ದೇವಮ್ಮ ನಂದಿನಿ ನಯನಾ ಮೂರು ಜನ ಕೂತು ಮಾತಾಡ್ತಾ ಇರೋವಾಗ. ಯಾರೋ ಹೊರಗಡೆ ಯಿಂದ ಕರೆದ ಹಾಗೇ ಆಗುತ್ತೆ. ನಂದಿನಿ ಎದ್ದು ಹೊರಗಡೆ ಹೋಗಿ 2 ನಿಮಿಷ ದ ನಂತರ ಅಮ್ಮ ಬಾ ಸ್ವಲ್ಪ ಅಂತ ಕರೀತಾಳೆ.
ದೇವಮ್ಮ,,, ನಯನಾ ಬಂದೆ ಅಂತ ಹೇಳಿ ಎದ್ದು ಮೊಮ್ಮಗಳನ್ನ ಕರೆದುಕೊಂಡು ಹೊರಗೆ ಹೋಗ್ತಾರೆ.
ನಯನಾ,,,, ಅಭಿ ಅಡುಗೆ ಹೇಗೆ ಮಾಡ್ತಾ ಇದ್ದಾನೆ ಅಂತ ನೋಡೋಣ ಅಂತ ಹೇಳಿ, ಎದ್ದು ಅಡುಗೆ ಮನೆ ಬಾಗಿಲಲ್ಲಿ ನಿಂತು ಒಳಗೆ ನೋಡ್ತಾಳೆ. ಅಭಿ ಅಡುಗೆ ಮಾಡ್ತಾ ಇರೋ ರೀತಿ ನೋಡಿ ನಯನಾ ಗೆ ತುಂಬಾ ಖುಷಿ ಆಗುತ್ತೆ. ಹಾಗೇ ನೋಡ್ತಾ, ನಾನ್ ಏನಾದ್ರೂ ಹೆಲ್ಪ್ ಮಾಡ್ಲಾ.
ಅಭಿ,,, ಸದ್ಯಕ್ಕೆ ಏನು ಬೇಡ. ಹೋಗಿ ಸ್ವಲ್ಪ ಹೊತ್ತು ಆರಾಮಾಗಿ ರೆಸ್ಟ್ ಮಾಡಿ, ಅನಾ ನ ಅಮ್ಮ ಅಕ್ಕ ನೋಡ್ಕೋತಾರೆ. ಬಿರಿಯಾನಿ ರೆಡಿ ಆದಮೇಲೆ ಕರೀತೀನಿ ಅಂತ ಹೇಳ್ತಾ ಅವನ ಕೆಲಸ ಮಾಡ್ತಾ , ನಿಮ್ ರೂಮ್ ಅಷ್ಟು ದೊಡ್ಡದು ನನ್ನ ರೂಮ್ ಇಲ್ಲಾ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಅಂತ ಹೇಳ್ತಾನೆ..
ನಯನಾ ಗೆ ಲಾಸ್ಟ್ ಹೇಳಿದ ಮಾತು ಸ್ವಲ್ಪ ಕೋಪ ತರಿಸುತ್ತೆ. ಅಡುಗೆ ಮನೆ ಒಳಗೆ ಬಂದು ಅಭಿ ಪಕ್ಕ ನಿಂತು. ರೂಮ್ ಆಗ್ಲಿ ಇಲ್ಲಾ ಬೆಡ್ ಆಗ್ಲಿ ದೊಡ್ಡದೋ ಚಿಕ್ಕದೋ. ನಿನ್ನ ತೋಳಲ್ಲಿ ನಮ್ಮನ್ನ ನಿನ್ನ ಹತ್ತಿರಾನೆ ಇರೋ ಹಾಗೇ ನೋಡ್ಕೊತಿಯ ಅಲ್ವಾ ಅಷ್ಟು ಸಾಕು ನನಗೆ.
ಅಭಿ ಗೆ ಅ ಮಾತಿಗೆ ಏನ್ ಹೇಳಬೇಕು ಅನ್ನೋದೇ ಸ್ವಲ್ಪ ಕಷ್ಟ ಆಗುತ್ತೆ. ಮಾತು ತಡವರಿಸ್ತಾ ಅದು ಅದು...
ನಯನಾ,,, ಅಭಿ ಕಷ್ಟ ಪಡೋದನ್ನ ನೋಡಿ.ನಕ್ಕು... ಮಾತು ಬದಲಾಯಿಸಿ ಹೌದು ಯಜಮಾನರಿಗೆ ಕಾಫಿ ಮಾಡೋಕೆ ಅಡುಗೆ ಮಾಡೋಕೆ ಅದರಲ್ಲೂ ಬಿರಿಯಾನಿ ಮಾಡೋಕೆ ಬರುತ್ತೆ ಅಂತ ಹೇಳಿಲ್ಲ. ಯಾಕೆ ನಿಮ್ ಬಗ್ಗೆ ನೀವೇ ಹೇಳೊದಿಲ್ವಾ? ಇನ್ನೊಬ್ಬರು ಹೇಳಬೇಕಾ.
ಅಭಿ,,, ನಾನ್ ಹೇಳ್ದೆ ಇದ್ರು ನಿಮಗೆ ಗೊತ್ತಾಗುತ್ತೆ ಅಲ್ವಾ. ಹಾಗೇ ಇರೋವಾಗ ಹೇಳೋದು ಏನಕ್ಕೆ?
ನಯನಾ,,, ಹ್ಮ್ ಅದು ನಿಜಾನೇ, ಬಟ್ ನೀವೇ ಹೇಳಿದ್ರೆ ಚೆನ್ನಾಗಿ ಇರೋದು. ಏನಿವೆ ನೀವು ಅಡುಗೆ ಮಾಡಿ ನಾನ್ ಹೋಗಿ ಬಟ್ಟೆ ಬದಲಾಯಿಸಿ ಕೊಂಡು ಬರ್ತೀನಿ. ಅಂತ ಹೇಳಿ ಅಡುಗೆ ಮನೆ ಬಾಗಿಲ ಹತ್ತಿರ ಹೋಗಿ ಮತ್ತೆ ವಾಪಸ್ಸು ಬಂದು, ರೀ ನಿಮಗೆ ಏನೋ ಹೇಳೋದನ್ನ ಮರೆತೇ?
ಅಭಿ,,, ನಯನಾ ಕಡೆಗೆ ನೋಡ್ತಾ ಏನು ಅಂತ ಕೇಳ್ತಾನೆ.
ನಯನಾ ಅಭಿ ಕೆನ್ನೆಗೆ ಮುತ್ತಿಟ್ಟು, ಅಭಿ ಮುಖ ನೋಡ್ತಾ ಇದೆ ಅಂತ ಹೇಳಿ, ಬಿರಿಯಾನಿ ಅಂದ್ರೆ ನನಗೆ ತುಂಬಾ ಇಷ್ಟ. ಮಾಡ್ತಾ ಇರಿ ನಾನು ಹೋಗಿ ಬರ್ತೀನಿ ಅಂತ ಹೇಳಿ ಅಲ್ಲಿಂದ ರೂಮ್ ಕಡೆಗೆ ಹೋಗ್ತಾಳೆ..
ಅಭಿ ಏನು ರಿಯಾಕ್ಟ್ ಮಾಡದೇ ಬಿರಿಯಾನಿ ಕಡೆಗೆ ಗಮನ ಕೊಡ್ತಾನೆ.
#######
ಸೂಪರ್ ಮಾರ್ಕೆಟ್ ಅಲ್ಲಿ..
ವಿಶ್ವ,,, ಪ್ರಿಯಾ ಕೆಲಸಕ್ಕೆ ಇಬ್ಬರನ್ನ ಸೇರಿಸ್ಕೊ ಅಂತ ಹೇಳಿದೆ ಅಲ್ವಾ ಏನಾಯ್ತು.
ಪ್ರಿಯಾ,,, ಸರ್ ಇದುವರೆಗೂ ಯಾರು ಬಂದಿಲ್ಲ. ತೇಜು ಮೇಘ, ನಿರಂಜನ್, ರಾಜ್ ಗೆ ಹೇಳಿದ್ದೀನಿ, ಅವ್ರು ನೋಡ್ತೀನಿ ಅಂತ ಹೇಳಿದ್ರು. ಅದು ಅಲ್ಲದೆ ನೀವು ನಮ್ ಮೇಲೆ ನಂಬಿಕೆ ಇಟ್ಟು ಈ ಸೂಪರ್ ಮಾರ್ಕೆಟ್ ನಾ ನಮ್ಮ ಕೈಗೆ ಕೊಟ್ಟಿದ್ದೀರಾ. ಯಾರೋ ಬಂದು ಕೇಳಿದ್ರು ಅಂತ ಸೇರಿಸಿಕೊಂಡು, ಅವರಿಂದ ಏನಾದ್ರೂ ತೊಂದ್ರೆ ಅದ್ರೆ. ನಿಮ್ ಹತ್ತಿರ ನಮಗೆ ಕೆಟ್ಟ ಹೆಸರು ಬರುತ್ತೆ. ನಮ್ಮ ಮೇಲೆ ಇಟ್ಟಿರೋ ನಂಬಿಕೆ ಕೂಡ ಹೋಗಿ ಬಿಡುತ್ತೆ. ಸದ್ಯಕ್ಕೆ ನಮಗೆ ಕೆಲಸ ಏನು ಕಷ್ಟ ಇಲ್ಲಾ. ನಮಗೆ ನಂಬಿಕೆ ವ್ಯಕ್ತಿ ಸಿಕ್ಕಾಗ ಖಂಡಿತ ಕೆಲಸಕ್ಕೆ ಸೇರಿಸಿ ಕೊಳ್ತಿವಿ.
ವಿಶ್ವ,,, ಹ್ಮ್, ನೀನು ಹೇಳೋದು ನಿಜ. ನೀವುಗಳೆಲ್ಲ ನಿಮ್ಮ ಸೂಪರ್ ಮಾರ್ಕೆಟ್ ಅಂತ ತುಂಬಾ ನಿಯತ್ತಾಗಿ ಕೆಲಸ ಮಾಡ್ತಾ, ನನಗೆ ಕೆಲಸ ಇಲ್ಲದೆ ಹಾಗೇ ಮಾಡಿದ್ರಿ. ಆಗಂತ ನಾನು ಸುಮ್ನೆ ಇರೋಕೆ ಆಗುತ್ತಾ. ಅದಕ್ಕೆ ನೋಡೋಕೆ ಹೇಳ್ದೆ. ನಿಮಗೆ ಯಾರು ಸರಿ ಅನ್ನಿಸ್ತಾರೋ ಅವರನ್ನ ಕೆಲಸಕ್ಕೆ ಸೇರಿಸಿ ಕೊಳ್ಳಿ.
ಪ್ರಿಯಾ,,, ಸರಿ ಸರ್, ಈ ವಿಷಯ ನಾ ಇನ್ನು ಅಭಿ ಗೆ ಹೇಳಿಲ್ಲ. ಅವನು ಊರಿಂದ ಬಂದಮೇಲೆ ಅವನ ಹತ್ತಿರ ಒಂದು ಸರಿ ಹೇಳ್ತಿನಿ.
ವಿಶ್ವ,,, ಹೌದಲ್ಲ ನಾನು ಈ ವಿಷಯ ನಾ ಅಭಿ ಹೇಳೇ ಇಲ್ಲಾ. ಅ ರೂಪೇಶ್ ರುದ್ರೇಶ್ ಟೆನ್ಶನ್ ಅಲ್ಲಿ ಮರೆತೇ ಹೋಗಿದೆ. ಸರಿ ನೀನು ಹೋಗಿ ಕೆಲಸ ನೋಡು. ಏನಾದ್ರೂ ಇದ್ರೆ ಕರೀತೀನಿ.
ಪ್ರಿಯಾ,, ಸರಿ ಸರ್ ಅಂತ ಹೇಳಿ ಆಫೀಸ್ ರೂಮಿಂದ ಹೊರಗಡೆ ಹೋಗ್ತಾಳೆ.
######
ಅಭಿ ಮನೆಯಲ್ಲಿ....
ನಂದಿನಿ ದೇವಮ್ಮ ನಯನಾ, ಅಭಿ, ಅನಾ, ಒಟ್ಟಿಗೆ ಕೂತು ಅಭಿ ಮಾಡಿದ ಮಟನ್ ಬಿರಿಯಾನಿ, ತಿಂತ ಇರ್ತಾರೆ.
ನಂದಿನಿ,,, ಅಮ್ಮ ಲೈಫ್ ಅಲ್ಲಿ ಏನಾದ್ರೂ ಒಂದು ಒಳ್ಳೆ ಕೆಲಸ ಮಾಡಿದ್ದಿಯ ಅಂದ್ರೆ ಅದು ಇವನಿಗೆ ಅಡುಗೆ ಕಲಿಸೋದು. ಅಂತ ಹೇಳ್ತಾ ನಯನಾ ನಿನ್ನ ಗಂಡ ಮಾಡಿರೋ ಬಿರಿಯಾನಿ ಹೇಗಿದೆ.
ನಯನಾ,,, ತುಂಬಾ ಚೆನ್ನಾಗಿ ಇದೆ. ಇಷ್ಟು ಚೆನ್ನಾಗಿ ಬಿರಿಯಾನಿ ಮಾಡ್ತಾರೆ ಅಂತ ನನಗೆ ಇವತ್ತೇ ಗೊತ್ತಾಗಿದ್ದು. ಇನ್ಮೇಲೆ ಒಳ್ಳೆ ಮಟನ್ ಬಿರಿಯಾನಿ ಬೇಕು ಅಂತ ಹೋಟೆಲ್ ರೆಸ್ಟೋರೆಂಟ್ ಅಂತ ಹೋಗೋದು ತಪ್ಪಿತು. ಥ್ಯಾಂಕ್ಸ್ ರೀ ಬಿರಿಯಾನಿ ತುಂಬಾ ಚೆನ್ನಾಗಿ ಇದೆ ಅಂತ ಅಭಿ ಗೆ ಹೇಳ್ತಾ ಳೇ.
ಅಭಿ,,, ನಯನಾ ನೋಡ್ತಾ ಒಂದು ಸಣ್ಣ ಸ್ಮೈಲ್ ಮಾಡ್ತಾನೆ. ನಂತರ ಎಲ್ಲರೂ ಮಾತಾಡಿ ಕೊಳ್ತಾ ಊಟ ಮಾಡಿ ಮುಗಿಸ್ತಾರೇ.
*****
ರಸ್ತೆ ಲಿ ನಡ್ಕೊಂಡು ಹೋಗ್ತಾ ಇದ್ದಾ, ಒಬ್ಬ ಮಹಿಳೆ ನಾ ಯಾರೋ ಕರೆದ ಹಾಗೇ ಹಾಗುತ್ತೆ.
ರಾಧಾ,,, ಧ್ವನಿ ಬರೋ ಕಡೆಗೆ ನೋಡಿ. ಏನ್ ಚಿಕ್ಕಿ ಅಂತ ಹತ್ತಿರ ಹೋಗ್ತಾಳೆ.
ಚಿಕ್ಕಿ,,, ಏನೇ ಏನ್ ಚಿಕ್ಕಿ ಅಂತ ನನ್ನೇ ಕೇಳ್ತಾ ಇದ್ದಿಯಾ, ವಿಷಯ ಗೊತ್ತಿರೋವ್ಳು ನೀನು, ನೀನೇ ಏನು ಅಂತ ಹೇಳಬೇಕು.
ರಾಧಾ,,, ಸ್ವಲ್ಪ ಕನ್ಫ್ಯೂಸ್ ಆಗಿ ಏನು ವಿಷಯ ನನಗೆ ಗೊತ್ತಿರೋದ. ಏನ್ ಹೇಳ್ತಾ ಇದ್ದಿಯಾ ಚಿಕ್ಕಿ ಏನ್ ವಿಷಯ ನೀನು ಯಾವುದರ ಬಗ್ಗೆ ಕೇಳ್ತಾ ಇದ್ದಿಯಾ?
ಚಿಕ್ಕಿ,,, ಏನೇ ರಾಧಾ ಹೀಗೆ ನನ್ನೇ ಕೇಳ್ತಿಯಾ? ನಿನ್ನ ಮೈದುನ ಮದುವೆ ಮಾಡ್ಕೊಂಡು ಇರೋ ವಿಷಯ ಅವನಿಗೆ ಒಬ್ಬ ಮಗಳು ಇರೋ ವಿಷಯ ನನಗೆ ನೀನು ಹೇಳೇ ಇಲ್ಲಾ.
ರಾಧಾ,,, ಏನ್ ಹೇಳ್ತಾ ಇದ್ದಿಯಾ ಚಿಕ್ಕಿ, ಯಾವ್ ಮೈದುನ ಯಾವ್ ಮದುವೆ ನನಗೆ ಒಂದು ಅರ್ಥ ಆಗ್ತಾ ಇಲ್ಲಾ.
ಚಿಕ್ಕಿ,,, ಅದೇ ಕಣೆ ನಿನ್ನ ಮೈದುನ ಅಭಿ. ಅವನು ಮದುವೆ ಮಾಡ್ಕೊಂಡು ಅವನ ಹೆಂಡತಿ ಮಗಳ ಜೊತೆಗೆ ಇವತ್ತು ಮನೆಗೆ ಬಂದಿರೋ ವಿಷಯ.
ರಾಧಾ,,, ಶಾಕ್ ಆಗಿ ಏನು ಅಭಿ ಮದುವೆ ಮಾಡ್ಕೊಂಡು ಇದ್ದಾನ, ಹೆಂಡತಿ ಮಗಳ ಜೊತೆಗೆ ಮನೆಗೆ ಬಂದ್ನ. ನಿಜವಾಗ್ಲೂ ನನಗೆ ಗೊತ್ತೇ ಇಲ್ಲಾ, ನೀನು ಹೇಳಿದ ಮೇಲೇನೆ ಗೊತ್ತಾಗಿದ್ದು.
ಚಿಕ್ಕಿ,,, ಏನೇ ಹೇಳ್ತಾ ಇದ್ದಿಯಾ ನಿನ್ನ ಮೈದುನ ಮದುವೆ ಆಗಿ ಇರೋ ವಿಷಯ ನಿನಗೆ ಗೊತ್ತೇ ಇಲ್ವಾ. ನೀನು ಬೇರೆ ಮನೆ ಮಾಡ್ಕೊಂಡು ಹೋಗಿದ್ದೀಯಾ ಅನ್ಕೊಂಡೆ ಅದ್ರೆ ಅವ್ರು ನಿನ್ನ ನಿಜವಾಗ್ಲೂ ಬೇರೆ ನೇ ಮಾಡಿ ಇಟ್ಟು ಬಿಟ್ಟಿದ್ದಾರೇ. ಏನ್ ಹೇಳ್ತಿಯ ಅವನ ದೌಲತ್ತು. ಬೈಕ್ ಇರೋವಾಗಲೇ ಒಂದು ರೇಂಜ್ ಗೆ ಹೋಗ್ತಾ ಬರ್ತಾ ಇದ್ದಾ ಈ ರೋಡ್ ಅಲ್ಲಿ. ಇವಾಗ ಕಾರ್ ಬೇರೆ ತಗೊಂಡು ಇದ್ದಾನೆ. ನಮ್ಮೂರಲ್ಲಿ ಅವನ ಹತ್ತಿರ ಇರೋ ಕಾರ್ ಯಾರ್ ಹತ್ತಿರಾನೂ ಇಲ್ಲಾ. ನನ್ನ ಮಗನ ಫ್ರೆಂಡ್ ಹೇಳ್ತಾ ಇದ್ದಾ ಯಾವುದೊ ಕಂಪನಿ ಕಾರ್ ಅಂತೇ, 45 ಲಕ್ಷ ಅಂತೇ ಅ ಕಾರ್.
ರಾಧಾ,,, ಏನು 45 ಲಕ್ಷ ದ ಕಾರ್ ಅ. ನೀನು ಸುಮ್ನೆ ಇರು ಚಿಕ್ಕಿ. ಬಾಡಿಗೆ ಕಾರ್ ಇರಬೇಕು. ಅಷ್ಟು ದುಡ್ಡು ಅವನ ಹತ್ತಿರ ಎಲ್ಲಿ.
ಚಿಕ್ಕಿ,,, ಬಾಡಿಗೆ ಕಾರ್ ಆಗಿದ್ರೆ, ಸ್ವಲ್ಪ ಹೊತ್ತಿನ ಮುಂಚೆ ನೀನು ನೋಡಬೇಕಾಗಿತ್ತು. ಈ ರೋಡ್ ಅಲ್ಲಿ ನಿಲ್ಲಿಸಿರೋ ಬೈಕ್ ಮೇಲೆ ನೇ ಹತ್ತಿಸಿ ಕೊಂಡು ಹೋಗೋಕೆ ನೋಡ್ತಾ ಇದ್ದಾ. ಮೊದಲೇ ಅವನನ್ನ ಹಿಡಿಯೋಕೆ ಆಗ್ತಾ ಇರಲಿಲ್ಲ, ಇವಾಗ ಕಾರ್ ಅಲ್ಲಿ ಓಡಾಡ್ತಾ ಇದ್ದಾನೆ , ಅದ್ರೆ ನೀನು ನಿನ್ನ ಗಂಡ, ಇನ್ನು ಬೈಕ್ ಅಲ್ಲೇ ಓಡಾಡ್ತಾ ಇದ್ದೀರಾ. ಈ ವಿಷಯ ನಾನ್ ಹೇಳ್ದೆ ಅಂತ ಹೇಳೋಕೆ ಹೋಗಬೇಡ, ಆಮೇಲೆ ನಿಮ್ ಅತ್ತೆ, ನಾದಿನಿ, ಬಾಯಿ ಸರಿ ಇಲ್ಲಾ, ನಿನ್ನ ಮೈದುನ ಅಂತು ಕೇಳ್ಳೆ ಬೇಡ, ಅ ಮಾತುಗಳನ್ನ ಕೇಳೋಕೆ ಆಗಲ್ಲಾ, ಹಾಗೇ ಬೈತಾನೆ. ಈ ಬೀದಿಲಿ ಯಾಕೆ ಈ ಊರಲ್ಲಿ ಇರೋ ಗಂಡಸರು ಕೂಡ ಅವರವರ ಹೆಂಡತಿನ ಕೂಡ ಹಾಗೇ ಬೈಯ್ಯೋದಿಲ್ಲ. ಏನೋ ನಿನಗೆ ಗೊತ್ತಿದೆ ಏನೋ ಅಂತ ಕೇಳೋಣ ನಿನ್ನ ಕೇಳ್ದೆ. ಸರಿ ನನಗೆ ಕೆಲಸ ಇದೆ ಮತ್ತೆ ಯಾವಾಗಾದ್ರೂ ಸಿಗ್ತೀನಿ ಅಂತ ಹೇಳಿ ಹೊರಟು ಹೋದ್ಲು.
ರಾಧಾ,,,, ಈ ಚಿಕ್ಕಿ ಎಂತವಳು ಅಂದ್ರೆ, ಕೇಳೋ ವಿಷಯ ನಾ ಹೇಳಬೇಕು ಅನ್ಕೊಂಡು ಇರೋ ವಿಷಯ ನಾ, ನೈಸ್ ಆಗಿ ಹೇಳೋದು, ಆಮೇಲೆ ಎಲ್ಲೂ ಹೇಳೋಕೆ ಹೋಗಬೇಡ, ಅನ್ನೋದು. ಇಂತ ನಾಟಕ ಮಾಡ್ಕೊಂಡು ಆಡೋದಕ್ಕೇನೆ, ಅವನು ಇವರ ಕಿವೀಲಿ ರಕ್ತ ಬರೋ ಹಾಗೇ ಬೈಯ್ಯೋದು. ಅವನು ಇವರನ್ನೇ ಬೈತಾ ಇದ್ದಾನೆ ಅಂತ ಗೊತ್ತಿದ್ದೂ, ನನ್ನ ಅಲ್ಲ ಅನ್ಕೊಂಡು ನಿಂತು ನೋಡೋದು. ಅಂತ ಮನಸಲ್ಲಿ ಬೈಕೊಂಡು. ಮನೆಗೆ ಬರ್ತಾಳೆ. ಗಂಡ ಗೋಪಿ, ಮೊಬೈಲ್ ನೋಡ್ತಾ ಇರೋದನ್ನ ನೋಡಿ.
ಕೋಪದಿಂದ ನೀವು ಹೀಗೆ ಮೊಬೈಲ್ ನಾ ಇಡ್ಕೊಂಡು ಕೂತ್ಕೊಂಡು ಇರಿ, ಹೊರಗಡೆ ಏನ್ ನಡೀತಿದೆ ಅಂತ ನೋಡೋಕೆ ಕೇಳೋಕೆ ಹೋಗಬೇಡಿ ಅಂತ ಹೇಳ್ತಾ ಅಡುಗೆ ಮನೆಗೆ ಒಳಗೆ ಹೋಗ್ತಾಳೆ.
ಗೋಪಿ,,,, ಲೇ ಏನೇ ಆಯ್ತು ನಿನಗೆ, ನಾನ್ ಏನ್ ಮಾಡಿದೆ ಅಂತ ನನ್ನ ಮೇಲೆ ಕೋಪ ಮಾಡ್ಕೋತ ಇದ್ದಿಯಾ.
ಮಗಳು ಶ್ರುತಿ,,, ಅಮ್ಮ ಅಪ್ಪ ಏನ್ ಮಾಡಿದ್ರು ಅಂತ ಕೋಪ ಮಾಡ್ಕೊಂಡು ಅವರನ್ನ ಬೈತಾ ಇದ್ದಿಯಾ.
ರಾಧಾ,,,, ನಿಮ್ ಅಪ್ಪ ಏನ್ ಮಾಡಿದ್ರ, ನಿಮ್ ಚಿಕ್ಕಪ್ಪ ಯಾರಿಗೂ ಹೇಳ್ದೆ ಮದುವೆ ಮಾಡ್ಕೊಂಡು ಮಗಳ ಜೊತೆಗೆ ಕಾರ್ ಅಲ್ಲಿ ಮನೆಗೆ ಬಂದ ಅಂತೇ, ಊರಲ್ಲಿ ಎಲ್ಲಾ ಅದನ್ನೇ ಮಾತಾಡ್ತಾ ಇದ್ದಾರೆ.
ಶ್ರುತಿ,,,, ಶಾಕ್ ಆಗಿ ಏನು ಚಿಕ್ಕಪ್ಪ ಮದುವೆ ಮಾಡ್ಕೊಂಡು ಇದ್ದಾನ, ಮಗಳು ಕೂಡ ಇದ್ದಾಳ,,, ನನಗೆ ಹೇಳೇ ಇಲ್ಲಾ ಅಂತ ಸಂತೋಷ ದಿಂದ ಎದ್ದು ಸರಿ ಅಪ್ಪ ನಾನ್ ಹೋಗಿ ಚಿಕ್ಕಪ್ಪ ಚಿಕ್ಕಮ್ಮ,ನಾ ನನ್ನ ತಂಗಿನ ನೋಡ್ಕೊಂಡು ಮಾತಾಡಿಸಿಕೊಂಡು ಬರ್ತೀನಿ ಅಂತ, ಅವರಿಬ್ಬರ ಮಾತಿಗೂ ಕಾಯದೆ ಅಲ್ಲಿಂದ ಹೊರಗೆ ಓಡ್ತಾಳೆ.
ಗೋಪಿ,,, ಕೂಲ್ ಆಗಿ ಅವನು ಮದುವೆ ಮಾಡ್ಕೊಂಡು, ಹೆಂಡತಿ ಮಗಳ ಜೊತೆಗೆ ಅವನ ಮನೆಗೆ ಬಂದ್ರೆ ನಿನಗೆ ಏನೇ, ನೀನೇ ಯಾವಾಗೋ ಹೇಳಿದೆ ಅಲ್ವಾ, ಅ ಮನೆಗೂ ಅ ಮನೇಲಿ ಇರೋವ್ರಿಗೂ ನನಗೂ ಏನು ಸಂಬಂಧ ಇಲ್ಲಾ ಅಂತ, ಇವಾಗ ಏನಕ್ಕೆ ಈ ರೀತಿ ಆಡ್ತಾ ಇದ್ದಿಯಾ, ಅವನ ಲೈಫ್ ಅವನ ಇಷ್ಟ ನಿನಗೆ ಏನ್ ಕಷ್ಟ.
ರಾಧಾ,,, ಏನ್ ಕಷ್ಟ ನಾ ಅವನು 45 ಲಕ್ಷದ ಕಾರ್ ಅಲ್ಲಿ ಬಂದ ಅಂತೇ, ಅಷ್ಟು ದುಡ್ಡು ಅವನಿಗೆ ಎಲ್ಲಿಂದ ಬಂತು, ಕೋರ್ಟ್ ಅಲ್ಲಿ ಇರೋ ಕೇಸ್ ನಾ ವಾಪಸ್ಸು ತಗೋತೀವಿ ಅಂತ ಏನಾದ್ರೂ ದುಡ್ಡು ತಗೊಂಡನ, ಇಲ್ಲಾ ನಿಮ್ ಅಮ್ಮ ನಮಗೆ ಗೊತ್ತಿಲ್ದೆ ಏನಾದ್ರೂ ಅಸ್ತಿ ಇಟ್ಟಿದ್ರ.
ಗೋಪಿ,,, ನಗ್ತಾ ನಿನ್ನ ನೋವು ನನಗೆ ಈಗ ಅರ್ಥ ಆಯ್ತು. ಅವನು ಮದುವೆ ಆಗಿ ಹೆಂಡತಿ ಮಗಳ ಜೊತೆಗೆ ಬಂದಿದ್ದು ನಿನಗೆ ಕೋಪ ಬರಲಿಲ್ಲಾ, 45 ಲಕ್ಷ ದ ಕಾರ್ ಅಲ್ಲಿ ಬಂದಿರೋದು ನೋಡಿ ನಿನಗೆ ಹೊಟ್ಟೆ ಉರಿತಾ ಇದೆ. ನೋಡು, ನಮಪ್ಪ ಮಾರಿ ಬಿಟ್ಟಿರೋ ಜಮೀನಿನ ಮೇಲೆ ಕೇಸ್ ಹಾಕಿರೋದು, ಅದನ್ನ ಒಬ್ಬರೇ ತಗೋಳೋಕೆ ಆಗಲ್ಲಾ, ಇನ್ನೊಂದು ನಮ್ಮಮ್ಮ ಯಾವುದೇ ಅಸ್ತಿ ನಾ ನಮಗೆ ಗೊತ್ತಿಲ್ದೆ ಎಲ್ಲೂ ಮುಚ್ಚಿ ಇಟ್ಟಿಲ್ಲ. ನೀನು ಇಲ್ದೆ ಇರೋದನ್ನ ಹೇಳೋಕೆ ಹೋಗಬೇಡ, ಅಷ್ಟಕ್ಕೂ ನಿನಗೆ ಏನ್ ಸಂಬಂಧ ಹೇಳು, ನಮ್ ಅಪ್ಪ ಅಮ್ಮ ನಾ ಅಸ್ತಿ ನಾವ್ ಮಕ್ಕಳು ಏನೋ ಮಾಡ್ಕೋತೀವಿ, ನೀನೇ ಹೇಳಿದಲ್ಲ ನಿಮ್ಮಿಂದ ಒಂದು ನಯ ಪೈಸೆ ಬೇಡ ಅಂತ ಅಷ್ಟು ದೊಡ್ಡದಾಗಿ ಅಷ್ಟು ಜನರ ಮುಂದೆ. ಇವಾಗ ಏನಕ್ಕೆ ಅಸ್ತಿ ಬಗ್ಗೆ ಕೇಳ್ತಾ ಇದ್ದಿಯಾ. ನಿನಗೆ ಅಷ್ಟು ಏನಾದ್ರೂ ಇದ್ರೆ ಹೋಗಿ ನಿಮ್ ಅಪ್ಪ ಅಮ್ಮ ನಾ ಹತ್ತಿರ ಕೇಳು.
ರಾಧಾ,,, ನಾನೇನು ಅಸ್ತಿ ನನಗೆ ಬೇಕು ಅಂತ ಕೇಳಿಲ್ಲ. ಅಸ್ತಿ ಮಾರದೆ ಅವನಿಗೆ ಕಾರ್ ತಗೋಳೋ ಅಷ್ಟು ದುಡ್ಡು ಎಲ್ಲಿಂದ ಬಂತು. ಹೇಗೆ ಬಂತು.
ಗೋಪಿ,,, ಎಲ್ಲಿಂದ ಅಂತ ಅಂದ್ರೆ ಮದುವೆ ಆಗಿದ್ದಾನೆ ಮಾವ ಕೊಟ್ಟಿರ್ತಾನೆ. ಅಳಿಯ ಮಗಳು ಚೆನ್ನಾಗಿ ಇರಲಿ ಅಂತ. ನಿನಗೂ ಕಾರ್ ಅಲ್ಲಿ ಓಡಾಡಬೇಕು ಅಂತ ಆಸೆ ಇದ್ರೆ ನಿಮ್ ಅಪ್ಪ ನಾ ಕೇಳು ಅಪ್ಪ ಓಡಾಡೋಕೆ ನನಗೆ ಒಂದು ಕಾರ್ ಬೇಕು ಅಂತ ಕೊಡಿಸ್ತಾನೆ. ಅದು ಬಿಟ್ಟು ಅವನು ಅದು ತಗೊಂಡ ಹಾಗೇ ಇದ್ದಾ ಹಾಗೇ ಬಂದ ಅಂತ ನನ್ನ ಕೇಳೋಕೆ ಹೋಗಬೇಡ. ನೆಮ್ಮದಿಯಾಗಿ ಮನೇಲಿ ಇರೋಣ ಅಂತ ಬಂದ್ರೆ ನಿಂದು ದಿನ ಒಂದೊಂದು ರಾಮಾಯಣ ಆಗೋಯ್ತು. ಅಂತ ಕೋಪದಿಂದ ಎದ್ದು ಮನೆ ಯಿಂದ ಹೊರಗೆ ಹೋಗ್ತಾನೆ.
ರಾಧಾ ಕೋಪದಿಂದ ರೂಮ್ ಒಳಗೆ ಹೋಗಿ ಬಿಡ್ತಾಳೆ.
########
ಶ್ರುತಿ ಚಿಕ್ಕಪ್ಪ ಫ್ಯಾಮಿಲಿ ನಾ ನೋಡೋಣ ಅನ್ನೋ ಖುಷಿ ಅಲ್ಲಿ ಸ್ಪೀಡ್ ಆಗಿ ನಡ್ಕೊಂಡು ಬರ್ತಾ ಇರೋದನ್ನ ನೋಡಿ, ಇದಕ್ಕೂ ಮೊದಲು ರಾಧಾ ಜೊತೆಗೆ ಮಾತಾಡಿದ ಚಿಕ್ಕಿ, ಅ ಬೀದಿ ಹೆಂಗಸರ ಜೊತೆಗೆ ಅಭಿ ವಿಷಯ ನೇ ಮಾತಾಡ್ತಾ ಇರ್ತಾಳೆ. ಶ್ರುತಿ ನಾ ನೋಡಿ. ಏನೇ ಶ್ರುತಿ ನಿಮ್ ಚಿಕ್ಕಪ್ಪ ಚಿಕ್ಕಮ್ಮ ನಾ ನೋಡೋಕೆ ಹೋಗ್ತಾ ಇದ್ದಿಯಾ. ನಿಮ್ ಚಿಕ್ಕಪ್ಪ ಮದುವೆ ಮಾಡಿಕೊಂಡು ಇರೋ ವಿಷಯ ನಮಗೆ ಹೇಳೇ ಇಲ್ಲಾ. ಏನು ಲವ್ ಮ್ಯಾರೇಜ್ ಅ, ಹುಡುಗಿ ಯಾವ್ ಊರು. ಏನ್ ಜನ, ನಿಮ್ ಜಾತಿ ಹುಡುಗಿ ನಾ ಅಂತ ನಾನ್ ಸ್ಟಾಪ್ ಪ್ರಶ್ನೆ ಕೇಳ್ತಾಳೆ.
ಶ್ರುತಿ,,,, ಲೇ ಮುದುಕಿ ನಿನಗೆ ಮಾಡೋಕೆ ಬೇರೆ ಕೆಲಸ ಇಲ್ವಾ, ದಿನ ಅವರ ಮನೇಲಿ ಇವರ ಮನೇಲಿ ಏನ್ ನಡೀತಾ ಇದೆ ಅನ್ನೋದು ನೋಡೋದು, ಮೀಟಿಂಗ್ ಮಾಡಿ ಮಾತಾಡೋದು ಇದೆ ನಾ ನಿನಗೆ ಕೆಲಸ. ಬೇರೆ ಅವರ ಮನೇಲಿ ದೋಸೆ ತೂತು ಆಗಿದ್ರೆ ನಿಮ್ ಮನೇಲಿ ಮುದ್ದೇನೆ ತುತಾಗಿದೆ ಅದನ್ನ ನೋಡ್ಕೋ. ಇಲ್ಲಾ ನಿನಗೆ ಫುಲ್ ಡೀಟೇಲ್ಸ್ ಬೇಕಾದ್ರೆ, ಬಂದು ನಮ್ ಚಿಕ್ಕು ಹತ್ರಾನೇ ಕೇಳು. ಫುಲ್ ಪಿನ್ ಟು ಪಿನ್ ಹೇಳ್ತಾನೆ.
ಚಿಕ್ಕಿ.. ನಿನಗೆ ನಿಮ್ ಚಿಕ್ಕಪ್ಪ ನಾ ನೋಡ್ಕೊಂಡು ಕೊಬ್ಬು ಜಾಸ್ತಿ ಆಗಿದೆ.
ಶ್ರುತಿ,,, ಹೌದ ಇದೆ ಮಾತನ್ನ ನಮ್ ಚಿಕ್ಕು ಮುಂದೆ ಹೇಳು ನೋಡೋಣ. ಧೈರ್ಯ ಇದ್ರೆ.
ಚಿಕ್ಕಿ ಜೊತೆಗೆ ಮಾತಾಡ್ತಾ ಇದ್ದಾ ಇನ್ನೊಬ್ಬ ಮಹಿಳೆ,,, ಲೇ ಏನೋ ಗೊತ್ತೇನೋ ಅಂತ ಕೇಳಿದ್ವಿ ಅಷ್ಟಕ್ಕೇ ನೀನು ಹೋಗಿ ನಿಮ್ ಚಿಕ್ಕಪ್ಪ ನಿಗೆ ಹೇಳಿದ್ರೆ ಅಷ್ಟೇ ಅವನು ಸುಮ್ನೆ ಬಿಡ್ತಾನಾ ನಮ್ಮನ್ನ. ತಪ್ಪಾಯ್ತು ನೀನು ಹೋಗು ಅಂತ ಹೇಳಿ ಕಳಿಸಿ ಬಿಡ್ತಾರೇ.
ಶ್ರುತಿ ಹೋಗ್ತಾ ಈ ಭಯ ಇರಬೇಕು ಅಂತ ಹೇಳ್ಕೊಂಡು ಮನೆ ಕಡೆ ಹೋಗ್ತಾಳೆ.
ಶ್ರುತಿ ಮನೆ ಒಳಗಡೆ ಬರ್ತಾನೇ. ಅಜ್ಜಿ, ಅತ್ತೆ ಚಿಕ್ಕು ಅಂತ ಕರೀತಾ ಮನೆ ಒಳಗೆ ಬರ್ತಾಳೆ.
@@@@@@@@@@@@@@@@@@@@@@@@