Abhinayanaa - 29 in Kannada Love Stories by S Pr books and stories PDF | ಅಭಿನಯನಾ - 29

The Author
Featured Books
Categories
Share

ಅಭಿನಯನಾ - 29

   ಅಭಿ ಶೇಖರ್ ಚೈತ್ರ ಸಾರಿಕ ನಾಲಕ್ಕು ಜನ ಥೀಯೇಟರ್ ಒಳಗೆ ಬರ್ತಾರೆ. ನಾಲಕ್ಕು ಜನ ಅವರವರ ಸೀಟ್ ಅಲ್ಲಿ ಕೂತ್ಕೋತಾರೆ. ಮೂವಿ ಸ್ಟಾರ್ಟ್ ಆಗುತ್ತೆ. ಸಾರಿಕ ಪಕ್ಕದಲ್ಲಿ ಅಭಿ ಕೂತಿರ್ತಾನೆ ಅಭಿ ಪಕ್ಕದಲ್ಲಿ ಸೀಟ್ ಖಾಲಿ ಇರುತ್ತೆ. 15 ನಿಮಿಷ ನೋಡಿ ಯಾರು ಬಂದಿಲ್ಲ ಅಂತ ಹೇಳಿ ಅಭಿ ಹೋಗಿ ಅ ಖಾಲಿ ಸೀಟ್ ಅಲ್ಲಿ ಹೋಗಿ ಕುತ್ಕೊಂಡು ಮೂವಿ ನೋಡ್ತಾ ಇರ್ತಾನೆ. ಕೆಲವು ನಿಮಿಷಗಳ ನಂತರ ಸಾರಿಕ ಅವಳು ಕೂತಿದ್ದ ಸೀಟ್ ನ ಬಿಟ್ಟು ಬಂದು ಅಭಿ ಕೂತಿದ್ದ ಸೀಟ್ ಗೆ ಬಂದು ಕೂತ್ಕೋತಾಳೆ. 

ಅಭಿ,,, ಯಾಕ್ ಮೇಡಂ ಅಲ್ಲಿ ಸೀಟ್ ಚೆನ್ನಾಗಿ ಇಲ್ವಾ..

ಸಾರಿಕ,,, ಸೀಟ್ ಏನೋ ಚೆನ್ನಾಗಿ ಇದೆ, ಬಟ್ ನನಗೆ ಕಂಫರ್ಟ್ ಫೀಲ್ ಆಗಿಲ್ಲ ಅದಕ್ಕೆ ಇಲ್ಲಿಗೆ ಬಂದೆ, ನೀವ್ ಏನಕ್ಕೆ ಎದ್ದು ಈ ಸೀಟ್ ಗೆ ಬಂದ್ರಿ.

ಅಭಿ,,, ಅದ ಹಾಗೇ ಸುಮ್ನೆ ಅಂತ ಹೇಳ್ತಾ ಮೂವಿ ನೋಡ್ತಾ ನೇ.

ಸಾರಿಕ,,, ಅಭಿ ನ ನೋಡ್ತಾ ಐಮ್ ಸಾರೀ.

ಅಭಿ,,, ಸಾರೀ ನ ಏನಕ್ಕೆ?

ಸಾರಿಕ,,, ಅದು ಅವತ್ತು ನಿಮ್ಮನ್ನ ಬಾಯಿಗೆ ಬಂದ ಹಾಗೇ ಬೈದು ಬಿಟ್ಟೆ ಅಲ್ವಾ ಅದಕ್ಕೆ.

ಅಭಿ,,, ನಗ್ತಾ ನೀವು ಇನ್ನು ಅದನ್ನ ಮನಸಲ್ಲೇ ಇಟ್ಕೊಂಡು ಇದ್ದೀರಾ ನಾನ್ ಅವತ್ತೇ ಮರೆತು ಹೋದೆ. 

ಸಾರಿಕ,,, ನೀವೇನೋ ಸಾರೀ ಕೇಳಿ ಮರೆತು ಬಿಟ್ರಿ, ಬಟ್ ನಾನ್ ಸಾರೀ ಕೇಳಿಲ್ಲ ಅಲ್ವಾ. 

ಅಭಿ,,, ಓ ಹಾಗೇ, ಇಟ್ಸ್ ಓಕೆ ಮೂವಿ ನೋಡಿ ಅಂತ ಹೇಳ್ತಾ ಮೂವಿ ನೋಡ್ತಾನೆ. 

ಮೂವಿ ಇಂಟರ್ವಲ್ ಬಿಡುತ್ತೆ. ಶೇಖರ್ ಹೋಗಿ ಸ್ನಾಕ್ಸ್ ಕೂಲ್ ಡ್ರಿಂಕ್ಸ್ ತಗೊಂಡು ಬರ್ತಾನೆ. ಚೈತ್ರ ಕೂಲ್ ಡ್ರಿಂಕ್ಸ್ ಮತ್ತೆ ಸ್ನಾಕ್ಸ್ ನ ಸಾರಿಕ ಗೆ ಕೊಟ್ಟು ಅಭಿ ಗೆ ಕೊಡೋಕೆ ಹೇಳ್ತಾ ಶೇಖರ್ ಪಕ್ಕ ಕೂತ್ಕೋತಾಳೆ.

ಸಾರಿಕ,,, ಅಭಿ ಕಡೆಗೆ ನೋಡ್ತಾಳೆ ಅಭಿ ಕಣ್ ಮುಚ್ಕೊಂಡು ನಿದ್ದೆ ಮಾಡ್ತಾ ಇರ್ತಾನೆ. ಅಭಿ ಅವರೇ ಅಂತ ಎರಡು ಸರಿ ಕರೀತಾಳೆ.

ಅಭಿ,,, ( ಎಚ್ಚರವಾಗಿ ಸಾರಿಕ ಕಡೆ ನೋಡ್ತಾ) ಹೇಳಿ ಮೇಡಂ.

ಸಾರಿಕ,,, ತಗೋಳಿ ಅಂತ ಹೇಳಿ ಸ್ನಾಕ್ಸ್ ಮತ್ತೆ ಕೂಲ್ ಡ್ರಿಂಕ್ಸ್ ಕೊಡ್ತಾಳೆ.

ಅಭಿ ಥ್ಯಾಂಕ್ಸ್ ಅಂತ ಹೇಳಿ  ತೆಗೆದುಕೊಂಡು ತಿಂತ ಕೂತ್ಕೋತಾನೆ. ಅಷ್ಟರಲ್ಲಿ ಅವನ ಮೊಬೈಲ್ ರಿಂಗ್ ಆಗುತ್ತೆ.

ಅಭಿ ನಂಬರ್ ನೋಡಿ ಕಾಲ್ ಪಿಕ್ ಮಾಡಿ, ಅ ದೇವಮ್ಮ ಹೇಳು. 

ದೇವಮ್ಮ ಕಾಲ್ ಅಲ್ಲಿ,, ಲೋ ನಿಮ್ಮಜ್ಜಿ ಉಳಿಯೋದು ಅನುಮಾನ ಅಂತ ಇದ್ದಾರೆ, ಆಫೀಸ್ ಗೆ ರಜೆ ಹೇಳ್ಬಿಡು ಒಂದು ಎರಡು ದಿನ, ನಿಮ್ ದೊಡ್ಡಮ್ಮ ಮಗ ಬರ್ತಾನೇ ಅವನ ಜೊತೆಗೆ ಬಂದು ಬಿಡು ಸರಿನಾ. 

ಅಭಿ,,, ಹ್ಮ್ ಸರಿ ನಾನ್ ಬರ್ತೀನಿ, ನೀನು ಜಾಸ್ತಿ ಟೆನ್ಶನ್ ಆಗೋಕೆ ಹೋಗಬೇಡ ಸರಿನಾ ಹುಷಾರು ಅಂತ ಹೇಳಿ ಕಾಲ್ ಕಟ್ ಮಾಡಿ, ಅವನ ದೊಡ್ಡಮ್ಮ ನ ಮಗನಿಗೆ ಕಾಲ್ ಮಾಡ್ತಾನೆ.

ಅಭಿ,,, ಲೋ ಎಲ್ಲಿದ್ದೀಯ? 

ಮದನ್,,,, ಕಾರ್ ಡ್ರೈವ್ ಮಾಡ್ತಾ ಇದ್ದೀನಿ.

ಅಭಿ,,, ಹೌದ ಅಮ್ಮ ಕಾಲ್ ಮಾಡಿದ್ಲು.

ಮದನ್,,, ಅ ನನಗೂ ಕಾಲ್ ಮಾಡಿದ್ರು, ಡ್ಯೂಟಿ ಮುಗಿಸ್ಕೊಂಡು ಬರ್ತೀನಿ ಹೋಗೋಣ ಒಟ್ಟಿಗೆ. 

ಅಭಿ,,, ಎಷ್ಟೋತ್ತು ಆಗುತ್ತೆ.

ಮದನ್,,, 10 ಗಂಟೆ ಆಗುತ್ತೆ, 

ಅಭಿ,,, ಸರಿ ಡ್ಯೂಟಿ ಮುಗಿಸಿಕೊಂಡು ಕಾಲ್ ಮಾಡು ಅಂತ ಹೇಳಿ ಕಾಲ್ ಕಟ್ ಮಾಡಿ ಸ್ನಾಕ್ಸ್ ತಿಂತಾನೆ.

ಇಷ್ಟೋತ್ತು ಅಭಿ ಮಾತಾಡಿದ್ದನ್ನ ಕೇಳಿಸಿಕೊಂಡ ಸಾರಿಕ,,, ಅಭಿ ಕಡೆಗೆ ನೋಡ್ತಾ, ಎಲ್ಲಾ ಓಕೆ ಅಲ್ವಾ ಏನಾದ್ರೂ ಪ್ರಾಬ್ಲಮ್ ಅ ಅಂತ ಕೇಳ್ತಾಳೆ.

ಅಭಿ,,, ಹ್ಮ್ ಎಲ್ಲಾ ಓಕೆ.

ಸಾರಿಕ,,, ಮತ್ತೆ ಯಾರಿಗೋ ಟೆನ್ಶನ್ ಆಗಬೇಡ ಅಂತ ಹೇಳಿದ್ರಿ, ಮತ್ತೆ ಕಾಲ್ ಮಾಡಿ ಮಾತಾಡಿದ್ರಿ ಎಷ್ಟೋತ್ತಿಗೆ ಬರ್ತೀಯ ಅಂತ ಕೇಳಿದ್ರಿ. 

ಅಭಿ,,, ಅದ ಅಜ್ಜಿ ಗೆ ಹುಷಾರಿಲ್ಲ ಇಗ್ಲೋ ಹಾಗ್ಲೋ ಅಂತ ಇದ್ದಾರೆ ಅದಕ್ಕೆ ಅಮ್ಮ ಕಾಲ್ ಮಾಡಿದ್ರು. ಅದಕ್ಕೆ ಟೆನ್ಶನ್ ಆಗಬೇಡ ಅಂತ ಹೇಳ್ದೆ. ಆಫೀಸ್ ಗೆ ರಜೆ ಮಾಡಿ ಬರೋಕೆ ಹೇಳಿದ್ರು. ನನ್ನ ಬ್ರದರ್ ಗೆ ಕಾಲ್ ಮಾಡಿ ಯಾವಾಗ ಹೋಗೋಣ ಅಂತ ಕೇಳ್ದೆ ಡ್ಯೂಟಿ ಇದೆ ಮುಗಿಸಿಕೊಂಡು ಹೋಗೋಣ ಅಂತ ಹೇಳ್ದ ಅಷ್ಟೇ.

ಸಾರಿಕ,,, ಹೌದ, ನಿಮಗೆ ಅರ್ಜೆಂಟ್ ಇದ್ರೆ ಹೋಗಿ ಪರ್ವಾಗಿಲ್ಲ. ನಾನು ನನ್ನ ಫ್ರೆಂಡ್ ಆಟೋ ದಲ್ಲಿ ಹೋಗ್ತಿವಿ.

ಅಭಿ,,, ಅರ್ಜೆಂಟ್ ಏನು ಇಲ್ಲಾ ನನ್ನ ಬ್ರದರ್ ಡ್ಯೂಟಿ ಮುಗಿಯೋದು 10 ಗಂಟೆ ಗೆ, ಇನ್ನು ತುಂಬಾ ಟೈಮ್ ಇದೆ ಮೂವಿ ನೋಡಿ ಅಂತ ಹೇಳ್ತಾನೆ. 

ಸಾರಿಕ,,, ಸರಿ ಅಂತ ಹೇಳಿ ಮೂವಿ ಕಡೆಗೆ ಗಮನ ಕೊಡ್ತಾಳೆ.

ಮೂವಿ ಮುಗಿಯುತ್ತೆ. ನಾಲಕ್ಕು ಜನ ಥೀಯೇಟರ್ ನಿಂದ ಹೊರಗೆ ಬರ್ತಾರೆ. ಶೇಖರ್ ಮಚ್ಚಾ ಊಟ ಮಾಡ್ಕೊಂಡು ಹೋಗೋಣ. ಅಭಿ ಸರಿ ನಡಿ ಅಂತ ಹೇಳಿ ನಾಲಕ್ಕು ಜನ ಹೋಟೆಲ್ ಗೆ ಹೋಗ್ತಾರೆ. 

ಶೇಖರ್ ನಾಲಕ್ಕು ಜನಕ್ಕೆ ಆರ್ಡರ್ ಮಾಡೋಕೆ ಹೋಗ್ತಾನೆ, ಅಭಿ ನನಗೆ ಬೇಡ ಅಂತ ಶೇಖರ್ ಗೆ ಹೇಳ್ತಾನೆ. ಶೇಖರ್ ಅಭಿ ಮಾತಿನಂತೆ ಮೂರು ಜನಕ್ಕೆ ಫುಡ್ ಆರ್ಡರ್ ಮಾಡ್ತಾನೆ.  ಸಾರಿಕ ಅಭಿ ನ ನೋಡಿ ನೀವು ಊಟ ಮಾಡೋದಿಲ್ವಾ ಅಂತ ಕೇಳ್ತಾಳೆ. ಅಭಿ ನನ್ನ ಬ್ರದರ್ ಬರ್ತಾನೇ ಅಲ್ವಾ ಅವನ ಜೊತೆ ಮಾಡ್ತೀನಿ ನೀವು ಊಟ ಮಾಡಿ ಅಂತ ಹೇಳ್ತಾನೆ..

ಸ್ವಲ್ಪ ಸಮಯದ ನಂತರ ನಾಲಕ್ಕು ಜನ ಹೋಟೆಲ್ ನಿಂದ ಹೊರಗೆ ಬರ್ತಾರೆ. ಚೈತ್ರ ಶೇಖರ್ ಪಿಜಿ ಹತ್ತಿರ ಡ್ರಾಪ್ ಮಾಡು ನಮ್ಮನ್ನ ಅಂತ ಹೇಳ್ತಾಳೆ. ಶೇಖರ್ ಸರಿ ನಡೀರಿ ಅಂತ ಹೇಳಿ ನಾಲಕ್ಕು ಜನ ಪಿಜಿ ಹತ್ತಿರ ಬೈಕ್ ಅಲ್ಲಿ ಬರ್ತಾರೆ. ಚೈತ್ರ ಶೇಖರ್ ಹತ್ತಿರ ಮಾತಾಡ್ತಾ ಇದ್ರೆ 

ಸಾರಿಕ,,, ಅಭಿ ನ ನೋಡಿ ನೀವು ಊರಿಗೆ ಹೋಗಬೇಕು ಅಂತ ಇದ್ರಿ ಅಲ್ವಾ ಹೋಗಿ, ನಿಮ್ ಫ್ರೆಂಡ್ ಬರೋದು ಲೇಟ್ ಆಗಬಹುದು.

ಅಭಿ,,, ನನ್ನ ಬ್ರದರ್ ಬರೋಕೆ ಇನ್ನು ಟೈಮ್ ಇದೆ ಪರ್ವಾಗಿಲ್ಲ, ನೀವು ಹೋಗಿ.

ಸಾರಿಕ,,, ಓಕೆ ಬೈ ಅಂತ ಹೇಳಿ ಪಿಜಿ ಒಳಗೆ ಹೋಗ್ತಾಳೆ.

ಕೆಲವು ನಿಮಿಷಗಳ ನಂತರ ಶೇಖರ್ ಮಚ್ಚಾ ಹೋಗೋಣ್ವಾ, ಅಭಿ ಹ್ಮ್ ನಡಿ ಅಂತ ಹೇಳಿ ಬೈಕ್ ಸ್ಟಾರ್ ಮಾಡಿ ಮನೆ ಕಡೆಗೆ ಬರ್ತಾರೆ.

ರಾತ್ರಿ 10 ಗಂಟೆ ಗೆ ಮದನ್ ಕಾಲ್ ಮಾಡ್ತಾನೆ.

ಅಭಿ ಮನೆ ಲಾಕ್ ಮಾಡಿ, ಕಾಲ್ ಪಿಕ್ ಮಾಡಿ ಬಂದೆ ಅಂತ ಹೇಳಿ ಕಾರ್ ಹತ್ತಿರ ಹೋಗ್ತಾನೆ.

ಮದನ್ ಲೋ ಕಾರ್ ನೀನೇ ಓಡಿಸು.

ಅಭಿ,, ಸರಿ ಅಂತ ಹೇಳಿ ಡ್ರೈವಿಂಗ್ ಸೀಟ್ ಅಲ್ಲಿ ಕೂತ್ಕೋತಾನೆ.

ಮದನ್,, ಊಟ ಮಾಡಿದ.

ಅಭಿ,,, ಇನ್ನು ಇಲ್ಲಾ.

ಮದನ್ ಸರಿ ಹೋಗ್ತಾ ಪಾರ್ಸೆಲ್ ತಗೊಂಡು ಹೋಗೋಣ.

ಅಭಿ,,, ಸರಿ ಅಂತ ಹೇಳಿ ಕಾರ್ ಸ್ಟಾರ್ಟ್ ಮಾಡಿ ಅಜ್ಜಿ ಊರಿನ ಕಡೆಗೆ ಹೋಗ್ತಾರೆ.

ಒಂದು ಟೌನ್ ಏರಿಯಾ ದಲ್ಲಿ ಕಾರ್ ನಿಲ್ಲಿಸಿ. ಅಭಿ ದೇವಮ್ಮ ಗೆ ಕಾಲ್ ಮಾಡ್ತಾನೆ. 

ದೇವಮ್ಮ,,, ಕಾಲ್ ಪಿಕ್ ಮಾಡಿ ಹೇಳೋ 

ಅಭಿ,,, ಟೌನ್ ಅಲ್ಲಿ ಇದ್ದೀವಿ ಊಟ ಟೀ ಕಾಫಿ ಏನಾದ್ರೂ ಬೇಕಾ.

ದೇವಮ್ಮ,,, ಮಕ್ಕಳು ಇದ್ದಾರೆ, ಅವರಿಗೆ ಊಟ ತೆಗೆದುಕೊಂಡು, ಹಾಲು ಟೀ ಪುಡಿ ಸಕ್ಕರೆ ತಗೊಂಡು ಬಾ  ಸರಿ ನ.

ಅಭಿ,,, ಸರಿ ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ.

ಮದನ್, ಕವರ್ ಅಲ್ಲಿ ಡ್ರಿಂಕ್ಸ್ ತಗೊಂಡು ಬಂದು ಬ್ಯಾಕ್ ಸೀಟ್ ಅಲ್ಲಿ ಇಟ್ಟು. ಕಾಲ್ ಮಾಡಿದ್ದ ಏನ್ ಬೇಕಂತೆ.

ಅಭಿ,,, ಹೇಳ್ತಿನಿ ಬಾ ಅಂತ ಹೇಳಿ ಹೋಟೆಲ್ ಗೆ ಹೋಗಿ 10 ಪ್ಲೇಟ್ ಊಟ ತೆಗೆದುಕೊಂಡು, ಟೀ ಕಾಫಿ ಹಾಲು ಸಕ್ಕರೆ ತಗೊಂಡು, ಮತ್ತೆ ಊರಿನ ಕಡೆಗೆ ಪ್ರಯಾಣ ಮಾಡ್ತಾರೆ. 

ಅಭಿ ಮದನ್ ಅಜ್ಜಿ ಊರಿಗೆ ಬಾರೋ ಅಷ್ಟೋತ್ತಿಗೆ ರಾತ್ರಿ 1130 ಆಗಿರುತ್ತೆ. ಅಷ್ಟ್ರಲ್ಲಿ ಅವರ ಅಜ್ಜಿಯ ಪ್ರಾಣ ಪಕ್ಷಿ ಹಾರಿ ಹೋಗಿರುತ್ತೆ.  ಎಲ್ಲರೂ ಅಳ್ತಾ ಕೂತಿರ್ತಾರೆ. ಅಭಿ ಮದನ್ ಇಬ್ಬರು ಹೋಗಿ ಅಜ್ಜಿ ಯ ದರ್ಶನ ಪಡೆದು ಎಲ್ಲರಿಗೂ ಸಮಾಧಾನ ಮಾಡಿ, ಮಕ್ಕಳಿಗೆ ಊಟ ತಿನ್ನಿಸಿ ಅಂತ ಹೇಳಿ ಊಟ ಕೊಟ್ಟು ಅಲ್ಲಿ ಮಾಡಬೇಕಾದ ಕೆಲಸದ ಕಡೆ ಗಮನ ಕೊಡ್ತಾರೆ. ಕೆಲಸ ಮುಗಿಯೋ ಅಷ್ಟೋತ್ತಿಗೆ ಮಧ್ಯ ರಾತ್ರಿ 1 ಗಂಟೆ ಆಗಿರುತ್ತೆ. ನಂತರ ಅಭಿ ಮದನ್ ಇಬ್ಬರು ಕಾರ್ ಅಲ್ಲಿ ಅಲ್ಲಿಂದ ಹೊರಟು ಸ್ವಲ್ಪ ದೂರ ಬಂದು ಕಾರ್ ನ ಸೈಡ್ ಗೆ ಹಾಕಿ ಡ್ರಿಂಕ್ಸ್ ಮಾಡೋಕೆ ಶುರು ಮಾಡ್ತಾರೆ. ಇಬ್ಬರು ಮಾತಾಡಿಕೊಂಡು ಡ್ರಿಂಕ್ಸ್ ನ ಫಿನಿಷ್ ಮಾಡಿ ಮತ್ತೆ ಅಜ್ಜಿ ಮನೆ ಹತ್ತಿರ ಹೋಗ್ತಾರೆ. ನೋಡ್ತಾ ಇದ್ದಾ ಹಾಗೇ ಬೆಳಿಗ್ಗೆ ಆಗುತ್ತೆ. ನಂತರ ದೊಡ್ಡವರು ಹೇಳಿದ ಹಾಗೇ ಅಭಿ ಮದನ್ ಇಬ್ಬರು ಕೆಲಸ ಮಾಡೋಕೆ ಶುರು ಮಾಡ್ತಾರೆ. ಸಂಜೆ ಅಷ್ಟೋತ್ತಿಗೆ ಕಾರ್ಯ ಮುಗಿದು ಹೋಗುತ್ತೆ. 

ಅಭಿ,,, ದೇವಮ್ಮ ನಾವು ಹೊರಡ್ತೀವಿ, 

ದೊಡ್ಡಮ್ಮ,, ಲೋ ಎಲ್ಲಿಗೆ ನೀವು ಹೋಗೋದು, ನಾಳೆ 3 ದಿನದ ಕಾರ್ಯ ಇದೆ, ಅದನ್ನ ಮುಗಿಸಿಕೊಂಡು ಹೋಗಿ, ಮತ್ತೆ 11 ದಿನದ ಕಾರ್ಯಕ್ಕೆ ಬನ್ನಿ, ನಾನು ನಿಮ್ಮಮ್ಮ ನಿಮ್ಮಕ್ಕ ಇಲ್ಲೇ ಇರ್ತೀವಿ. 

ದೇವಮ್ಮ,,, ಅಕ್ಕ ಅಷ್ಟು ದಿನ ಮನೇಲಿ ಅವನು ಒಬ್ನೇ ಇರಬೇಕು, ಅವನಿಗೆ ಕಷ್ಟ ಆಗುತ್ತೆ.

ದೊಡ್ಡಮ್ಮ,,, ಲೇ ಅವನೇನು ಇನ್ನು ಚಿಕ್ ಹುಡುಗನ, ಅವನಿಗೆ ಅಷ್ಟು ತೊಂದ್ರೆ ಏನಾದ್ರೂ ಇದ್ರೆ ನಮ್ ಮನೇಲಿ ಇರೋಕೆ ಹೇಳು, ಅಲ್ಲಿಂದಾನೆ ಕೆಲಸಕ್ಕೆ ಹೋಗೋಕೆ ಹೇಳು.

ದೊಡ್ಡಣ್ಣ,,, ಹೌದೋ ಕಾರ್ಯ ಮುಗಿಯುವ ವರೆಗೂ ನೀನು ನಮ್ ಮನೇಲಿ ಇರು. 

ದೊಡ್ಡತ್ತಿಗೆ,,, ಅಮ್ಮ ನೀವು ಏನು ಅವನ ಬಗ್ಗೆ ತಲೆ ಕೆಡಸ್ಕೊಬೇಡಿ, ಅಂತ ಹೇಳಿ ಅಭಿ ನಡಿ ನಮ್ ಮನೆಗೆ. ಏನೋ ಮನೆಗೆ ಹೊಸಬ ಅನ್ನೋ ತರ ಬಲವಂತ ಮಾಡಬೇಕ ನಿನಗೆ. 

ಅಭಿ,,, ಅತ್ತಿಗೆ ನಾನ್ ಯಾವಾಗ ಹೇಳಿದೆ, ನೀವ್ ನೀವೇ ಮಾತಾಡಿಕೊಂಡು ನನಗೆ ಹೇಳಿದ್ರೆ.

ದೊಡ್ಡತ್ತಿಗೆ,,,, ಅಲ್ವಾ ನಡಿ ಮುಚ್ಕೊಂಡು. ಅಂತ ಹೇಳಿ ಕಾರ್ ಕಡೆ ಹೋಗ್ತಾರೆ.

ಅಭಿ,,,(ಸ್ವಲ್ಪ ಕೋಪದಿಂದ ) ಅಮ್ಮ, ದೊಡ್ಡಮ್ಮ ಕಡೆಗೆ ನೋಡಿ, ಇಬ್ರು ನನ್ನ ಬೈಸೋದ್ರಲ್ಲೇ ಇರ್ತೀರ ಅಲ್ವಾ, ನಿಮ್ಮನ್ನ.

ದೊಡ್ಡಮ್ಮ,,, ಲೋ ಹೋಗು ಬಾಯಿ ಮುಚ್ಕೊಂಡು, ಅತ್ತಿಗೆ ಹತ್ತಿರ ಮಾತಾಡೋಕೆ ಧೈರ್ಯ ಇಲ್ಲಾ ನಮಗೆ ಹೇಳ್ತಾನೆ, ಹೋಗೋ.

ದೇವಮ್ಮ,,, ಹುಷಾರು.

ಅಭಿ,,, ಸರಿ ನೀವು ಹುಷಾರು ಅಂತ ಹೇಳಿ ಮದನ್ ಜೊತೆಗೆ ಕಾರ್ ಹತ್ತಿರ ಹೋಗ್ತಾನೆ. 

ದೊಡ್ಡಣ್ಣ,, ಲೋ ನೀವು ನಿಮ್ ಕಾರ್ ಅಲ್ಲಿ ಬನ್ನಿ, ನಾವು ಈ ಕಾರ್ ಅಲ್ಲಿ ಬರ್ತೀವಿ. 

ಮದನ್,,, ಸರಿ ಅಣ್ಣ ಅಂತ ಹೇಳಿ ಕಾರ್ ಸ್ಟಾರ್ಟ್ ಮಾಡಿ ಊರಿನ ಕಡೆಗೆ ಹೋಗ್ತಾರೆ.

******

ಎರಡು ದಿನಗಳ ನಂತರ,,, 

ಅಭಿ ಬೇಕರಿ ಹತ್ತಿರ ನಿಂತು ಬೇಕರಿ ಓನರ್ ಗೆ ಅಣ್ಣ ಒಂದು ಟೀ ಒಂದು ಸಿಗರೇಟ್ ಅಂತ ಕೇಳ್ತಾನೆ. ಸಡನ್ ಆಗಿ ಯಾರೋ ಹಾಯ್ ಅಂತ ಹೇಳ್ತಾರೆ. ಅಭಿ ಅ ಕಡೆಗೆ ತಿರುಗಿ ನೋಡ್ತಾನೆ ಎದುರಿಗೆ ಸಾರಿಕ.

ಅಭಿ,,, ಹಾಯ್ ಮೇಡಂ ನೀವ್ ಏನ್ ಇಲ್ಲಿ.

ಸಾರಿಕ,,, ಅದನ್ನ ನಾನ್ ಕೇಳಬೇಕು, ನೀವ್ ಏನ್ ಇಲ್ಲಿ.

ಬೇಕರಿ ಓನರ್, ಅಭಿ ತಗೊಂಡು ಸಿಗರೇಟ್ ಮತ್ತೆ ಟೀ ಅಂತ ಹೇಳ್ತಾನೆ.

ಸಾರಿಕ,,, ಆಶ್ಚರ್ಯ ವಾಗಿ ನೋಡ್ತಾ, ನಿಮಗೆ ಓನರ್ ಗೊತ್ತಾ.

ಅಭಿ,,, ಈ ಬೇಕರಿ ಓಪನ್ ಮಾಡಿದಾಗಿಂದ ಗೊತ್ತು. ಅಂತ ಹೇಳಿ ಅಣ್ಣ ಇನ್ನೊಂದು ಟೀ ಅಂತ ಹೇಳಿ ಅ ಟೀ ನ ಸಾರಿಕ ಮುಂದೆ ಇಟ್ಟು ಟೀ ತಗೋಳಿ ಮೇಡಂ.

ಸಾರಿಕ,,, ಪರ್ವಾಗಿಲ್ಲ ನೀವು ಕುಡೀರಿ.

ಅಭಿ,,, ನಾನ್ ಇನ್ನೊಂದು ಟೀ ಹೇಳಿದ್ದೀನಿ ನೀವು ತಗೋಳಿ ಮೇಡಂ .

ಸಾರಿಕ,,, ಥ್ಯಾಂಕ್ಸ್ ಅಂತ ಹೇಳಿ ಟೀ ತಗೊಂಡು. ನಿಮ್ದು ಇದೆ ಊರ?. ನೀವು ಇಲ್ಲೇ ಇರೋದ?

ಅಭಿ,,, ಹುಟ್ಟಿದ್ದು ಇದೆ ಊರೇ, ಇದೆ ಊರಲ್ಲಿ ನಮ್ ದೊಡ್ಡಮ್ಮ ಇರೋದು. ಅವಾಗವಾಗ ಬರ್ತಾ ಇರ್ತೀನಿ. 

ಬೇಕರಿ ಅಣ್ಣ,, ಅಭಿ ಟೀ.

ಅಭಿ ಟೀ ತಗೊಂಡು ಅಲ್ಲಿಂದ ಸೈಡ್ ಗೆ ಹೋಗ್ತಾನೆ, ಸಾರಿಕ ಕೂಡ ಅಭಿ ಹೋದ ಕಡೆಗೆ ಹೋಗ್ತಾಳೆ.

ಸಾರಿಕ,,, ನಿಮ್ಮಜ್ಜಿ ಗೆ ಹುಷಾರಿಲ್ಲ ಅಂತ ಹೇಳಿದ್ರಿ ಅಲ್ವಾ ಈಗ ಹೇಗಿದ್ದಾರೆ ನಿಮ್ಮಜ್ಜಿ.

ಅಭಿ,,, ತಲೆ ಎತ್ತಿ ಆಕಾಶದ ಕಡೆ ನೋಡ್ತಾನೆ.

ಸಾರಿಕ,,, ಹೊ ಸಾರೀ,, ಅಮ್ಮ ಅಲ್ಲೇ ಇದ್ದಾರಾ?

ಅಭಿ,,, ಅಮ್ಮ ಅಕ್ಕ ದೊಡ್ಡಮ್ಮ ಎಲ್ಲಾ ಅಜ್ಜಿ ಊರಲ್ಲೇ ಇದ್ದಾರೆ. 11 ದಿನದ ಕಾರ್ಯ ಮುಗಿಯೋ ವರೆಗೂ ಬರೋದಿಲ್ಲ. ಅಲ್ಲಿವರೆಗೂ ಒಬ್ನೇ ಮನೇಲಿ ಇರೋದು ಬೇಡ ಅಂತ ದೊಡ್ಡಮ್ಮ ಇಲ್ಲಿ ಇರೋಕೆ ಹೇಳಿದ್ರು. 

ಸಾರಿಕ,,, ಹೌದ ಮತ್ತೆ ಜಾಬ್.

ಅಭಿ,,, ಹೋಗ್ತೀನಿ ನೈಟ್ ಶಿಫ್ಟ್. 

ಸಾರಿಕ,,, ಹೌದ ಅಂತ ಹೇಳಿ ಟೀ ಫಿನಿಷ್ ಮಾಡಿ, ಓಕೆ ಥ್ಯಾಂಕ್ಸ್ ಫಾರ್ ದಿ ಟೀ, ನಾನ್ ಇನ್ನ ಹೊರಡ್ತೀನಿ ವರ್ಕ್ ಇದೆ ನನಗೆ. 

ಅಭಿ,,, ಓಕೆ ಬೈ ಮೇಡಂ ಅಂತ ಹೇಳಿ ಸಾರಿಕ ನ ಕಳಿಸಿ ಸಿಗರೇಟ್ ಗೆ ಬೆಂಕಿ ಹಚ್ಚಿ ಕೊಳ್ತಾನೆ .

ಸ್ವಲ್ಪ ದೂರ ಹೋದಮೇಲೆ ಸಾರಿಕ ತಿರುಗಿ ನೋಡ್ತಾಳೆ. ಅಭಿ ಸಿಗರೇಟ್ ಸೇದ್ತಾ ಇರೋದನ್ನ ನೋಡಿ ಬೈಕೊಂಡು ಅಲ್ಲಿಂದ ಪಿಜಿ ಕಡೆಗೆ ಹೋಗ್ತಾಳೆ.

@@@@@@@@@@@@@@@@@@@@@@@@