Abhinayanaa - 25 in Kannada Love Stories by S Pr books and stories PDF | ಅಭಿನಯನಾ - 25

The Author
Featured Books
Categories
Share

ಅಭಿನಯನಾ - 25

  ಅಭಿ ನಯನಾ ಜೀವನದಲ್ಲಿ ಇಷ್ಟು ಖುಷಿ ಯಾಗಿ ಇರೋದಕ್ಕೆ ಮೂಲ ಕಾರಣ ಅನಾ, ಅವರ ಜೀವನದಲ್ಲಿ ಏನೇ ಇದ್ದರು ಮೊದಲ ಆದ್ಯತೆ ಅನಾ ಗೆ ಅನಾ ನಂತರ ಏನೇ ಆದ್ರು ಅನ್ನೋ ನಿರ್ಧಾರ ನ ಅಭಿ ನಯನಾ ಯಾವಾಗೋ ತೆಗೆದುಕೊಂಡರು. ವಿಶ್ವ ಸುಭದ್ರ, ಮಗಳು ಅಳಿಯ ಮೊಮ್ಮಗಳು ಖುಷಿಯಾಗಿ ಜೀವನ ಮಾಡೋದನ್ನ ನೋಡಿ ಇದಕ್ಕಿಂತ ಸಂತೋಷ ಏನಿದೆ ಅಂತ ಸಂತೋಷ ಪಡ್ತ ಇದ್ದರು.  ವಿಶ್ವನಾಥ್ ಸೂಪರ್ ಮಾರ್ಕೆಟ್ ನ ಮತ್ತಷ್ಟು ದೊಡ್ಡದು ಮಾಡೋ ಕೆಲಸ ನ ಶುರು ಮಾಡಿದರು. ಕೆಲವೇ ದಿನಗಳಲ್ಲಿ ಅದು ಕೂಡ ನಡೆದು ಹೋಯ್ತು. ಸೂಪರ್ ಮಾರ್ಕೆಟ್ ದೊಡ್ಡದು ಆದಂತೆ ಕೆಲಸಗಳು ಜಾಸ್ತಿ ಆದವು, ಅಭಿ ಸೂಪರ್ ಮಾರ್ಕೆಟ್ ನ ಜವಾಬ್ದಾರಿ ನ ಪೂರ್ತಿಯಾಗಿ ವಹಿಸಿಕೊಂಡ,  ಪ್ರಿಯಾ ಗೆ ಅಕೌಂಟ್ಸ್ ನ ನೋಡಿಕೊಳ್ಳೋ ಜವಾಬ್ದಾರಿ ನ ವಹಿಸಿದ.  ನಿರಂಜನ್ ಮೇಘ ಗೆ ಬಿಲ್ಲಿಂಗ್ ಕೌಂಟರ್ ಜವಾಬ್ದಾರಿ ನ ವಹಿಸಿದ. ರಾಜ್ ಗೆ ತೇಜು ಗೆ ಇಬ್ಬರು ಹೆಲ್ಪರ್ ನ ಕೊಟ್ಟು ಸ್ಟಾಕ್ ಮತ್ತೆ ಫ್ಲೋರ್ ನ ನೋಡಿಕೊಳ್ಳೋ ಜವಾಬ್ದಾರಿ ನ ಕೊಟ್ಟ. ಅಭಿ ಪ್ರಿಯಾ ಅವರ ಕೆಲಸಗಳು ಮುಗಿದ ನಂತರ ಬಂದು ಬಿಲ್ಲಿಂಗ್ ಗೆ ಸಹಾಯ ಮಾಡ್ತಾ ಇದ್ದರು. 

*******

ತೇಜು ಕೆಲಸ ಮುಗಿಸಿಕೊಂಡು ಮನೆಗೆ ಬಂದಳು. ಅವಳ ಜೊತೆಗೆ ಪ್ರಿಯಾ ಕೂಡ ಬೈಕ್ ಅಲ್ಲಿ ಬಂದಳು.  ಮನೆ ಮುಂದೆ ಇಬ್ಬರು ಮಾತಾಡ್ತಾ ಇರೋದನ್ನ ನೋಡಿ ತೇಜು ತಂದೆ,  ಪ್ರಿಯಾ ಏನಮ್ಮ ಇಲ್ಲೇ ನಿಂತು ಮಾತಾಡ್ತಾ ಇದ್ದೀರಾ ಮನೆ ಒಳಗೆ ಬಂದು ಕೂತು ಮಾತಾಡಿಕೊಳ್ಳ ಬಹುದು ಅಲ್ವಾ.

ಪ್ರಿಯಾ,,, ಪರ್ವಾಗಿಲ್ಲ ಅಂಕಲ್,  ಇನ್ನೇನು ಹೊರಡ್ತೀವಿ ಮನೇಲಿ ಅಪ್ಪ ಅಮ್ಮ ಕಾಯ್ತಾ ಇರ್ತಾರೆ.

ಅಂಕಲ್,,, ನಿಮ್ ಅಪ್ಪನಿಗೆ ಕಾಲ್ ಮಾಡಿ ಹೇಳ್ತಿನಿ ನಾನು, ಬನ್ನಿ ನಿಮ್ ಹತ್ತಿರ ಸ್ವಲ್ಪ ಮಾತಾಡಬೇಕು.

ಪ್ರಿಯಾ,, ನಮ್ ಹತ್ತಿರನ ಸರಿ ಬಂದೆ ಅಂಕಲ್ ಅಂತ ಹೇಳಿ, ಬೈಕ್ ನ ನಿಲ್ಲಿಸಿ ತೇಜು ಜೊತೆಗೆ ಮನೆ ಒಳಗೆ ಬಂದು ಸೋಫಾ ಮೇಲೆ ಕೂತ್ಕೋತಾಳೆ.

ದಾಮೋದರ್,,, ಸೋಫಾ ಮೇಲೆ ಕುತ್ಕೊಂಡು, ಪ್ರಿಯಾ ತೇಜು ನ ನೋಡ್ತಾ ಅದು ಏನಿಲ್ಲಾ ಮಗಳೇ, ನಮ್ ಮನೆ ಟೆರೇಸ್ ಅಲ್ಲಿ ಇರೋ ಮನೆಗೆ ಒಂದು ಹುಡುಗಿ ಬಾಡಿಗೆಗೆ ಬಂದಿದ್ದಾಳೆ. ಪಾಪ ಅ ಹುಡುಗಿನ ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ, ಇಷ್ಟು ಚಿಕ್ಕ ವಯಸ್ಸಿಗೆ ತುಂಬಾ ನೋವನ್ನ ಕೊಟ್ಟು ಬಿಟ್ಟ ಅ ದೇವರು ಅ ಹುಡುಗಿಗೆ. 

ಪ್ರಿಯಾ,,, ಸ್ವಲ್ಪ ಬೇಸರದಿಂದ ಏನಾಯ್ತು ಅಂಕಲ್.

ಅಷ್ಟ್ರಲ್ಲಿ ತೇಜು ಅವರ ತಾಯಿ ಜಾನಕಿ ಬಂದು ಅದೇನ್ ಕೇಳ್ತಿಯಾ ಪ್ರಿಯಾ ಅಂತ ಹೇಳಿ ಸಾರಿಕಾ ಬಗ್ಗೆ ಹೇಳೋಕೆ ಶುರು ಮಾಡ್ತಾರೆ.

ಪ್ರಿಯಾ ತೇಜು, ಇಬ್ಬರು ಸಾರಿಕಾ ವಿಷಯ ಕೇಳಿದ ಮೇಲೆ ಅವರ ಮನಸ್ಸಿಗೂ ನೋವಾಗುತ್ತೆ. 

ಪ್ರಿಯಾ,,,ಅಂಕಲ್ ಇವಾಗ ನಾವ್ ಏನ್ ಮಾಡಬೇಕು.

ಅಂಕಲ್,,, ಏನಿಲ್ಲಾ ಪ್ರಿಯಾ, ಅ ಹುಡುಗಿ ಇಲ್ಲಿಗೆ ಬಂದು ತಿಂಗಳು ಆಯಿತು, ಎಲ್ಲಾದ್ರೂ ಕೆಲಸ ನೋಡಿ ಅಂತ ಲಾಯರ್ ನನಗೆ ಹೇಳಿದ್ರು. ಈಗಷ್ಟೇ ನೋವಿನಿಂದ ಚೇತರಿಸಿ ಕೊಳ್ತಾ ಇರೋ ಹುಡುಗಿ, ಸ್ವಲ್ಪ ಅರೋಗ್ಯ ಕೂಡ ಸುಧಾರಿಸಿ ಕೊಳ್ಳಲಿ ಅಂತ ನಾನೆ ಸುಮ್ಮನೆ ಇದ್ದೆ. ಈಗ ಅ ಹೆಣ್ಮಗು ಅಂಕಲ್ ನೀವು ನನ್ನ ಮಗಳ ತರ ನೋಡ್ತಾ ಇದ್ದೀರಾ ಅದಕ್ಕೆ ನನಗೆ ತುಂಬಾ ಸಂತೋಷ ಅದ್ರೆ ಕೆಲಸ ಇಲ್ಲದೆ ನಿಮಗೆ ಬಾಡಿಗೆ ಕೊಡದೆ ಮನೇಲಿ ಇರೋಕೆ ನನಗೆ ಕಷ್ಟ ಆಗ್ತಾ ಇದೆ, ಯಾವುದಾದ್ರೂ ಕೆಲಸ ನೋಡಿ ಕೊಡಿಸಿ, ಇಲ್ಲಾ ನಾನೆ ಹೋಗಿ ಕೆಲಸ ಹುಡ್ಕೋತ್ತೀನಿ ಅಂತ ಹೇಳಿದ್ಲು. ಅದಕ್ಕೆ ನಿಮ್ಮ ಹತ್ತಿರ ಮಾತಾಡೋಣ ಅಂತ ಇದ್ದೆ. ಏನಿಲ್ಲಾ ಅ ಹೆಣ್ಮಗುಗೆ ಒಂದು ಕೆಲಸ ಅಂತ ನಿಮ್ ಸೂಪರ್ ಮಾರ್ಕೆಟ್ ಅಲ್ಲಿ ಕೊಡಿಸಿದ್ರೆ ನಿಮಗೆ ಪುಣ್ಯ ಇರುತ್ತೆ, ನನಗೂ ಸ್ವಲ್ಪ ಧೈರ್ಯ ಇರುತ್ತೆ, ನನ್ನ ನಂಬಿ ಅ ಲಾಯರ್ ಇಲ್ಲಿಗೆ ಕಳಿಸಿದ್ದಾರೆ, ನೀವು ಕೂಡ ಅ ಹುಡುಗಿ ಜೊತೆಗೆ ಇದ್ರೆ ಅವಳಿಗೂ ಒಂದು ಧೈರ್ಯ ಇರುತ್ತೆ, 

ತೇಜು,,,, ಅಪ್ಪ ನೀವು ಅಷ್ಟು ಕೇಳ್ಕೊ ಬೇಕಾ, ಕೆಲಸ ತಾನೇ ನಾಳೆ ನಾವೇ ಅ ಹುಡುಗಿ ನ ಕರ್ಕೊಂಡು ಹೋಗಿ ಕೆಲಸ ಕೊಡಿಸ್ತೀವಿ ಸರಿನಾ.

ಪ್ರಿಯಾ,,, ಹೌದು ಅಂಕಲ್ ಸಾರಿಕಾ ಬಗ್ಗೆ ನೀವೇನು ಚಿಂತೆ ಮಾಡಬೇಡಿ, ನಾವ್ ನೋಡ್ಕೋತೀವಿ.

ಅಂಕಲ್,,, ನಿಟ್ಟುಸಿರು ಬಿಟ್ಟು ತುಂಬಾ ಥ್ಯಾಂಕ್ಸ್ ಮಕ್ಕಳ, ಬನ್ನಿ ಅ ಹುಡುಗಿನ ಪರಿಚಯ ಮಾಡಿಸ್ತೀನಿ ಅಂತ ಹೇಳಿ ಎದ್ದೇಳೋಕೆ ಹೋಗ್ತಾರೆ.

ತೇಜು,,, ಅಪ್ಪ ನೀವು ಕೂತ್ಕೊಳ್ಳಿ, ನಾವಿಬ್ರು ಹೋಗಿ ಅ ಹುಡುಗಿ ಹತ್ತಿರ ಮಾತಾಡಿ ಪರಿಚಯ ಮಾಡಿಕೊಂಡು ಬರ್ತೀವಿ ಅಂತ ಹೇಳಿ ಪ್ರಿಯಾ ಜೊತೆಗೆ ಸಾರಿಕಾ ಇರೋ ಮನೆ ಹತ್ತಿರ ಬರ್ತಾರೆ.

ಅಡುಗೆ ಮನೇಲಿ ಅಡುಗೆಗೆ ರೆಡಿ ಮಾಡ್ತಾ ಇದ್ದಾ ಸಾರಿಕಾ, ಡೋರ್ ಬೆಲ್ ಆಗೋದನ್ನ ಕೇಳಿ ಗ್ಯಾಸ್ ಆಫ್ ಮಾಡಿ, ಬಂದು ಡೋರ್ ಓಪನ್ ಮಾಡ್ತಾಳೆ, ಎದುರಿಗೆ ತೇಜು ಪ್ರಿಯಾ..

ತೇಜು,, ಸಾರಿಕಾ ನ ನೋಡಿ, ಹಾಯ್ ನನ್ನ ಹೆಸರು ತೇಜು ಅಂತ ಈ ಬಿಲ್ಡಿಂಗ್ ಓನರ್ ಮಗಳು, ಇವಳು ನನ್ನ ಫ್ರೆಂಡ್ ಪ್ರಿಯಾ ಅಂತ.

ಸಾರಿಕಾ,, ಸ್ಮೈಲ್ ಮಾಡ್ತಾ ಹೌದ ಬನ್ನಿ ಒಳಗೆ, ನನ್ನ ಹೆಸರು ಸಾರಿಕಾ ಅಂತ.

ತೇಜು ಪ್ರಿಯಾ ಮನೆ ಒಳಗೆ ಬರ್ತಾ. ತೇಜು,, ಸಾರೀ ನೀವು ಬಂದು ತಿಂಗಳು ಆದ್ರು ನನಗೆ ಗೊತ್ತಾಗಲಿಲ್ಲ, ಕೆಲಸ ಮನೆ ಫ್ರೆಂಡ್ ಅಂತ ಇದ್ದು ಬಿಟ್ಟೆ, ಅಪ್ಪ ಇವತ್ತು ನಿಮ್ ಬಗ್ಗೆ ಹೇಳಿದ್ರು, ಕೆಲಸಕ್ಕೆ ಕೇಳಿದ್ರಿ ಅಂತೇ ಅಲ್ವಾ, ಅದರ ಬಗ್ಗೆ ಹೇಳಿ ಹಾಗೇ ನಿಮ್ ಪರಿಚಯ ಮಾಡಿಕೊಳ್ಳೋಣ ಅಂತ ಬಂದ್ವಿ.

ಸಾರಿಕಾ,,, ತುಂಬಾ ಥ್ಯಾಂಕ್ಸ್ ನನಗೋಸ್ಕರ ಇಷ್ಟು ದೂರ ಬಂದ್ರಿ, ಕೂತ್ಕೊಳ್ಳಿ ಕುಡಿಯೋದಕ್ಕೆ ಏನ್ ತಗೋತೀರಾ. ಕಾಫಿ ಟೀ.

ಪ್ರಿಯಾ,,, ಪ್ಲೀಸ್ ನೀವು ಈ ಬನ್ನಿ ಹೋಗಿ ಅನ್ನೋ ಅಷ್ಟು ಗೌರವ ಕೊಡೋದು ಏನು ಬೇಡ, ಪ್ರಿಯಾ ತೇಜು ಅಂತ ಕರೆದ್ರೆ ಸಾಕು. ಹೇಗಿದ್ರು ಸ್ವಲ್ಪ ದಿನ ಹೋದಮೇಲೆ ಹೋಗೆ ಬಾರೆ ಅಂತ ಕರೆದು ಕೊಳ್ತಿವಿ ಅಲ್ವಾ. 

ತೇಜು,,, ಸಾರಿಕಾ ಮುಂದೆ ಕೈ ಚಾಚಿ ಫ್ರೆಂಡ್ಸ್ ಅಂತ ಹೇಳ್ತಾಳೆ 

ಸಾರಿಕಾ,,, ನಗ್ತಾ ಅವಳಿಗೆ ಕೈ ಕೊಟ್ಟು ಫ್ರೆಂಡ್ಸ್ ಅಂತ ಹೇಳ್ತಾ ಪ್ರಿಯಾ ಗು ಕೈ ಕೊಡ್ತಾಳೆ.

ಪ್ರಿಯಾ ನಗ್ತಾ ಕೈ ಕೊಟ್ಟು ಫ್ರೆಂಡ್ಸ್ ಅಂತ ಹೇಳ್ತಾ. ಸಾರಿಕಾ ನಾಳೆ ಬೆಳಿಗ್ಗೆ 9 30 ಗೆ ರೆಡಿ ಆಗು, ಕೆಲಸಕ್ಕೆ ಹೋಗೋಣ. ನಮ್ ಜೊತೆಗೆ ಇನ್ನೊಂದು ಕೋತಿ ಬರುತ್ತೆ ನಾಲಕ್ಕು ಜನ ಬೈಕ್ ಅಲ್ಲಿ ಹೋಗೋಣ.

ಸಾರಿಕಾ ಖುಷಿಯಾಗಿ ಸರಿ ರೆಡಿ ಆಗಿರ್ತೀನಿ, ಡಾಕ್ಯುಮೆಂಟ್ಸ್ ಏನೇನ್ ಬೇಕೋ ಹೇಳಿದ್ರೆ ರೆಡಿ ಮಾಡ್ಕೋತೀನಿ.

ಪ್ರಿಯಾ,, ಜಾಸ್ತಿ ಏನು ಬೇಡ ನಿನ್ನ ಆಧಾರ್ ಕಾಫಿ, ಬ್ಯಾಂಕ್ ಅಕೌಂಟ್ ಕಾಫಿ ಅಷ್ಟೇ ನನ್ನ ನಂಬರ್ ಕೊಡ್ತೀನಿ ವಾಟ್ಸಪ್ಪ್ ಮಾಡು ಸಾಕು ಇನ್ನೇನು ಬೇಡ.

ಸಾರಿಕಾ,,, ಏನು ಅಷ್ಟೇ ಸಾಕ,, ಈಗ್ಲೇ ಕಳಿಸ್ತೀನಿ ಅಂತ ಹೇಳಿ ಪ್ರಿಯಾ ನಂಬರ್ ಗೆ ಡಾಕ್ಯುಮೆಂಟ್ಸ್ ನ ಸೆಂಡ್ ಮಾಡ್ತಾಳೆ.

ತೇಜು ಕೂಡ ಅವಳ ನಂಬರ್ ನ ಸಾರಿಕಾ ಗೆ ಕೊಟ್ಟು, ನಾಳೆ ಮಾರ್ನಿಂಗ್ ಕಾಲ್ ಮಾಡ್ತೀನಿ ರೆಡಿ ಆಗಿ ಇರು ಸಾರಿಕಾ. 

ಸಾರಿಕಾ,,, ಹ್ಮ್ ಸರಿ.

ಪ್ರಿಯಾ,,, ಕೆಲಸದ ಬಗ್ಗೆ ಅಲ್ಲಿ ಕೆಲಸ ಮಾಡೋವರ ಬಗ್ಗೆ ನೀನೇನು ಭಯ ಬೀಳಬೇಡ, ಎಲ್ಲರು ನಮಗೆ ಗೊತ್ತಿರೋ ಜನ ನೇ ಇರೋದು. ಸೆಕ್ಯೂರಿಟಿ ಇಂದ ಇಡಿದು ಓನರ್ ವರೆಗೂ ಎಲ್ಲರೂ ಪರಿಚಯ ಇರೋವ್ರೆ. ನೀನು ಯಾವುದಕ್ಕೂ ಟೆನ್ಶನ್ ಆಗಬೇಡ ಸರಿನಾ.

ಸಾರಿಕಾ,,, ಹ್ಮ್ ಸರಿ.

ಪ್ರಿಯಾ ಸರಿ ನಾವಿನ್ನು ಹೊರಡ್ತೀವಿ ನಾಳೆ ಬೆಳಿಗ್ಗೆ ಕಾಲ್ ಮಾಡ್ತೀನಿ ಅಂತ ಇಬ್ಬರು ಎದ್ದು ನಿಲ್ತಾರೆ.

ಸಾರಿಕಾ ಅವರಿಗೆ ಬೈ ಹೇಳಿ ಕಳಿಸಿ ಕೊಟ್ಟು, ಕೊನೆಗೂ ಒಂದು ಕೆಲಸ ಮತ್ತೆ ಫ್ರೆಂಡ್ಸ್ ಸಿಕ್ಕಿದಕ್ಕೆ ಸಂತೋಷ ಪಡ್ತಾಳೆ.

******

ನಯನಾ,,, ರೀ ಬನ್ನಿ ಊಟ ಮಾಡೋಣ.

ಅಭಿ ಅನಾ ಇಬ್ಬರು ರೂಮಿಂದ ಹೊರಗೆ ಬರ್ತಾ ಅನಾ ಏನ್ ಅಮ್ಮ ನೀನು ಪಪ್ಪಾ ಜೊತೆಗೆ ಸ್ವಲ್ಪ ಹೊತ್ತು ಆಟ ಆಡೋಕೆ ಬಿಡಲ್ಲ ನೀನು.

ನಯನಾ,,, ಅಪ್ಪ ಮಗಳು ಊಟ ಮಾಡಿ ಆಮೇಲೆ ಎಷ್ಟೋತ್ತು ಬೇಕಾದ್ರು ಆಟ ಆಡಿಕೊಳ್ಳಿ ಅಂತ ಹೇಳ್ತಾ ಅಭಿ ಗೆ ಊಟ ಬಡಿಸಿ ನಯನಾ ಕೂಡ ಊಟ ಬಡಿಸಿಕೊಂಡು ಪಕ್ಕದಲ್ಲಿ ಕೂತ್ಕೋತಾಳೆ. 

ಅನಾ ಅಪ್ಪ ಅಮ್ಮ ನ ಜೊತೆಗೆ ಮಾತಾಡ್ತಾ ಅವರು ಕೈ ತುತ್ತು ತಿನ್ನಿಸೋದನ್ನ ತಿಂತ ಇರ್ತಾಳೆ.

ಅಭಿ ಮೊಬೈಲ್ ರಿಂಗ್ ಆಗುತ್ತೆ. ಅನಾ ಪಪ್ಪಾ ನಾನ್ ತಗೋಬರ್ತೀನಿ ಅಂತ ಓಡಿ ಹೋಗಿ ಮೊಬೈಲ್ ತೆಗೆದು ಕೊಂಡು ಮಾತಾಡ್ತಾ ಡೈನಿಂಗ್ ಟೇಬಲ್ ಹತ್ತಿರ ಬರ್ತಾ ಪಪ್ಪಾ ಪ್ರಿಯಾ ಆಂಟಿ ಅಂತ ಕೊಡ್ತಾಳೆ. 

ಅಭಿ,,, ಅ ಪ್ರಿಯಾ ಆಂಟಿ ಹೇಳಿ ಇಷ್ಟೋತ್ತಲ್ಲಿ ಕಾಲ್ ಮಾಡಿದ್ದೀರಾ ಏನ್ ವಿಷಯ.

ಪ್ರಿಯಾ,,, ಲೋ ನಿನಗೆ ನಾನು ಆಂಟಿ ನ ಅಂತ ಸ್ವಲ್ಪ ಕೋಪದಲ್ಲಿ ಕೇಳ್ತಾಳೆ.

ಅಭಿ,,, ನಗ್ತಾ ಹೇಳು ಏನ್ ವಿಷಯ.

ಪ್ರಿಯಾ,, ಅದು ನಾಳೆ ಒಂದು ಹುಡುಗಿ, ಕೆಲಸಕ್ಕೆ ಬರ್ತಾಳೆ ಅಂತ ಹೇಳಿದ್ಲು ಅದಕ್ಕೆ ನಿನಗೆ ಹೇಳೋಣ ಅಂತ ಕಾಲ್ ಮಾಡಿದೆ. 

ಅಭಿ,,, ಇದನ್ನ ಹೇಳೋಕೆ ಇಷ್ಟೋತ್ತಲಿ ಕಾಲ್ ಮಾಡಿದ, ನಿನಗೆ ಮೊದಲೇ ಹೇಳಿಲ್ವಾ ನಿನಗೆ ಯಾರು ಸರಿ ಅಂತ ಅನ್ನಿಸ್ತಾರೋ ಅವರನ್ನ ಕೆಲಸಕ್ಕೆ ಸೇರಿಸ್ಕೊ ಅಂತ ಮತ್ತೆ ನನ್ನ ಕೇಳೋದು ಏನಕ್ಕೆ. 

ಪ್ರಿಯಾ,,, ಅದು ಹಾಗಲ್ವೋ ನಿನಗೂ ಒಂದು ಮಾತು ಹೇಳೋಣ ಅಂತ ಹೇಳ್ದೆ.

ಅಭಿ,,, ಸಂತೋಷ, ಊಟ ಮಾಡಿ ಆರಾಮಾಗಿ ನಿದ್ದೆ ಮಾಡು, ಗುಡ್ ನೈಟ್. ಅಂತ ಹೇಳಿ ಕಾಲ್ ಕಟ್ ಮಾಡಿ  ಮೊಬೈಲ್ ನ ಪಕ್ಕಕ್ಕೆ ಇಟ್ಟು  ಊಟ ಮಾಡ್ತಾನೆ.

ನಯನಾ ಏನು ವಿಷಯ ಅಂತ ಕೇಳೋಕೆ ಹೋಗಲ್ಲ, ಕಾರಣ ಅವಳಿಗೆ ಅದರ ಅವಶ್ಯಕತೆ ಇರೋದಿಲ್ಲ. ಅನಾ ಅಭಿ ಫ್ಯಾಮಿಲಿ ಅಷ್ಟೇ ಅವಳ ಪ್ರಪಂಚ. 

**********

ಬೆಳಿಗ್ಗೆ ಎದ್ದು ರೆಡಿ ಆಗಿ ಅಭಿ ತಿಂಡಿ ತಿಂದು ಬೈಕ್ ಅಲ್ಲಿ ಸೂಪರ್ ಮಾರ್ಕೆಟ್ ಕಡೆಗೆ ಹೋಗ್ತಾನೆ.

ಸಾರಿಕಾ ನ ಬೈಕ್ ಅಲ್ಲಿ ಕರೆದುಕೊಂಡು ಬಂದ ಪ್ರಿಯಾ, ತೇಜು, ಮೇಘ, ಸೂಪರ್ ಮಾರ್ಕೆಟ್  ಒಳಗೆ ಕರೆದುಕೊಂಡು ಬಂದು ನಿರಂಜನ್ ನ ರಾಜ್ ನ ಪರಿಚಯ ಮಾಡಿಸಿ, ತೇಜು ಜೊತೆಗೆ ಇರೋಕೆ ಹೇಳಿ ತೇಜು ಗೆ ಏನೇನ್ ಕೆಲಸ ಅಂತ ಹೇಳಿಕೊಂಡು ಅಂತ ಹೇಳಿ ಪ್ರಿಯಾ ಅವಳ ಕೆಲಸ ನೋಡಿಕೊಳ್ಳೋಕೆ ಹೋಗ್ತಾಳೆ. ತೇಜು ಸಾರಿಕಾ ನ ಕರೆದುಕೊಂಡು ಹೋಗಿ ಏನೇನ್ ಕೆಲಸ ಮಾಡಬೇಕು ಅಂತ ಹೇಳಿ ಕೊಡೋಕೆ ಹೋಗ್ತಾಳೆ. 

ಅಭಿ ಬೈಕ್ ನಿಲ್ಲಿಸಿ ಸೂಪರ್ ಮಾರ್ಕೆಟ್ ಒಳಗೆ ಹೋಗ್ತಾನೆ. ಕೌಂಟರ್ ಅಲ್ಲಿ ಇದ್ದಾ ನಿರಂಜನ್ ಮೇಘ ರಾಜ್ ಅಭಿ ಗೆ ಹಾಯ್ ಹೇಳ್ತಾರೆ.

ಅಭಿ,,, ಹಾಯ್, ಎಲ್ಲಿ ಅವರಿಬ್ಬರೂ.

ಮೇಘ,,, ಪ್ರಿಯಾ ಅವಳ ಕೆಲಸ ಮಾಡೋಕೆ ಹೋದಳು. ತೇಜು ಹೊಸದಾಗಿ ಕೆಲಸಕ್ಕೆ ಬಂದ ಹುಡುಗಿಗೆ ಕೆಲಸ ಹೇಳಿ ಕೊಡೋಕೆ ಹೋದಳು. 

ಅಭಿ,,, ಸರಿ ಅಂತ ಆಫೀಸ್ ಗೆ ಹೋಗ್ತಾನೆ. 

ಸ್ವಲ್ಪ ಸಮಯದ ನಂತರ ಪ್ರಿಯಾ ಆಫೀಸ್ ರೂಮ್ ಗೆ ಬಂದು ಅಭಿ ಅಂತ ಕರೀತಾಳೆ.

ಅಭಿ,,, ಪ್ರಿಯಾ ನ ನೋಡಿ ಏನ್ ಮೇಡಂ ಕಾಣಿಸಲೇ ಇಲ್ಲಾ ಎಲ್ಲೋಗಿದ್ರಿ.

ಪ್ರಿಯಾ,,, ಅದ ನೆನ್ನೆದು ಸ್ವಲ್ಪ ಕೆಲಸ ಬಾಕಿ ಇತ್ತು ಅದನ್ನ ಮುಗಿಸಿಕೊಂಡು ಬರೋಣ ಅಂತ ಹೋದೆ. ಅಂದಹಾಗೆ ಹೊಸದಾಗಿ ಕೆಲಸಕ್ಕೆ ಬಂದ ಹುಡುಗಿ ನ ನೋಡಿದ.

ಅಭಿ,,, ಇಲ್ವೆ ತೇಜು ಜೊತೆಗೆ ಹೋಗಿದ್ದಾರೆ ಅಂತ ಹೇಳಿದ್ಲು ಮೇಘ. ಅದಕ್ಕೆ ಬಂದು ಬಿಟ್ಟೆ.

ಪ್ರಿಯಾ,,,  ಪಾಪ ಕಣೋ ಅ ಹುಡುಗಿ, ತೇಜು ಅವರ ಮನೇಲಿ ನೇ ಬಾಡಿಗೆ ಗೆ ಇರೋದು, ಅ ಹುಡುಗಿ ಬಗ್ಗೆ ತೇಜು ಅವರ ಅಪ್ಪ ಅಮ್ಮ ಹೇಳಿದ್ದನ್ನ ಕೇಳಿ ನನಗೆ ಅಯ್ಯೋ ಪಾಪ ಅನ್ನಿಸ್ತು, ಅಷ್ಟು ನೋವನ್ನ ಅನುಭವಿಸಿದ್ದಾಳೆ ಅ ಹುಡುಗಿ, ಅಂತ ಹೇಳಿ ಸಾರಿಕಾ ಬಗ್ಗೆ ಹೇಳ್ತಾಳೆ.

ಅಭಿ ಗೆ ಪ್ರಿಯಾ ಹೇಳಿದ್ದನ್ನ ಕೇಳಿ ಅವನಿಗೆ ಗೊತ್ತಿಲ್ಲದೇ ಅವನ ಮನಸ್ಸಿಗೆ ತುಂಬಾ ನೋವಾಗುತ್ತೆ. 

ಅಭಿ,,, ಅ ಹುಡುಗಿ ಹೆಸರು.

ಪ್ರಿಯಾ,,, ಸಾರಿಕಾ ಅಂತ.

ಅಷ್ಟೇ ಅಭಿ ಅ ಹೆಸರನ್ನ ಕೇಳಿದ ಮರು ಕ್ಷಣ ಕೂತಿದ್ದವನು ಎದ್ದು ಸಾರಿಕಾ ನ ನೋಡೋಕೆ ಓಡ್ತಾನೆ.

ಪ್ರಿಯಾ ಗೆ ಒಂದು ಅರ್ಥ ಆಗೋದೇ ಇಲ್ಲಾ ಪ್ರಿಯಾ ಕೂಡ ಅಭಿ ಹಿಂದೆ ನೇ ಹೋಗ್ತಾಳೆ.

ಅಭಿ ಓಡೋಡಿ ಬರ್ತಾ ಸಡನ್ ಆಗಿ ನಿಂತು ಬಿಡ್ತಾನೆ.  

ತೇಜು ಜೊತೆಗೆ ಬರ್ತಾ ಇದ್ದಾ ಸಾರಿಕಾ ಸಡನ್ ಆಗಿ ಅವ್ರ ಮುಂದೆ ಯಾರೋ ನಿಂತ್ರು ಅಂತ ಅಲ್ಲೇ ನಿಂತು ಅ ವ್ಯಕ್ತಿ ನ ನೋಡ್ತಾಳೆ. ಅಷ್ಟೇ ಹಾಗೇ ನೋಡ್ತಾ ನಿಂತು ಬಿಡ್ತಾಳೆ  ಗೊತ್ತಿಲ್ಲದ ಹಾಗೇ ಅವಳ ಕಣ್ಣಲ್ಲಿ ಕಣ್ಣೀರು ತುಂಬಿ ಕೊಂಡು ಹೊರಗೆ ಬರೋಕೆ ಶುರು ಮಾಡುತ್ತೆ. 

ಅಭಿ ಹಿಂದೇನೆ ಬಂದು ಕಲ್ಲಿನಂತೆ ನಿಂತಿದ್ದ ಅಭಿ ನ ನೋಡಿ ಅವನ ಎದುರು ಇರೋ ಸಾರಿಕಾ ನ ನೋಡ್ತಾಳೆ ಅವಳು ಕೂಡ ಅಭಿ ನ ಹಾಗೇ ನೋಡ್ತಾ ಕಣ್ಣಲ್ಲಿ ಕಣ್ಣೀರು ಸುರಿಸ್ತಾ ಇರೋದನ್ನ ನೋಡ್ತಾಳೆ. ಒಂದು ಕ್ಷಣ ಅವಳಿಗೆ ಏನು ಅರ್ಥ ನೇ ಆಗೋದಿಲ್ಲ. ಬಟ್ ಇಬ್ಬರ ಮಧ್ಯ ಏನೋ ವಿಷಯ ಇದೆ ಅನ್ನೋದು ಮಾತ್ರ ಅರ್ಥ ಆಗುತ್ತೆ. 

ಸಾರಿಕಾ ನ ನೋಡದ ತೇಜು,, ಅಭಿ ನ ನೋಡಿಸ್ತಾ  ಸಾರಿಕಾ ಇವನು ಅಭಿ ಅಂತ, ಈ ಸೂಪರ್ ಮಾರ್ಕೆಟ್ ಗೆ ಓನರ್, ಅಷ್ಟೇ ಅಲ್ಲ ಒಬ್ಬ ಒಳ್ಳೆ ಸ್ನೇಹಿತ ನಮಗೆ, ಅಂತ ಹೇಳ್ತಾ ಪರಿಚಯ ಮಾಡಿಸ್ತಾಳೆ. ಅದ್ರೆ ಸಾರಿಕಾ ಗೆ ಅಭಿ ಕಣ್ಣುಗಳು ಅವಳನ್ನ ಸಾವಿರ ಪ್ರಶ್ನೆ ಗಳು ಕೇಳ್ತಾ ಇದೆ ಅನ್ನೋದೇ ಅವಳಿಗೆ ಕಾಣಿಸ್ತಾ ಇದೆ. 

ಪ್ರಿಯಾ ಇಬ್ಬರು ಹೀಗೆ ಇರೋದನ್ನ ನೋಡಿ ಪರಿಸ್ಥಿತಿ ನ ಬದಲಾಯಿಸ ಬೇಕು ಅಂತ. ಅಭಿ ಕೈ ಇಡಿದು ಅಭಿ ಅಂತ ಸ್ವಲ್ಪ ಜೋರಾಗಿ ಕರೀತಾಳೆ. ಅಭಿ ಪ್ರಿಯಾ ಮಾತಿಗೆ ವಾಸ್ತವಕ್ಕೆ ಬಂದು ಅವಳ ಕಡೆಗೆ ತಿರುಗಿ ನೋಡ್ತಾನೆ. 

ಪ್ರಿಯಾ,,, ಅಭಿ ನಾನ್ ಹೇಳ್ದೆ ಅಲ್ವಾ, ಹೊಸದಾಗಿ ಕೆಲಸಕ್ಕೆ ಒಂದು ಹುಡುಗಿ ಬರ್ತಾಳೆ ಅಂತ, ಇವರೆ ಸಾರಿಕಾ ಅಂತ ಹೇಳ್ತಾ, ಅವನ ಕೈ ಇಡಿದು ಸಮಾಧಾನ ಮಾಡ್ಕೊ ಅನ್ನೋ ರೀತಿ ಸನ್ನೆ ಮಾಡ್ತಾ, ತೇಜು ಕಡೆಗೆ ನೋಡಿ ತೇಜು ನೀನು ಸಾರಿಕಾ ಗೆ ಬಿಲ್ಲಿಂಗ್ ಮಾಡೋದು ಹೇಗೆ ಅಂತ ತೋರಿಸು ಸ್ವಲ್ಪ ಕೆಲಸ ಇದೆ ಆಮೇಲೆ ಬಂದು ಅಭಿ ಮಾತಾಡ್ತಾನೆ ಅಂತ ಹೇಳ್ತಾ ಅಭಿ ನ ಕರ್ಕೊಂಡು ಅಲ್ಲಿಂದ ಆಫೀಸ್ ರೂಮ್ ಕಡೆಗೆ ಹೋಗ್ತಾಳೆ.

ಸಾರಿಕಾ ಗೆ ಅಭಿ ನ ನೋಡಿ ಇಷ್ಟು ದಿನ ತಡೆದುಕೊಂಡು ಇದ್ದಾ ನೋವೆಲ್ಲಾ ಒಟ್ಟಿಗೆ ಬಂದು ಕುತ್ತಿಗೆ ಅಲ್ಲಿ ಸಿಕ್ಕಿ ಹಾಕಿ ಕೊಳ್ಳುತ್ತೆ. ಜೋರಾಗಿ ಅಳಬೇಕು ಅಂತ ಅನ್ನಿಸಿ ಅಲ್ಲಿಂದ ವಾಶ್ರೂಮ್ ಕಡೆಗೆ ಹೊರಟು ಹೋಗ್ತಾಳೆ.

@@@@@@@@@@@@@@@@@@@@@@@@@