Abhinayanaa - 30 in Kannada Love Stories by S Pr books and stories PDF | ಅಭಿನಯನಾ - 30

The Author
Featured Books
Categories
Share

ಅಭಿನಯನಾ - 30

  ಅಭಿ ಅವರ ಅಜ್ಜಿ ಯ 11 ದಿನದ ಕಾರ್ಯ ನ ಮುಗಿಸಿಕೊಂಡು  ಅಮ್ಮ ಅಕ್ಕ ನ ಜೊತೆಗೆ ಮನೆಗೆ ಬರ್ತಾನೇ, ಎಂದಿನಂತೆ ಅವನ ಕೆಲಸ ಫ್ರೆಂಡ್ಸ್ ಮನೆ ಅಂತ ಇದ್ದು ಬಿಡ್ತಾನೆ . 

ದೇವಮ್ಮ,,, ಲೋ ಅಭಿ ನಿಮ್ ದೊಡ್ಡಮ್ಮ ಕಾಲ್ ಮಾಡಿದ್ರು ಹೋಗಿ ಒಂದು ಸರಿ ಮನೆಗೆ ಹೋಗಿ ಬಾ,, 

ಅಭಿ,,, ನಾಳೆ ಹೇಗಿದ್ರು ಲೀವ್ ಇದೆ ನೈಟ್ ಕೆಲಸ ಮುಗಿಸಿಕೊಂಡು ಬೆಳಿಗ್ಗೆ ಹೋಗ್ತೀನಿ.

ದೇವಮ್ಮ,, ಸರಿ ಹಾಗೇ ಮಾಡು. 

ಅಭಿ ನೈಟ್ ಕೆಲಸ ಮುಗಿಸಿಕೊಂಡು ಬೆಳಿಗ್ಗೆ ದೊಡ್ಡಮ್ಮ ನ ಮನೆಗೆ ಹೋಗ್ತಾನೆ. ಮಧ್ಯಾಹ್ನ ಊಟ ಮಾಡಿ ಮೊಬೈಲ್ ನೋಡ್ಕೊಂಡು ಕುತ್ಕೊಂಡು ಇರ್ತಾನೆ. ಚೈತ್ರ ಕಾಲ್ ಬರುತ್ತೆ.

ಅಭಿ,, ಕಾಲ್ ಪಿಕ್ ಮಾಡಿ, ಹೇಳು ಚೈತ್ರ.

ಚೈತ್ರ,,, ಅಭಿ ಎಲ್ಲಿ ಇದ್ದಿಯಾ.

ಅಭಿ,,, ದೊಡಮ್ಮ ಮನೆಗೆ ಬಂದೆ, ಏನ್ ವಿಷಯ ಹೇಳು.

ಚೈತ್ರ,,, ಅಭಿ ಅದು ನಿನಗೆ ನನ್ನ ಫ್ರೆಂಡ್ ಸಾರಿಕ ಗೊತ್ತು ಅಲ್ವಾ.

ಅಭಿ,,, ಹ್ಮ್ ಗೊತ್ತು ಹೇಳು.

ಚೈತ್ರ,,, ಏನಿಲ್ಲಾ ಅಭಿ, ಅವಳಿಗೆ ಏನೋ ಹುಷಾರು ಇಲ್ಲಾ ಅಂತೇ, ಬೆಳಿಗ್ಗೆ ಬೇಡ ಅಂದ್ರು ಆಫೀಸ್ ಗೆ ಹೋದ್ಲು. ಈಗ ವರ್ಕ್ ಮಾಡೋಕೆ ಆಗ್ತಾ ಇಲ್ಲಾ, ಪ್ಲೀಸ್ ಬಂದು ಕರ್ಕೊಂಡು ಹೋಗ್ತಿಯ ಅಂತ ಕಾಲ್ ಮಾಡಿದ್ಲು. 

ಅಭಿ,,, ಹೌದ ಆಫೀಸ್ ಫ್ರೆಂಡ್ಸ್ ಹೆಲ್ಪ್ ತಗೊಂಡು ಬರೋದಕ್ಕೆ ಹೇಳೋದು.

ಚೈತ್ರ,,, ಹೇಳ್ದೆ ಕಣೋ, ಬಟ್ ಅವಳು ಮಾಡೋದು ಬ್ಯಾಂಕಿಂಗ್ ಫೀಲ್ಡ್ ಅಲ್ಲಿ, ಅದು ಬೇರೆ ಮಂತ್ ಎಂಡ್, ಮ್ಯಾನೇಜರ್ ಯಾರಿಗೂ ಪರ್ಮಿಷನ್ ಕೊಡೋದು ಇಲ್ಲಾ ಬೇಕಾದ್ರೆ ನಿಮಗೆ ಗೊತ್ತಿರೋವರನ್ನ ಬರೋಕೆ ಹೇಳಿ ಅವರ ಜೊತೆಗೆ ಹೋಗಿ ಅಂತ ಹೇಳಿದ್ರು ಅಂತೇ. ಅದು ಅಲ್ಲದೆ ಅವಳ ಮ್ಯಾನೇಜರ್ ಸ್ವಲ್ಪ ಮೆಂಟಲ್ ತರ ಆಡ್ತಾಳೆ. ಅದಕ್ಕೆ ನನಗೆ ಬರೋಕೆ ಆಗುತ್ತಾ ಅಂತ ಕಾಲ್ ಮಾಡಿ ಕೇಳಿದ್ಲು, ನಾನ್ ಪರ್ಮಿಷನ್ ಕೇಳ್ಕೊಂಡು ಅವಳನ್ನ ಕರ್ಕೊಂಡು ಬರೋಕೆ ತುಂಬಾ ಲೇಟ್ ಆಗುತ್ತೆ, ಶೇಖರ್ ಗೆ ಕಾಲ್ ಮಾಡಿದ್ದೆ, ಅವನು ಆಫೀಸ್ ಅಲ್ಲಿ ಇದ್ದಾನೆ ಅಭಿ ಗೆ ಕಾಲ್ ಮಾಡು ಅಲ್ಲೇ ನಿಮ್ ಪಿಜಿ ಹತ್ತಿರ ನೇ ಅವರ ದೊಡ್ಡಮ್ಮ ಮನೆಗೆ ಹೋಗಿದ್ದಾನೆ ಅಂತ ಹೇಳ್ದ, ಅದಕ್ಕೆ ನಿನಗೆ ಕಾಲ್ ಮಾಡಿದೆ, ಪ್ಲೀಸ್ ಹೋಗಿ ಅವಳನ್ನ ಕರ್ಕೊಂಡು ಬರ್ತೀಯ.

ಅಭಿ,,, ಸರಿ ಅವಳ ಆಫೀಸ್ ಅಡ್ರೆಸ್ ಕಳಿಸು, ಹಾಗೇ ನಾನು ಬರ್ತಾ ಇದ್ದೀನಿ ಅಂತ ಹೇಳು ಅಂತ ಹೇಳಿ ಕಾಲ್ ಕಟ್ ಮಾಡಿ. ಬ್ರದರ್ ಕಾರ್ ಅಲ್ಲಿ ಸಾರಿಕ ವರ್ಕ್ ಮಾಡೋ ಆಫೀಸ್ ಹತ್ತಿರ ಹೋಗ್ತಾನೆ. 25 ನಿಮಿಷದಲ್ಲಿ ಸಾರಿಕ ಆಫೀಸ್ ಮುಂದೆ ಕಾರ್ ನಿಲ್ಲಿಸಿ, ಸಾರಿಕ ಆಫೀಸ್ ಗೆ ಹೋಗಿ ಅಲ್ಲಿನ ಸೆಕ್ಯೂರಿಟಿ ಗೆ ವಿಷಯ ಹೇಳ್ತಾನೆ. 

ಸೆಕ್ಯೂರಿಟಿ ಎರಡು ನಿಮಿಷ ಇರಿ ಅಂತ ಹೇಳಿ ಆಫೀಸ್ ಒಳಗೆ ಹೋಗಿ, ಮೂರು ನಿಮಿಷದಲ್ಲಿ ಅಭಿ ಹತ್ತಿರ ಬಂದು ಸರ್ ಬನ್ನಿ ನನ್ನ ಜೊತೆಗೆ ಅಂತ ಹೇಳಿ ಆಫೀಸ್ ಒಳಗೆ ಕರ್ಕೊಂಡು ಹೋಗ್ತಾನೆ.

ಸಾರಿಕ ಅವಳು ವರ್ಕ್ ಮಾಡೋ ಜಾಗದಲ್ಲಿ ಡೆಸ್ಕ್ ಮೇಲೆ ತಲೆ ಇಟ್ಟ್ಕೊಂಡು ಮಲಗಿ ಇರ್ತಾಳೆ. ಸೆಕ್ಯೂರಿಟಿ ಬಂದು ಮೇಡಂ ಅಂತ ಕರೀತಾನೆ  ಸಾರಿಕ ನಿಧಾನಕ್ಕೆ ತಲೆ ಎತ್ತಿ ನೋಡ್ತಾಳೆ ಸೆಕ್ಯೂರಿಟಿ ಪಕ್ಕದಲ್ಲಿ ಅಭಿ ಇರ್ತಾನೆ. 

ಅಭಿ,,, ಬನ್ನಿ ಮೇಡಂ ಹೋಗೋಣ ಅಂತ ಹೇಳಿ ಸಾರಿಕ ಗೆ ಎದ್ದು ನಿಲ್ಲೋಕೆ ಹೆಲ್ಪ್ ಮಾಡ್ತಾನೆ. ನಿಧಾನಕ್ಕೆ ಸಾರಿಕ ನ ಕರ್ಕೊಂಡು ಬಂದು ಕಾರ್ ಅಲ್ಲಿ ಕೂರಿಸಿಕೊಂಡು ಹಾಸ್ಪಿಟಲ್ ಗೆ ಕರ್ಕೊಂಡು ಹೋಗ್ತಾನೆ. 

ಡಾಕ್ಟರ್ ಸಾರಿಕ ನ ಚೆಕ್ ಮಾಡಿ ಟ್ರೀಟ್ಮೆಂಟ್ ಕೊಟ್ಟು ಡಿಸ್ಚಾರ್ಜ್ ಮಾಡಿ ಕಳಿಸಿ ಕೊಡ್ತಾನೆ. ಅಭಿ ಸಾರಿಕ ನ ಅವಳ ಪಿಜಿ ಗೆ ಕರ್ಕೊಂಡು ಬರ್ತಾನೆ. ಅಷ್ಟರಲ್ಲಿ  ಚೈತ್ರ ಗೆ ಪರಿಚಯ ಇರೋ ಪಿಜಿ ಫ್ರೆಂಡ್ ಗೆ ವಿಷಯ ಹೇಳಿರ್ತಾಳೆ. ಅಭಿ ಜೊತೆಗೆ ಸಾರಿಕ ಬಂದ ಮೇಲೆ ಅಭಿ ಗೆ ಥ್ಯಾಂಕ್ಸ್ ಹೇಳಿ ಸಾರಿಕ ನ ಅವಳ ರೂಮ್ ಗೆ ಕರ್ಕೊಂಡು ಹೋಗ್ತಾರೆ.

ಚೈತ್ರ ಅಭಿ ಗೆ ಕಾಲ್ ಮಾಡಿ ತುಂಬಾ ಥ್ಯಾಂಕ್ಸ್ ಕಣೋ, ಸಂಜೆ ಆಫೀಸ್ ಮುಗಿಸಿ ಪಿಜಿ ಗೆ ಬಂದು ನಿನಗೆ ಕಾಲ್ ಮಾಡ್ತೀನಿ ಅಂತ ಹೇಳ್ತಾಳೆ, ಅಭಿ ಪರ್ವಾಗಿಲ್ಲ ಅಂತ ಕಾರ್ ಸ್ಟಾರ್ಟ್ ಮಾಡಿಕೊಂಡು ದೊಡ್ಡಮ್ಮ ಮನೆ ಕಡೆಗೆ ಹೋಗ್ತಾನೆ. ಸಂಜೆ ಆಫೀಸ್ ಮುಗಿಸಿಕೊಂಡು ಪಿಜಿ ಗೆ ಬಂದ ಚೈತ್ರ ಸಾರಿಕ ನ ನೋಡಿಕೊಳ್ಳೋದ್ರಲ್ಲಿ ಬ್ಯುಸಿ ಆಗಿ ಅಭಿ ಗೆ ಕಾಲ್ ಮಾಡೋದನ್ನೇ ಮರೆತು ಹೋಗ್ತಾಳೇ. ಅಭಿ ಮಾರನೇ ದಿನ ಮಧ್ಯಾಹ್ನ ದೊಡ್ಡಮ್ಮ ನಿಗೆ ಹೋಗಿ ಬರ್ತೀನಿ ಅಂತ ಹೇಳಿ ಮನೆಗೆ ಬರ್ತಾನೇ. ನೈಟ್ ಕೆಲಸಕ್ಕೆ ಹೋಗಿ ಬಿಡ್ತಾನೆ. ನೈಟ್ 10 ಗಂಟೆ ಅಭಿ ಮೊಬೈಲ್ ರಿಂಗ್ ಆಗುತ್ತೆ.

ಅಭಿ,,, ಕಾಲ್ ಪಿಕ್ ಮಾಡಿ ಹಲೋ ಯಾರು.

ಸಾರಿಕ,,, ಅಭಿ ಅವರೇ ನಾನು ಸಾರಿಕ.

ಅಭಿ,,, ಅ ಮೇಡಂ ನೀವ ಹೇಳಿ ಇವಾಗ ಹೇಗಿದ್ದೀರ, 

ಸಾರಿಕ,,, ಹ್ಮ್ ಇವಾಗ ಪರ್ವಾಗಿಲ್ಲ ಚೆನ್ನಾಗಿ ಇದ್ದೀನಿ. 

ಅಭಿ,,, ಹೌದ ಸಂತೋಷ ಮೇಡಂ , ಡಾಕ್ಟರ್ ಹೇಳಿದ್ದಾರೆ ಮೂರು ದಿನ ಮೆಡಿಸಿನ್ ನ ತಗೋಬೇಕು ಅಂತ, ಮಿಸ್ ಮಾಡಬೇಡಿ ಸರಿನಾ.

ಸಾರಿಕ,,, ಅ  ಗೊತ್ತು ಅದಕ್ಕೆ ಈಗ ಊಟ ಮಾಡಿ ಮೆಡಿಸಿನ್ ತಗೊಂಡೆ, ನೀವು ಊಟ ಮಾಡಿದ್ರ..

ಅಭಿ,,, ಇನ್ನು ಇಲ್ಲಾ ಮೇಡಂ ಆಫೀಸ್ ಅಲ್ಲಿ ಇದ್ದೀನಿ, ಆಮೇಲೆ ಹೋಗಿ ಊಟ ಮಾಡ್ತೀನಿ.

ಸಾರಿಕ,,, ತುಂಬಾ ಥ್ಯಾಂಕ್ಸ್ ಅಭಿ ಅವರೇ ಹೆಲ್ಪ್ ಮಾಡಿದಕ್ಕೆ.

ಅಭಿ,,, ಇಷ್ಟಕ್ಕೆಲ್ಲ ಥ್ಯಾಂಕ್ಸ್ ಏನಕ್ಕೆ, ಆರಾಮಾಗಿ ನಿದ್ದೆ ಮಾಡಿ, ಹುಷಾರು ಆದಮೇಲೆ ಆಫೀಸ್ ಗೆ ಹೋಗಿ. 

ಸಾರಿಕ,,, ಹ್ಮ್ ಸರಿ, ಬಟ್ ಒಂದು ವಿಷಯ.

ಅಭಿ,,, ಅ ಹೇಳಿ ಮೇಡಂ.

ಸಾರಿಕ,,, ನೀವು ನನ್ನ ತಪ್ಪಾಗಿ ತಿಳ್ಕೊಳ್ಳೋಲ್ಲ ಅಂದ್ರೆ ಹಾಸ್ಪಿಟಲ್ ಅಲ್ಲಿ ಎಷ್ಟು ಬಿಲ್ ಆಯಿತು ಅಂತ ಹೇಳಿದ್ರೆ ಅ ದುಡ್ಡನ್ನ ನಿಮಗೆ ಪೆ ಮಾಡ್ತೀನಿ. 

ಅಭಿ,,, ಅಯ್ಯೋ ಇದನ್ನ ನನ್ನ ಹತ್ತಿರ ಏನಕ್ಕೆ ಕೇಳ್ತಿರಾ, ನಿಮ್ ಫ್ರೆಂಡ್ ಚೈತ್ರ ನೇ ಎಲ್ಲಾ ಬಿಲ್ ಪೆ ಮಾಡಿದ್ದು ಅವಳನ್ನೇ ಕೇಳಿ ಅವಳಿಗೆ ಪೆ ಮಾಡಿ. ನನಗೆ ಕೆಲಸ ಇದೆ ಅಂತ ಹೇಳಿ ಬೈ ಹೇಳಿ ಕಾಲ್ ಕಟ್ ಮಾಡ್ತಾನೆ. 

ಸಾರಿಕ ಗೆ ಅಭಿ ಹಾಗೇ ಸಡನ್ ಆಗಿ ಕಾಲ್ ಕಟ್ ಮಾಡಿದ್ದು ಸ್ವಲ್ಪ ಬೇಜಾರ್ ಆಗುತ್ತೆ. ಮತ್ತೆ ಕಾಲ್ ಮಾಡೋಣ ಅಂದ್ರೆ ಕೆಲಸ ಇದೆ ಅಂತ ಹೇಳಿದ ಅಂತ ಸುಮ್ನೆ ಆಗಿ ಬಿಡ್ತಾಳೆ.

ಬೆಳಿಗ್ಗೆ ಆಫೀಸ್ ಗೆ ರೆಡಿ ಆಗ್ತಾ ಇದ್ದಾ ಚೈತ್ರ ನ ನೋಡಿ, 

ಸಾರಿಕ,,, ಚೈತ್ರ ಹಾಸ್ಪಿಟಲ್ ಬಿಲ್ ಎಷ್ಟಾಯ್ತು ಅಂತ ಹೇಳಿದ್ರೆ ಪೆ ಮಾಡ್ತೀನಿ.

ಕನ್ನಡಿ ಮುಂದೆ ನಿಂತಿದ್ದ ಚೈತ್ರ,,, ನನ್ನ ಏನಕ್ಕೆ ಕೇಳ್ತಾ ಇದ್ದಿಯಾ ಅಭಿ ನ ಕೇಳು, 

ಸಾರಿಕ,,, ಏನು ಅಭಿ ನ, ನೈಟ್ ಅವನಿಗೆ ಕಾಲ್ ಮಾಡಿ ಕೇಳಿದ್ರೆ, ಬಿಲ್ ಎಲ್ಲಾ ನೀನೇ ಪೆ ಮಾಡಿದ್ದು, ನಿನ್ನೆ ಕೇಳು ಅಂದ. 

ಚೈತ್ರ,,, ಏನು ನಾನ್ ಪೆ ಮಾಡಿದೆ ಅಂತ ಹೇಳಿದ್ನ, ನಿಜ ಹೇಳ್ಳಾ ನಾನ್ ಅವನಿಗೆ ನಿನ್ನ ಆಫೀಸ್ ಅಡ್ರೆಸ್ ಕಳಿಸಿದೆ ಅಷ್ಟೇ ಆಮೇಲೆ ಪಿಜಿ ಗೆ ಬರೋವಾಗಲೇ ಅವನು ಕಾಲ್ ಮಾಡಿದ್ದು ನನಗೆ. ನನಗೆ ಅನ್ನಿಸುತ್ತೆ ನೀನು ದುಡ್ಡು ವಾಪಸ್ಸು ಕೊಡ್ತೀನಿ ಅಂತ ಹೇಳಿದ್ದು ಅವನಿಗೆ ಕೋಪ ಬಂದಿರಬೇಕು, ಅದಕ್ಕೆ ಈ ರೀತಿ ಹೇಳಿದ್ದಾನೆ ಅಂತ ಅನ್ನಿಸುತ್ತೆ. ಒಂದು ಸರಿ ಕಾಲ್ ಮಾಡಿ ಸಾರೀ ಕೇಳು. ಅಂತ ಹೇಳಿ ನೀನು ಆರಾಮಾಗಿ ತಿಂಡಿ ತಿಂದು ರೆಸ್ಟ್ ಮಾಡು ನನಗೆ ಲೇಟ್ ಆಯ್ತು ಆಫೀಸ್ ಗೆ ಅಂತ ಹೇಳಿ ಹೊರಟು ಹೋಗ್ತಾಳೆ.

ಸಾರಿಕ ಇವಾಗ ಮಾತಾಡೋದು ಬೇಡ ಅಂತ ನಿದ್ದೆ ಮಾಡೋಕೆ ಶುರು ಮಾಡ್ತಳೆ..

ಅಭಿ ನೈಟ್ ಶಿಫ್ಟ್ ಮುಗಿಸಿಕೊಂಡು ಮನೆಗೆ ಬರ್ತಾನೆ..  ದೇವಮ್ಮ ಮಹಿ ನಾ ನೋಡಿ ಯಾಕೋ ಒಂತರಾ ಇದ್ದಿಯಾ ಏನಾಯ್ತು ಅಂತ ಕೇಳ್ತಾರೆ.

ಅಭಿ,,,  ಏನಿಲ್ಲಾ ದೇವಮ್ಮ ನೈಟ್ ಆಫೀಸ್ ಅಲ್ಲಿ   ಸೀನಿಯರ್ ಜೊತೆ ಸ್ವಲ್ಪ ಗಲಾಟೆ ಆಯಿತು. ಸುಮ್ನೆ ಅವನು ಮಾಡ್ತಾ ಇದ್ದಾ ತಪ್ಪಿಗೆಲ್ಲ ನಮ್ ಮೇಲೆ ಹಾಕ್ತಾ ಇದ್ದಾ   ಪ್ರಶ್ನೆ ಮಾಡಿ  ಕೇಳಿದಕ್ಕೆ ಸ್ವಲ್ಪ ಓವರ್ ಆಗಿ ಮಾತಾಡಿದ,  ಅದು ಅಲ್ದೆ ಮ್ಯಾನೇಜರ್ ಅವನಿಗೆ ಎಲ್ಲದಕ್ಕೂ ಸಪೋರ್ಟ್ ಇರ್ತಾನೆ, ಇಂತನನ್ನ ಮಕ್ಕಳ ಹತ್ತಿರ ಕೆಲಸ ಮಾಡೋಕ್ಕಿಂತ ಬಿಡೋದೇ ವಾಸಿ ಅಂತ ರಿಸೈನ್ ಕೊಟ್ಟು ಬಂದೆ. 

ದೇವಮ್ಮ,,, ಬಿಡು ಒಳ್ಳೇದೇ ಆಯ್ತು ಯಾವಾಗ್ ನೋಡು ನೈಟ್ ಶಿಫ್ಟ್ ಅಂತ ನಿನ್ನ ಅರೋಗ್ಯ ಹಾಳಾಗ್ತಾ ಇತ್ತು, ಪರ್ವಾಗಿಲ್ಲ ಸ್ವಲ್ಪ ದಿನ ರೆಸ್ಟ್ ಮಾಡಿ  ಆಮೇಲೆ ಬೇರೆ ಕೆಲಸ ನೋಡ್ಕೊಂಡು ಹೋಗಿವಂತೆ ಹೋಗಿ ರೆಸ್ಟ್ ಮಾಡು ತಿಂಡಿ ಮಾಡಿ ಎಬ್ಬಿಸ್ತೀನಿ.

ಅಭಿ,,, ಇಲ್ಲಾ ದೇವಮ್ಮ ಕೆಲಸ ಸಿಗೋವರೆಗೂ ಒಂದು ಟ್ರಾವೆಲ್ಸ್ ಅಲ್ಲಿ ಕಾರ್ ಡ್ರೈವರ್ ಜಾಬ್ ಸಿಕ್ಕಿದೆ, ಮಧ್ಯಾಹ್ನ ಬರೋಕೆ ಹೇಳ್ದ,  ಮಧ್ಯಾಹ್ನ ಹೋಗ್ತೀನಿ ಡ್ರೈವಿಂಗ್ ಕೆಲಸಕ್ಕೆ.

ದೇವಮ್ಮ,, ಸರಿ ಹೋಗಿ ರೆಸ್ಟ್ ಮಾಡು ಅಂತ ಹೇಳಿ ಕಳಿಸ್ತಾರೆ..

ಮಹಿ ಮೊಬೈಲ್ ಸೈಲೆಂಟ್ ಮಾಡಿ  ಹೋಗಿ ರೆಸ್ಟ್ ಮಾಡೋಕೆ ಹೋಗ್ತಾನೆ ..  ಸ್ವಲ್ಪ ಸಮಯದ ನಂತರ  ಎದ್ದು ತಿಂಡಿ ತಿಂದು, ಮತ್ತೆ ರೆಸ್ಟ್ ಮಾಡೋಕೆ ಹೋಗ್ತಾನೆ. ಮಧ್ಯಾಹ್ನ 2 ಗಂಟೆ ಗೆ ಎದ್ದು ರೆಡಿ ಆಗಿ  ಟ್ರಾವೆಲ್ಸ್ ಹತ್ತಿರ ಹೋಗ್ತಾನೆ.. ಟ್ರಾವೆಲ್ಸ್ ಓನರ್ ಹತ್ತಿರ ಡ್ಯೂಟಿ ಟೈಮ್ ಮತ್ತೆ  ವೀಕ್ಲಿ ಪೇಮೆಂಟ್ ಮಾತಾಡಿಕೊಂಡು, ಡ್ಯೂಟಿ ಮಾಡೋಕೆ ಶುರು ಮಾಡ್ತಾನೆ.. 

2 ಡೇಸ್ ಅಲ್ಲಿ ಸಾರಿಕ ಹುಷಾರಾಗುತ್ತಾಳೆ, ನಂತರ ಆಫೀಸ್ ವರ್ಕ್ ಅಂತ ಬ್ಯುಸಿ ಹಾಗೋಗ್ತಾಳೆ..  15 ದಿನಗಳು ಕಳೆದು ಹೋಗುತ್ತೆ.  ಒಂದು ದಿನ ಪಿಜಿ ಹತ್ತಿರ ಚೈತ್ರ ನಾ ಮೀಟ್ ಮಾಡೋಕೆ ಶೇಖರ್ ಬಂದಿರ್ತಾನೆ. ಸಾರಿಕ ಚೈತ್ರ ಶೇಖರ್ ನಾ ನೋಡಿ ಹಾಯ್ ಮಾಡಿ ಹತ್ತಿರ ಹೋಗ್ತಾರೆ.

ಚೈತ್ರ,,, ಏನೋ ಒಬ್ನೇ ಬಂದು ಬಿಟ್ಟಿದ್ದೀಯ ಅಭಿ ಎಲ್ಲಿ?

ಶೇಖರ್,,, ಅವನ ನನಗೆ ಸಿಕ್ಕೇ 15 ದಿಂದ ಮೇಲೆ ಆಯ್ತು,  ಕಂಪನಿ ಅಲ್ಲಿ ಸೀನಿಯರ್ ಜೊತೆ ಜಗಳ ಮಾಡಿಕೊಂಡು ಜಾಬ್  ರಿಸೈನ್ ಮಾಡಿ ಈಗ   ಟ್ರಾವೆಲ್ಸ್ ಅಲ್ಲಿ ಡ್ರೈವರ್ ಆಗಿ ವರ್ಕ್ ಮಾಡ್ತಾ ಇದ್ದಾನೆ.  ಎರಡೆರಡು ಡ್ಯೂಟಿ ಮಾಡ್ಕೊಂಡು ನೈಟ್ 11 ಗಂಟೆ ಗೆ ಮನೆಗೆ ಬರ್ತಾನೇ  ಸಿಗೋದೇ ಕಷ್ಟ ಆಗೋಗಿದೆ.

ಚೈತ್ರ,,, ಲೋ ಹಾಗೇ ಮಾಡಿದ್ರೆ ಅವನ ಅರೋಗ್ಯ ಏನ್ ಆಗೋದಿಲ್ಲ, ನೀನಾದ್ರೂ ಹೇಳ್ಬೋದು ಅಲ್ವಾ? 

ಶೇಖರ್,,, ಏನ್ ಅಂತ ಹೇಳೋದು,  ಯಾವಾಗ ಅವನ ಲೈಫ್ ಅಲ್ಲಿ ಜವಾಬ್ದಾರಿ ಅನ್ನೋ ಮೂಟೆ ಹೆಗಲು ಹೇರಿತೋ  ಅವಾಗಿಂದ ಹಗಲು ರಾತ್ರಿ ಅನ್ನೋದನ್ನ ನೋಡದೆ ದುಡಿಯೋಕೆ ಶುರು ಮಾಡಿದ,  ಅವನಿಗೆ ಇರೋ ಕಷ್ಟ ನಾ ನೋಡಿ ಕೂಡ ನಾನ್ ಅವನಿಗೆ ಹೇಗೆ ಬುದ್ದಿ ಹೇಳ್ಲಿ. 

ಸಾರಿಕ,, ಶೇಖರ್ ಹೇಳಿದ್ದನ್ನ ಕೇಳಿದ ಮೇಲೆ ಅವಳ ಮನಸ್ಸಿಗೆ ತುಂಬಾ ಬೇಜಾರಾಯಿತು,  ಚೈತ್ರ ನಾ ನೋಡಿ ಮಾತಾಡಿಕೊಂಡು ಬಾ ಅಂತ ಹೇಳಿ  ಪಿಜಿ ಒಳಗೆ ಹೋಗ್ತಾಳೆ.  ಅವಳ ಬೆಡ್ ಮೇಲೆ ಮಲಗಿಕೊಂಡು ಅಭಿ ಬಗ್ಗೆ ಯೋಚ್ನೆ ಮಾಡ್ತಾ, ಅವನ ನಂಬರ್ ನಾ ನೋಡ್ತಾ,  ಛೇ ಅವತ್ತು ನನಗೆ ಅಷ್ಟು ಹೆಲ್ಪ್ ಮಾಡಿದ, ದುಡ್ಡು ಕೂಡ ತಗೊಂಡು ಇಲ್ಲಾ, ಸರಿಯಾಗಿ ಥ್ಯಾಂಕ್ಸ್ ಕೂಡ ಹೇಳೋಕೆ ಆಗಿಲ್ಲ, ಮತ್ತೆ ಆಫೀಸ್ ವರ್ಕ್ ಅಂತ ಬ್ಯುಸಿ ಆಗೋದೇ. ಕಾಲ್ ಮಾಡೋಕೆ ಹೋಗಿಲ್ಲ. ಅವನ ಹತ್ತಿರ ಸಾರೀ ಕೂಡ ಕೇಳಿಲ್ಲ ನಾನು,  ಕಾಲ್ ಮಾಡೋಣ್ವಾ ಅಂತ ಟೈಮ್ ನೋಡ್ತಾಳೆ ರಾತ್ರಿ 8 ಗಂಟೆ ಆಗಿರುತ್ತೆ,   ಅವನು ಮನೆಗೆ ಹೋಗೋದೇ 11 ಗಂಟೆ ಗೆ ಅಂತ ಶೇಖರ್ ಹೇಳಿದ, ಇವಾಗ ಕಾಲ್ ಮಾಡಿದ್ರೆ ಪಿಕ್ ಮಾಡಿ ಮಾತಾಡ್ತಾನ ಇಲ್ವಾ ಅನ್ಕೊಂಡೆ,  ಮೆಸೇಜ್ ಮಾಡೋಣ ಅಂತ ಅನ್ಕೊಂಡು ಅವನಿಗೆ ,, ಹಾಯ್ ದಿಸ್ ಇಸ್ ಸಾರಿಕ,  ನಿಮ್ ಹತ್ತಿರ ಮಾತಾಡಬೇಕು, ಫ್ರೀ ಇದ್ದಾಗ ಕಾಲ್ ಮಾಡಿ ಅಂತ ಹೇಳಿ, ಮೆಸೇಜ್ ಕಳಿಸಿ,  ಮೊಬೈಲ್ ಇಡ್ಕೊಂಡು ಹಾಗೇ ಕಣ್ಮುಚ್ಚಿ ಕೊಳ್ತಾಳೆ.....


@@@@@@@@@@@@@@@@@@@@@@@@@