ಸೂರ್ಯ ಆದರೆ ನೀನು ಸಮಾಧಾನದಿಂದ ಕೇಳು..ಅದು ಅಮ್ಮುಗೆ...
ಸೂರ್ಯ ಮತ್ತೆ ಗಾಬರಿಯಿಂದ ಅಮ್ಮು .. ಅಮ್ಮು ಗೆ.. ಏನಾಯ್ತೋ ಬೇಗ ಹೇಳೊ ನಂಗೆ ಭಯ ಆಗ್ತಿದೆ..
ಜೆಕೆ.. ಸ್ಪಲ್ಪ ಸುಮ್ನೆ ಇರೋ ಅದ್ಕೆ ಹೇಳ್ದೆ ನಾನು ನಿನಗೆ ಸಮಾಧಾನದಿಂದ ಇರೋಕೆ ... ಅಮ್ಮು ಗೆ ಹುಡಗನ್ನ ನೋಡೋಕೆ ಬರ್ತಿದ್ದಾರೆ ಅಂತೆ...
ಏನೂ!?.. ಅಮ್ಮು ಗೆ? ಹೇ! ಅದು ಹೇಗೆ ಸಾಧ್ಯ ಅವಳಿನ್ನೂ ಚಿಕ್ಕವಳು ಇನ್ನು ಓದ್ತಾ ಇದಾಳೆ..
ಅದು ಅಲ್ದೇ ಅವಳು ನನ್ನ ಹುಡುಗಿ... ಏನೇನೋ ಮಾತಾಡ್ತಾ ಗಾಬರಿಯಿಂದ ಅಳೋಕೆ ಶುರು ಮಾಡ್ತಾನೆ
ಜೆಕೆ,ಕಾರ್ತಿಕ್ ಇಬ್ಬರು ಅವನನ್ನು ಸಮಾಧಾನ ಪಡಿಸಲು ಯತ್ನಿಸಿದರು. ಕಾರ್ತಿಕ್ ಅವನಿಗೆ ನೀರು ತಂದು ಕೊಟ್ಟ
"ಕಾರ್ತಿಕ್ ಬೇಜಾರಿನಲ್ಲಿ ಜೆಕೆ ಏನೋ ಇದು ಸಡನ್ ಆಗಿ ಅದು ನೀನು ಇಲ್ದೇನೇ"...
ಜೆಕೆ ಸಹ ಗೊಂದಲದಿಂದ "ಅದೆ ಕಣೋ ನಂಗೂ ಅರ್ಥ ಆಗ್ತಿಲ್ಲ.. ಸೂರ್ಯ ಇರು ಲಕ್ಕಿಗೆ ಕಾಲ್ ಮಾಡಿ ಎಲ್ಲಾ ವಿಷಯ ತಿಳ್ಕೊತಿನಿ ಅಂತ ಲಕ್ಕಿ ಗೆ ಕಾಲ್ ಮಾಡ್ತಾನೆ ಆದರೆ ಲಕ್ಕಿ ಕಾಲ್ ರಿಸೀವ್ ಮಾಡೋದಿಲ್ಲ ..
ಲಕ್ಕಿ ಬ್ಯುಸಿ ಇರ್ಬೇಕು ಅಂತ ಹೇಳಿ ಮತ್ತೆ ಭುವನ್ ಗೆ ಕರೆ ಮಾಡುತ್ತಾನೆ ಭುವನ್ ಕಾಲ್ ರಿಸೀವ್ ಮಾಡ್ತಾನೆ ...
ಹಲೋ ಅಣ್ಣ ಎಲ್ಲೋ ಇದಿಯಾ?? ಇಂದು ಜೆಕೆ ಪ್ರಶ್ನಿಸುತ್ತಾನೆ
"ನಾನು ಹಾಸ್ಪಿಟಲ್ ನಲ್ಲಿ ಇದೀನಿ ಕಣೋ.. ಯಾಕೆ any problem"?? ಭುವನ್ ಸಮಾಧಾನದಿಂದ ಉತ್ತರಿಸುತ್ತಾನೆ
ಜೆಕೆ : "ಅಂದ್ರೆ ನಿಂಗೆ ಮನೇಲಿ ನಡೀತೀರೋ ವಿಷ್ಯ ಗೊತ್ತಿಲ್ಲಾ"??
ಭುವನ್ : "ಹಾ! ಗೊತ್ತು ಕಣೋ ಈಗ ಮನೆಗೆ ಹೋಗ್ಬೇಕು ಆದರೆ ಇನ್ನೂ ಪೇಶೇಂಟ್ಸ್ ಇರೋದ್ರಿಂದ ಇನ್ನೊಂದು ಸ್ವಲ್ಪ ಲೇಟ್ ಆಗುತ್ತೆ ಅಂತ ಹೇಳ್ದೆ"...
ಇದೆಲ್ಲ ಹೇಗೋ ಅದು ನಾನು ಇಲ್ದೆ ?? ಎಂದು ಬೇಜಾರಿನಲ್ಲಿ ಜೆಕೆ ಭುವನ್ ಗೆ ಕೇಳಿದಾಗ..
ಭುವನ್ : "ಜೆಕೆ.. ಕೂಲ್ ಜಸ್ಟ್ ನೋಡೋಕೆ ಬರ್ತಿದ್ದಾರೆ ಅಷ್ಟೆ ಎಂಗೇಜ್ಮೆಂಟ್ ಏನು ಆಗ್ತಿಲ್ಲ ನೀನು ಹೇಗಿದ್ರೂ ಈ ವಾರದಲ್ಲಿ ಬರ್ತೀಯಾ ಅಲ್ವಾ.. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಾ ನೀನು ಎಕ್ಸಾಮ್ಸ್ ಕಡೆ ಗಮನ ಕೊಡು.. ಸರಿ ನಾನು ನಿಂಗೆ ಆಮೇಲೆ ಕಾಲ್ ಮಾಡ್ತೀನಿ ಸ್ಪಲ್ಪ ಬ್ಯುಸಿ ಇದೀನಿ ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ "..
ಸೂರ್ಯ :"ಏನಾಯ್ತೋ ಏನಾದ್ರೂ ಗೊತ್ತಾಯ್ತಾ... ಸೂರ್ಯನ ಹೃದಯ ಬಡಿತ ಹೆಚ್ಚಾದಂತೆ ತೋರುತ್ತಿತ್ತು"
"ಇಲ್ಲ ಕಣೋ ಅವನು ಹಾಸ್ಪಿಟಲ್ ನಲ್ಲಿ ಇದಾನೆ ಅಂತೆ"..
"ಜೆಕೆ ಒಂದು ಕೆಲಸ ಮಾಡು ಸ್ವಾತಿ ಗೆ ಕಾಲ್ ಮಾಡು ಈ ಟೈಮ್ ನಲ್ಲಿ ಎಲ್ಲರೂ ಬ್ಯುಸಿ ಇರ್ತಾರೆ ಆದರೆ ಅವಳು ಕಂಡಿತಾ ಅಲ್ಲಿ ಏನು ನಡಿತಿದೆ ಅಂತ ಹೇಳ್ತಾಳೆ... ಅಂತಾ ಕಾರ್ತಿಕ್ ಸಲಹೆ ನೀಡ್ತಾನೆ"
ಹಾ!! ಕರೆಕ್ಟ್ ಆಗಿ ಹೇಳ್ದೆ ಕಣೋ .. "ಸ್ವಾತಿ ಗೆ ಕಾಲ್ ಮಾಡೋವಷ್ಟರಲ್ಲಿ.. ಸ್ವಾತಿಯಿಂದ ಕಾಲ್ ಬರುತ್ತೆ ..ಹಲೋ ಜೆಕೆ ಇಲ್ಲೊಂದು ದೊಡ್ಡ ಪ್ರಾಬ್ಲಮ್ ಆಗಿದೆ ಕಣ್ರೋ"
ಜೆಕೆ : "ಅದನ್ನ ತಿಳ್ಕೊಳೋಕೆ ನಿಂಗೆ ಕಾಲ್ ಮಾಡ್ತಿದ್ದೆ ಸರಿ ಏನಾಯ್ತು ಅಂತಾ ಬೇಗ ಹೇಳು"
ಸ್ವಾತಿ ಹೇಳಿದ ಸುದ್ದಿಗೆ ಮೂವರು ನಿಶ್ಚಲರಾದರು . "ಮೊನ್ನೆ ಒಂದು ಫ್ಯಾಮಿಲಿ ಫಂಕ್ಷನ್ ಇತ್ತು ಅವತ್ತು ಲಕ್ಕಿ,ಯಶೋಧ ಆಂಟಿ,ಕಮಲಾ ಆಂಟಿ ,ಶಶಿಧರ್ ಅಂಕಲ್ ಹಾಗೆ ಸುಧಾಕರ್ ಅಂಕಲ್ ಇವರು ಅಮ್ಮು ಎಷ್ಟೇ ಬೇಡ ಅಂದ್ರು ಫಂಕ್ಷನ್ ಗೆ ಕರ್ಕೊಂಡು ಹೋಗಿದಾರೆ ಅಲ್ಲಿ ಅದ್ಯಾರೋ ಮೋಹನ್ ರಾವ್ ಫ್ಯಾಮಿಲಿ ಅಂತೆ ಅವರ ಮಗ ಅಮ್ಮು ನಾ ನೋಡಿ ತುಂಬಾ ಇಷ್ಟಪಟ್ಟನಂತೆ ಆದರೆ ಅವಳನ್ನೇ ಮದುವೆ ಆಗ್ತೀನಿ ಅಂತಾ ಹಠ ಹಿಡಿದನಂತೆ ಅದು ಅಲ್ಲದೆ ಅವರು ಅಂಕಲ್ ಗೆ ತುಂಬಾ ಬೇಕಾದವರು ಹಾಗೆ ಹುಡುಗ ನು ತುಂಬಾ ಒಳ್ಳೆಯವನು ಅಂತ ಅಂಕಲ್ ಹೇಳ್ತಿದ್ರು ಅದಿಕ್ಕೆ ಅಂಕಲ್ ಒಪ್ಗೊಂಡಿದಾರೆ ಈಗ ಅವರು ನೋಡೋಕೆ ಬರ್ತಿದ್ದಾರೆ ಈ ವಿಷಯನಾ ಅಮ್ಮು ನೇ ಹೇಳು ಅಂತ ಹೇಳಿದ್ಲು ಅದಿಕ್ಕೆ ಕಾಲ್ ಮಾಡ್ದೆ"...
ಸೂರ್ಯನ ಕಣ್ಣು ಕೆಂಪಾಯಿತು "ಸ್ವಾತಿ ಅಲ್ಲಿ ಅಮ್ಮು ಇದ್ದಾಳಾ.. ಪ್ಲೀಸ್ ಅವಳಿಗೆ ಫೋನ್ ಕೊಡು ನಾನು ಮಾತಾಡ್ಬೇಕು ನನ್ನ ಹುಡಗಿ ಮೇಲೆ ಕಣ್ಣು ಹಾಕೋಕೆ ಎಷ್ಟು ದೈರ್ಯ ಆ.. ನನ್ನ ಮಗನ್ಗೆ... ನನ್ನ ಕೈಗೆ ಸಿಕ್ರೆ ನಾನಂತು ಸುಮ್ನೆ ಬಿಡೋಲ್ಲ ಅವನ್ನ"...ಅವನ ನಿಸಾಯಕತೆ ಜೆಕೆ ,ಕಾರ್ತಿಕ್ ಇಬ್ಬರಿಗೂ ಅರ್ಥವಾಗುತ್ತಿತ್ತು
ಸ್ವಾತಿ.. ಸಮಾಧಾನದಿಂದ "ಕೂಲ್ ಡೌನ್ ಸೂರ್ಯ ,ಅಮ್ಮು ನಾ ರೆಡೀ ಮಾಡ್ತಿದಾರೆ ಅಲ್ಲಿ ಎಲ್ಲರೂ ಇದಾರೆ ಅವಳಿಗೆ ಮಾತಾಡೋಕೆ ಆಗ್ತಿಲ್ಲ ಅದಿಕ್ಕೆ ನಿಮಗೆ ವಿಷಯ ತಿಳಿಸು ಅಂತ ನಂಗೆ ಹೇಳಿದ್ಲು"...
ಸೂರ್ಯ : ಸರಿ.. ಅವಳಿಗೇ ಹೆದರ್ಕೋಬೇಡ ಅಂತ ಹೇಳು ಎಕ್ಸಾಮ್ಸ್ ಮುಗದ ತಕ್ಷಣನೇ ನಾವು ಅಲ್ಲಿ ಬರ್ತೀವಿ...
"ಸ್ವಾತಿ ಅಲ್ಲಿ ಇವತ್ತು ಏನು ನಡಿಯುತ್ತೊ ಪ್ರತಿಯೊಂದು ವಿಷಯನು ನಂಗೆ ಕಾಲ್ ಮಾಡಿ ತಿಳಿಸು ಓಕೆ..ಜೆಕೆ ಸ್ವಾತಿಗೆ ಹೇಳಿದ
ಸರಿ ಅಂತ ಹೇಳಿ ಸ್ವಾತಿ ಕಾಲ್ ಕಟ್ ಮಾಡ್ತಾಳೆ
ಜೆಕೆ ಗಂಭೀರವಾಗಿ ಸೂರ್ಯನ ಕೈ ಹಿಡಿದುಕೊಂಡು ಸೂರ್ಯ ನಿಂಗೆ ನನ್ನಮೇಲೆ ನಂಬಿಕೆ ಇದೆ ಅಲ್ವಾ... ಸೂರ್ಯನ ಕಣ್ಣುಗಳು ಜೆಕೆ ನತ್ತ ನೋಡುತ್ತಾ ಯಾಕೋ ಹೀಗೆ ಕೇಳ್ತೀದಿಯ..
"ನಿನ್ನ ಅಮ್ಮು ಲವ್ ಮ್ಯಾಟರ್ ನಾ ಇಂಡಿಯಾ ಗೆ ಹೋದ ತಕ್ಷಣ ನಾನು ಮನೆಯವರ ಹತ್ರಾ ಮಾತಾಡ್ತೀನಿ.. ನೀನು ಟೆನ್ಷನ್ ಮಾಡ್ಕೊಳ್ದೆ ಆರಾಮಾಗಿ ಇರು ಓಕೆ"..
ಕಾರ್ತಿಕ್ ಕೂಡ ಬೆಂಬಲಿಸಿದ "ಹೌದು ಸೂರ್ಯ ಜಸ್ಟ್ ನೋಡೋಕೆ ತಾನೇ ಬಂದಿರೋದು.. ನಾಳೇನೇ ಲಾಸ್ಟ್ ಎಕ್ಸಾಮ್ ಅದು ಮುಗಿದ ತಕ್ಷಣ ಇಂಡಿಯಾ ಗೆ ಹೋಗೋಣ.".
"ಸೂರ್ಯ ಭಾವನಾತ್ಮಕನಾಗಿ ಇಬ್ಬರನ್ನು ತಬ್ಬಿಕೊಂಡು ನೀವೆಲ್ಲ ನನ್ನ ಜೊತೆ ಇರಬೇಕಾದರೆ ಯಕ್ರೊ ನಾನು ಟೆನ್ಷನ್ ಮಾಡ್ಕೊಳಿ"..
"ನೀನೇ ಕಣೋ ನನ್ನ ಭಾವ ನಿನ್ನ ಬಿಟ್ಟು ಬೇರೆ ಯಾರು ಆ ಜಾಗಕ್ಕೆ ಬರೋಕೆ ಸಾಧ್ಯಾ ನೇ ಇಲ್ಲ ಎಂದು ಜೆಕೆ ಗಂಭೀರವಾಗಿದ್ದ ಸೂರ್ಯನ ಮೊಗದಲ್ಲಿ ಸಣ್ಣ ನಗುವನ್ನು ಮೂಡಿಸಲು ಪ್ರಯತ್ನಿಸಿದ"
"ಜೆಕೆ ನನ್ನ ಜೀವನ ನಿನ್ನ ಕೈಯಲ್ಲಿ ಇದೆ ಕಣೋ
ಹೇಗಾದ್ರೂ ಮಾಡಿ ನಮ್ಮ ವಿಷಯ ನಾ ಮನೇಲಿ ಹೇಳು.. ಎಂದು ಜೆಕೆ ಬಳಿ ಬೇಡಿಕೊಳ್ಳುತ್ತಾನೆ ಅದಕ್ಕೆ ಜೆಕೆ "ಅಮ್ಮು ನನ್ನ ಜೀವ ಕಣೋ ಅವಳ ಸರ್ವಸ್ವವೂ ನೀನೇ ,ಅದೇಗೆ ಅವಳ ಆ ಕುಷಿ ನಾ ದೂರ ಹೋಗೋಕೆ ಬಿಡ್ತೀನಿ... ಸಾಧ್ಯಾನೇ ಇಲ್ಲ"
ಕಾರ್ತಿಕ್ ಸಹ " ಸೂರ್ಯ ಅಮ್ಮು ಬ್ರದರ್ಸ್ ನಾವೇ ನಿನ್ನ ಜೊತೆ ಇದೀವಿ ಅಂದಮೇಲೆ ಯಾಕೋ ತಲೆ ಕೇಡಸ್ಗೋತಿಯಾ... ಸರಿ ಈಗ ಒದ್ಕೊಳೋಣ ಬನ್ನಿ ಹೀಗೆ ಮಾತಾಡ್ತಾ ಕುಳಿತ್ರೆ ನಾಳೆ ಎಕ್ಸಾಮ್ ಅಲ್ಲಿ ಡುಮ್ಕಿನೇ"... ಮೂವರು ಮತ್ತೆ ಓದಲು ಕುಳಿತುಕೊಳ್ಳುತ್ತಾರೆ
ಮುಂದುವರೆಯುವುದು......
🌸ಲೇಖಕನ ನೋಟು🌸:
ಕ್ಷಮಿಸಿ, ಈ ಅಧ್ಯಾಯವನ್ನು ಸ್ವಲ್ಪ ತಡವಾಗಿ ಅಪ್ಲೋಡ್ ಮಾಡಿದ್ದೇನೆ 🙏.
ಮುಂದಿನ ಅಧ್ಯಾಯದಲ್ಲಿ ಜೆಕೆ ಮನೆಯವರ ಮುಂದೆ ಸೂರ್ಯ–ಅಮ್ಮು ಪ್ರೀತಿಯ ವಿಷಯ ಹೇಳುವ ಕ್ಷಣ ಬರಲಿದೆ. ಕುಟುಂಬದ ಪ್ರತಿಕ್ರಿಯೆ ಹೇಗಿರಬಹುದು ಎಂದು ನಿಮಗೂ ಕುತೂಹಲವಿದೆಯೆ?
👉 ದಯವಿಟ್ಟು ಫಾಲೋ ಮಾಡಿ, ಕಾಮೆಂಟ್ನಲ್ಲಿ ನಿಮ್ಮ ಊಹೆಗಳನ್ನು ಹಂಚಿಕೊಳ್ಳಿ.
ಮುಂದಿನ ಸಂಚಿಕೆ ಇನ್ನಷ್ಟು ಡ್ರಾಮಾ ಮತ್ತು ಭಾವನೆಗಳನ್ನು ತರುತ್ತದೆ…