Abhinayanaa - 18 in Kannada Love Stories by S Pr books and stories PDF | ಅಭಿನಯನಾ - 18

The Author
Featured Books
Categories
Share

ಅಭಿನಯನಾ - 18

   ಶ್ರುತಿ ಮನೆ ಒಳಗೆ ಬರೋದನ್ನ ನೋಡಿ.

ನಂದಿನಿ,,, ಬಂದ್ಲು ನೋಡಮ್ಮ ನಿನ್ನ ಮೊಮ್ಮಗಳು. ಅಂತ ಹೇಳ್ತಾ, ಶ್ರುತಿ ಕಡೆಗೆ ನೋಡಿ, ಲೇ ಏನಕ್ಕೆ ಬಂದೆ?

ಶ್ರುತಿ,,, ಅ ಸುಮ್ನೆ ಬಂದೆ ಅತ್ತೆ, ಅಂತ ಹೇಳ್ತಾ  ಸೋಫಾ ಮೇಲೆ ಕೂತಿರೋ ಅಜ್ಜಿ ಪಕ್ಕ ಕೂತಿರೋ ನಯನಾ ನಾ ನೋಡಿ. ಇವರೇನಾ ಚಿಕ್ಕಮ್ಮ? 

ನಂದಿನಿ,,, ಇಲ್ಲಾ ನನ್ನ ತಮ್ಮನ ಹೆಂಡತಿ.

ನಯನಾ ಸುಮ್ನೆ ನೋಡ್ತಾ ಇರ್ತಾಳೆ. ಬಟ್ ಅವರ ಕ್ಯಾಟ್ ಫೈಟ್ ನೋಡಿ ಅತ್ತೆ ಸೊಸೆ ಅಂತ ಅರ್ಥ ಆಗಿ ಬಿಡುತ್ತೆ.

ಶ್ರುತಿ,,, ಹಂಗಾದ್ರೆ ಇವರೆ ನಮ್ ಚಿಕ್ಕಿ ಅಂತ ಆಯ್ತು ಅಂತ ಹೇಳಿ, ನಯನಾ ಹತ್ತಿರ ಬಂದು. ಹಾಯ್ ಚಿಕ್ಕಿ ಐಮ್ ಶ್ರುತಿ,  ಈ ಮನೆ ದೊಡ್ಡ ಮೊಮ್ಮಗಳು.

ನಯನಾ,,, ಸ್ಮೈಲ್ ಮಾಡ್ತಾ ಹಲೋ ಶ್ರುತಿ,, ಐಮ್ ನಯನಾ.

ಶ್ರುತಿ,,, ಸೋ ಸ್ವೀಟ್ ನಿಮ್ ತರಾನೇ ನಿಮ್ ಹೆಸರು ಕೂಡ ಚೆನ್ನಾಗಿ ಇದೆ. ಹೌದು ನನ್ನ ತಂಗಿ ಎಲ್ಲಿ?

ದೇವಮ್ಮ,,, ರೂಮ್ ಒಳಗೆ ಮಲಗಿದ್ದಾಳೆ ನಿಮ್ ಚಿಕ್ಕಪ್ಪ ನಾ ಜೊತೆ. 

ಶ್ರುತಿ,,, ಹೌದ ಅಂತ ರೂಮ್ ಒಳಗೆ ಹೋಗಿ, ಅನಾ ನಾ ನೋಡಿ ಖುಷಿ ಪಟ್ಟು, ಡಿಸ್ಟರ್ಬ್ ಮಾಡೋದು ಬೇಡ ಅಂತ ವಾಪಸ್ಸು ಹಾಲ್ ಗೆ ಬರ್ತಾ, ಅಜ್ಜಿ ಅಡುಗೆ ಏನ್ ಮಾಡಿದ್ದಿಯ.

ನಂದಿನಿ,,, ಯಾಕೆ ನಿಮ್ ಮನೇಲಿ ಮಾಡಿಲ್ವಾ ಅಡುಗೆ? ಇಲ್ಲಿಗೆ ಬಂದಿದ್ದೀಯಾ.

ಶ್ರುತಿ,,, ಮಾಡ್ವಾರ್ರೆ ಅತ್ತೆ, ತಿನ್ನೋಣ ಅನ್ನೋ ಅಷ್ಟರಲ್ಲಿ ಚಿಕ್ಕು ಬಂದಿರೋ ವಿಷಯ ಗೊತ್ತಾಯ್ತು ಅದಕ್ಕೆ ಓಡಿ ಬಂದೆ ನೋಡೋಣ ಅಂತ.

ನಂದಿನಿ,,, ನೋಡಿದೆ ಅಲ್ವಾ, ಹೋಗು ನಿಮ್ ಮನೆಗೆ.

ಶ್ರುತಿ,,, ತಿಂದು ಹೋಗ್ತೀನಿ ಬಿಡು ಅತ್ತೆ, ಅಂತ ಅಡುಗೆ ಮನೆ ಒಳಗೆ ಹೋಗಿ, ಬಿರಿಯಾನಿ ವಾಸನೆ ನೋಡಿ,, ಅಜ್ಜಿ ಬಿರಿಯಾನಿ ಮಾಡಿದ್ದಿಯ, ನೀನು ಸೂಪರ್ ಅಜ್ಜಿ.

ದೇವಮ್ಮ,,, ನಿಮ್ ಚಿಕ್ಕು ಮಾಡಿದ್ದು, ಹಾಕೊಂಡು ತಿನ್ನು. 

ಶ್ರುತಿ,,, ಏನು ಚಿಕ್ಕು ಮಾಡಿದ್ದ, ಹಾಗಿದ್ರೆ ನೈಟ್ ಗು ಸೇರಿ ಈಗ್ಲೇ ತಿಂದು ಬಿಡ್ತೀನಿ ಅಂತ, ಬಿರಿಯಾನಿ, ಮಟನ್ ಕರ್ರಿ ನಾ ಪ್ಲೇಟ್ ಗೆ ಹಾಕೊಂಡು, ಹಾಲ್ ಗೆ ಬಂದು, ಚಿಕ್ಕಿ ನೀವು ಊಟ ಮಾಡಿದ್ರ?

ನಯನಾ,,, ಹ್ಮ್ ಈಗಷ್ಟೇ ಎಲ್ಲರೂ ಊಟ ಮಾಡಿದ್ವಿ. 

ಶ್ರುತಿ,,, ಬಿರಿಯಾನಿ ತಿಂತ, ಅತ್ತೆ ಅ ಚಿನ್ನಮ್ಮ ಗೆ ಬಾಯಿ ಮುಚ್ಕೊಂಡು ಇರೋಕೆ ಹೇಳು. ಇಲ್ಲಾ ಅಂದ್ರೆ ಚಿಕ್ಕು ಕೈಲಿ ಒಳ್ಳೆ ಪೂಜೆ ಮಾಡಿಸ್ತೀನಿ. 

ನಂದಿನಿ,,, ಏನೇ ಮಾಡಿದ್ಲು ಅವಳು ನಿನಗೆ.

ಶ್ರುತಿ,,, ನಮ್ ಮನೆ ವಿಷಯ ಅವಳಿಗೆ ಏನಕ್ಕೆ, ನಾನು ಮನೆಗೆ ಬರ್ತಾ ಇದ್ರೆ, ನಿಮ್ ಚಿಕ್ಕಪ್ಪ ಮದುವೆ ಅದ ಅಂತೇ, ಹುಡುಗಿ ಯಾರು ಯಾವ್ ಊರು ಯಾವ್ ಜಾತಿ ಅಂತ ಕೇಳ್ತಾಳೆ. 

ದೇವಮ್ಮ,,, ಅವಳ ಬಗ್ಗೆ ಗೊತ್ತಿರೋದೇ ಅಲ್ವಾ, ನಿನ್ ಬಿಡೆ.

ನಂದಿನಿ,,, ಬಿಡೋದು ಏನ್ ಅಮ್ಮ, ಅವಳದು ಅವಳು ನೋಡ್ಕೊಳ್ಳೋಕೆ ಹಾಗಲ್ವಾ. ಅಂತ ಹೇಳ್ತಾ ಶ್ರುತಿ ಕಡೆಗೆ ನೋಡಿ ಲೇ ಅವಳು ಹಾಗೇ ಕೇಳ್ತಾ ಇದ್ರೆ ನೀನು ಸುಮ್ನೆ ಇದ್ದಾ, ತಿರುಗಿಸಿ ಕೊಡಬೇಕು ತಾನೇ. 

ಶ್ರುತಿ,,, ಬಿರಿಯಾನಿ ತಿಂತ,  ನಾನ್ ಸುಮ್ನೆ ಬರೋ ಮಗಳ ಸರಿಯಾಗಿ ಕೊಟ್ಟೆ, ಲೇ ಮುದುಕಿ ಬೇರೆ ಮನೆ ದೋಸೆ ತುತಾಗಿರೋದನ್ನ ನೋಡ್ಬೇಡ, ನಿನ್ ಮನೇಲಿ ಮುದ್ದೇನೆ ತುತಾಗಿದೆ, ಮೊದಲು ಅದನ್ನ ನೋಡ್ಕೋ, ನಿನಗೆ ಪಿನ್ ಟು ಪಿನ್ ಡೀಟೇಲ್ಸ್ ಬೇಕಾದ್ರೆ, ನಮ್ ಚಿಕ್ಕು ನೇ ಕರ್ಕೊಂಡು ಬರ್ತೀನಿ ಕೇಳಿ ತಿಳ್ಕೊ ಅಂತ ಅಂದೇ. ಅಷ್ಟೇ ಎದುರು ಮನೆ ಅವಳು ಕೈ ಮುಗಿದು ಕೇಳಿ ತಪ್ಪು ಮಾಡಿ ಬಿಟ್ವಿ. ನಿಮ್ ಚಿಕ್ಕು ಗೆ ಏನು ಹೇಳಬೇಡ ನೀನು ಹೋಗು ಅಂತ ಅಂದ್ರು. 

ನಂದಿನಿ,,, ಒಳ್ಳೆ ಕೆಲಸ ಮಾಡಿದೆ, ನಿಮ್ ಚಿಕ್ಕು ಎದ್ದ ಮೇಲೆ ಹೇಳಿ ಕರ್ಕೊಂಡು ಹೋಗು.

ದೇವಮ್ಮ,,, ಲೇ ನಿನ್ ಸುಮ್ನೆ ಇರೆ, ನಿನ್ ತಮ್ಮನಿಗೆ, ಮನೆ ವಿಷಯ ಯಾರಾದ್ರೂ ಮಾತಾಡಿದ್ರೇನೇ ಇಷ್ಟ ಆಗಲ್ಲಾ. ಇನ್ನ ಅವನ ವಿಷಯ ಅಂತ ಅಂದ್ರೆ ಸುಮ್ನೆ ಇರ್ತಾನ, ಇಡೀ ಅವರ ವಂಶನೇ ರೋಡ್ ಅಲ್ಲಿ ನಿಲ್ಲಿಸ್ತಾನೆ. 

ನಯನಾ,,, ಅಭಿ ಲಿ ಇತರ ಒಂದು ಕ್ಯಾರೆಕ್ಟರ್ ಇದೆ ಅನ್ನೋದೇ ಒಂದು ತರ ಕುತೂಹಲ ಮೂಡುತ್ತೆ, ಮೂರು ಜನ ಮಾತಾಡ್ತಾ ಇರೋದನ್ನ ನೋಡ್ತಾ ಕೇಳ್ತಾ ಇದ್ದು ಬಿಡ್ತಾಳೆ. 

ದೇವಮ್ಮ,, ನಯನಾ ನೋಡ್ತಾ ಇರೋದನ್ನ ನೋಡಿ, ನೀನೇನು ತಪ್ಪಾಗಿ ತಿಳ್ಕೋಬೇಡ ಮಗಳೇ, ಈ ಬೀದಿಲಿ ಇರೋವ್ರು ಸ್ವಲ್ಪ ಜನ ಬೇರೆ ಮನೇಲಿ ಏನ್ ನಡಿಯುತ್ತೋ ಅದನ್ನ ಕೇಳಿ ಮಾತಾಡಿ ಕೊಳ್ಳೋದೇ ಕೆಲಸ, ಅದು ಅಭಿ ಗೆ ಇಷ್ಟ ಆಗಲ್ಲಾ. ಅವರ ಮನೆ ಅವರ ಕಷ್ಟ ಅವರ ನೋವು. ನಾವು ಆಡ್ಕೊಳ್ಳೋಕೆ ಹೋಗ್ಬಾರ್ದು ಅಲ್ವಾ. ಈ ಬೀದಿಲಿ ಯಾರ್ ಮನೇಲಿ ಏನೇ ನಡೆದ್ರು. ಒಳ್ಳೆವರ ಹಾಗೇ ಹೌದ ಅಂಗಾಯ್ತಾ ಅಂತ ಸಮಾದಾನ ಮಾಡೋ ಹಾಗೇ ಮಾತಾಡೋದು. ಆಮೇಲೆ ಒಂದತ್ರ ಸೇರಿ, ಅದು ಹಾಗಲ್ಲ ಈಗೆ ಈಗಲ್ಲ ಹಾಗೇ , ಅದಕ್ಕೆ ಹೀಗೆ ಹಾಗೇ ಆಗಿದ್ದು ಅಂತ ಅವರೇ ಒಂದು ಕಥೆ ನಾ ಕಟ್ಟಿಕೊಂಡು ಅದೇ ನಿಜ ಅನ್ನೋತರ ಮಾತಾಡೋದು. ನಮ್ ಮನೆ ವಿಷಯ ಕೂಡ ಹಾಗೇ ಮಾತಾಡಿ ಕೊಳ್ಳೋದನ್ನ ನೋಡಿ ಅಭಿ  ಅವರಿಗೆ ಸರಿಯಾಗಿ ಕ್ಲಾಸ್ ತಗೊಂಡ, ಅವತ್ತಿಂದ ಅವನು ಅಂದ್ರೆ ಈ ಮನೆ ವಿಷಯ ಅಂದ್ರೆ ಮಾತಾಡೋಕೆ ಸ್ವಲ್ಪ ಭಯ. ಅವನಿಗೆ ಏನಾದ್ರೂ ಮನೆ ವಿಷಯ ನಮ್ ವಿಷಯ ಮಾತಾಡಿದ್ರು ಅಂತ ಗೊತ್ತಾದ್ರೆ. ಮುಗಿತು ಅವರ ಕಥೆ.  ರಾತ್ರಿ 12 ಗಂಟೆ ಆಗ್ಲಿ ಹೋಗಿ ಯಾರ್ ಯಾರು ಮಾತಾಡಿದ್ರು ಅಂತ ಅವರನೆಲ್ಲ ಕರ್ಕೊಂಡು ಬಂದು. ಕೂರಿಸಿಕೊಂಡು ಹೀಗೆ ನಡೀತು ಹೀಗೆ ಆಯ್ತು ಇವಾಗ ಏನ್ ಮಾಡೋಣ. ನಿಮ್ ಸೊಲ್ಯೂಷನ್ ಏನು. ಮತ್ತೆ ಮೊನ್ನೆ ನಿಮ್ ಬಗ್ಗೆ ಅವರು ಇವರು ಹಾಗೇ ಹೇಳಿದ್ರು ಅಲ್ವಾ ಅದಕ್ಕೆ ಏನ್ ಮಾಡೋಣ. ನಿಮ್ ಮನೇಲಿ ಹೀಗೆ ನಡೀತು ಅಲ್ವಾ ಇದಕ್ಕೆ ಏನು ಮಾಡೋಣ. ಪರಿಹಾರ ಏನು. ಅಂತ ಅವನಿಗೆ ಅವರಿಂದ ಉತ್ತರ ಬರೋವರೆಗೂ ಅವರನ್ನ ಬಿಡ್ತಾ ಇರಲಿಲ್ಲ.  ಅಭಿ ಯಾರ ವಿಷಯ ಕ್ಕೆ ತಲೆ ಹಾಕಲ್ಲ. ಮನೆ ವಿಷಯ ಅವನ ವಿಷಯ ಬಂದ್ರೆ ಮಾತ್ರ ಸುಮ್ನೆ ಬಿಡಲ್ಲ. ಅದಕ್ಕೆ ಭಯ ಅವನು ಅಂದ್ರೆ. 

ಶ್ರುತಿ,,, ಚಿಕ್ಕಿ, ಚಿಕ್ಕು ಬಗ್ಗೆ  ಜಾಸ್ತಿ ಕನ್ಫ್ಯೂಸ್ ಆಗಬೇಡಿ, ಚಿಕ್ಕು ಬಂಗಾರ. ಅಂತ ಹೇಳ್ತಾ ಖಾಲಿ ಪ್ಲೇಟ್ ನಾ ತಗೊಂಡು ಹೋಗಿ ವಾಶ್ ಮಾಡಿ ಇಟ್ಟು ಬಂದು ನಯನಾ, ದೇವಮ್ಮ ಮಧ್ಯ ಕೂತು. ಚಿಕ್ಕಿ ಮತ್ತೆ ಇನ್ನೇನು ಸಮಾಚಾರ. 

ದೇವಮ್ಮ,,, ಎದ್ದೇಳೇ ಮೇಲೆ ಬಂದಿರೋದು ಇವತ್ತು, ಅಷ್ಟು ಬೇಗ ಪಕ್ಕ ಕೂತು ಏನ್ ಸಮಾಚಾರ ಅಂತ ಕೇಳ್ತಾ ಇದ್ದಿಯಾ. ತಿಂದೆ ಅಲ್ವಾ ಮನೆಗೆ ಹೋಗಿ ನಿನ್ ಸ್ಕೂಲ್ ಹೋಮ್ ವರ್ಕ್ ಏನ್ ಇದೆಯೋ ಅದನ್ನ ಮುಗಿಸಿ ಮನೆ ಕೆಲಸ ಮುಗಿಸಿಕೊಂಡು ಆಮೇಲೆ ಬಂದು ಕೂತು ನಿಮ್ ಚಿಕ್ಕಿ ಜೊತೆ ಎಷ್ಟೋತ್ತು ಬೇಕಾದ್ರು ಮಾತಾಡ್ಕೊ. 

ಶ್ರುತಿ,,, ತುಂಬಾ ಥ್ಯಾಂಕ್ಸ್ ಅಜ್ಜಿ ನಾನು ಮರೆತೇ ಹೋದೆ. ನಾಳೆ ನೋಟ್ಸ್ ನೋಡ್ತಾರೆ ಬರೀತಾ ಇದ್ದವಳು ಹಾಗೇ ಬಂದು ಬಿಟ್ಟೆ. ಬಿರಿಯಾನಿ ತಿಂದ್ದಿದ್ದೆ ಎಲ್ಲಾ ಮರೆತು ಹೋಯ್ತು. ನಾನು ಸಂಜೆ ಬರ್ತೀನಿ ಅಂತ ಎದ್ದು ನಯನಾ ಗೆ ಬೈ ಹೇಳಿ ಹೊರಟು ಹೋದಳು. 

ದೇವಮ್ಮ,,, ನಯನಾ ನಿನ್ ಹೋಗಿ ಸ್ವಲ್ಪ ಹೊತ್ತು ರೆಸ್ಟ್ ಮಾಡು ಹೋಗಮ್ಮ.

ನಯನಾ,, ಹ್ಮ್ ಸರಿ ಅತ್ತೆ. ಅಂತ ಹೇಳಿ ಎದ್ದು ರೂಮ್ ಒಳಗೆ ಹೋಗ್ತಾಳೆ. 

#######

ಪೊಲೀಸ್ ಕಾರ್ ಇಳಿದು ಬಂದ SI ಸ್ಟೇಷನ್ ಒಳಗೆ ಬರ್ತಾ, ಅವರ ಆಫೀಸ್ ರೂಮ್ ಒಳಗೆ ಹೋಗ್ತಾರೆ. 

Pc,,, ಮೇಡಂ ಸಾಹೇಬ್ರು ಬಂದ್ರು ಒಂದು ನಿಮಿಷ ಇರಿ ನಾನ್ ಹೋಗಿ ಕೇಳ್ಕೊಂಡು ಬರ್ತೀನಿ. ಅಂತ ಹೇಳಿ ಅಲ್ಲಿಂದ ಹೊರಟು ಕೆಲವು ನಿಮಿಷಗಳ ನಂತರ ಬಂದು ಮೇಡಂ ಸಾಹೇಬ್ರು ನಿಮ್ಮನ್ನ ಕರೀತಾ ಇದ್ದಾರೆ ಒಳಗೆ ಹೋಗಿ ಅಂತ ಹೇಳಿ ಕಳಿಸ್ತಾರೆ. ಅ ಮಹಿಳೆ si ಹತ್ತಿರ ಮಾತಾಡೋಕೆ ಹೋಗ್ತಾರೆ.

Si,,, ಬನ್ನಿ ಮೇಡಂ ಕೂತ್ಕೊಳ್ಳಿ.

ಅ ಮಹಿಳೆ, ಚೇರ್ ಮೇಲೆ ಕೂತ್ಕೋತಾರೆ.

Si,,, ಹೇಳಿ ಮೇಡಂ ಏನ್ ನಿಮ್ಮ ಪ್ರಾಬ್ಲಮ್.

ಅ ಪ್ರಶ್ನೆ ಕೇಳಿದ್ದೆ ಅ ಮಹಿಳೆ ಅಳೋಕೆ ಶುರು ಮಾಡ್ತಾಳೆ.

Si,, ಮಹಿಳೆ ಅಳೋದನ್ನ ನೋಡಿ, ಲೇಡಿ pc ನಾ ಕರೆದು ಅವರಿಗೆ ಸಮಾಧಾನ ಮಾಡೋಕೆ ಹೇಳ್ತಾ ಕುಡಿಯೋದಕ್ಕೆ ನೀರನ್ನ ಕೊಡ್ತಾರೆ.

ಸ್ವಲ್ಪ ಸಮಯದ ನಂತರ ಅ ಮಹಿಳೆ ಸ್ವಲ್ಪ ಸಮಾಧಾನ ಆಗಿ. ಮಾತಾಡೋಕೆ ಶುರು ಮಾಡ್ತಾಳೆ.

ಸರ್ ನನ್ನ ಹೆಸರು ಸಾರಿಕಾ ಅಂತ,, 3 ವರ್ಷಗಳ ಹಿಂದೆ ನನಗೆ ವೇದಾಂತ್ ಅನ್ನೋ ವ್ಯಕ್ತಿ ಜೊತೆಗೆ ಮದುವೆ ಆಯಿತು. ಅಪ್ಪ ಅಮ್ಮ ನೋಡಿ ಮದುವೆ ಮಾಡಿದ ಹುಡುಗ, ವೇದಾಂತ್ ಒಂದು mnc ಕಂಪನಿ ಅಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ವರ್ಕ್ ಮಾಡ್ತಾ ಇದ್ದಾರೆ. ಮದುವೆ ಆಗಿ 1 ವರ್ಷದ ವರೆಗೂ ನಾವು ಚೆನ್ನಾಗೆ ಇದ್ವಿ, ಆಮೇಲೆ ನನ್ನ ಗಂಡ ವೇದಾಂತ್, ಮತ್ತೆ ನನ್ನ ಅತ್ತೆ ಜಯಮ್ಮ ನಾ ನಿಜವಾದ ಮುಖವಾಡ ಗೊತ್ತಾಗೋಕೆ ಶುರು ಆಯ್ತು. ಅವರ ರಾಕ್ಷಸ ತನ ಎಷ್ಟರ ಮಟ್ಟಿಗೆ ಹೋಯ್ತು ಅಂದ್ರೆ 4 ತಿಂಗಳು ಗರ್ಭಿಣಿ ಆಗಿದ್ದ ನಾನು, ನನ್ನ ಮಗುನ ಕಳೆದು ಕೊಳ್ಳ ಬೇಕಾಯಿತು ಅಂತ ಹೇಳ್ತಾ ಅಳೋಕೆ ಶುರು ಮಾಡಿದ್ಲು. 

ಲೇಡಿ pc,,, ಸಾರಿಕಾ ಗೆ ಸಮಾಧಾನ ಮಾಡ್ತಾ, ಮೇಡಂ ನೀವು ಈ ರೀತಿ ಹೇಳಿ ಅಳ್ತಾ ಇದ್ರೆ ಹೇಗೆ, ಏನ್ ನಡೀತು ಅಂತ ವಿವರವಾಗಿ ಹೇಳಿ.

ಸಾರಿಕಾ,, ಕಣ್ ಹೊರೆಸಿಕೊಂಡು, ಸರ್ ವೇದಾಂತ್ ನನ್ನ ಮದುವೆ ಆಗಿದ್ದು ನನ್ನ ಇಷ್ಟ ಪಟ್ಟು ಅಂತ ಅನ್ಕೊಂಡೆ ಸರ್, ಅದ್ರೆ ಅವನು ನನ್ನ ಮದುವೆ ಆಗಿದ್ದೆ ವರದಕ್ಷಿಣೆ ಗೋಸ್ಕರ, ಮದುವೆ ಅದ 6 ತಿಂಗಳ ವರೆಗೂ ವೇದಾಂತ್ ಚೆನ್ನಾಗಿ ಇದ್ದಾ ಚೆನ್ನಾಗಿ ನನ್ನ ನೋಡ್ಕೊಳ್ತಾ ಇದ್ದಾ, ಆಮೇಲೆ ಅವಾಗವಾಗ ಕುಡಿದು ಬರ್ತಾ ಇದ್ದಾ, ಕೇಳಿದಕ್ಕೆ ಆಫೀಸ್ ಪಾರ್ಟಿ ಅಂತ ಹೇಳ್ತಾ ಇದ್ದಾ, ನಾನು ಸುಮ್ನೆ ಆಗ್ತಾ ಇದ್ದೆ. ಹೋಗ್ತಾ ಹೋಗ್ತಾ ದಿನ ಕುಡಿದು ಬರೋಕೆ ಶುರು ಮಾಡಿದ, ಕೇಳೋಕೆ ಹೋದ್ರೆ ಹೊಡಿಯೋಕೆ ಬರ್ತಾ ಇದ್ದಾ, ಕೆಲವೊಂದು ಸರಿ ನನ್ನ ಮೇಲೆ ರಾಕ್ಷಸ ನಾ ರೀತಿ ವರ್ತನೆ ಮಾಡ್ತಾ ಇದ್ದಾ, ನಾನ್ ಹೇಗಿದ್ದೀನಿ ನನ್ನ ಪರಿಸ್ಥಿತಿ ಹೇಗಿದೆ ನನ್ನ ಅರೋಗ್ಯ ಹೇಗಿದೆ ಅನ್ನೋ ಚೂರು ಕನಿಕರ ಇಲ್ಲದೆ, ನನ್ನ ಮೇಲೆ ಬಲವಂತ ಮಾಡ್ತಾ ತುಂಬಾ ಕ್ರೂರವಾಗಿ ನಡ್ಕೊಳ್ತಾ ಇದ್ದಾ.  ಈ ವಿಷಯ ನಾ ಅತ್ತೆ ಗೆ ಹೇಳಿದ್ರೆ, ಹೊರಗಡೆ ದುಡಿಯೋ ಗಂಡಸು ಇದೆಲ್ಲಾ ನಾವೇ ಅನುಸರಿಸಿ ಕೊಂಡು ಹೋಗಬೇಕು ಅಂತ ಹೇಳಿ ಸುಮ್ನೆ ಆಗಿ ಬಿಡ್ತಾ ಇದ್ರು. ಸ್ವಲ್ಪ ದಿನ ಹೀಗೆ ನಡೀತು, ಆಮೇಲೆ ವೇದಾಂತ್ ಗೆ ಏನಾಯಿತೋ ಗೊತ್ತಿಲ್ಲ, ನನ್ನ ಮೇಲೆ ತುಂಬಾ ಪ್ರೀತಿ ಇರೋವನ ಹಾಗೇ ನಡೆದುಕೊಳ್ಳೋಕೆ ಶುರು ಮಾಡಿದ, ನಾನು ಕೂಡ ತುಂಬಾ ಸಂತೋಷ ಪಟ್ಟೆ, ವೇದಾಂತ್ ಬದಲಾದ ಅಂತ, ಒಂದು ದಿನ ಆಫೀಸ್ ಪಾರ್ಟಿ ಇದೆ ಅಂತ ನನ್ನ ಅ ಪಾರ್ಟಿ ಗೆ ಕರ್ಕೊಂಡು ಹೋದ. ನನಗೆ ಇಷ್ಟ ಇಲ್ಲಾ ಅಂದ್ರು ಬಲವಂತ ಮಾಡಿ ಡ್ರಿಂಕ್ಸ್ ಮಾಡಿಸಿದ. ಆಮೇಲೆ ಅವನ ಜೊತೆ ಇದ್ದಾ ಅವನ ಫ್ರೆಂಡ್ಸ್ ನನ್ನ ಜೊತೆ ತಪ್ಪು ತಪ್ಪಾಗಿ ಮಾತಾಡೋದು, ಎಲ್ಲಿ ಅಂದರೆ ಅಲ್ಲಿ ಮುಟ್ಟೋಕೆ ಬರೋದು ಇದನ್ನೆಲ್ಲಾ ಮಾಡ್ತಾ ಇದ್ರು. ನನಗೆ ಭಯ ಆಗಿ,  ಅಲ್ಲಿಂದ ಅವರಿಂದ ತಪ್ಪಿಸಿಕೊಂಡು ಹೊರಗೆ ಬಂದು ಆಟೋ ದಲ್ಲಿ ಮನೆಗೆ ಬಂದು ಬಿಟ್ಟೆ. 

   ಬೆಳಿಗ್ಗೆ ಎದ್ದ ಕೂಡಲೇ ವೇದಾಂತ್ ನನ್ನ ಮೇಲೆ ಜಗಳ ಮಾಡೋಕೆ ಶುರು ಮಾಡಿದ. ಪಾರ್ಟಿ ವಿಷಯ ವಾಗಿ. ನಾನು ಅವರ ಫ್ರೆಂಡ್ಸ್ ವರ್ತನೆ ಸರಿ ಇರಲಿಲ್ಲ ಅದಕ್ಕೆ ಬಂದು ಬಿಟ್ಟೆ ಅಂತ ಹೇಳ್ದೆ. ಅದಕ್ಕೆ ಅವನು ನನ್ನ ಪಾರ್ಟಿ ಗೆ ಕರ್ಕೊಂಡು ಹೋಗಿದ್ದೆ ಅವರ ಫ್ರೆಂಡ್ಸ್ ನಾ ಸಂತೋಷ ಪಡಿಸೋಕೆ ಅವರ ಜೊತೆ ಎಂಜಾಯ್ ಮಾಡೋಕೆ ಅಂತ ಸತ್ಯ ಹೇಳಿದ. ನನಗೆ ಅ ಮಾತನ್ನ ಕೇಳಿ ಕೋಪ ಬಂದು ಅವನ ಮೇಲೆ ಜಗಳಕ್ಕೆ ನಿಂತೇ. ನಾನು ಈ ಮನೇಲಿ ಇರೋದಿಲ್ಲ, ನನ್ನ ತವರು ಮನೆಗೆ ಹೋಗ್ತೀನಿ ಅಂತ ಹೋಗೋಕೆ ಹೋದೆ ಸರ್. ನನ್ನ ಗಂಡ ನನ್ನ ಅತ್ತೆ, ತವರು ಮನೆಗೆ ಹೋಗ್ತಿಯ, ಅಂತ ನನ್ನ ಹೊಡೆದು ರೂಮ್ ಒಳಗೆ ಕೂಡಿ ಹಾಕಿದ್ರು. ತಿನ್ನೋಕೆ ಊಟ ಕೊಡ್ತಾ ಇರಲಿಲ್ಲ, ಕುಡಿಯೋಕೆ ನೀರು ಕೊಡ್ತಾ ಇರಲಿಲ್ಲ. ಹಿಂಸೆ ಕೊಡೋಕೆ ಶುರು ಮಾಡಿದ್ರು. ನನಗೂ ಸಾಕಾಗಿ ಹೋಯ್ತು ಒಂದು ದಿನ ಕೇಳೇ ಬಿಟ್ಟೆ, ಯಾಕ್ ನನಗೆ ಇಷ್ಟು ಚಿತ್ರಹಿಂಸೆ ಕೊಡ್ತಾ ಇದ್ದೀರಾ, ನನ್ನ ಸಾಯಿಸಿ ಬಿಡಿ ಅಂತ, ಅವಾಗ ವೇದಾಂತ್ ಇನ್ನೊಂದು ಸತ್ಯ ಹೇಳಿದ. 

   ಅವನ ಆಫೀಸ್ ಮ್ಯಾನೇಜರ್ ಗೆ ನನ್ನ ಮೇಲೆ ಆಸೆ ಆಗಿದೆ ಅಂತೇ, ಅವನ ಜೊತೆಗೆ ನಾನು ಹಾಸಿಗೆಲಿ ಮಲಗಿ ಅವನನ್ನ ಸಂತೋಷ ಪಡಿಸಬೇಕು ಅಂತೇ, ಅದರಿಂದ ವೇದಾಂತ್ ಗೆ ಮ್ಯಾನೇಜರ್ ಪೋಸ್ಟ್ ಸಿಗುತ್ತೆ ಅಂತೇ, ಅಷ್ಟೇ ಅಲ್ಲ ವಿದೇಶದಲ್ಲಿ ಇರೋ ಅವರ ಕಂಪನಿ ಗೆ ಪ್ರಮೋಟ್ ಮಾಡ್ತಾರೆ ಅಂತೇ. ಅದಕ್ಕೆ ನಾನು ಒಪ್ಕೋ ಬೇಕು ಅಂತ ಹೇಳಿದ. ನಾನು ಸತ್ರು ಅ ಕೆಲಸ ಮಾಡೋದಿಲ್ಲ ಅಂತ ಹೇಳಿದೆ.  ಅದಕ್ಕೆ ಅವರು ಮತ್ತೆ ನನ್ನ ಹೊಡೆದು ರೂಮ್ ಅಲ್ಲಿ ಕೂಡಿ ಹಾಕಿದ್ರು. ತಿಂಗಳು ಗಟ್ಟಲೆ ರೂಮ್ ಅಲ್ಲಿ ಸರಿಯಾಗಿ ಊಟ ಇಲ್ಲದೆ ಹಾಕ್ಕೊಳ್ಳೋಕೆ ಬಟ್ಟೆ ಇಲ್ಲದೆ ರೂಮ್ ಅಲ್ಲೇ ಇದ್ದೆ. ನಾನು ಪ್ರಗ್ನೆಟ್ ಆಗಿದ್ದೀನಿ ಅನ್ನೋ ವಿಷಯ ಕೂಡ ನನಗೆ ಗೊತ್ತೇ ಹಾಗಲಿಲ್ಲ, ಅಷ್ಟು ಹಿಂಸೆ ಕೊಡ್ತಾ ಇದ್ರು. ಏನಾಯ್ತೋ ಏನೋ ಗೊತ್ತಿಲ್ಲ ಒಂದು ದಿನ ಪ್ರಜ್ಞೆ ತಪ್ಪಿ ಬಿದ್ದು ಹೋದೆ. ಕಣ್ ಬಿಟ್ಟು ನೋಡಿದಾಗ ಹಾಸ್ಪಿಟಲ್ ಅಲ್ಲಿ ಇದ್ದೆ. ನನ್ನ ಎದುರಿಗೆ ನಮ್ ಮನೆಗೆ ಕೆಲಸ ಮಾಡೋಕೆ ಬರ್ತಾ ಇದ್ದಾ ಹೆಂಗಸು ಮತ್ತೆ ಪಕ್ಕದ ಮನೆ ಆಂಟಿ ಇದ್ರು. 

ಯಾಕೆ ಏನು ಅಂತ ಕೇಳಿದಾಗ, ಅವರು ಸತ್ಯ ಹೇಳಿದ್ರು. ನಾನು ಪ್ರಜ್ಞೆ ಕಳ್ಕೊಂಡು ಬಿದ್ದ ಮೇಲೆ, ಮನೆ ಕೆಲಸದವಳು ನನಗೆ ಊಟ ಕೊಡೋಕೆ ಬಂದಾಗ ರೂಮ್ ಅಲ್ಲಿ ನಾನು ಪ್ರಜ್ಞೆ ತಪ್ಪಿ ಬಿದ್ದಿರೋದು ಅಲ್ಲದೆ ನೆಲದ ಮೇಲೆ ತುಂಬಾ ರಕ್ತ ಇರೋದನ್ನ ನೋಡಿ ಭಯ ಬಿದ್ದು ಪಕ್ಕದ ಮನೆ ಆಂಟಿ ಸಹಾಯದಿಂದ ನನ್ನ ಹಾಸ್ಪಿಟಲ್ ಗೆ ಕರ್ಕೊಂಡು ಬಂದು ಅಡ್ಮಿಟ್ ಮಾಡಿದ್ರು. ನನಗೆ ಅಬೋರ್ಟ್ ಆಯಿತು ಅಂತ ಹೇಳ್ತಾ ಮತ್ತೆ ಅಳೋಕೆ ಶುರು ಮಾಡಿದ್ಲು.

ಪಾಪಿಗಳು ಸರ್ ಅವರು ನನಗೆ ಹಿಂಸೆ ಕೊಡೋದು ಅಲ್ಲದೆ ನನ್ನ ಮಗು ನಾ ಕೂಡ ಕೊಂದು ಬಿಟ್ಟರು. ನಾನು ಕಂಪ್ಲೇಂಟ್ ಕೊಡೋಣ ಅಂತ ಸ್ಟೇಷನ್ ಗೆ ಹೋಗಿ ಅವರ ಮೇಲೆ ಕಂಪ್ಲೇಂಟ್ ಕೊಟ್ಟು ನನ್ನ ತವರು ಮನೆಗೆ ಹೋದೆ. ನನ್ನ ತಂದೆ ತಾಯಿ ಗೆ ವಿಷಯ ಹೇಳಿದೆ. ಅವರು ತುಂಬಾ ನೋವನ್ನ ಪಟ್ಟು ನನ್ನ ಮನೇಲೆ ಇರೋಕೆ ಹೇಳಿದ್ರು. ಮಾರನೇ ದಿನ ವೇದಾಂತ್ ಮತ್ತೆ ಅವರ ಅಮ್ಮ ಮನೆ ಹತ್ತಿರ ಬಂದು, ನಾನು ಕೊಟ್ಟ ಕಂಪ್ಲೇಂಟ್ ಪೇಪರ್ ನಾ ನನ್ನ ಮುಂದೇನೆ ಹರಿದು ಹಾಕಿ. ನಮ್ ತಂದೆ ತಾಯಿ ಗೆ, ನಾನು ಸರಿ ಇಲ್ಲಾ, ನನ್ನ ಕ್ಯಾರೆಕ್ಟರ್ ಸರಿ ಇಲ್ಲಾ, ನನ್ನ ಹೊಟ್ಟೆಲಿ ಇದ್ದಾ ಮಗು ಅವನದ್ದು ಅಲ್ಲ ಅಂತ ಸುಳ್ಳು ಕಥೆ ನಾ ಎಲ್ಲರೂ ನಂಬೋ ಹಾಗೇ ಹೇಳಿ, ಆಗಿದ್ದು ಆಯಿತು ಮನೆಗೆ ಬಂದು ಬಿಡು ಎಲ್ಲಾ ಮರೆತು ಹೊಸ ಜೀವನ ಮಾಡೋಣ ಅಂತ ಹೇಳಿದ್ರು. 

ಅವರ ನಿಜ ರೂಪ ಗೊತ್ತಿದ್ದ ನನಗೆ ನಾನು ಹೋಗೋದೇ ಇಲ್ಲಾ ಅಂತ ಹೇಳಿದೆ.  ನಾನು ತವರು ಮನೇಲಿ ಇದ್ರು ನನಗೆ ಹಿಂಸೆ ಕೊಡೋದು ನಿಲ್ಲಿಸಲಿಲ್ಲ. ವೇದಾಂತ್ ಅವರ ಫ್ರೆಂಡ್ಸ್ ನಂಬರ್ ಗಳಿಂದ ನನಗೆ ಕಾಲ್ ಮಾಡೋದು, ಕೆಟ್ಟ ಕೆಟ್ಟದಾಗಿ ಮಾತಾಡೋದು ಮಾಡ್ತಾ ಇದ್ರು. ನಾನು ಮೊಬೈಲ್ ನಾ ಹೊಡೆದು ಬಿಸಾಕಿದೆ. ಆದ್ರು ಅವರು ನಮ್ ಅಪ್ಪ ನಿಗೆ ಕಾಲ್ ಮಾಡಿ, ನಿನ್ನ ಮಗಳ ರೇಟ್ ಎಷ್ಟು, ಎಷ್ಟೋತ್ತಿಗೆ ಬರಲಿ, ಅಂತ ತುಂಬಾ ಅಸಯ್ಯ ವಾಗಿ ಮಾತಾಡ್ತಾ ಇದ್ರು. ಇದನ್ನೆಲ್ಲಾ ಕೇಳಿ ಕೇಳಿ ನಮ್ ಅಪ್ಪನಿಗೆ ಹಾರ್ಟ್ ಅಟ್ಯಾಕ್ ಆಗಿ ಬಿಡ್ತು. ದೇವರ ದಯೆ ಅವರ ಪ್ರಾಣಕ್ಕೆ ಏನು ತೊಂದ್ರೆ ಆಗಿಲ್ಲ.  ಡಿವೋರ್ಸ್ ಕೊಡೋಣ ಅಂತ ನಿರ್ಧಾರ ಮಾಡಿ ಡಿವೋರ್ಸ್ ಕಳಿಸಿದೆ.  ಇನ್ನು ಹಿಂಸೆ ಕೊಡೋಕೆ ಜಾಸ್ತಿ ಮಾಡಿದ. ಡಿವೋರ್ಸ್ ಕೊಟ್ಟು ನನ್ನ ಪಾಡಿಗೆ ನನ್ನ ಬದುಕೋಕೆ ಬಿಡು ಅಂದ್ರೆ. ನನ್ನ ಪ್ರಮೋಷನ್, ನನ್ನ ವಿದೇಶಿ ಬದುಕು ನಿನ್ನ ಮೇಲೆ ಇದೆ ನಿನ್ನ ಹೇಗೆ ಬಿಡ್ತೀನಿ. ನೀನು ಒಪ್ಕೋಳ್ಳೋ ವರೆಗೂ ನಿನಗೆ ಹೀಗೆ ತೊಂದ್ರೆ ಕೊಡ್ತಾ ಇರ್ತೀನಿ, ಅಂತ ಹೇಳಿ.  ದಿನ ನನಗೆ ಹಿಂಸೆ ಕೊಡ್ತಾ ಇದ್ದಾನೆ ಸರ್. ಅಳ್ತಾ ಪ್ಲೀಸ್ ಸರ್ ನಿಮ್ ಕಾಲಿಗೆ ಬಿದ್ದು ಬೇಡ್ಕೋತೀನಿ, ನನಗೆ ಅವನಿಂದ ವಿಮುಕ್ತಿ ಕೊಡಿಸಿ, ನಾನು ಬದುಕೋಕೆ ಒಂದು ಅವಕಾಶ ಮಾಡಿ ಕೊಡಿ ಸರ್ ಅಂತ ಹೇಳ್ತಾ ಕಣ್ಣೀರು ಹಾಕ್ತಾಳೇ.

@@@@@@@@@@@@@@@@@@@@@@@@@