" ಕಡಲ ತೀರದ ಭಾರ್ಗವ "
ಕೋಟಿ ತಾರೆಗಳ ಮಧ್ಯದಲ್ಲಿ ಕಂಗೊಳಿಸಿದೆ ನೀನು
ನಿನ್ನ ಹುರುಪು, ಧೀಮಂತ ಶಕ್ತಿ ಮರೆತಿಲ್ಲ ನಾನು |
ನೀ ನಡೆದ ಈ ದಾರಿ ಕವಲೊಡೆದು ನಿಂತಿದೆ
ಯಾವ ದಾರಿ ಸರಿ ಎಂದು ಯೋಚಿಸುತ್ತಿರುವೆ ನಾನು |
ಜೀವನ ಎಂದರೆ ಏನೆಂಬುದನ್ನು ಈ ಜಗತ್ತಿಗೆ ತಿಳಿಸಿದೆ ನೀನು
ಅದನ್ನು ಅರ್ಥ ಮಾಡಿಕೊಂಡು ಹೋಗದಿರುವ ಮೂರ್ಖ ನಾನು |
ಆಕಾಶದಲ್ಲಿ ತೇಲುತ್ತಿದ್ದ ಆ ಕವಿತ್ವದ ಪ್ರತಿಭೆ
ಇಂದಿಗೂ ಚಿರಾಮರವಾಗಿ ಉಳಿದಿದೆ ಇಲ್ಲಿ |
ಮತ್ತೆ ಮತ್ತೆ ಹುಟ್ಟಿ ಬರಲಿ ನಿನ್ನಯ ಶೋಭೆ
ಎಂದಿಗೂ ಆರದಿರಲಿ ನಿನ್ನಯ ಜ್ಯೋತಿ |
ನೀನು ಜ್ಞಾನಿ ನೀನು ಯೋಗಿ
ನಿನಗೆ ಸದಾ ವಂದಿಸುವೆ ತಲೆ ಬಾಗಿ |
ನೀ ನುಡಿದ ಸುವಿಚಾರಗಳಿಗೆ ತಲೆದೂಗಿ
ನಿನ್ನ ಮುಂದೆ ನಿಂತೆ ನಾ ಅಜ್ಞಾನಿಯಾಗಿ |
ಭಾರತ ಮಾತೆಯ ಪುಣ್ಯ ನೆಲದಲ್ಲಿ ಹುಟ್ಟಿದೆ ನೀ ಸುಪುತ್ರನಾಗಿ
ಬೆಳೆದು ನಿಂತೆ ಆ ಕಡಲ ತೀರದಲ್ಲಿ
ನೀನಾದೆ ಕಡಲ ತೀರದ ಭಾರ್ಗವ ಈ ಮಂದಿರದಲ್ಲಿ |
*** *** *** *** *** *** *** ***
ಮಧುಸೂರ್ಯ ಭಟ್......✍
ಧನ್ಯವಾದಗಳು.....🙏